ಇನ್ಮುಂದೆ ಲೀಸ್‌ಗೆ ಸಿಗಲಿವೆ ಮಹೀಂದ್ರಾ ಎಲೆಕ್ಟ್ರಿಕ್ ಕಾರುಗಳು..!!
ಪ್ರತಿಯೊಬ್ಬರಿಗೂ ಸ್ವಂತದೊಂದು ಕಾರು ಹೊಂದಬೇಕೇಂಬ ಆಸೆ ಇದ್ದೇ ಇರುತ್ತೆ. ಆದ್ರೆ ಹಣಕಾಸಿನ ವಿಚಾರ ಬಂದಾಗ ಕಷ್ಟ ಸಾಧ್ಯ.
ಪ್ರತಿಯೊಬ್ಬರಿಗೂ ಸ್ವಂತದೊಂದು ಕಾರು ಹೊಂದಬೇಕೇಂಬ ಆಸೆ ಇದ್ದೇ ಇರುತ್ತೆ. ಆದ್ರೆ ಹಣಕಾಸಿನ ವಿಚಾರ ಬಂದಾಗ ಅದು ಕಷ್ಟ ಸಾಧ್ಯ. ಈ ಹಿನ್ನೆಲೆ ಹೊಸ ಪರಿಕಲ್ಪನೆಯೊಂದನ್ನು ಜಾರಿ ತಂದಿರುವ ಮಹೀಂದ್ರಾ ಸಂಸ್ಥೆಯು ನಿರ್ದಿಷ್ಟ ಪ್ರಮಾಣದ ಹಣ ಪಡೆದು ನಿಮಗೆ ಇಷ್ಟದ ಕಾರುಗಳನ್ನು ಒದಗಿಸುವ ಸ್ಮಾರ್ಟ್ ಲೀಸ್ ಯೋಜನೆಯನ್ನು ಜಾರಿಗೆ ತಂದಿದೆ.

ಇತ್ತೀಚೆಗೆ ಸ್ವಂತ ಕಾರು ಖರೀದಿಗಿಂತ ಬಾಡಿಗೆಗಾಗಿ ಕಾರುಗಳನ್ನು ಹೊಂದುವ ಪರಿಪಾಠ ಹೆಚ್ಚುತ್ತಿದ್ದು, ಇದೇ ಹಿನ್ನೆಲೆಯಲ್ಲಿ ಹೊಸ ಯೋಜನೆಯನ್ನು ಸಿದ್ಧಗೊಳಿಸಿರುವ ಮಹೀಂದ್ರಾ ಮೋಟಾರ್ಸ್ ಸಂಸ್ಥೆಯು ಮಹೀಂದ್ರಾ ಫೈನಾನ್ಸ್ ಜೊತೆಗೂಡಿ 'ಸ್ಮಾರ್ಟ್ ಲೀಸ್' ಆಧಾರದ ಮೇಲೆ ಎಲೆಕ್ಟ್ರಿಕ್ ಕಾರುಗಳನ್ನು ಒದಗಿಸುತ್ತಿದೆ.

ಮೆಟ್ರೋ ಪಾಲಿಟಿನ್ ನಗರಗಳಾದ ಬೆಂಗಳೂರು, ದೆಹಲಿ, ಪುಣೆ, ಮುಂಬೈ, ಚೆನ್ನೈಗಳಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿರುವ ಮಹೀಂದ್ರಾ ಸಂಸ್ಥೆಯು, ಪ್ರತಿ ತಿಂಗಳು ಇಂತಿಷ್ಟು ಹಣ ಕಟ್ಟಿಸಿಕೊಂಡು ನಿಮಗೆ ಬೇಕಾದ ಕಾರುಗಳನ್ನು ಒದಗಿಸುತ್ತದೆ.

ಸದ್ಯ ಹೊಸ ಯೋಜನೆಯಲ್ಲಿ ಗ್ರಾಹಕರಿಗೆ ಎಲೆಕ್ಟ್ರಿಕ್ ಕಾರುಗಳನ್ನು ಮಾತ್ರ ಒದಗಿಸಲು ಮುಂದಾಗಿರುವ ಮಹೀಂದ್ರಾ ಸಂಸ್ಥೆಯು, ಇ20 ಪ್ಲಸ್ ಮತ್ತು ಇ20 ಪ್ಲಸ್ ಪಿ6 ಎನ್ನುವ ಎಲೆಕ್ಟ್ರಿಕ್ ಮಾದರಿಯ ಕಾರುಗಳನ್ನು ಲೀಸ್‌ಗೆ ಕೊಡಲಿದೆ.

ಇ20 ಪ್ಲಸ್ ಕಾರ್ ಲೀಸ್ ಪಡೆಯಲು ಪ್ರತಿ ತಿಂಗಳಿಗೆ ರೂ.15,999 ನಿಗದಿ ಮಾಡಿರುವ ಮಹೀಂದ್ರಾ ಸಂಸ್ಥೆಯು ಇ20 ಪ್ಲಸ್ ಪಿ6 ಲೀಸ್‌ಗೆ ರೂ.17,999 ನಿಗದಿ ಮಾಡಿ ಪ್ರಕಟನೆ ಹೊರಡಿಸಿದೆ.

ಇನ್ನು ಕಾರು ಲೀಸ್ ಪಡೆಯಲು ಮುಂಗಡವಾಗಿ ರೂ.50 ಸಾವಿರ ನಿಗದಿ ಮಾಡಲಾಗಿದ್ದು, ಇದು ದೆಹಲಿಯಲ್ಲಿ ಲೀಸ್ ಪಡೆಯುವುದಾದರೇ ರೂ.1.50 ಲಕ್ಷ ಪಾವತಿ ಮಾಡಬೇಕೇಂಬ ಷರತ್ತು ಮತ್ತು ನಿಬಂಧನೆ ಹಾಕಿದೆ.
Recommended Video


ಆದ್ರೆ ಲೀಸ್ ನೀಡುವ ಕಾರುಗಳ ಮೇಲೆ ಪ್ರತಿ ತಿಂಗಳು ಕಾರಿನ ನಿರ್ವಹಣಾ ಶುಲ್ಕಗಳನ್ನು ಕೈ ಬಿಟ್ಟಿರುವ ಮಹೀಂದ್ರಾ ಮೋಟಾರ್ಸ್ ಸಂಸ್ಥೆಯು, ಗ್ರಾಹಕರಿಗೆ ಸುರಕ್ಷತೆ ನೀಡುವುದಕ್ಕಾಗಿ ವಿಮೆ ಸೇರಿದಂತೆ ಮುಂತಾದ ಸೌಲಭ್ಯಗಳನ್ನು ಒದಗಿಸಲಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಎಲೆಕ್ಟ್ರಿಕ್ ಕಾರು ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಲೀಸ್ ಯೋಜನೆ ಕೈಗೊಳ್ಳಲಾಗಿದ್ದು, ಮಹೀಂದ್ರಾ ಫೈನಾನ್ಸಿಲ್ ಮೂಲಕ ಗ್ರಾಹಕರಿಗೆ ಹಣಕಾಸಿನ ನೆರವು ಕೂಡಾ ಸಿಗಲಿದೆ. ಹೀಗಾಗಿ ಅಗತ್ಯಕ್ಕೆ ತಕ್ಕಂತೆ ತಮಗೆ ಇಷ್ಟದ ಕಾರುಗಳನ್ನು ಬೇಕೆಂದಾಗ ಪಡೆಯಲು ಇಂತಹ ಯೋಜನೆ ಸಹಕಾರಿಯಾಗಲಿವೆ.


Click it and Unblock the Notifications