'ಅರೆನಾ' ಹೆಸರಿನ ವಿಭಿನ್ನ ರೀತಿಯ ಶೋರೂಂ ಆರಂಭಿಸಿದ ಮಾರುತಿ ಸುಜುಕಿ

Written By:

ಭಾರತದ ಪ್ರಮುಖ ಪ್ರಯಾಣಿಕ ವಾಹನ ತಯಾರಕ ಕಂಪೆನಿಯಾದ ಮಾರುತಿ ಸುಜುಕಿ ತನ್ನ ಮಾರಾಟ ಜಾಲವನ್ನು ಮರು ಬ್ರಾಂಡ್ ಮಾಡಲು ಸಿದ್ಧವಾಗಿದ್ದು, ತನ್ನ ಹೊಸ ಶೋರೂಂಗಳ ಮರುನಾಮಕರಣಕ್ಕೆ ಮುಂದಾಗಿದೆ.

'ಅರೆನಾ' ಹೆಸರಿನ ವಿಭಿನ್ನ ರೀತಿಯ ಶೋರೂಂ ಆರಂಭಿಸಿದ ಮಾರುತಿ ಸುಜುಕಿ

ಹೌದು, ಮಾರುತಿ ಸುಜುಕಿ ಸಂಸ್ಥೆಯು ತನ್ನ ಹೊಸ ಶೋರೂಂಗಳಿಗೆ 'ಅರೆನಾ' ಎಂಬ ಹೆಸರನ್ನು ನಾಮಕರಣ ಮಾಡಲು ಮುಂದಾಗಿದೆ. ಈ ಹೊಸ ಅರೆನಾ ಶೋರೂಂಗಳು ಆಧುನಿಕ ನೋಟವನ್ನು ಹೊಂದಿದ್ದು, ಗ್ರಾಹಕ ಸ್ನೇಹಿ ಮತ್ತು ಅನುಕೂಲಕರ ವಾತಾವರಣವನ್ನು ಒದಗಿಸುತ್ತವೆ.

'ಅರೆನಾ' ಹೆಸರಿನ ವಿಭಿನ್ನ ರೀತಿಯ ಶೋರೂಂ ಆರಂಭಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಅರೆನಾ ಶೋರೂಂ ಪ್ರಾರಂಭಿಸುವುದರೊಂದಿಗೆ, ವಾಹನ ತಯಾರಕ ಕಂಪನಿಯು ಅರೆನಾ, ನೆಕ್ಸಾ, ಕಮರ್ಷಿಯಲ್ ಮತ್ತು ಟ್ರೂ ವ್ಯಾಲ್ಯೂ ಎಂಬ ನಾಲ್ಕು ವಿಭಿನ್ನ ಮಾರಾಟ ಮಳಿಗೆಗಳನ್ನು ಹೊಂದಲಿದೆ.

'ಅರೆನಾ' ಹೆಸರಿನ ವಿಭಿನ್ನ ರೀತಿಯ ಶೋರೂಂ ಆರಂಭಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಅರೆನಾ ಡಿಜಿಟಲ್ ಸಮಗ್ರತೆಯನ್ನು ಪಡೆದುಕೊಳ್ಳುವ ಮೂಲಕ ಇತರ ವೇದಿಕೆಗಳಿಗಿಂತ ಹೆಚ್ಚು ಭಿನ್ನ ಎನ್ನವುದನ್ನು ತೋರ್ಪಡಿಸಲಿದ್ದು, ಈ ಹೊಸ ಶೋರೂಂ ಗ್ರಾಹಕರಿಗೆ ಅದ್ಭುತ ಅನುಭವ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.

'ಅರೆನಾ' ಹೆಸರಿನ ವಿಭಿನ್ನ ರೀತಿಯ ಶೋರೂಂ ಆರಂಭಿಸಿದ ಮಾರುತಿ ಸುಜುಕಿ

ಈ ಶೋರೂಂ ಮೂಲಕ ಗ್ರಾಹಕರು ತಮಗಿಷ್ಟವಾದ ಕಾರನ್ನು ಬುಕ್ ಮಾಡಬಹುದಾಗಿದ್ದು, ಶೋರೂಂ ವೆಬ್‌ಸೈಟ್ ಮೂಲಕ ಕಾರುಗಳ ಕಸ್ಟಮೈಸೇಷನ್ ಮಾಡುವ ಆಯ್ಕೆಯನ್ನು ಸಹ ನೀಡಲಾಗಿದೆ.

'ಅರೆನಾ' ಹೆಸರಿನ ವಿಭಿನ್ನ ರೀತಿಯ ಶೋರೂಂ ಆರಂಭಿಸಿದ ಮಾರುತಿ ಸುಜುಕಿ

ಕಾಫಿ ಜೊತೆ ಸಮಾಲೋಚನೆ ನೆಡೆಸಬಹುದಾದ ಪ್ರದೇಶ ಹಾಗು ಸೌಹಾರ್ದ ಮನಸ್ಥಿತಿಗಾಗಿ ಮಾಲೀಕರ ಕೋಣೆಯನ್ನು ಈ ಹೊಸ ಮಾರುತಿ ಸುಜುಕಿ ಅರೆನಾ ಶೋರೂಂ ಒಳಗೊಂಡಿರಲಿದ್ದು, ಒಟ್ಟಾರೆಯಾಗಿ ಈ ಹೊಸ ರಿಟೇಲ್ ಮಳಿಗೆಯು ಗ್ರಾಹಕರಿಗೆ ವಿಶೇಷ ಭಾವನೆಯನ್ನು ಉಂಟು ಮಾಡಲಿದೆ.

'ಅರೆನಾ' ಹೆಸರಿನ ವಿಭಿನ್ನ ರೀತಿಯ ಶೋರೂಂ ಆರಂಭಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯ ರೂಪಾಂತರ 2.0 ಕಾರ್ಯತಂತ್ರದ ಭಾಗವಾಗಿ ಈ ಅರೆನಾ ಶೋರೂಂ ಅನಾವರಣಗೊಳ್ಳುತ್ತಿದ್ದು, ವಿನ್ಯಾಸ, ತಂತ್ರಜ್ಞಾನ ಮತ್ತು ಅನುಭವದ ಆಧಾರದ ಮೇಲೆ ಈ ಹೊಸ ಶೋರೂಂ ನಿರ್ಮಿಸಲಾಗಿದೆ.

English summary
India's leading passenger vehicle manufacturer Maruti Suzuki is all set to rebrand its sales network. The new showrooms are named as Maruti Suzuki Arena.
Story first published: Thursday, August 31, 2017, 13:35 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark