ಸುರಕ್ಷಾ ವಿಚಾರಕ್ಕೆ ಇಎಸ್ 350 ಕಾರುಗಳ ಮಾರಾಟ ಹಿಂಪಡೆದ ಲೆಕ್ಸಸ್
ಸುರಕ್ಷಾ ತಂತ್ರಜ್ಞಾನ ಅಳವಡಿಕೆಯಲ್ಲಿ ಆದ ದೋಷ ಹಿನ್ನೆಲೆ ಅಮೆರಿಕದಲ್ಲಿ ಇಎಸ್ 350 ಕಾರುಗಳ ಮಾರಾಟವನ್ನು ಲೆಕ್ಸಸ್ ಹಿಂಪಡೆದಿದೆ.
ಸುರಕ್ಷಾ ತಂತ್ರಜ್ಞಾನ ಅಳವಡಿಕೆಯಲ್ಲಿ ಆದ ದೋಷ ಹಿನ್ನೆಲೆ ಅಮೆರಿಕದಲ್ಲಿ ಇಎಸ್ 350 ಕಾರುಗಳ ಮಾರಾಟವನ್ನು ಲೆಕ್ಸಸ್ ಹಿಂಪಡೆದಿದೆ.

ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆ ಟೊಯೊಟಾದ ಲೆಕ್ಸಸ್ ತನ್ನ ಪ್ರಮುಖ ಕಾರು ಮಾದರಿ ಇಎಸ್ 350 ಅನ್ನು ಮಾರಾಟದಿಂದ ಹಿಂಪಡೆದಿದ್ದು, ತಾಂತ್ರಿಕ ದೋಷವನ್ನು ಸರಿ ಮಾಡುವ ಭರವಸೆ ನೀಡಿದೆ.

ಕಳೆದ ಕೆಲ ದಿನಗಳ ಹಿಂದೆ ಅಮೆರಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದ ಇಎಸ್ 350 ಲೆಕ್ಸಸ್, ಸುರಕ್ಷಾ ತಂತ್ರಜ್ಞಾನ ಅಳವಡಿಕೆಯಲ್ಲಿ ಕೆಲವು ದೋಷಗಳನ್ನು ಹೊಂದಿದೆ.

ಈ ಹಿನ್ನೆಲೆ ಇಎಸ್ 350 ಮಾರಾಟವನ್ನು ಹಿಂಪಡೆದಿರುವ ಲೆಕ್ಸಸ್, ಈಗಾಗಲೇ ಮಾರಾಟಗೊಂಡಿರುವ 1,650 ಕಾರುಗಳನ್ನು ಹಿಂಪಡೆದು ತಾಂತ್ರಿಕ ದೋಷವನ್ನು ಸರಿಪಡಿಸಲಿದೆ.

ಇನ್ನು ಲೆಕ್ಸಸ್ ಹೊಸ ಮಾದರಿ ಸ್ಟೇರಿಂಗ್ ವಿಭಾಗದಲ್ಲೇ ತಾಂತ್ರಿಕ ದೋಷ ಇದೆ ಎನ್ನಲಾಗಿದ್ದು, ಮುಂಬರುವ ದಿನಗಳಲ್ಲಿ ಮರುಜೋಡಣೆಗೊಂಡ ಹೊಸ ಕಾರು ಮಾದರಿಗಳು ಖರೀದಿಗೆ ಲಭ್ಯವಿರಲಿವೆ ಎನ್ನಲಾಗಿದೆ.


Click it and Unblock the Notifications








