ಕ್ರೀಡಾ ಆವೃತ್ತಿಯ ಸಿಯಾಜ್ ಎಸ್ ಆವೃತಿ ಕಾರು ಭಾರತದಲ್ಲಿ ಬಿಡುಗಡೆ

Written By:

ಭಾರತದ ಅತಿದೊಡ್ಡ ಕಾರು ತಯಾರಿಕ ಮಾರುತಿ ಸುಜುಕಿ ಸಂಸ್ಥೆಯು ಸಿಯಾಜ್ ಎಸ್ ಆವೃತಿಯ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ್ದು, ಈ ಕ್ರೀಡಾ ಆವೃತ್ತಿಯ ಕಾರಿನ ಬಗ್ಗೆ ಮಾಹಿತಿ ಇಲ್ಲಿದೆ.

ಕ್ರೀಡಾ ಆವೃತ್ತಿಯ ಮಾರುತಿ ಸುಜುಕಿ ಸಿಯಾಜ್ ಎಸ್ ಆವೃತಿ ಕಾರು ಭಾರತದಲ್ಲಿ ಬಿಡುಗಡೆ

ಮಾರುತಿ ಸುಜುಕಿಯ ಸೆಡಾನ್ ಮಾದರಿಗಳನ್ನು ಪ್ರೀಮಿಯಂ ನೆಕ್ಸಾ ಮಾರಾಟ ಮಳಿಗೆ ನೆಟ್ವರ್ಕ್‌ಗೆ ಸ್ಥಳಾಂತರಿಸುವುದಕ್ಕೂ ಮುನ್ನ ಸಿಯಾಜ್ ಆರ್‌ಎಸ್ ಕಾರಿನ ಉತ್ಪಾದನೆ ನಿಲ್ಲಿಸಿದ್ದು, ಈ ಕಾರಿನ ಮತ್ತೊಂದು ಕ್ರೀಡಾ ಆವೃತ್ತಿ ಸಿಯಾಜ್ ಎಸ್ ಮಾದರಿಯನ್ನು ಭಾರತದಲ್ಲಿ ಅಮೋಘವಾಗಿ ಅನಾವರಣಗೊಳಿಸಿದೆ.

ಕ್ರೀಡಾ ಆವೃತ್ತಿಯ ಮಾರುತಿ ಸುಜುಕಿ ಸಿಯಾಜ್ ಎಸ್ ಆವೃತಿ ಕಾರು ಭಾರತದಲ್ಲಿ ಬಿಡುಗಡೆ

ಸಿಯಾಜ್ ಕ್ರೀಡಾ ಆವೃತ್ತಿಯ ಕಾರು ಎಸ್ ರೂಪಾಂತರ ಹೆಸರಿನೊಂದಿಗೆ ಬಿಡುಗಡೆಗೊಳ್ಳಲಿದೆ. ಈ ಕಾರು ಸಾಮಾನ್ಯ ಮಾದರಿಗಳಲ್ಲಿ ಇರುವಂತಹ ಬಂಪರ್ ಬದಲಾಗಿ ಹೊಸ ಕ್ರೀಡಾ ಬಂಪರ್ ಮತ್ತು ಹಿಂದಿನ ಸ್ಪೋರ್ಟ್ಸ್ ಸ್ಪಾಯ್ಲರ್ ಪಡೆದುಕೊಳ್ಳಲಿದೆ.

ಕ್ರೀಡಾ ಆವೃತ್ತಿಯ ಮಾರುತಿ ಸುಜುಕಿ ಸಿಯಾಜ್ ಎಸ್ ಆವೃತಿ ಕಾರು ಭಾರತದಲ್ಲಿ ಬಿಡುಗಡೆ

ಮಾರುತಿ ಸುಜುಕಿ ಸಂಸ್ಥೆಯು ಸಿಯಾಜ್ ಎಸ್ ಆವೃತಿಯ ಕಾರು ಹೆಚ್ಚು ಆಕ್ರಮಣಕಾರಿ ಮತ್ತು ಅಂಗ್ಯುಲರ್ ವಿನ್ಯಾಸ ಪಡೆಯುತ್ತದೆ. ಈ ಕಾರಿನ ಮುಂಭಾಗದಲ್ಲಿ ಸ್ಪೋರ್ಟ್ಸ್ ಬಂಪರ್ ಮತ್ತು ಅಡ್ಡ ಸ್ಕರ್ಟಿಂಗ್ಸ್ ನೋಡಬಹುದಾಗಿದೆ.

ಕ್ರೀಡಾ ಆವೃತ್ತಿಯ ಮಾರುತಿ ಸುಜುಕಿ ಸಿಯಾಜ್ ಎಸ್ ಆವೃತಿ ಕಾರು ಭಾರತದಲ್ಲಿ ಬಿಡುಗಡೆ

ಇನ್ನುಳಿದಂತೆ ಸಿಯಾಜ್ ಕಾರು ತನ್ನ ಸಾಮಾನ್ಯ ಆವೃತ್ತಿಯ ಹೋಲಿಕೆಯನ್ನು ಪಡೆದುಕೊಳ್ಳಲಿದ್ದು, ಎಂದಿನಂತೆ ಸಿಯಾಜ್ ಎಸ್ ಕಾರು ಹೊಸ ಪ್ರೀಮಿಯಂ ಕಪ್ಪು ಒಳಭಾಗ ಪಡೆಯುತ್ತದೆ.

ಕ್ರೀಡಾ ಆವೃತ್ತಿಯ ಮಾರುತಿ ಸುಜುಕಿ ಸಿಯಾಜ್ ಎಸ್ ಆವೃತಿ ಕಾರು ಭಾರತದಲ್ಲಿ ಬಿಡುಗಡೆ

ಆದಾಗ್ಯೂ, ಈ ಕಾರಿನ ಒಳಭಾಗವು ಹೆಚ್ಚು ಪ್ರೀಮಿಯಂ ಅಂಶಗಳನ್ನು ಒಳಗೊಂಡಿರಲಿದೆ. ಇದರ ಜೊತೆ ಗಾಳಿ ದ್ವಾರಗಳು ಮತ್ತು ಇತರ ಸ್ಥಳಗಳಲ್ಲಿ, ಗ್ರೇ ಬಣ್ಣದ ಕ್ರೋಮ್ ವಿನ್ಯಾಸ ಹೊಂದಿರಲಿದೆ ಹಾಗು ಸಿಯಾಜ್ ಎಸ್ ಆವೃತಿಯ ಕಾರಿನಲ್ಲಿ ಕಪ್ಪು ಬಣ್ಣದ ಲೆದರ್ ಸೀಟ್‌ಗಳನ್ನು ನೋಡಬಹುದಾಗಿದೆ.

ಕ್ರೀಡಾ ಆವೃತ್ತಿಯ ಮಾರುತಿ ಸುಜುಕಿ ಸಿಯಾಜ್ ಎಸ್ ಆವೃತಿ ಕಾರು ಭಾರತದಲ್ಲಿ ಬಿಡುಗಡೆ

ಸಿಯಾಜ್ ಎಸ್ ರೂಪಾಂತರವು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಅನಾವಣರಣಗೊಂಡಿದ್ದು, ಪೆಟ್ರೋಲ್ ಆವೃತ್ತಿಯ ಕಾರು ರೂ. 9,39 ಲಕ್ಷ ಮತ್ತು ಡೀಸಲ್ ಕಾರು ರೂ. 11,55 ಲಕ್ಷ ಬೆಲೆ ಹೊಂದಿರಲಿದೆ.

English summary
Read in kannada about Maruti Suzuki, the largest car maker in India, has launched a new version of Ciaz known as Ciaz S. Know more about this car
Story first published: Thursday, August 17, 2017, 12:44 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark