ಅಸಲಿ ಕಾರುಗಳ ನಕಲಿ ಬಣ್ಣ ಬಯಲು
ಇಂದೊಂದು ಚರ್ಚೆಯ ವಿಷಯವೇ ಸರಿ. ವಿದೇಶ ಸಂಸ್ಥೆಗಳಿಗೆ ಹೋಲಿಸಿದಾಗ ತಂತ್ರಜ್ಞಾನ ಸೇರಿದಂತೆ ವಾಹನೋದ್ಯಮದ ಎಲ್ಲ ವಿಭಾಗದಲ್ಲೂ ಭಾರತವು ಅಭಿವೃದ್ಧಿಯತ್ತ ದಾಪುಗಾಲನ್ನಿಡುತ್ತಿದೆ. ಆದರೆ ಒಂದು ನಿರ್ದಿಷ್ಟ ಕಾರಿನ ವಿನ್ಯಾಸವನ್ನು ನಕಲಿ ಮಾಡುವುದು ಎಷ್ಟು ಸರಿ?
ನಿಸ್ಸಂಶವಾಗಿಯೂ ವಾಹನ ಖರೀದಿಗಾರರ ಮನವೊಳಿಸುವಲ್ಲಿ ನಿರ್ದಿಷ್ಟ ಕಾರೊಂದರ ವಿನ್ಯಾಸವು ಬಹು ಮುಖ್ಯ ಪಾತ್ರ ವಹಿಸುತ್ತದೆ. ಆದರೆ ತಿಳಿದೊ ತಿಳಿಯದೆಯೋ ಸಂಭವಿಸಿರುವ ಇಂತಹ ಕೆಲವು ವಿನ್ಯಾಸ ಸಾಮತ್ಯೆಗಳ ಬಗ್ಗೆ ನಾವಿಲ್ಲಿ ಚರ್ಚಿಸಲಿದ್ದೇವೆ. ಈ ಆಸಕ್ತಿದಾಯಕ ಲೇಖನ ಓದಲು ಮುಂದುವರಿಯಿರಿ.

01. ಬೆಂಝ್ ನಕಲಿ ಮಾಡಿದ ಮಹೀಂದ್ರ ?
ನಮ್ಮ ಲೇಖನವನ್ನು ದೇಶದ ನಂ.1 ಎಸ್ ಯುವಿ ಸ್ಕಾರ್ಪಿಯೊದಿಂದಲೇ ಆರಂಭಿಸೋಣವೇ? ನಿಮಗೆ ಅನಿಸತ್ತಿರಬಹುದು ನಾವ್ಯಾಕೆ ಮರ್ಸಿಡಿಸ್ ಬೆಂಝ್ ಬಿ ಕ್ಲಾಸ್ ಜೊತೆ ಸ್ಕಾರ್ಪಿಯೊವನ್ನು ಹೋಲಿಸುತ್ತಿದ್ದೇವೆ ಅಂಥ? ಬನ್ನಿ ಮಂದಿನ ಪುಟದಲ್ಲಿ ಉತ್ತರವನ್ನು ಹುಡುಕೋಣ.

ನಾವಿಲ್ಲಿ ಮಾತನಾಡುತ್ತಿರುವುದು ಎಲ್ ಇಡಿ ಡೇ ಟೈಮ್ ರನ್ನಿಂಗ್ ಲ್ಯಾಂಪ್ ಬಗ್ಗೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಮಹೀಂದ್ರ ಇದನ್ನು 'ಐ ಬ್ರೋ' ಲ್ಯಾಂಪ್ ಎಂದು ವಿಶ್ಲೇಷಿಸಿರಬಹುದು. ಆದರೆ ಏನೇ ಹೆಸರು ಇಟ್ಟರೂ ಇದು ನೇರವಾಗಿ ಬೆಂಝ್ ಬಿ ಕ್ಲಾಸ್ ಡೇ ಟೈಮ್ ರನ್ನಿಂಗ್ ಲೈಟ್ಸ್ ಜೊತೆ ಸಾಮ್ಯತೆಯನ್ನು ಪಡೆದುಕೊಂಡಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಆದರೇನಾಯ್ತು ನಾವು ದುಬಾರಿ ಕಾರಿನ ಸವಲತ್ತು ಸ್ಕಾರ್ಪಿಯೊದಲ್ಲಿ ಪಡೆಯಬಹುದಲ್ಲವೇ?

02. ಷೆವರ್ಲೆ ಸೈಲ್ ಯುವಿಎ vs ಮಾರುತಿ ಸುಜುಕಿ ಸೆಲೆರಿಯೊ
ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಅಥವಾ ಸೆಮಿ ಆಟೋಮ್ಯಾಟಿಕ್ ಮಾರುತಿ ಸುಜುಕಿ ಸೆಲೆರಿಯೊ ವಾಹನೋದ್ಯಮಕ್ಕೆ ದೇಶದ ನಂ.1 ಸಂಸ್ಥೆಯಿಂದ ಆಗಿರುವ ಹೊಸ ಪರಿಚಯ. ಈ ನಿಟ್ಟಿನಲ್ಲಿ ಗ್ರಾಹಕರ ಕಣ್ಣು ಕುಕ್ಕಲು ಸಾಕಷ್ಟು ಬದಲಾವಣೆಗಳನ್ನು ತರಲಾಗಿದೆ. ಆದರೆ ಮುಂದೆನಾಯ್ತು?

ನೀವಿದನ್ನು (ಚಿತ್ರವನ್ನು) ಸೂಕ್ಷ್ಮವಾಗಿ ಎರಡು ಕಾರುಗಳ ನಡುವಣ ಸಾಮ್ಯತೆಯನ್ನು ಒಂದೇ ವಾಕ್ಯದಲ್ಲಿ ಉತ್ತರಿಸಬಹುದು. ಬೊನೆಟ್ ರೇಖೆಯಿಂದ ಹಿಡಿದು, ಶೋಲ್ಡರ್ ಲೈನ್, ಸ್ವಭಾವ ರೇಖೆ ಮತ್ತು ಒಟ್ಟಾರೆ ವಿನ್ಯಾಸವು ಷೆವರ್ಲೆ ಸೈಲ್ ಯುವಿಎಗೆ ಸಾಮತ್ಯೆಯನ್ನು ಪಡೆದುಕೊಂಡಿದೆ. ಬಹುಶ: ಮಾರುತಿ ಸಂಸ್ಥೆಯು ಇದನ್ನು ಉದ್ದೇಶಪೂರ್ವಕವಾಗಿಯೇ ಮಾಡಿರಲಾರದು. ಆದರೆ ನಾವಿದನ್ನು ಬೊಟ್ಟು ಮಾಡಿ ಹೇಳಲೇಬೇಕಾಗುತ್ತದೆ.

03. ಹೋಂಡಾಗೆ ಟಾಂಗ್ ಕೊಟ್ಟ ಸಿಯಾಝ್
ನಾವೀಗ ಚರ್ಚಿಸುತ್ತಿರುವುದು ವಾಹನ ಮಾರುಕಟ್ಟೆಯಲ್ಲಿ ಹಾಟ್ ಕೇಕ್ ತರಹನೇ ಮಾರಾಟವಾಗುತ್ತಿರುವ ಹೋಂಡಾ ಸಿಟಿ ಹಾಗೂ ಮಾರುತಿ ಸಿಯಾಝ್ ಬಗ್ಗೆ. ಮಾರುಕಟ್ಟೆಗೆ ಎರಡು ಮಾದರಿಗಳು ಹೊಸ ಪರಿಚಯ. ವಿನೂತನ ವಿನ್ಯಾಸ, ನಿರ್ವಹಣೆ ಹಾಗೂ ಗ್ರಾಹಕ ಸ್ನೇಹಿ ಎನಿಸಿಕೊಂಡಿರುವ ಈ ಎರಡು ಮಾದರಿಗಳು ಸೆಡಾನ್ ವಿಭಾಗದಲ್ಲಿ ಅತಿ ಹೆಚ್ಚು ಮಾರಾಟವನ್ನು ಸಾಧಿಸುತ್ತಿದೆ. ಆದರೆ ಹೋಂಡಾವನ್ನು ಹಿಮ್ಮೆಟ್ಟಿಸುವ ಅವಸರದಲ್ಲಿ ಮಾರುತಿ ತನ್ನ ಪ್ರತಿಸ್ಪರ್ಧಿಯ ವಿನ್ಯಾಸವನ್ನೇ ನಕಲಿ ಮಾಡಿತೇ? ಮುಂದೆ ಓದಿ...

ಆಧುನಿಕ ಕಾರುಗಳಲ್ಲಿ ಟೈಲ್ ಲ್ಯಾಂಪ್ ಗಳ ವಿನ್ಯಾಸಕ್ಕೆ ಅಷ್ಟೇ ಪ್ರಾಮುಖ್ಯತೆಯಿದೆ. ಯಾಕೆಂದರೆ ಖರೀದಿಗಾರರು ಪ್ರತಿಯೊಂದು ಅಂಶವನ್ನು ತುಲನೆ ಮಾಡುವಷ್ಟು ವಿವೇಕತವನ್ನು ಹೊಂದಿದ್ದಾರೆ. ಈಗ ಇಲ್ಲಿ ಒಂದಕ್ಕೊಂದು ಸಾಮತ್ಯೆಯನ್ನು ಪಡೆದುಕೊಂಡಿರುವ ಟೈಲ್ ಲೈಟ್ ಬಗ್ಗೆ ಚರ್ಚಿಸೋಣವೇ. ಖಂಡಿತವಾಗಿಯೂ ಹೋಂಡಾ ಸಿಟಿ ಮೊದಲು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದರಿಂದ ನಾವಿಲ್ಲಿ ಸಿಯಾಝ್ ಮಾದರಿಯನ್ನು ದೂಷಿಸಲೇಬೇಕಾಗುತ್ತದೆ. ಏನಂತೀರಾ?

04. ಹೋಂಡಾ ಸಿಟಿ vs ಟೊಯೊಟಾ ಕರೊಲ್ಲಾ
ಜಪಾನ್ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಮತ್ತೆ ಸುದ್ದಿಯಲ್ಲಿದೆ. ದಶಕಗಳಿಂದಲೂ ಒಂದಕ್ಕೊಂದು ನಿಕಟ ಪೈಪೋಟಿಯನ್ನು ಒಡ್ಡುತ್ತಿರುವ ಈ ಎರಡು ಸಂಸ್ಥೆಗಳ ಮಾದರಿಗಳಲ್ಲಿ ಕೆಲವು ಸಾಮತ್ಯೆಗಳು ಕಂಡುಬಂದಿದೆ. ಅಷ್ಟಕ್ಕೂ ನಕಲಿ ಮಾಡಿರುವ ಸಂಸ್ಥೆಯಾದರೂ ಯಾವುದಾಗಿರಬಹುದು? ಮುಂದೆ ಓದಿ

ಇಲ್ಲಿ ಕಂಡುಬಂದಿರುವ ಅಂಶವಂದರೆ ಚಕ್ರದ ಮೇಲೆ ಸುತ್ತುವರಿಯಲ್ಪಟ್ಟ ದೇಹ ವಿನ್ಯಾಸವು ಒಂದಕ್ಕೊಂದು ಪ್ರತಿಫಲಿಸುತ್ತದೆ. ಇಲ್ಲಿ ಹೋಂಡಾ ಸಿಟಿ ಮೊದಲು ಬಿಡುಗಡೆಯಾಗಿದ್ದರಿಂದ ಇದಕ್ಕೆ ಸಮಾನವಾದ ವಿನ್ಯಾಸ ತಂತ್ರಗಾರಿಕೆಯನ್ನು ಟೊಯೊಟಾ ಅನುಸರಿಸಿತ್ತೇ ಎಂಬುದು ಪ್ರಶ್ನೆಯ ವಿಷಯವಾಗಿದೆ.

05. ಮತ್ತೆ ಮಾರುತಿಗೆ ತೊಂದರೆ?
ದೇಶದ ಅತ್ಯಂತ ಜನಪ್ರಿಯ ವಾಹನ ಸಂಸ್ಥೆ ಮಗದೊಮ್ಮೆ ಹೋಂಡಾ ಜೊತೆಗೆ ಕಾಣಿಸಿಕೊಂಡಿದೆ. ಇಲ್ಲಿ ಹೋಂಡಾದ ಸ್ಟೈಲಿಷ್ ಎಂಪಿವಿ ಮೊಬಿಲಿಯೊ ಮೊದಲು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದರಿಂದ ಕಟಕಟೆಯಲ್ಲಿ ಸಿಯಾಝ್ ಕಾರನ್ನೇ ಕೂರಿಸಬೇಕಾಗುತ್ತದೆ. ಅಷ್ಟಕ್ಕೂ ಏನಿದು ನಕಲಿ ವಿನ್ಯಾಸ?

ನಾವಿಲ್ಲಿ ಹೆಚ್ಚು ವಿವರಿಸಬೇಕಾದ ಅಗತ್ಯ ಬರುವುದಿಲ್ಲ. ಮೊದಲ ನೋಟದಲ್ಲೇ ಕಾರಿನ ಕಳಗಡೆಯ ಬಂಪರ್ ವಿನ್ಯಾಸವು ಮೊಬಿಲಿಯೊಂದಿ ಪ್ರೇರಣೆ ಪಡೆದು ರಚಿಸಿದಂತಿದೆ. ಇನ್ನು ಮಧ್ಯಭಾಗದ ಏರ್ ಡ್ಯಾಮ್ ವಿಭಜಿಸುವ ಅಂಡಕಾರಾದ ಫಾಗ್ ಲ್ಯಾಂಪ್ ಬಹುಶ: ಈ ವರೆಗೆ ಹೋಲಿಕೆ ಮಾಡಿದ ಪೈಕಿ ಅತ್ಯಂತ ಹೆಚ್ಚು ಪುರಾವೆಗಳನ್ನು ನೀಡುತ್ತಿದೆ.

06. ದೊಡ್ಡವರನ್ನು ಹಿಂಬಾಲಿಸಿದ ಮಹೀಂದ್ರ
ನೀವು ನಿಮ್ಮ ಬಜೆಟ್ ಕಾರಿನಲ್ಲಿ ಐಷಾರಾಮಿ ವಾಹನಗಳ ವಿನ್ಯಾಸವನ್ನು ನಕಲಿ ಮಾಡಿದರೆ ಖಂಡಿತವಾಗಿಯೂ ಅದಕ್ಕೆ ನಮ್ಮ ಸಹಮತವಿದೆ. ಅಕ್ಷರಶ: ಇದನ್ನೇ ದೇಶದ ಎಸ್ ಯುವಿ ದೈತ್ಯ ಮಹೀಂದ್ರ ಮಾಡಿದೆ. ಜಗತ್ತಿನ ಪ್ರೀಮಿಯಂ ಎಸ್ ಯುವಿಗಳಲ್ಲಿ ಒಂದಾಗಿರುವ ರೇಂಜ್ ರೋವರ್ ಗೆ ಏನಾದರೂ ಸಾಮತ್ಯೆವನ್ನು ನೀವಿಲ್ಲಿ ಹುಡುಕಬಹುದೇ?

ಇಗೋ ಬಂತು ನೋಡಿ. ಟೈಲ್ ಲ್ಯಾಂಪ್ ವಿನ್ಯಾಸ ರಚನೆಗೆ ಮಹೀಂದ್ರಗೆ ಸ್ಪೂರ್ತಿಯಾಗಿರುವ ಅಂಶವಾದರೂ ಏನು? ಇಲ್ಲಿ 2013 ರೇಂಜ್ ರೋವರ್ ಮಾದರಿಗೆ ಹೆಚ್ಚು ಸಾಮತ್ಯೆಯನ್ನು ಕಾಣಬಹುದಾಗಿದೆ. ಇಲ್ಲಿ ಕುತೂಹಲದಾಯಕ ಅಂಶವೆಂದರೆ ಜಾಗ್ವಾರ್ ಲ್ಯಾಂಡ್ ರೋವರ್ ಟಾಟಾ ಸಂಸ್ಥೆಯ ಅಧೀನತೆಯಲ್ಲಿದೆ. ಹಾಗಿದ್ದರೆ ಮಹೀಂದ್ರ ಟಾಟಾದ ಅಭಿಮಾನಿಯೇ? ಉತ್ತರಿಸಿರಿ.

07. ಮೊಬಿಲಿಯೊಗೆ ಸಾಮ್ಯತೆ ಪಡೆದ ಡಿಜೈರ್
ಮಾರುತಿ ಇತ್ತೀಚೆಗಷ್ಟೇ ಬಿಡುಗಡೆ ಮಾಡಿರುವ ಸ್ವಿಫ್ಟ್ ಡಿಜೈರ್ ಬಗ್ಗೆ ನಾವಿಲ್ಲಿ ಮಾತನಾಡಲಿದ್ದೇವೆ. ಮತ್ತೆ ಮಾರುತಿ ದೋಷಿ ಎನಿಸಿಕೊಂಡಿತೇ ಎಂಬುದು ನಮ್ಮ ಅನುಮಾನವಾಗಿದೆ.

ಚಿತ್ರದಲ್ಲಿ ನೀವು ನೋಡುತ್ತಿರುವಂತೆಯೇ ಮುಂಭಾಗದ ವಿನ್ಯಾಸವು ಮೊಬಿಲಿಯೊದಿಂದ ಪ್ರೇರಣೆ ಪಡೆದಂತಿದೆ. ಫ್ರಂಟ್ ಗ್ರಿಲ್ ನಿಂದ ಆರಂಭವಾಗಿ, ಬಂಪರ್ ವಿಭಾಗ ಮುಂತಾದವುಗಳು ಸಾಮತ್ಯೆಯನ್ನು ಪಡೆದುಕೊಂಡಿದೆ.

08. ರೇಂಜ್ ರೋವರ್ ಇವೋಕ್ vs ಹ್ಯುಂಡೈ ಐ20 ಆಕ್ಟಿವ್
ಹ್ಯುಂಡೈ ಐ20 ಆಕ್ವಿವ್ ಕ್ರಾಸೋವರ್ ವಿಭಾಗದಲ್ಲಿ ಹೊಸ ಪರಿಚಯವಾಗಿತ್ತು. ಇದೇ ಕಾರಣಕ್ಕಾಗಿ ಹೊಸ ಸೆಗ್ಮೆಂಟ್ ವಿಭಾಗದಲ್ಲಿ ಏನೋ ಹೊಸತನ ತರುವ ಹಂಬಲವಿತ್ತು. ಆದರೆ ಇದಕ್ಕೆ ಹ್ಯುಂಡೈ ಅನುಸರಿಸಿರುವ ನೀತಿಯೇನು?

ಏರ್ ಡ್ಯಾಮ್ ನಲ್ಲಿ ಸೇರಿಕೊಳ್ಳುವ ಬೆಳ್ಳಿ ಬಣ್ಣದ ಮುಂಭಾಗದ ಗ್ರಿಲ್ ಐಕಾನಿಕ್ ರೇಂಜ್ ರೋವರ್ ಇವೋಕ್ ಗೆ ಸಾಮತ್ಯೆ ಪಡೆದುಕೊಂಡಿದೆ. ನಿಖರ ವಿನ್ಯಾಸ ರಚನೆಗೆ ಹೆಸರುವಾಸಿಯಾಗಿರುವ ಹ್ಯುಂಡೈ ಇಂತಹದೊಂದು ಅಪವಾದದಲ್ಲಿ ಸಿಲುಕಿರುವುದು ವಿಪರ್ಯಾಸವೇ ಸರಿ.

09. ಕ್ರಾಸೋವರ್ ಗಳ ಗುದ್ದಾಟ
ಭಾರತದಲ್ಲಿ ಕ್ರಾಸೋವರ್ ಎಂಬುದು ಹೊಸ ಸೆಗ್ಮೆಂಟ್ ನ ಉಗಮನವಾಗಿದೆ. ಇಲ್ಲಿ ಆಫ್ ರೋಡ್ ಎಂದು ಗುರುತಿಸಿಕೊಳ್ಳುವ ತವಕದಲ್ಲಿ ಹ್ಯುಂಡೈ ಮತ್ತೆ ಅಪವಾದಕ್ಕೆ ಸಿಲುಕಿದೆ. ಹೌದು. ಆಗಲೇ ಕ್ರಾಸೋವರ್ ವಿಭಾಗದಲ್ಲಿ ಹೆಸರು ಮಾಡಿರುವ ಫಿಯೆಟ್ ಅವೆಂಚ್ಯುರಾಗೆ ಹೋಲುವ ವಿನ್ಯಾಸ ತಂತ್ರಗಾರಿಕೆಯನ್ನು ಹ್ಯುಂಡೈ ಅನುಸರಿಸಿದೆ. ಹೇಗೆ ಅಂತೀರಾ? ಮುಂದೆ ಓದಿ.

ಫಿಯೆಟ್ ಅವೆಂಚ್ಯುರಾಗೆ ಸಮಾನವಾದ ಅಲಾಯ್ ವೀಲ್ ವಿನ್ಯಾಸವನ್ನು ನೀವಿಲ್ಲಿ ಗಮನಿಸಬಹುದಾಗಿದೆ. ಇನ್ನು ಮೊದಲಿನ ಚಿತ್ರದಲ್ಲಿ ತೋರಿಸಿರುವಂತೆಯೇ ಸೈಡ್ ಬಾಡಿ ಪ್ಯಾನೆಲ್ ಸಹ ಒಂದಕ್ಕೊಂದು ಸಾಮತ್ಯೆಯನ್ನು ಕಾಯ್ದುಕೊಂಡಿದೆ. ಇವೆಲ್ಲಕ್ಕೂ ಹ್ಯುಂಡೈ ಅಭಿಮಾನಿಗಳ ಪ್ರತಿಕ್ರಿಯೆಯಾದರೂ ಏನಾಗಿರಬಹುದು?

10. ನಿಮ್ಮ ನೆಚ್ಚಿನ ಕಾರಿನಿಂದ ವಿನ್ಯಾಸ ನಕಲಿ?
ದಶಕದಿಂದಲೂ ಮಾರುತಿ ಆಲ್ಟೊ 800 ಭಾರತ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಆದರೆ ದೇಶದ ನಂ.1 ಕಾರನ್ನು ನೀವು ಯಾಕೆ ಇಷ್ಟಪಡುತ್ತೀರಾ? ಇದು ಇತರ ಕಾರುಗಳ ನಕಲಿ ಅಂದರೆ ನಂಬಬಹುದೇ? ರೆನೊ ಪಲ್ಸ್ ಹಾಗೂ ಆಲ್ಟೊ 800 ಹಿಂದಿನ ವಿನ್ಯಾಸ ಒಂದಕ್ಕೊಂದು ಸಾಮತ್ಯೆ ಪಡೆದಿಲ್ಲವೇ? ಹೆಚ್ಚಿನ ಪುರಾವೆಗಾಗಿ ಮುಂದಿನ ಪುಟ ಓದಿ

ಹೌದು, ಹಿಂಭಾಗದಲ್ಲಿನ ಬಾಗಿಲಿನ ವಿನ್ಯಾಸ ರೆನೊ ಪಲ್ಸ್ ಗೆ ಸಾಮತ್ಯೆಯನ್ನು ಪಡೆದುಕೊಂಡಿರುವುದನ್ನು ನೀವಿಲ್ಲಿ ಕಾಣಬಹುದು. ಕೇವಲ ಬಾಗಿಲು ಮಾತ್ರವಲ್ಲ ಸ್ವಭಾವ ರೇಖೆ, ಟೈಲ್ ಲ್ಯಾಂಪ್ ಎಲ್ಲವೂ ಒಂದಕ್ಕೊಂದು ನಕಲಿಯಾಗಿದೆ. ಅಷ್ಟಕ್ಕೂ ನೀವು ಮಾರುತಿ ಆಲ್ಟೊ ಇಷ್ಟುಪಡುತ್ತೀರಾ ? ಮತ್ಯಾಕ್ಕೆ ರೆನೊ ಪಲ್ಸ್ ಇಷ್ಟಪಡಬರಬಾರದು? ಹೀಗೆ ವಿನ್ಯಾಸ ಸಾಮ್ಯತೆ ಬಗ್ಗೆ ಚರ್ಚಿಸಲು ಹೊರಟರೆ ತುಂಬಾನೇ ಅಂಶಗಳು ಬಯಲಾಗುತ್ತದೆ. ಒಟ್ಟಿನಲ್ಲಿ ನಮ್ಮಲ್ಲಿ ಹುಟ್ಟಿಕೊಳ್ಳುವ ಕಟ್ಟ ಕಡೆಯ ಪ್ರಶ್ನೆ ದೇಶದ ವಾಹನೋದ್ಯಮ ಸಹ ನಕಲಿ ಅಥವಾ ವಿನ್ಯಾಸ ಸಾಮತ್ಯೆಗಳ ಸರಮಾಲೆಯಾಗುತ್ತಿದೆಯೇ? ಉತ್ತರವನ್ನು ಕಾಮೆಂಟ್ ಬಾಕ್ಸ್ ನಲ್ಲಿ ಹಾಕಿ.


Click it and Unblock the Notifications








