ಕಾರು ಬಿಡುಗಡೆಗೂ ಮುನ್ನ ಭಾರತದಲ್ಲಿ ರೋಡ್ ಶೋ ನಡೆಸಲಿದೆ ಕಿಯಾ ಮೋಟಾರ್ಸ್

ದಕ್ಷಿಣ ಕೊರಿಯಾ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆ ಹ್ಯುಂಡೈ ಅಂಗ ಸಂಸ್ಥೆಯಾದ ಕಿಯಾ ಮೋಟಾರ್ಸ್ ಭಾರತದಲ್ಲಿ ಪ್ರಥಮ ಬಾರಿಗೆ ತನ್ನ ವಾಣಿಜ್ಯ ಚಟುವಟಿಕೆಗಳನ್ನು ಆರಂಭಗೊಳಿಸುತ್ತಿದೆ.

By Praveen

ದಕ್ಷಿಣ ಕೊರಿಯಾ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆ ಹ್ಯುಂಡೈ ಅಂಗ ಸಂಸ್ಥೆಯಾದ ಕಿಯಾ ಮೋಟಾರ್ಸ್ ಭಾರತದಲ್ಲಿ ಪ್ರಥಮ ಬಾರಿಗೆ ತನ್ನ ವಾಣಿಜ್ಯ ಚಟುವಟಿಕೆಗಳನ್ನು ಆರಂಭಗೊಳಿಸುತ್ತಿದ್ದು, ಇದಕ್ಕೂ ಮುನ್ನ ದೇಶದ ಪ್ರಮುಖ ನಗರಗಳಲ್ಲಿ ರೋಡ್ ಶೋ ನಡೆಸುವ ಯೋಜನೆ ರೂಪಿಸಿದೆ.

ಕಾರು ಬಿಡುಗಡೆಗೂ ಮುನ್ನ ರೋಡ್ ಶೋ ನಡೆಸಲಿದೆ ಕಿಯಾ ಮೋಟಾರ್ಸ್

ಈ ಮೂಲಕ ಗ್ರಾಹಕರು ಮತ್ತು ಕಾರು ಡಿಲರ್ಸ್‌ಗಳನ್ನು ಸೆಳೆಯಲು ಮುಂದಾಗಿರುವ ಕಿಯಾ ಮೋಟಾರ್ಸ್, ಅಗಸ್ಟ್ ಮತ್ತು ಸೆಪ್ಟಂಬರ್‌ನಲ್ಲಿ ದೇಶದ ವಿವಿಧ ಕಡೆಗಳಲ್ಲಿ ರೋಡ್ ಶೋ ನಡೆಸುವ ಬಗ್ಗೆ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಿದೆ.

ಕಾರು ಬಿಡುಗಡೆಗೂ ಮುನ್ನ ರೋಡ್ ಶೋ ನಡೆಸಲಿದೆ ಕಿಯಾ ಮೋಟಾರ್ಸ್

ರೋಡ್ ಶೋಗಳ ಮುಖಾಂತರ ಹೊಸ ಕಾರಿನ ಬಗ್ಗೆ ಗ್ರಾಹಕರಿಗೆ ಮಾಹಿತಿ ಬಿತ್ತರ ಮಾಡಲಿರುವ ಕಿಯಾ ಮೋಟಾರ್ಸ್, ತನ್ನ ಮುಂದಿನ ಯೋಜನೆಗಳು ಮತ್ತು ಹೊಸ ಹೊಸ ಉತ್ಪನ್ನಗಳ ಬಗೆಗೆ ಡಿಲರ್ಸ್ ಜೊತೆ ಸಭೆ ನಡೆಸಲಿದೆ.

ಕಾರು ಬಿಡುಗಡೆಗೂ ಮುನ್ನ ರೋಡ್ ಶೋ ನಡೆಸಲಿದೆ ಕಿಯಾ ಮೋಟಾರ್ಸ್

ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ತನ್ನ ಕಾರು ಮಾದರಿಗಳ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಯನ್ನು ಆರಂಭಗೊಳಿಸುತ್ತಿರುವ ಕಿಯಾ ಮೋಟಾರ್ಸ್, ಸದ್ಯ ಮುಂಚೂಣಿಯಲ್ಲಿರುವ ದೇಶಿಯ ಕಾರು ಉತ್ಪಾದನಾ ಸಂಸ್ಥೆಗಳಿಗೆ ನಡುಕು ಹುಟ್ಟಿಸಲಿದೆ ಎಂದರೆ ತಪ್ಪಾಗಲಾರದು.

ಕಾರು ಬಿಡುಗಡೆಗೂ ಮುನ್ನ ರೋಡ್ ಶೋ ನಡೆಸಲಿದೆ ಕಿಯಾ ಮೋಟಾರ್ಸ್

ಯಾಕೇಂದ್ರೆ ಅಗ್ಗದ ಬೆಲೆಗೆ ಉತ್ತಮ ಕಾರುಗಳನ್ನು ಅಭಿವೃದ್ಧಿಗೊಳಿಸುವಲ್ಲಿ ಮುಂಚೂಣಿಯಲ್ಲಿರುವ ಕಿಯಾ ಮೋಟಾರ್ಸ್, ದೇಶದ ನಂ.1 ಕಾರು ಉತ್ಪಾದನಾ ಸಂಸ್ಥೆ ಮಾರುತಿ ಸುಜುಕಿಗೂ ತೀವ್ರ ಸ್ಪರ್ಧೆ ನೀಡಬಲ್ಲ ಕಾರು ಉತ್ಪಾದನೆ ಸಂಸ್ಥೆಯಾಗಿದೆ.

ಕಾರು ಬಿಡುಗಡೆಗೂ ಮುನ್ನ ರೋಡ್ ಶೋ ನಡೆಸಲಿದೆ ಕಿಯಾ ಮೋಟಾರ್ಸ್

ಈಗಾಗಲೇ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರೀ ಖ್ಯಾತಿ ಹೊಂದಿರುವ ಕಿಯಾ ಮೋಟಾರ್ಸ್, ಅಮೆರಿಕ, ಯುರೋಪ್, ಮೆಕ್ಸಿಕೋ, ಚೀನಾ, ದಕ್ಷಿಣ ಕೊರಿಯಾ ಮತ್ತು ವಿಟ್ನಾಯಂನಲ್ಲಿ ಭಾರೀ ಪ್ರಮಾಣದ ಜನಪ್ರಿಯತೆ ಪಡೆದಿದೆ.

Recommended Video

Tata Nexon: Tata's New SUV (Nexon) For India | First Look - DriveSpark
ಕಾರು ಬಿಡುಗಡೆಗೂ ಮುನ್ನ ರೋಡ್ ಶೋ ನಡೆಸಲಿದೆ ಕಿಯಾ ಮೋಟಾರ್ಸ್

ಕಡಿಮೆ ಬೆಲೆಯಲ್ಲಿ ಉತ್ತಮ ಕಾರು ಅಭಿವೃದ್ದಿ ಮಾಡಿ ಈಗಾಗಲೇ ಹಲವು ಬಾರಿ ಯಶಸ್ವಿಯಾಗಿರುವ ಕಿಯಾ, ಇದೀಗ ಭಾರತೀಯ ಮಾರುಕಟ್ಟೆಯಲ್ಲೂ ತನ್ನ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ.

ಕಾರು ಬಿಡುಗಡೆಗೂ ಮುನ್ನ ರೋಡ್ ಶೋ ನಡೆಸಲಿದೆ ಕಿಯಾ ಮೋಟಾರ್ಸ್

ಕಿಯಾ ಮೋಟಾರ್ಸ್ ಇನ್ನೊಂದು ವಿಶೇಷ ಅಂದ್ರೆ ವಿಶ್ವ ಆಟೋ ಉದ್ಯಮದಲ್ಲಿ ಪೋರ್ಷೆ ನಂತರ ಬೀಡಿಭಾಗಗಳ ಸೇವೆಗಳು ಮತ್ತು ಗ್ರಾಹಕರ ದೂರುಗಳಿಗೆ ತ್ವರಿತವಾಗಿ ಸ್ಪಂದಿಸುವ ಮೂಲಕ ಉತ್ತಮ ಸೇವೆ ನೀಡುವಲ್ಲಿ ಖ್ಯಾತಿ ಹೊಂದಿದೆ.

ಕಾರು ಬಿಡುಗಡೆಗೂ ಮುನ್ನ ರೋಡ್ ಶೋ ನಡೆಸಲಿದೆ ಕಿಯಾ ಮೋಟಾರ್ಸ್

10 ಸಾವಿರ ಕೋಟಿ ಬಂಡವಾಳ

ಕೇಂದ್ರ ಸರ್ಕಾರದ ಮೇಕ್ ಇಂಡಿಯಾ ಪೂರಕವಾಗಿ ಭಾರತದಲ್ಲಿ ಬೃಹತ್ ಪ್ರಮಾಣದ ಕಾರುಗಳ ನಿರ್ಮಾಣಕ್ಕೆ 10 ಸಾವಿರ ಕೋಟಿ ಹೂಡಿಕೆ ಮಾಡುತ್ತಿದ್ದು, ವಿಫುಲ್ ಉದ್ಯೋಗ ಅವಕಾಶ ನೀಡುತ್ತಿದೆ.

ಕಾರು ಬಿಡುಗಡೆಗೂ ಮುನ್ನ ರೋಡ್ ಶೋ ನಡೆಸಲಿದೆ ಕಿಯಾ ಮೋಟಾರ್ಸ್

ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಪೆನುಕೊಂಡಾದಲ್ಲಿ ಕಿಯಾ ಮೋಟಾರ್ಸ್ ಕಾರು ಉತ್ಪಾದನಾ ಘಟಕ ನಿರ್ಮಾಣಗೊಳ್ಳುತ್ತಿದ್ದು, ಇದಕ್ಕಾಗಿ ಬರೋಬ್ಬರಿ 600 ಎಕೆರೆ ಜಮೀನು ಖರೀದಿ ಮಾಡಲಾಗಿದೆ.

ಕಾರು ಬಿಡುಗಡೆಗೂ ಮುನ್ನ ರೋಡ್ ಶೋ ನಡೆಸಲಿದೆ ಕಿಯಾ ಮೋಟಾರ್ಸ್

ಭಾರತದಲ್ಲಿ ವಾರ್ಷಿಕವಾಗಿ 3 ಲಕ್ಷ ಕಾರುಗಳ ಉತ್ಪಾದನೆಗೆ ಬೃಹತ್ ಯೋಜನೆ ರೂಪಿಸಿರುವ ಕಿಯಾ ಮೋಟಾರ್ಸ್, 2019 ರ ಹೊತ್ತಿಗೆ ಹೊಸ ಕಾರುಗಳನ್ನು ಭಾರತೀಯ ಆಟೋ ಉದ್ಯಮಕ್ಕೆ ಪರಿಚಯಿಸಲಿದೆ.

Article Published On: Thursday, July 27, 2017, 14:16 [IST]
English summary
Read in Kannada about Kia Dealer Roadshow To Meet Prospective Dealers In India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+