ಹೊಚ್ಚ ಹೊಸ ಜೀಪ್ ಕಂಪಾಸ್ ಎಸ್‌ಯುವಿ ಬಿಡುಗಡೆಗೆ ದಿನಗಣನೆ..!

ದೇಶಿಯವಾಗಿ ಉತ್ಪಾದನೆಗೊಂಡಿರುವ ಐಷಾರಾಮಿ ಎಸ್‌ಯುವಿ ಜೀಪ್ ಕಂಪಾಸ್ ಬಿಡುಗಡೆಗೆ ಸಜ್ಜುಗೊಳ್ಳುತ್ತಿದ್ದು, ಬೆಲೆಗಳ ವಿಚಾರವಾಗಿ ಭಾರೀ ಸದ್ದು ಮಾಡುತ್ತಿದೆ.

ಇದೇ ವರ್ಷ ಅಗಸ್ಟ್‌ನಲ್ಲಿ ಬಿಡುಗಡೆಗೊಳ್ಳಲಿರುವ ಜೀಪ್ ಕಂಪಾಸ್ ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದು, ಭಾರೀ ಬೇಡಿಕೆ ಹಿನ್ನೆಲೆ ಬುಕಿಂಗ್ ಕೂಡಾ ಆರಂಭ ಮಾಡಲಾಗಿದೆ.

ಬುಕಿಂಗ್ ಆರಂಭ ಮಾಡಲಾಗಿದ್ದರು ಹೊಸ ಕಾರಿನ ಬೆಲೆಗಳ ಬಗ್ಗೆ ಜೀಪ್ ಸಂಸ್ಥೆಯು ಇದುವರೆಗೆ ಅಧಿಕೃತ ಬೆಲೆ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಆದ್ರೆ ಕೆಲವು ವರದಿ ಪ್ರಕಾರ ಹೊಸ ಕಾರಿನ ಬೆಲೆ 15 ರಿಂದ 16 ಲಕ್ಷ ಇರಬಹುದೆಂದು ಅಂದಾಜು ಮಾಡಲಾಗಿದೆ.

ಒಂದು ವೇಳೆ ಜೀಪ್ ಕಂಪಾಸ್ ಹೊಸ ಕಾರು 15 ರಿಂದ 16 ಲಕ್ಷದ ಒಳಗೆ ಬಿಡುಗಡೆಯಾಗಿದ್ದಲ್ಲಿ ಇತರೆ ಪ್ರಮುಖ ಎಸ್‌ಯುವಿ ಕಾರು ಮಾದರಿಗಳಿಗೆ ತೀವ್ರ ಹೊಡೆತ ಬಿಳಲಿದೆ.

ಇನ್ನು ಜೀಪ್ ಕಂಪಾಸ್ ಬುಕಿಂಗ್ ಮಾಡಲು ರೂ. 50 ಸಾವಿರ ಮುಂಗಡ ನಿಗದಿ ಮಾಡಲಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲೂ ಜೀಪ್ ಕಂಪಾಸ್ ಖರೀದಿಗೆ ಲಭ್ಯವಿರಲಿದೆ.

ವಿಶೇಷ ವಿನ್ಯಾಸ ಹೊಂದಿರುವ ಜೀಪ್ ಕಂಪಾಸ್‌ ಒಳಾಂಗಣವು ಸಾಕಷ್ಟು ವಿಸ್ತಾರ ಹೊಂದಿದ್ದು, ಚಾಲಕ ಸೇರಿದಂತೆ 5 ಜನ ಆರಾಮದಾಯಕವಾಗಿ ಪ್ರಯಾಣ ಮಾಡಬಹುದಾಗಿದೆ.

ಜೀಪ್ ಕಂಪಾಸ್ ಪೆಟ್ರೋಲ್ ಮಾದರಿಯೂ 1.4-ಲೀಟರ್ ಮಲ್ಟಿ ಏರ್ ಎಂಜಿನ್ ಹೊಂದಿದ್ದು, 160 ಬಿಎಚ್‌ಪಿ ಹಾಗೂ 250ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿದೆ.

ಅಂತಯೇ ಡೀಸೆಲ್ ಮಾದರಿಯ ಕಾರು 2.0-ಲೀಟರ್ ಮಲ್ಟಿ ಜೇಟ್ ಆಯಿಲ್ ಬರ್ನರ್ ಎಂಜಿನ್ ಹೊಂದಿದ್ದು, 170ಬಿಎಚ್‌ಪಿ ಹಾಗೂ 350ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದೆ.

ಹೊಸ ಮಾದರಿಯ ಜೀಪ್ ಕಂಪಾಸ್ ಎಸ್‌ಯುವಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ವ್ಯವಸ್ಥೆ ಹಾಗೂ 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದ್ದು, ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ ಪಡೆದುಕೊಂಡಿದೆ.

ಹೀಗಾಗಿ ಬಿಡುಗಡೆಯ ದಿನದಂದೆ ಬೆಲೆಗಳ ಬಗೆಗೆ ನಿಖರ ಮಾಹಿತಿ ಸಿಗಲಿದ್ದು, ಒಂದು ವೇಳೆ ಜೀಪ್ ಕಂಪಾಸ್ ಕಡಿಮೆ ಬೆಲೆಗಳಲ್ಲಿ ಲಭ್ಯವಾಗಿದ್ದಲ್ಲಿ ಐಷಾರಾಮಿ ಎಸ್‌ಯುವಿ ವಿಭಾಗದಲ್ಲಿ ಹೊಸ ದಾಖಲೆ ಸೃಷ್ಠಿಯಾಗುವುದರಲ್ಲಿ ಯಾವುದೇ ಅನುಮಾವಿಲ್ಲ.

Read more on ಜೀಪ್ jeep
English summary
Read in Kannada about Jeep India is gearing up to launch the new Compass SUV in the country in August.
Story first published: Wednesday, June 21, 2017, 11:48 [IST]
Please Wait while comments are loading...

Latest Photos