ಕವಾಸಕಿ ಸಂಸ್ಥೆಯ ಮಾರಾಟ ಮತ್ತು ಮಾರ್ಕೆಟಿಂಗ್ ಮುಖ್ಯಸ್ಥರಾಗಿ ಶಿಶಿರ್ ಸಿನ್ಹಾ ನೇಮಕ

Written By:

ಭಾರತದಲ್ಲಿ ಕವಾಸಕಿ ಸಂಸ್ಥೆಯ ಹೊಸ ಮಾರಾಟ ಮತ್ತು ಮಾರ್ಕೆಟಿಂಗ್ ಮುಖ್ಯಸ್ಥರಾಗಿ ಶಿಶಿರ್ ಸಿನ್ಹಾ ಅವರನ್ನು ನೇಮಿಸಲಾಗಿದೆ ಎಂದು ಕಂಪನಿಯು ತಿಳಿಸಿದೆ.

To Follow DriveSpark On Facebook, Click The Like Button
ಕವಾಸಕಿ ಸಂಸ್ಥೆಯ ಹೊಸ ಮಾರಾಟ ಮತ್ತು ಮಾರ್ಕೆಟಿಂಗ್ ಮುಖ್ಯಸ್ಥರಾಗಿ ಶಿಶಿರ್ ಸಿನ್ಹಾ ನೇಮಕ

ಭಾರತದಲ್ಲಿ ಸೂಪರ್ ಬೈಕುಗಳಲ್ಲಿ ತಯಾರಿಕೆಯಲ್ಲಿ ಹೆಚ್ಚು ಪ್ರಖ್ಯಾತಿ ಪಡೆದುಕೊಂಡಿರುವ ಕವಾಸಕಿ ಸಂಸ್ಥೆ ತನ್ನ ಆಡಳಿತ ಮಂಡಳಿಯಲ್ಲಿ ಕೆಲವೊಂದು ಬದಲಾವಣೆ ಮಾಡಲು ಮುಂದಾಗಿದ್ದು, ತನ್ನ ಹೊಸ ಮಾರಾಟ ಮತ್ತು ಮಾರ್ಕೆಟಿಂಗ್ ಮುಖ್ಯಸ್ಥರಾಗಿ ಶಿಶಿರ್ ಸಿನ್ಹಾ ಅವರನ್ನು ನೇಮಕ ಮಾಡಿದೆ.

ಕವಾಸಕಿ ಸಂಸ್ಥೆಯ ಹೊಸ ಮಾರಾಟ ಮತ್ತು ಮಾರ್ಕೆಟಿಂಗ್ ಮುಖ್ಯಸ್ಥರಾಗಿ ಶಿಶಿರ್ ಸಿನ್ಹಾ ನೇಮಕ

ಶಿಶಿರ್ ಸಿನ್ಹಾ ಅವರು ವಾಹನೋದ್ಯಮ ಕ್ಷೇತ್ರದಲ್ಲಿ 15 ವರ್ಷಗಳ ಅನುಭವ ಹೊಂದಿದ್ದಾರೆ. ಇವರು ಇದೇ ತಿಂಗಳ 1ರಿಂದ ಕವಾಸಕಿ ಸಂಸ್ಥೆಯ ಹೊಸ ಮಾರಾಟ ಮತ್ತು ಮಾರ್ಕೆಟಿಂಗ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಕವಾಸಕಿ ಸಂಸ್ಥೆಯ ಹೊಸ ಮಾರಾಟ ಮತ್ತು ಮಾರ್ಕೆಟಿಂಗ್ ಮುಖ್ಯಸ್ಥರಾಗಿ ಶಿಶಿರ್ ಸಿನ್ಹಾ ನೇಮಕ

ಈ ಹಿಂದೆ ಪ್ರಸಿದ್ಧ ಹಾರ್ಲೆ-ಡೇವಿಡ್ಸನ್ ಕಂಪನಿಯಲ್ಲಿ ಕೆಲಸ ಮಾಡಿರುವ ಶಿಶಿರ್ ಸಿನ್ಹಾ, ಭಾರತದಲ್ಲಿ ಹಾರ್ಲೆ-ಡೇವಿಡ್ಸನ್ ಸಂಸ್ಥೆಯ ಅಸ್ತಿತ್ವವನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಕವಾಸಕಿ ಸಂಸ್ಥೆಯ ಹೊಸ ಮಾರಾಟ ಮತ್ತು ಮಾರ್ಕೆಟಿಂಗ್ ಮುಖ್ಯಸ್ಥರಾಗಿ ಶಿಶಿರ್ ಸಿನ್ಹಾ ನೇಮಕ

ಪ್ರಸ್ತುತ, ಕವಾಸಕಿ ಸಂಸ್ಥೆಯು ದೆಹಲಿ, ಮುಂಬೈ, ಕೋಲ್ಕತಾ, ಚೆನೈ, ಬೆಂಗಳೂರು, ಚಂಡೀಘಢ, ಕೊಚ್ಚಿ, ಮತ್ತು ಕೊಯಂಬತ್ತೂರಿನಲ್ಲಿ ಷೋ ರೂಂಗಳನ್ನು ಹೊಂದಿದೆ.

ಕವಾಸಕಿ ಸಂಸ್ಥೆಯ ಹೊಸ ಮಾರಾಟ ಮತ್ತು ಮಾರ್ಕೆಟಿಂಗ್ ಮುಖ್ಯಸ್ಥರಾಗಿ ಶಿಶಿರ್ ಸಿನ್ಹಾ ನೇಮಕ

ಮಾರಾಟ ಮತ್ತು ಮಾರ್ಕೆಟಿಂಗ್ ಮುಖ್ಯಸ್ಥರಾಗಿ ನೇಮಕಗೊಂಡಿರುವ ಶಿಶಿರ್ ಸಿನ್ಹಾ ಅವರು, ಈ ಹಿಂದೆ ಮರ್ಸಿಡಿಸ್ ಬೆಂಝ್ ಇಂಡಿಯಾ ಮತ್ತು ಮಹೀಂದ್ರಾ ಕಂಪೆನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ಕವಾಸಕಿ ಸಂಸ್ಥೆಯನ್ನು ಬಲಪಡಿಸುವಲ್ಲಿ ಇವರ ಕೊಡುಗೆ ಅತ್ಯಾವಶಕವಾಗಿದೆ.

ಕವಾಸಕಿ ಸಂಸ್ಥೆಯ ಹೊಸ ಮಾರಾಟ ಮತ್ತು ಮಾರ್ಕೆಟಿಂಗ್ ಮುಖ್ಯಸ್ಥರಾಗಿ ಶಿಶಿರ್ ಸಿನ್ಹಾ ನೇಮಕ

ಕೆಲವು ವರ್ಷಗಳ ಹಿಂದೆ ಕವಾಸಕಿ ನಿಂಜಾ 250 ಬೈಕಿನೊಂದಿಗೆ ಭಾರತದ ಮಾರುಕಟ್ಟೆಗೆ ಪ್ರವೇಶಿಸಿದ ಕವಾಸಕಿ ಸಂಸ್ಥೆ, ಭಾರತದಲ್ಲಿ 18 ಮಾದರಿಯ ಮೋಟಾರ್ ಸೈಕಲ್‌ಗಳನ್ನು ಹೊಂದಿದೆ. ಆದಾಗ್ಯೂ, ಕೇವಲ 14 ವಿತರಕರನ್ನು ಹೊಂದಿರುವ ಕವಾಸಕಿ ಸಂಸ್ಥೆಯನ್ನು ಶಿಶಿರ್ ಸಿನ್ಹಾ ಹೇಗೆ ಕೊಂಡೊಯ್ಯಲಿದ್ದಾರೆ ? ಎಂಬುದು ಸದ್ಯದ ಪ್ರೆಶ್ನೆಯಾಗಿದೆ.

English summary
Kawasaki India has appointed a new Chief of Sales and Marketing, Shishir Sinha. The new head of Sales and Marketing at Kawasaki has taken up his new role, effective August 1.
Story first published: Thursday, August 10, 2017, 14:08 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark