ಕಂಪಾಸ್ ಪೆಟ್ರೋಲ್ ಕಾರಿನ ಉತ್ಪಾದನೆ ಆರಂಭಿಸಿದ ಜೀಪ್

Written By:

ಜೀಪ್ ಕಂಪಾಸ್ ಪೆಟ್ರೋಲ್ ಆಟೋಮ್ಯಾಟಿಕ್ ಕಾರಿನ ಪ್ರೊಡಕ್ಷನ್ ಭಾರತದಲ್ಲಿ ಆರಂಭವಾಗಿದ್ದು, ಈ ಕಾರು ಸೀಮಿತ ಮತ್ತು ಸೀಮಿತ ಆಯ್ಕೆ ಎಂಬ ಎರಡು ಟ್ರಿಮ್ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ.

To Follow DriveSpark On Facebook, Click The Like Button
ಕಂಪಾಸ್ ಪೆಟ್ರೋಲ್ ಕಾರಿನ ಉತ್ಪಾದನೆ ಆರಂಭಿಸಿದ ಜೀಪ್

2017ರ ಅಕ್ಟೋಬರ್‌ನಲ್ಲಿ ಜೀಪ್ ಇಂಡಿಯಾ ಸಂಸ್ಥೆಯು ಕಂಪಾಸ್ ಪೆಟ್ರೋಲ್ ಸ್ವಯಂಚಾಲಿತ(ಎಟಿ) ಕಾರಿನ ಬಿಡುಗಡೆ ಮಾಡಲು ಕಂಪನಿ ಯೋಜನೆ ರೂಪಿಸಿದ್ದು, ಈ ಎಸ್‌ಯುವಿ ಪೆಟ್ರೋಲ್ ಮಾದರಿಯ ಕಾರಿನ ಉತ್ಪಾದನೆಯನ್ನು ಕಂಪನಿ ಈಗಾಗಲೇ ಪ್ರಾರಂಭಿಸಿದೆ ಎಂಬ ಮಾಹಿತಿ ಡ್ರೈವ್‌ಸ್ಪಾರ್ಕ್‌ಗೆ ಸಿಕ್ಕಿದೆ.

ಕಂಪಾಸ್ ಪೆಟ್ರೋಲ್ ಕಾರಿನ ಉತ್ಪಾದನೆ ಆರಂಭಿಸಿದ ಜೀಪ್

ಜೀಪ್ ಕಂಪಾಸ್ ಪೆಟ್ರೋಲ್ ಕಾರಿನ ಸೀಮಿತ ಮಾದರಿಯ ಕಾರು ರೂ. 18.96 ಲಕ್ಷ ಬೆಲೆ ಮತ್ತು ಸೀಮಿತ ಆಯ್ಕೆಯ ಮಾದರಿಯ ಬೆಲೆ ರೂ. 19.67 ಲಕ್ಷ (ಎಕ್ಸ್ ಶೋ ರೂಂ ದೆಹಲಿ) ನಿಗದಿಪಡಿಸಲಾಗಿದೆ.

ಕಂಪಾಸ್ ಪೆಟ್ರೋಲ್ ಕಾರಿನ ಉತ್ಪಾದನೆ ಆರಂಭಿಸಿದ ಜೀಪ್

ಕಳೆದ ಜುಲೈನಲ್ಲಿ ಭಾರತೀಯ ಮಾರುಕಟ್ಟೆಗೆ ಜೀಪ್ ಕಂಪಾಸ್ ಎಸ್‌ಯುವಿ ಕಾರನ್ನು ಬಿಡುಗಡೆಗೊಳಿಸಿದೆ. ಅಂದಿನಿಂದಲೂ ಸಹ ವಾಹನ ತಯಾರಕ ಸಂಸ್ಥೆಯು ಆಯ್ದ ರೂಪಾಂತರಗಳನ್ನು ಬೇಡಿಕೆಗೆ ತಕ್ಕಂತೆ ಹಂತ ಹಂತವಾಗಿ ತಯಾರಿಸುತ್ತಿದೆ.

ಕಂಪಾಸ್ ಪೆಟ್ರೋಲ್ ಕಾರಿನ ಉತ್ಪಾದನೆ ಆರಂಭಿಸಿದ ಜೀಪ್

ಕಳೆದ ಆಗಸ್ಟ್ 6ರಿಂದ ಈ ಡೀಸೆಲ್ ಕಾರಿನ ವಿತರಣೆಯನ್ನು ಕಂಪನಿ ಆರಂಭಿಸಿದ್ದು, ಜೀಪ್ ಪೆಟ್ರೋಲ್ ಸ್ವಯಂಚಾಲಿತ ರೂಪಾಂತರವು ದೀಪಾವಳಿಯಿಂದ ಶೋ ರೂಂಗೆ ಲಗ್ಗೆ ಇಡಲಿದೆ ಎಂದು ಭರವಸೆಯನ್ನು ಕಂಪನಿ ನೀಡಿದೆ.

ಕಂಪಾಸ್ ಪೆಟ್ರೋಲ್ ಕಾರಿನ ಉತ್ಪಾದನೆ ಆರಂಭಿಸಿದ ಜೀಪ್

ಇದಲ್ಲದೆ, ಪೆಟ್ರೋಲ್ ಮಾದರಿಯ ಸಲಕರಣೆಗಳ ಪಟ್ಟಿಗೆ ಜೀಪ್ ಕಂಪಾಸ್ ಸನ್ರೂಫ್ ಆಯ್ಕೆಯನ್ನೂ ಸಹ ಸೇರಿಸುವ ನಿರೀಕ್ಷೆಯಿದೆ. ಈ ಹಿಂದೆ ಎಸ್‌ಯುವಿಯ ಸೀಮಿತ 4x2 ರೂಪಾಂತರವು ಕೆಲವು ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಗುರುತಿಸಲ್ಪಟ್ಟಿದ್ದನ್ನು ನಾವು ಸ್ಮರಿಸಬಹುದಾಗಿದೆ.

ಕಂಪಾಸ್ ಪೆಟ್ರೋಲ್ ಕಾರಿನ ಉತ್ಪಾದನೆ ಆರಂಭಿಸಿದ ಜೀಪ್

ಯಾಂತ್ರಿಕ ವಿಚಾರದಲ್ಲಿ ಈ ಕಾರು1.4-ಲೀಟರ್ 4-ಸಿಲಿಂಡರ್ ಟರ್ಬೊ‌ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅಳವಡಿಕೆಯಾಗಿದ್ದು, ಈ ಎಂಜಿನ್ 250ಎನ್ಎಂ ತಿರುಗುಬಲದಲ್ಲಿ 160 ಬಿಎಚ್‌ಪಿ ಟಾರ್ಕ್ ಉತ್ಪಾದಿಸುತ್ತದೆ.

ಕಂಪಾಸ್ ಪೆಟ್ರೋಲ್ ಕಾರಿನ ಉತ್ಪಾದನೆ ಆರಂಭಿಸಿದ ಜೀಪ್

ಜೀಪ್ ಕಂಪಾಸ್ ಪೆಟ್ರೋಲ್ ಕಾರಿನ ಸೀಮಿತ ಮಾದರಿ ಮತ್ತು ಸೀಮಿತ ಆಯ್ಕೆಯ ಮಾದರಿಯು 7 ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್‌ಬಾಕ್ಸ್ ಆಯ್ಕೆ ಹೊಂದಿರಲಿದೆ ಮತ್ತು ಸ್ಪೋರ್ಟ್ ರೂಪಾಂತರವು 6-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಒಳಗೊಂಡಿರಲಿದೆ.

Read more on ಜೀಪ್ jeep
English summary
Jeep India has commenced the production of the Compass petrol automatic (AT). the petrol variant of the SUV will be introduced in October 2017.
Story first published: Wednesday, September 20, 2017, 18:22 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark