ಖಾನ್ ವಿನ್ಯಾಸದ ರೇಂಜ್ ರೋವರ್ ಸ್ಪೋರ್ಟ್ ಡೈನಾಮಿಕ್ ಪೇಸ್ ಕಾರು ಅನಾವರಣ

Written By:

ಪ್ರಖ್ಯಾತ ವಾಹನ ವಿನ್ಯಾಸ ಸಂಸ್ಥೆಯಾದ ಖಾನ್ ಡಿಸೈನ್ ಸಂಸ್ಥೆ ತನ್ನ ಲ್ಯಾಂಡ್ ರೋವರ್ ರೇಂಜ್ ರೋವರ್ ಸ್ಪೋರ್ಟ್ ಆಟೊ ಬಯಾಗ್ರಫಿ ಡೈನಾಮಿಕ್ ಪೇಸ್ ಕಾರಿನ ವಿನ್ಯಾಸ ಅನಾವರಣಗೊಳಿಸಿದೆ.

ಖಾನ್ ವಿನ್ಯಾಸದ ಲ್ಯಾಂಡ್ ರೋವರ್ ಸ್ಪೋರ್ಟ್ ಪೇಸ್ ಕಾರು ಅನಾವರಣ

ಈ ಕಾರು 4.4 ಎಸ್‌ಡಿವಿ 8 ಡೀಸೆಲ್ ಎಂಜಿನ್ ಪಡೆದುಕೊಂಡಿದ್ದು, ವಿಸ್ತರಿಸಲಾದ ವೀಲ್ ಆರ್ಚೆಸ್ ಮತ್ತು ಎಲ್‌ಇ ಫ್ರಂಟ್ ಗ್ರಿಲ್ ಪಡೆದುಕೊಂಡ ಮರುವಿನ್ಯಾಸಗೊಳಿಸಲಾದ ಬಂಪರ್‌ಗಳನ್ನು ಈ ಕಾರು ಪಡೆದುಕೊಂಡಿದ್ದು, ಹೊಸ ರೀತಿಯ ತಂತ್ರಜ್ಞಾನ ಪಡೆದು ಯುವಕರನ್ನು ಹೆಚ್ಚು ಆಕರ್ಷಣೆ ಮಾಡಲಿದೆ.

ಖಾನ್ ವಿನ್ಯಾಸದ ಲ್ಯಾಂಡ್ ರೋವರ್ ಸ್ಪೋರ್ಟ್ ಪೇಸ್ ಕಾರು ಅನಾವರಣ

ಲ್ಯಾಂಡ್ ರೋವರ್ ರೇಂಜ್ ರೋವರ್ ಸ್ಪೋರ್ಟ್ ಪೇಸ್ ಕಾರು, 305 ವಿಭಾಗ ಕಾಂಟಿನೆಂಟಲ್ ಟೈರ್‌ಗಳಿಂದ ಸುತ್ತುವರಿದ ಹಗುರವಾದ 22 ಇಂಚಿನ ಚಕ್ರಗಳ ಮೇಲೆ ನಿಂತಿದೆ.

ಖಾನ್ ವಿನ್ಯಾಸದ ಲ್ಯಾಂಡ್ ರೋವರ್ ಸ್ಪೋರ್ಟ್ ಪೇಸ್ ಕಾರು ಅನಾವರಣ

ಖಾನ್ ಸಂಸ್ಥೆಯ ಈ ಲ್ಯಾಂಡ್ ರೋವರ್ ರೇಂಜ್ ರೋವರ್ ಸ್ಪೋರ್ಟ್ 4.4 ಎಸ್‌ಡಿವಿ 8 ಡೀಸೆಲ್ ಆಟೋಬಯಾಗ್ರಫಿ ಡೈನಾಮಿಕ್ ಪೇಸ್ ಬೃಹತ್ ಯೋಜನೆಯ ವಿನ್ಯಾಸದ ಕಾರು £. 82,999 ಬೆಲೆಯೊಂದಿಗೆ ಮಾರಾಟವಾಗಲಿದೆ.

ಖಾನ್ ವಿನ್ಯಾಸದ ಲ್ಯಾಂಡ್ ರೋವರ್ ಸ್ಪೋರ್ಟ್ ಪೇಸ್ ಕಾರು ಅನಾವರಣ

ವಾಹನ ವ್ಯಾಪಾರಿ ತಜ್ಞ ಸಿಎಪಿ ಪ್ರಕಾರ, ಸ್ಟ್ಯಾಂಡರ್ಡ್ ಮಾಡೆಲ್‌ಗೆ ಹೋಲಿಸಿದರೆ ಈ ಹೊಸ ವಿನ್ಯಾಸದ ಕಾರು ಶೇಕಡಾ 18% ರಷ್ಟು ಏರಿಳಿತವನ್ನು ತೋರ್ಪಡಿಸುತ್ತದೆ.

ಖಾನ್ ವಿನ್ಯಾಸದ ಲ್ಯಾಂಡ್ ರೋವರ್ ಸ್ಪೋರ್ಟ್ ಪೇಸ್ ಕಾರು ಅನಾವರಣ

ಪ್ರಾಯೋಗಿಕ ವಾಹನವನ್ನು ಹುಡುಕುವವರಿಗೆ, ಪ್ರಾಜೆಕ್ಟ್ ಖಾನ್ ಲ್ಯಾಂಡ್ ರೋವರ್ ರೇಂಜ್ ರೋವರ್ ಸ್ಪೋರ್ಟ್ 4.4 ಎಸ್‌ಡಿವಿ 8 ಡೀಸೆಲ್ ಆಟೋಬಯಾಗ್ರಫಿ ಡೈನಾಮಿಕ್ ಪೇಸ್ ಬೃಹತ್ ಯೋಜನೆಯ ವಿನ್ಯಾಸದ ಕಾರು ಯೋಗ್ಯವಾಗಿದೆ ಹಾಗು ಈ ವಾಹನವು ಅದರ ಶೈಲಿಯಂತೆ ಪ್ರಾಯೋಗಿಕವಾಗಿದೆ ಎಂದು ಕಂಪನಿ ತಿಳಿಸಿದೆ.

English summary
Kahn Design has unveiled the Land Rover Range Rover Sport Autobiography Dynamic Pace Car. Powered by the 4.4 SDV8 Diesel engine.
Story first published: Saturday, August 26, 2017, 13:36 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark