ಜೀಪ್ ಕಂಪಾಸ್ v/s ಹ್ಯುಂಡೈ ಕ್ರೆಟಾ- ಎಸ್‌ಯುವಿಗಳಲ್ಲಿ ಯಾವುದು ಉತ್ತಮ?

ಅಮೆರಿಕ ಸುಪ್ರಸಿದ್ಧ ಜೀಪ್ ಸಂಸ್ಥೆಯ ಕಂಪಾಸ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆಯಾಗುವ ಮೂಲಕ ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಹಲವಾರು ಎಸ್‌ಯುವಿ ಮಾದರಿಗಳಿಗೆ ತೀವ್ರ ಸ್ಪರ್ಧೆ ಒಡ್ಡುವ ತವಕದಲ್ಲಿದೆ.

ಜೀಪ್ ಕಂಪಾಸ್ v/s ಹ್ಯುಂಡೈ ಕ್ರೆಟಾ- ಎಸ್‌ಯುವಿಗಳಲ್ಲಿ ಯಾವುದು ಉತ್ತಮ?

ಮೇಡ್ ಇನ್ ಇಂಡಿಯಾ ಮನ್ನಣೆಯೊಂದಿಗೆ ದೇಶಿಯ ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಗಳಿಗೆ ಬಿಡುಗಡೆಯಾಗಿರುವ ಜೀಪ್ ಕಂಪಾಸ್ ಮಾದರಿಯೂ ರೂ.15 ಲಕ್ಷದಿಂದ ರೂ.20 ಲಕ್ಷದವರೆಗಿನ ಎಸ್‌ಯುವಿ ಆವೃತ್ತಿಗಳಿಗೆ ತೀವ್ರ ನಡುಕು ಹುಟ್ಟಿಸಿದ್ದು, ದೇಶಿಯವಾಗಿ ಭಾರೀ ಬೇಡಿಕೆ ಹೊಂದಿರುವ ಮತ್ತೊಂದು ಎಸ್‌ಯುವಿ ಹ್ಯುಂಡೈ ಕ್ರೆಟಾಗೆ ನೇರಾನೇರ ಪೈಪೋಟಿ ನೀಡುವ ತವಕದಲ್ಲಿದೆ.

ಜೀಪ್ ಕಂಪಾಸ್ v/s ಹ್ಯುಂಡೈ ಕ್ರೆಟಾ- ಎಸ್‌ಯುವಿಗಳಲ್ಲಿ ಯಾವುದು ಉತ್ತಮ?

ಹೀಗಾಗಿ ಹ್ಯುಂಡೈ ಕ್ರೇಟಾ ಮತ್ತು ಜೀಪ್ ಕಂಪಾಸ್ ನಡುವಿನ ತಾಂತ್ರಿಕ ಸೌಲಭ್ಯಗಳ ಕುರಿತಾಗಿ ವಿಶ್ಲೇಷಣೆ ಮಾಡಲಾಗಿದ್ದು, ಬೆಲೆ, ಎಂಜಿನ್, ವೈಶಿಷ್ಟ್ಯತೆಗಳು, ವಿನ್ಯಾಸಗಳು ಮತ್ತು ಸುರಕ್ಷಾ ವಿಚಾರಗಳ ಮಾಹಿತಿ ಇಲ್ಲಿದೆ.

ಜೀಪ್ ಕಂಪಾಸ್ v/s ಹ್ಯುಂಡೈ ಕ್ರೆಟಾ- ಎಸ್‌ಯುವಿಗಳಲ್ಲಿ ಯಾವುದು ಉತ್ತಮ?

ಡಿಸೈನ್

ಬಹುತೇಕ ಗ್ರ್ಯೌಂಡ್ ಚರೋಕಿ ವಿನ್ಯಾಸಗಳನ್ನು ಹೊತ್ತು ಬಂದಿರುವ ಜೀಪ್ ಕಂಪಾಸ್ ಹೊಸ ಕಾರುಗಳು, 7-ಸ್ಲಾಟ್ ಮುಂಭಾಗದ ಗ್ರಿಲ್‌ನೊಂದಿಗೆ ಉತ್ತಮ ಹೊರನೋಟವನ್ನು ಹೊಂದುವ ಮೂಲಕ ಪ್ರತಿಯೊಬ್ಬ ಭಾರತೀಯನ ಖರೀದಿ ಉತ್ಸಾಹವನ್ನು ಹೆಚ್ಚಿಸುವಂತಿವೆ.

ಜೀಪ್ ಕಂಪಾಸ್ v/s ಹ್ಯುಂಡೈ ಕ್ರೆಟಾ- ಎಸ್‌ಯುವಿಗಳಲ್ಲಿ ಯಾವುದು ಉತ್ತಮ?

ಹಿಂದೆಂದಿಗಿಂತಲೂ ಉತ್ತಮ ವಿನ್ಯಾಸಗಳನ್ನು ಹೊಚ್ಚ ಹೊಸ ಜೀಪ್ ಕಂಪಾಸ್ ಪಡೆದುಕೊಂಡಿದ್ದು, ಎಲ್ಇಡಿ ಟೈಲ್ ಲ್ಯಾಂಪ್‌, ದೊಡ್ಡದಾದ ಜೀಪ್ ಬ್ಯಾಡ್ಜ್‌ಗಳು, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ ಜೊತೆ ಎಲ್‌ಇಡಿ ಡಿಆರ್‌ಎಲ್‌ಗಳ ಅಳವಡಿಕೆ ಹೊಂದಿರುವುದು ಮತ್ತಷ್ಟು ಆಕರ್ಷಣೆಗೆ ಕಾರಣವಾಗಿದೆ.

ಜೀಪ್ ಕಂಪಾಸ್ v/s ಹ್ಯುಂಡೈ ಕ್ರೆಟಾ- ಎಸ್‌ಯುವಿಗಳಲ್ಲಿ ಯಾವುದು ಉತ್ತಮ?

ಅದೇ ರೀತಿಯಾಗಿ ದಕ್ಷಿಣ ಕೊರಿಯಾದ ಜನಪ್ರಿಯ ಹ್ಯುಂಡೈ ಕ್ರೇಟಾ ಕೂಡಾ ಅತ್ಯುತ್ತಮ ಸೌಲಭ್ಯಗಳೊಂದಿಗೆ ಜೀಪ್ ಕಂಪಾಸ್ ಪ್ರತಿಸ್ಪರ್ಧಿಯಾಗಬಲ್ಲ ಕಾರು ಮಾದರಿಯಾಗಿದ್ದು, ಸ್ಪೋರ್ಟ್ ಲುಕ್‌ನೊಂದಿಗೆ 2.0 ಫ್ಯೂಡಿಕ್ ಸ್ಕಲ್ಪಚರ್ ವಿನ್ಯಾಸ ಪಡೆದುಕೊಂಡಿದೆ.

ಜೀಪ್ ಕಂಪಾಸ್ v/s ಹ್ಯುಂಡೈ ಕ್ರೆಟಾ- ಎಸ್‌ಯುವಿಗಳಲ್ಲಿ ಯಾವುದು ಉತ್ತಮ?

ಆದ್ರೆ ವಿವಿಧ ಆಯಾಮಗಳಲ್ಲಿ ಹ್ಯುಂಡೈ ಕ್ರೇಟಾ ಮತ್ತು ಜೀಪ್ ಕಂಪಾಸ್ ನಡುವೆ ಭಾರೀ ವ್ಯತ್ಯಾಸಗಳಿದ್ದು, 10 ಅಂಕಗಳಲ್ಲಿ 8 ಅಂಕಗಳನ್ನು ಜೀಪ್ ಕಂಪಾಸ್‌ಗೆ ಮತ್ತು 7.5 ಅಂಕಗಳನ್ನು ಕ್ರೇಟಾಗೆ ನೀಡಬಹುದು.

ಆಯಾಮಗಳು(ಎಂಎಂ ಗಳಲ್ಲಿ) ಜೀಪ್ ಕಂಪಾಸ್ ಹುಂಡೈ ಕ್ರೆಟಾ

ಉದ್ದ 4,420 4,270

ಅಗಲ 1,820 1,780

ಎತ್ತರ 1,650 1,630

ವೀಲ್ ಬೆಸ್ 2,640 2,590

ಜೀಪ್ ಕಂಪಾಸ್ v/s ಹ್ಯುಂಡೈ ಕ್ರೆಟಾ- ಎಸ್‌ಯುವಿಗಳಲ್ಲಿ ಯಾವುದು ಉತ್ತಮ?

ಎಂಜಿನ್ ಮತ್ತು ಗೇರ್ ಬಾಕ್ಸ್

ಡೀಸೆಲ್ ಮತ್ತು ಪೆಟ್ರೋಲ್ ಎರಡು ಆವೃತ್ತಿಯಲ್ಲಿ ಲಭ್ಯವಿರುವ ಜೀಪ್ ಕಂಪಾಸ್, ಡೀಸೇಲ್ ಆವೃತ್ತಿಯಲ್ಲಿ 2.0-ಲೀಟರ್ ಟರ್ಬೋ ಮತ್ತು ಪೆಟ್ರೋಲ್ ಆವೃತ್ತಿಯಲ್ಲಿ 1.4-ಲೀಟರ್ ಟರ್ಬೋ ಎಂಜಿನ್ ಪಡೆದುಕೊಂಡಿದೆ.

ಜೀಪ್ ಕಂಪಾಸ್ v/s ಹ್ಯುಂಡೈ ಕ್ರೆಟಾ- ಎಸ್‌ಯುವಿಗಳಲ್ಲಿ ಯಾವುದು ಉತ್ತಮ?

ಹೀಗಾಗಿ ಡಿಸೇಲ್ ಕಾರು ಆವೃತ್ತಿಯು 171-ಬಿಎಚ್‌ಪಿ, 350ಎನ್ಎಂ ಟಾರ್ಕ್ ಉತ್ಪಾದಿಸಿದರೆ ಅದೇ ರೀತಿಯಾಗಿ ಪೆಟ್ರೋಲ್ ಆವೃತ್ತಿಗಳು 160-ಬಿಎಚ್‌ಪಿ, 250-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದೆ.

ಜೀಪ್ ಕಂಪಾಸ್ v/s ಹ್ಯುಂಡೈ ಕ್ರೆಟಾ- ಎಸ್‌ಯುವಿಗಳಲ್ಲಿ ಯಾವುದು ಉತ್ತಮ?

ಡೀಸೆಲ್ ಆವೃತ್ತಿಗಳಲ್ಲಿ 6-ಸ್ಪೀಡ್ ಗೇರ್‌ಬಾಕ್ಸ್ ಮತ್ತು ಪೆಟ್ರೋಲ್ ಆವೃತ್ತಿಗಳಲ್ಲಿ 7-ಸ್ಪೀಡ್ ಗೇರ್‌ಬಾಕ್ಸ್ ವ್ಯವಸ್ಥೆಯನ್ನು ಕಲ್ವಿಸಿರುವ ಜೀಪ್ ಕಾಂಪಾಸ್, ಆಟೋ, ಸ್ನೋ, ಸ್ಯಾಂಡ್ ಮತ್ತು ಮಡ್ ಮೂಡ್‌ಗಳಲ್ಲಿ ಚಾಲನೆಗೆ ಅವಕಾಶ ನೀಡಿದೆ.

ಜೀಪ್ ಕಂಪಾಸ್ v/s ಹ್ಯುಂಡೈ ಕ್ರೆಟಾ- ಎಸ್‌ಯುವಿಗಳಲ್ಲಿ ಯಾವುದು ಉತ್ತಮ?

ಅದೇ ರೀತಿಯಾಗಿ ಹ್ಯುಂಡೈ ಕ್ರೇಟಾ ಕೂಡಾ ಡಿಸೇಲ್ ಮತ್ತು ಪೆಟ್ರೋಲ್ ಎಂಜಿನ್ ಮಾದರಿಯಲ್ಲಿ ಲಭ್ಯವಿದ್ದು, ಡೀಸೆಲ್ ಮಾದರಿಯಲ್ಲಿ 1.4-ಲೀಟರ್ ಮತ್ತು1. 6-ಲೀಟರ್ ಎಂಜಿನ್ ಹೊಂದಿವೆ.

ಜೀಪ್ ಕಂಪಾಸ್ v/s ಹ್ಯುಂಡೈ ಕ್ರೆಟಾ- ಎಸ್‌ಯುವಿಗಳಲ್ಲಿ ಯಾವುದು ಉತ್ತಮ?

ಹಾಗಿಯೇ ಪೆಟ್ರೋಲ್ ಆವೃತ್ತಿಯು 1.4-ಲೀಟರ್ ಮತ್ತು 1.6-ಲೀಟರ್ ಎಂಜಿನ್ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆದುಕೊಂಡಿವೆ.

ಜೀಪ್ ಕಂಪಾಸ್ v/s ಹ್ಯುಂಡೈ ಕ್ರೆಟಾ- ಎಸ್‌ಯುವಿಗಳಲ್ಲಿ ಯಾವುದು ಉತ್ತಮ?

ಜೊತೆಗೆ ಆಪ್ ರೋಡಿಂಗ್ ಸಹಾಯಕಾರಿ 4x4 ಡ್ರೈವ್ ಮೂಡ್ ವ್ಯವಸ್ಥೆ ಜೀಪ್ ಕಂಪಾಸ್ ಮಾತ್ರ ಲಭ್ಯವಿದ್ದು, ಕ್ರೇಟಾದಲ್ಲಿ 4x2 ಡ್ರೈವ್ ಮೂಡ್ ಮಾತ್ರ ಲಭ್ಯವಿದೆ. ಇದರಿಂದಾಗಿ ಎಂಜಿನ್ ವಿಭಾಗದಲ್ಲಿನ 10 ಅಂಕಗಳಲ್ಲಿ 10 ಅಂಕಗಳಲ್ಲಿ 8 ಅಂಕಗಳನ್ನು ಜೀಪ್ ಕಂಪಾಸ್‌ಗೆ ಮತ್ತು 7.5 ಅಂಕಗಳನ್ನು ಕ್ರೇಟಾಗೆ ನೀಡಬಹುದು.

ಜೀಪ್ ಕಂಪಾಸ್ v/s ಹ್ಯುಂಡೈ ಕ್ರೆಟಾ- ಎಸ್‌ಯುವಿಗಳಲ್ಲಿ ಯಾವುದು ಉತ್ತಮ?

ಸುರಕ್ಷಾ ಸೌಲಭ್ಯಗಳು

ಕಪ್ಪು ಬಣ್ಣದ ಡ್ಯಾಶ್‌ಬೋರ್ಡ್, ಆಫ್ ವೈಟ್ ಬಣ್ಣದೊಂದಿಗೆ ಕೂಡಿದ ಸೀಟುಗಳು ಮತ್ತು ಮೇಲ್ಛಾವಣೆ, ಅತ್ಯುತ್ತಮ ಆಸನ ವ್ಯವಸ್ಥೆ, ಹಿಂಭಾಗದ ಸೀಟಿನ ಮಧ್ಯದ ಆರ್ಮ್ ರೆಸ್ಟ್, 7-ಇಂಚಿನ ಟಚ್ ಸ್ಕ್ರಿನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಕಾರ್ ಪ್ಲೇ, ಆಂಡ್ರಾಯಿಡ್ ಆಟೋ, ಯುಎಸ್‌ಬಿ ಸೇರಿದಂತೆ ಪ್ರಸ್ತುತ ಸೌಲಭ್ಯಗಳನ್ನು ಹೊಂದಿದೆ.

ಜೀಪ್ ಕಂಪಾಸ್ v/s ಹ್ಯುಂಡೈ ಕ್ರೆಟಾ- ಎಸ್‌ಯುವಿಗಳಲ್ಲಿ ಯಾವುದು ಉತ್ತಮ?

ಇದರೊಂದಿಗೆ ಜೀಪ್ ಕಂಪಾಸ್ ಮಾದರಿಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, 6 ಏರ್‌ಬ್ಯಾಗ್, ಡ್ಯುಯಲ್ ಸ್ಟೇಜ್ ಆಕ್ಟಿವೇಷನ್, ಟಿಸಿಎಸ್, ಇಬಿಡಿ, ಇಎಸ್‌ಪಿ ಮತ್ತು ಎಬಿಎಸ್ ತಂತ್ರಜ್ಞಾನಗಳ ಜೋಡಣೆ ಮಾಡಲಾಗಿದೆ.

ಜೀಪ್ ಕಂಪಾಸ್ v/s ಹ್ಯುಂಡೈ ಕ್ರೆಟಾ- ಎಸ್‌ಯುವಿಗಳಲ್ಲಿ ಯಾವುದು ಉತ್ತಮ?

ಬೆಲೆಗಳು

ಜೀಪ್ ಸಂಸ್ಥೆಯ ಬಹುನೀರಿಕ್ಷಿತ ಜೀಪ್ ಕಂಪಾಸ್ ಎಸ್‌ಯುವಿ ಮಾದರಿಯೂ ಗ್ರಾಹಕರು ನೀರಿಕ್ಷಿಸಿದ್ದಕ್ಕಿಂತ ಕಡಿಮೆ ಬೆಲೆಗಳಿಗೆ ಬಿಡುಗಡೆಗೊಂಡಿದ್ದು, ಎಕ್ಸ್‌ಶೋರಂ ಪ್ರಕಾರ ಆರಂಭಿಕ ಕಾರು ಮಾದರಿಯ ಬೆಲೆ ರೂ.14.19 ಲಕ್ಷಕ್ಕೆ ಮತ್ತು ಉನ್ನತ ಶ್ರೇಣಿಯ ಕಾರಿನ ಬೆಲೆ ರೂ.20.65 ಲಕ್ಷಕ್ಕೆ ಲಭ್ಯವಿದೆ.

ಜೀಪ್ ಕಂಪಾಸ್ v/s ಹ್ಯುಂಡೈ ಕ್ರೆಟಾ- ಎಸ್‌ಯುವಿಗಳಲ್ಲಿ ಯಾವುದು ಉತ್ತಮ?

ಆದ್ರೆ ಮಧ್ಯಮ ವರ್ಗದ ಗ್ರಾಹಕರಿಗೆ ಕೈಗೆಟಕುವ ದರಗಳಲ್ಲಿ ಲಭ್ಯವಿರುವ ಹ್ಯುಂಡೈ ಕ್ರೇಟಾ ಆರಂಭಿಕ ಮಾದರಿಗಳು ರೂ.8.29 ಲಕ್ಷ ಮತ್ತು ಉನ್ನತ ಶ್ರೇಣಿಯು ರೂ.14 ಲಕ್ಷಕ್ಕೆ ದೊರೆಯಲಿದೆ.

ಜೀಪ್ ಕಂಪಾಸ್ v/s ಹ್ಯುಂಡೈ ಕ್ರೆಟಾ- ಎಸ್‌ಯುವಿಗಳಲ್ಲಿ ಯಾವುದು ಉತ್ತಮ?

ಒಟ್ಟಾರೆಯಾಗಿ ನೋಡುವುದಾದರೇ ಜೀಪ್ ಕಂಪಾಸ್ ಒಂದು ಅತ್ಯುತ್ತಮ ಶ್ರೇಣಿಯಾಗಿ ಹೊರ ಹೊಮ್ಮುವ ಕಾರು ಮಾದರಿಯಾಗಿದ್ದು, ಹ್ಯುಂಡೈ ಕ್ರೇಟಾ ಕೂಡಾ ತನ್ನದೇ ಆದ ಕೆಲವು ವಿಶಿಷ್ಟತೆಗಳೊಂದಿಗೆ ಜನಪ್ರಿಯ ಮಾದರಿಯಾಗಿಯಾಗಿರುವುದು ತಿಳಿದುಬರುತ್ತದೆ.

English summary
Read in Kannada about Jeep Compass Vs Hyundai Creta Comparision.
Story first published: Tuesday, August 1, 2017, 21:04 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark