ಮಾರ್ಚ್ 3ಕ್ಕೆ ಮಾರುತಿ ಸುಜುಕಿ ಬಲೆನೊ ಆರ್‌ಎಸ್ ಬಿಡುಗಡೆಗೆ ಸಿದ್ಧ; ನೂತನ ಕಾರಿನಲ್ಲಿ ಏನೇನಿದೆ?

Written By:

ಭಾರತದ ಅತಿದೊಡ್ಡ ಕಾರು ಉತ್ವಾದನಾ ಸಂಸ್ಥೆಯಾಗಿರುವ ಮಾರುತಿ ಸುಜುಕಿ,ತನ್ನ ಬಹುನೀರಿಕ್ಷಿತ ಬಲೆನೊ ಆರ್‌ಎಸ್ ಬಿಡುಗಡೆಗೊಳಿಸಲು ತುದಿಗಾಲಿನ ಮೇಲೆ ನಿಂತಿದೆ. ಬಿಡುಗೆಡೆಗೊಳ್ಳಲಿರುವ ನೂತನ ಕಾರು ಹ್ಯಾಚ್ ಬ್ಯಾಕ್ ಮಾದರಿ ಹೊಂದಿದ್ದು, ಆಟೋ ಉದ್ಯಮದಲ್ಲಿ ಹೊಸ ಭರವಸೆ ಹುಟ್ಟಿಸಿದೆ.

ಮಾರ್ಚ್ 3ಕ್ಕೆ ಮಾರುತಿ ಬಲೆನೊ ಆರ್‌ಎಸ್ ಬಿಡುಗಡೆಗೆ ಸಿದ್ಧ; ನೂತನ ಕಾರಿನಲ್ಲಿ ಏನೇನಿದೆ?

ಹೊಸ ತಂತ್ರಜ್ಞಾನದೊಂದಿಗೆ ಭಾರತದಲ್ಲಿ ಬಿಡುಗಡೆಗೊಳ್ಳಲು ಸಜ್ಜುಗೊಂಡಿರುವ ಮಾರುತಿ ಸುಜುಕಿ ಬಲೆನೊ ಆರ್‌ಎಸ್, ಹ್ಯಾಚ್ ಬ್ಯಾಕ್ ದೇಶದ ರಸ್ತೆಗಳಿಗೆ ಹೊಂದಿಕೊಳ್ಳುವುದಂತೂ ಸುಳ್ಳಲ್ಲ. ಯಾಕೇಂದ್ರೆ ಈ ಹಿಂದೇ ಬಿಡುಗಡೆಗೊಂಡಿರುವ ವಿವಿಧ ಮಾದರಿ ಕಾರುಗಳು ಜನಪ್ರಿಯಗೊಂಡಿವೆ. ಹೀಗಾಗಿ ಬಿಡುಗಡೆಗೊಳ್ಳಲು ಸಜ್ಜುಗೊಂಡಿರುವ ಮಾರುತಿ ಸುಜುಕಿ ಬಲೆನೊ ಆರ್‌ಎಸ್ ಇದೇ ವರ್ಷ ಮಾರ್ಚ್ 3ಕ್ಕೆ ಮಾರುಕಟ್ಟೆಗೆ ಪ್ರವೇಶಿಸುವ ಸಾಧ್ಯತೆಗಳಿವೆ.

ಮಾರ್ಚ್ 3ಕ್ಕೆ ಮಾರುತಿ ಬಲೆನೊ ಆರ್‌ಎಸ್ ಬಿಡುಗಡೆಗೆ ಸಿದ್ಧ; ನೂತನ ಕಾರಿನಲ್ಲಿ ಏನೇನಿದೆ?

ಈ ಹಿಂದೆ 2016ರ ಆಟೋ ಎಕ್ಸ್‌ಪೋದಲ್ಲಿ ಅದ್ಭುತ ಪ್ರದರ್ಶನ ಕಂಡಿದ್ದ, ಬಲೆನೊ ಆರ್‌ಎಸ್ ಆಟೋ ಉದ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ವಿನೂತನ ತಂತ್ರಜ್ಞಾನ ಅಳವಡಿಸಿಕೊಂಡಿರುವ ಬಲೆನೊ ಆರ್‌ಎಸ್‌ನಲ್ಲಿ ಬಿ-ಕೆನ್ಸಾನ್ ಪ್ರೋಜೆಕ್ಟರ್ ಲ್ಯಾಂಪ್ ಮತ್ತು ವಿದ್ಯುತ್ ಚಾಲಿತ ಓವೀಆರ್‌ಎಮ್‌ ಹೊಂದಿದೆ.

ಮಾರ್ಚ್ 3ಕ್ಕೆ ಮಾರುತಿ ಬಲೆನೊ ಆರ್‌ಎಸ್ ಬಿಡುಗಡೆಗೆ ಸಿದ್ಧ; ನೂತನ ಕಾರಿನಲ್ಲಿ ಏನೇನಿದೆ?

ನೂತನ ಮಾದರಿಯ ಬಲೆನೊ ಆರ್‌ಎಸ್ ಕಾರಿನಲ್ಲಿ ಇಂಟಿರಿಯರ್‌ಗೆ ಹೆಚ್ಚಿನ ಪ್ರಾಶಸ್ತ್ಯ ಕೋಡಲಾಗಿದ್ದು, ಪರಿಷ್ಕೃತ ಡ್ಯಾಶ್ ಬೋರ್ಡ್ ಅಳವಡಿಸಲಾಗಿದೆ. ಇನ್ನೂ ಆ್ಯಪಲ್ ಕಾರ್ ಪ್ಲೇಯ್, ಆಂಡ್ರಾಯ್ಡ್ ಆಟೋ ವ್ಯವಸ್ಥೆ ಹೊಂದಿದ್ದು, ಸಮಕಾಲಿನ ಕಾರುಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಮಾರ್ಚ್ 3ಕ್ಕೆ ಮಾರುತಿ ಬಲೆನೊ ಆರ್‌ಎಸ್ ಬಿಡುಗಡೆಗೆ ಸಿದ್ಧ; ನೂತನ ಕಾರಿನಲ್ಲಿ ಏನೇನಿದೆ?

ಇನ್ನೂ ನೂತನ ಆವೃತ್ತಿಯ ಬಲೆನೊ ಆರ್‌ಎಸ್ ಎಂಜಿನ್ ಕಾರ್ಯಕ್ಷಮತೆ ಬಗಗೆ ಹೇಳುವುದಾದರೆ, ಬೂಸ್ಟರ್ ಜೆಟ್ ಎಂಜಿನ್ ಬಲೆನೊ ಆರ್‌ಎಸ್‌ಗೆ ವಿಭಿನ್ನ ಶಕ್ತಿ ತುಂಬಲಿದೆ. 100 ಬಿಎಚ್‌ಪಿ ಹಾಗೂ 150 ಎನ್ಎಂ ಟಾರ್ಕ್ ಉತ್ಪಾದನೆ ಸಾಮರ್ಥ್ಯ ಹೊಂದಿದ್ದು, 5 ಸ್ಪೀಡ್ ಮ್ಯಾನುಯಲ್ ಗೇರ್ ಬಾಕ್ಸ್ ಅಳವಡಿಸಲಾಗಿದೆ.

ಮಾರ್ಚ್ 3ಕ್ಕೆ ಮಾರುತಿ ಬಲೆನೊ ಆರ್‌ಎಸ್ ಬಿಡುಗಡೆಗೆ ಸಿದ್ಧ; ನೂತನ ಕಾರಿನಲ್ಲಿ ಏನೇನಿದೆ?

ಮಾರುತಿ ಸುಜುಕಿ ಸಂಸ್ಥೆ ಪ್ರಕಾರ ಬಿಡುಗಡೆಗೆ ಸಜ್ಜುಗೊಂಡಿರುವ ಬಲೆನೊ ಆರ್‌ಎಸ್ ಮತ್ತೊಂದು ವಿಶೇಷವೇನೆಂದರೆ, ನೂತನ ಆವೃತ್ತಿಯಲ್ಲಿ ಟರ್ಬೊಚಾರ್ಜ್ಡ್ ಎಂಜಿನ್ ಅಳವಡಿಸಲಾಗಿದೆ. ಇದರಿಂದಾಗಿ ಕಾರಿನ ಕಾರ್ಯಕ್ಷಮತೆ ಹೆಚ್ಚಿಸಲು ಸಹಕಾರಿಯಾಗಲಿದ್ದು, ಇದು ಗ್ರಾಹಕರಿಗೆ ವರವಾಗಿದೆ.

ಮಾರ್ಚ್ 3ಕ್ಕೆ ಮಾರುತಿ ಬಲೆನೊ ಆರ್‌ಎಸ್ ಬಿಡುಗಡೆಗೆ ಸಿದ್ಧ; ನೂತನ ಕಾರಿನಲ್ಲಿ ಏನೇನಿದೆ?

ವಿನೂತನ ಮಾದರಿಯ ಮಾರುತಿ ಸುಜುಕಿ ಬಲೆನೊ ಆರ್‌ಎಸ್ ಔಟ್ ಲುಕ್ ಅದ್ಭುತವಾಗಿದೆ. ಈ ನೂತನ ಮಾದರಿ ಕಾರು 1745ಎಂಎಂ ಅಗಲ ಹಾಗೂ 3995ಎಂಎಂ ಉದ್ದಳತೆ ಹೊಂದಿದ್ದು, ಬಲೆನೊ ಆರ್‌ಎಸ್ ಚಿಹ್ನೆ ಕಾರಿಗೆ ಹೊಸ ಲುಕ್ ನೀಡಿದೆ.

ಮಾರ್ಚ್ 3ಕ್ಕೆ ಮಾರುತಿ ಬಲೆನೊ ಆರ್‌ಎಸ್ ಬಿಡುಗಡೆಗೆ ಸಿದ್ಧ; ನೂತನ ಕಾರಿನಲ್ಲಿ ಏನೇನಿದೆ?

ಒಟ್ಟಿನಲ್ಲಿ ಅದ್ಭುತ ಲುಕ್‌ ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗಿರುವ ಮಾರುತಿ ಸುಜುಕಿ ಬಲೆನೊ ಆರ್‌ಎಸ್ ಕಾರಿನ ಬೆಲೆ 8 ಲಕ್ಷ ರೂಗಳಿಂದ 9 ಲಕ್ಷ ರೂ ಇರಲಿದೆ ಎಂದು ನಿರೀಕ್ಷಿಸಲಾಗಿದೆ.

ಮಾರ್ಚ್ 3ಕ್ಕೆ ಮಾರುತಿ ಬಲೆನೊ ಆರ್‌ಎಸ್ ಬಿಡುಗಡೆಗೆ ಸಿದ್ಧ; ನೂತನ ಕಾರಿನಲ್ಲಿ ಏನೇನಿದೆ?

ಮಾರುತಿ ಸುಜುಕಿ ಬಲೆನೊ ಆರ್‌ಎಸ್ ಮಾರ್ಚ್ 3ಕ್ಕೆ ಭಾರತೀಯ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಇದೆ ಮತ್ತು ಈ ವಾಹನವು ನೆಕ್ಸಾ ಶೋರಂಗಳಲ್ಲಿ ಲಭ್ಯವಿರಲಿದೆ. ಜೊತೆಗೆ ತನ್ನ ಪ್ರತಿಸ್ಪರ್ಧಿಗಳಾದ ಫೋಕ್ಸ್‌ವ್ಯಾಗನ್ ಪೋಲೋ ಜಿಟಿ ಟಿಎಸ್ಐ ಮತ್ತು ಫಿಯೆಟ್ ಅಬಾರ್ತ್ ಪುಂಟೊಗೆ ತೀವ್ರ ಪೈಪೋಟಿ ನೀಡಲಿದೆ.

ಹೊಸ ಆವೃತ್ತಿಯ ಮಾರುತಿ ಸುಜುಕಿ ಕಾರಿನ ಫೋಟೋಗಾಗಿ ಕ್ಲಿಕ್ ಮಾಡಿ.

English summary
Maruti Suzuki Baleno RS is expected to come with a price tag of around Rs 8 lakh to Rs 9 lakh.
Please Wait while comments are loading...

Latest Photos