Subscribe to DriveSpark

ಜುಲೈ ಅಂತ್ಯಕ್ಕೆ ಸ್ಕಾರ್ಪಿಯೋ ಫೇಸ್‌ಲಿಫ್ಟ್ ಎಸ್‌ಯುವಿ ಬಿಡುಗಡೆ

Written By:

ಭಾರತೀಯ ಆಟೋ ಉದ್ಯಮದಲ್ಲಿ ತನ್ನದೇ ಆದ ಸ್ಥಾನ ಹೊಂದಿರುವ ಮಹೀಂದ್ರಾ ಸಂಸ್ಥೆಯು ಇದೀಗ ಹೊಸ ತಂತ್ರಜ್ಞಾನ ಹೊಂದಿರುವ ಸ್ಕಾರ್ಪಿಯೋ ಫೇಸ್‌ಲಿಫ್ಟ್ ಎಸ್‌ಯುವಿ ಬಿಡುಗಡೆಗೊಳಿಸಲು ಸಜ್ಜುಗೊಂಡಿದೆ.

To Follow DriveSpark On Facebook, Click The Like Button
ಜುಲೈ ಅಂತ್ಯಕ್ಕೆ ಸ್ಕಾರ್ಪಿಯೋ ಫೇಸ್‌ಲಿಫ್ಟ್ ಎಸ್‌ಯುವಿ ಬಿಡುಗಡೆ

ಎಸ್‌ಯುವಿ ಮಾದರಿಗಳಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಮಹೀಂದ್ರಾ ಸಂಸ್ಥೆಯ ಹೊಸ ಮಾದರಿ ಸ್ಕಾರ್ಪಿಯೋ ಫೇಸ್‌ಲಿಫ್ಟ್ ಬಿಡುಗಡೆಗೆ ಸಜ್ಜುಗೊಂಡಿದ್ದು, ಈ ಹಿಂದೆ ಸ್ಪಾಟ್ ಟೆಸ್ಟಿಂಗ್ ವೇಳೆ ಹೊಸ ಕಾರಿನ ವೈಶಿಷ್ಟ್ಯತೆಗಳು ಬಹಿರಂಗಗೊಂಡಿದ್ದವು.

ಜುಲೈ ಅಂತ್ಯಕ್ಕೆ ಸ್ಕಾರ್ಪಿಯೋ ಫೇಸ್‌ಲಿಫ್ಟ್ ಎಸ್‌ಯುವಿ ಬಿಡುಗಡೆ

2014ರಲ್ಲಿ ಪ್ರಥಮ ಬಾರಿಗೆ ಎಸ್‌ಯುವಿ ಮಾದರಿಯನ್ನು ಬಿಡುಗಡೆಗೊಳಿಸಿದ್ದ ಮಹೀಂದ್ರಾ ಸಂಸ್ಥೆಯು, ಸ್ಕಾರ್ಪಿಯೋ ಆವೃತ್ತಿಯ ಮೂಲಕ ಭಾರತೀಯ ಆಟೋ ಉದ್ಯಮದಲ್ಲಿ ಹೊಸ ಭರವಸೆ ಹುಟ್ಟುಹಾಕಿತ್ತು.

ಜುಲೈ ಅಂತ್ಯಕ್ಕೆ ಸ್ಕಾರ್ಪಿಯೋ ಫೇಸ್‌ಲಿಫ್ಟ್ ಎಸ್‌ಯುವಿ ಬಿಡುಗಡೆ

ಇದೀಗ ಅದೇ ಮಾದರಿಯನ್ನು ಪರಿಷ್ಕರಣೆಗೊಳಿಸಿರುವ ಮಹೀಂದ್ರಾ, ಸುಧಾರಿತ ತಂತ್ರಜ್ಞಾನ ಹೊಂದಿರುವ ಸ್ಕಾರ್ಪಿಯೋ ಫೇಸ್‌ಲಿಫ್ಟ್ ಎಸ್‌ಯುವಿ ಮಾದರಿಯನ್ನು ಬಿಡುಗಡೆಗೊಳಿಸುತ್ತಿದೆ.

ಜುಲೈ ಅಂತ್ಯಕ್ಕೆ ಸ್ಕಾರ್ಪಿಯೋ ಫೇಸ್‌ಲಿಫ್ಟ್ ಎಸ್‌ಯುವಿ ಬಿಡುಗಡೆ

ವಿನೂತನ ಫೇಸ್‌ಲಿಫ್ಟ್ ಮಾದರಿಯ ಹೊರ ವಿನ್ಯಾಸ ಮತ್ತು ಒಳವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆ ತಂದಿರುವ ಮಹೀಂದ್ರಾ, ಹಳೆಯ ಮಾದರಿ ಕೆಲವು ಪ್ರಮುಖ ವಿನ್ಯಾಸಗಳನ್ನು ಮುಂದುವರಿಸಿದೆ.

ಜುಲೈ ಅಂತ್ಯಕ್ಕೆ ಸ್ಕಾರ್ಪಿಯೋ ಫೇಸ್‌ಲಿಫ್ಟ್ ಎಸ್‌ಯುವಿ ಬಿಡುಗಡೆ

ಪ್ರಸ್ತುತ ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ಹೊಸ ಮಾದರಿಯನ್ನು ಅಭಿವೃದ್ಧಿ ಮಾಡಲಾಗಿದ್ದು, ಹೊರ ಭಾಗ ನೋಟದಲ್ಲಿ ವಿಶೇಷ ವಿನ್ಯಾಸಗಳನ್ನು ಸೇರಿಸಲಾಗಿದೆ.

ಜುಲೈ ಅಂತ್ಯಕ್ಕೆ ಸ್ಕಾರ್ಪಿಯೋ ಫೇಸ್‌ಲಿಫ್ಟ್ ಎಸ್‌ಯುವಿ ಬಿಡುಗಡೆ

ಮಹೀಂದ್ರಾ ಫೇಸ್‌ಲಿಫ್ಟ್ ಮಾದರಿ ಕೂಡಾ 2.2-ಲೀಟರ್ ಎಂ-ಹಾಕ್ ಡೀಸೆಲ್ ಎಂಜಿನ್ ಹೊಂದಿದ್ದು, ಜೊತೆಗೆ 138-ಬಿಎಚ್‌ಪಿ ಉತ್ಪಾದನಾ ಶಕ್ತಿ ಪಡೆದುಕೊಂಡಿದೆ.

ಜುಲೈ ಅಂತ್ಯಕ್ಕೆ ಸ್ಕಾರ್ಪಿಯೋ ಫೇಸ್‌ಲಿಫ್ಟ್ ಎಸ್‌ಯುವಿ ಬಿಡುಗಡೆ

ಹೊಸ ಮಾದರಿಯಲ್ಲಿ 6-ಸ್ಪೀಡ್ ಮ್ಯಾನುವಲ್ ಹಾಗೂ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ವ್ಯವಸ್ಥೆಯಿದ್ದು, ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ.

ಜುಲೈ ಅಂತ್ಯಕ್ಕೆ ಸ್ಕಾರ್ಪಿಯೋ ಫೇಸ್‌ಲಿಫ್ಟ್ ಎಸ್‌ಯುವಿ ಬಿಡುಗಡೆ

ಎಲ್ಲವೂ ಅಂದುಕೊಂಡತೆ ಆದಲ್ಲಿ ಬರಲಿರುವ ಜುಲೈ ಅಂತ್ಯಕ್ಕೆ ಮಹೀಂದ್ರಾ ಹೊಚ್ಚ ಹೊಸ ಸ್ಕಾರ್ಪಿಯೋ ಫೇಸ್‌ಲಿಫ್ಟ್ ಬಿಡುಗಡೆಯಾಗಿದ್ದು, ಎಸ್‌ಯುವಿ ವಿಭಾಗದಲ್ಲಿ ಮತ್ತೊಮ್ಮೆ ದಾಖಲೆಯ ಮಾರಾಟ ಮಾಡುವ ನೀರಿಕ್ಷೆಯಿದೆ.

English summary
Read in Kannada about mahindra scorpio facelift is in the works by the SUV manufacturer.
Story first published: Friday, June 9, 2017, 19:35 [IST]
Please Wait while comments are loading...

Latest Photos