ಹೊಸ ಹೈಬ್ರಿಡ್ SUV ಬಿಡುಗಡೆ: ದೊಡ್ಡ ಸನ್‌ರೂಫ್... ಬೆಲೆಯೆಷ್ಟು, ವಿಶೇಷತೆಗಳೇನು?
ಫ್ರೆಂಚ್ ಕಾರು ತಯಾರಕ ಕಂಪನಿಯಾಗಿರುವ 'ರೆನಾಲ್ಟ್' ಇಂದು ಭಾರತದಲ್ಲಿ ಅಧಿಕೃತವಾಗಿ ತನ್ನ ಹೊಸ ರೆನಾಲ್ಟ್ ಡಸ್ಟರ್ ಎಸ್‌ಯುವಿಯನ್ನು ಬಿಡುಗಡೆ ಮಾಡಿದೆ. ಇದರ ಬೆಲೆಗಳು ರೂ. 10.49 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುತ್ತವೆ. ಹೊಸ ಡಸ್ಟರ್ ಕಾರನ್ನು ಅಥೆಂಟಿಕ್, ಎವಲ್ಯೂಷನ್, ಟೆಕ್ನೋ, ಟೆಕ್ನೋ+ ಮತ್ತು ಐಕಾನಿಕ್ ಎಂಬ ಐದು ಟ್ರಿಮ್‌ಗಳಲ್ಲಿ ನೀಡಲಾಗುತ್ತದೆ. ಪ್ರಮುಖ ಮುಖ್ಯಾಂಶಗಳಲ್ಲಿ ಪೂರ್ಣ ಎಲ್ಇಡಿ ಲೈಟಿಂಗ್, ಪನೋರಮಿಕ್ ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, 17 ADAS ಫೀಚರ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾದಂತಹ ಅಧುನಿಕ ಫೀಚರ್ಸ್ ಒಳಗೊಂಡಿದೆ. ಈ ಕಾರಿನ ಇನ್ನಷ್ಟು ಪ್ರಮುಖಾಂಶಗಳು ಇಲ್ಲಿವೆ.
ಆರ್-ಪಾಸ್ ಪ್ರೀ-ಬುಕಿಂಗ್ ಎಂಬ ಕಾರ್ಯಕ್ರಮವನ್ನು ಪರಿಚಯಿಸಿರುವ ರೆನಾಲ್ಟ್, ಇದರಡಿ ಗ್ರಾಹಕರು ಮಾರ್ಚ್ 31, 2026 ರ ಒಳಗೆ ಕಾರನ್ನು ಬುಕ್ ಮಾಡಿದರೆ ರೂ. 10.29 ಲಕ್ಷದ ವಿಶೇಷ ಪರಿಚಯಾತ್ಮಕ ಬೆಲೆಯಲ್ಲಿ ಪಡೆಯಬಹುದು. ರೂ.21,000 ಪಾವತಿಸಿ ಕಾರನ್ನು ಬುಕ್ ಮಾಡಿಕೊಳ್ಳಬಹುದು. ಏಪ್ರಿಲ್‌ನಲ್ಲಿ ಎಲಿವರಿಗಳು ಆರಂಭವಾಗಲಿವೆ.

ಹೊಸ ರೆನಾಲ್ಟ್ ಡಸ್ಟರ್ ವಿಶೇಷತೆಗಳು
ಡಿಸೈನ್ ವಿಷಯಕ್ಕೆ ಬಂದರೆ ರೂಫ್ ಬಾರ್‌ಗಳು ಮತ್ತು ಟೈಲ್‌ಗೇಟ್‌ನಲ್ಲಿ ಐಕಾನಿಕ್ ಹಳದಿ ಅಕ್ಸೆಂಟ್‌ಗಳು, 18 ಇಂಚಿನ ಅಡ್ವೆಂಚರ್ ಬ್ಲಾಕ್ ಅಲಾಯ್ ವೀಲ್‌ಗಳು ಹಾಗೂ ಮಸ್ಕುಲರ್ ಲುಕ್‌ನೊಂದಿಗೆ ದೃಢವಾದ ಹೊರಭಾಗವು ನೋಡಲು ರಗಡ್ ಆಗಿ ಕಾಣುತ್ತದೆ. ಅಲ್ಲದೆ 212 mm ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ಬರುತ್ತದೆ. ಫುಲ್ LED ಹೆಡ್ ಲ್ಯಾಂಪ್‌ಗಳು, LED ಟೈಲ್‌ಲ್ಯಾಂಪ್‌ಗಳು, LED ಫಾಗ್ ಲ್ಯಾಂಪ್‌ಗಳು ಹಾಗೂ ರಿಯರ್ ಲೈಟ್ ಬಾರ್ ಹೊಂದಿದೆ.
ಇಂಟೀರಿಯರ್‌ನಲ್ಲಿ 48 ಬಣ್ಣಗಳ ಆಂಬಿಯೆಂಟ್ ಲೈಟಿಂಗ್, PM2.5 ಡಿಸ್ಪ್ಲೇಯೊಂದಿಗೆ ಕ್ಲೀನ್ ಏರ್ AQI ಡಿಸ್ಪ್ಲೇ, 6-ವೇ ಅಡ್ಜಸ್ಟಬಲ್ ಎಲೆಕ್ಟ್ರಿಕ್ ಹಾಗೂ ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಪುಶ್ ಸ್ಟಾರ್ಟ್‌ನೊಂದಿಗೆ ರೆನಾಲ್ಟ್ ಹ್ಯಾಂಡ್ಸ್‌ಫ್ರೀ ಆಕ್ಸೆಸ್ ಕಾರ್ಡ್, ಆಟೋ-ಡಿಮ್ಮಿಂಗ್ ರಿಯರ್‌ವ್ಯೂ ಮಿರರ್, ಆಟೋ ಅಪ್/ಡೌನ್ ಹೊಂದಿರುವ ಎಲ್ಲಾ ಪವರ್ ವಿಂಡೋಗಳು, ಟಚ್ ಆಕ್ಟಿವೇಟೆಡ್ ಕ್ಯಾಬಿನ್ ಲೈಟಿಂಗ್, ಆಟೋ ಹೆಡ್‌ಲ್ಯಾಂಪ್‌ಗಳು, ರೈನ್ ಸೆನ್ಸಿಂಗ್ ವೈಪರ್‌ಗಳನ್ನು ಹೊಂದಿದೆ.

ಇವಿಷ್ಟೆ ಅಲ್ಲದೆ 10.25 ಇಂಚಿನ TFT ಡ್ರೈವರ್ ಡಿಸ್ಪ್ಲೇ, 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಎಲೆಕ್ಟ್ರಿಕ್ ಪನೋರಮಿಕ್ ಸನ್‌ರೂಫ್, ಎಲೆಕ್ಟ್ರಿಕ್ ಪವರ್ಡ್ ಟೈಲ್‌ಗೇಟ್, 6 ಸ್ಪೀಕರ್ ಸಿಸ್ಟಮ್ ಹೊಂದಿರುವ ಅರ್ಕಾಮಿಸ್ ಆಡಿಟೋರಿಯಂ ಸೌಂಡ್ ಸಿಸ್ಟಮ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜಿಂಗ್, ಪಡಲ್ ಲ್ಯಾಂಪ್‌ಗಳನ್ನು ಒಳಗೊಂಡಿದೆ.
ಸೇಫ್ಟಿ ಫೀಚರ್ಸ್ ವಿಷಯಕ್ಕೆ ಬಂದರೆ 6-ಏರ್‌ಬ್ಯಾಗ್‌ಗಳು, 17 ADAS ಫೀಚರ್‌ಗಳು, ಹಿಲ್ ಡೀಸೆಂಟ್ ಕಂಟ್ರೋಲ್, ಆಟೋ-ಹೋಲ್ಡ್‌ನೊಂದಿಗೆ ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಆಟೋ ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್ ನೀಡಲಾಗಿದೆ. ಹಾಗೆಯೇ ಎಬಿಎಸ್, ಇಬಿಡಿ, ಇಎಸ್‌ಸಿ, ಟಿಪಿಎಂಎಸ್, ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

ಎಂಜಿನ್ ವಿಷಯಕ್ಕೆ ಬಂದರೆ 3 ಆಯ್ಕೆಗಳನ್ನು ನೀಡಲಾಗಿದ್ದು, ಮೊದಲನೇಯದು 1.8-ಲೀಟರ್ ಸ್ಟ್ರಾಂಗ್ ಹೈಬ್ರಿಡ್ (ಪೆಟ್ರೋಲ್ + ಎಲೆಕ್ಟ್ರಿಕ್) ಎಂಜಿನ್, ಎರಡನೇಯದು 1.3-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹಾಗೂ ಮೂರನೇಯದು 1.0-ಲೀಟರ್ ಪೆಟ್ರೋಲ್ ಎಂಜಿನ್ ಆಗಿದೆ. 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್ ಮತ್ತು 8-ಸ್ಪೀಡ್ DHT ಗೇರ್‌ಬಾಕ್ಸ್‌ನ್ನು ಹೊಂದಿದೆ.
ಈ ಕಾರು ಡೈಮೆಂಟ್-ಕಟ್ 18-ಇಂಚಿನ ಅಲಾಯ್ ವೀಲ್‌ಗಳೊಂದಿಗೆ ಬರುತ್ತದೆ. ಆಯಾಮದ ವಿಷಯದಲ್ಲಿ, ಹೊಸ ಡಸ್ಟರ್ 4,346 ಮಿ.ಮೀ ಉದ್ದ, 1,815 ಮಿ.ಮೀ ಅಗಲ, 1,703 ಮಿ.ಮೀ ಎತ್ತರ ಮತ್ತು 2,657 ಮಿ.ಮೀ ವೀಲ್‌ಬೇಸ್ ಅನ್ನು ಹೊಂದಿದ್ದು, ಇದು ನಗರದಲ್ಲಿ ಸ್ಪೋರ್ಟಿ ಮತ್ತು ಅಡ್ವೆಂಚರ್ ಪರ್ಫಾಮೆನ್ಸ್ ನೀಡುತ್ತದೆ.


Click it and Unblock the Notifications








