ಮಾರುತಿ ಸುಜುಕಿ ಡಿಸೈರ್ ಬಿಡುಗಡೆಗೆ ಕ್ಷಣಗಣನೆ- ಈಗಲೇ ಬುಕ್ ಮಾಡಿ..!!
ಪ್ರಸ್ತುತ ತಂತ್ರಜ್ಞಾನಗಳ ಅಳವಡಿಕೆ ಹೊಂದಿರುವ ಮಾರುತಿ ಸುಜುಕಿಯ ಹೊಚ್ಚ ಹೊಸ ಡಿಜೈರ್ ಕಾರು ಬಿಡುಗಡೆಗೆ ಸಜ್ಜುಗೊಂಡಿದ್ದು, ಹೊಸ ಮಾದರಿಯ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತೀಯ ಗ್ರಾಹಕರ ಮನಗೆದ್ದಿರುವ ಮಾರುತಿ ಸುಜುಕಿ ಸಂಸ್ಥೆಯು ತನ್ನ ಹೊಚ್ಚ ಹೊಸ ಮಾದರಿಯ ಡಿಜೈರ್ ಕಾರನ್ನು ಇದೇ ಮೇ 16ಕ್ಕೆ ಬಿಡುಗಡೆಗೊಳಿಸುತ್ತಿದ್ದು, 11 ಸಾವಿರ ರೂಪಾಯಿ ಮುಂಗಡದೊಂದಿಗೆ ಬುಕ್ಕಿಂಗ್ ಆರಂಭಿಸಿದೆ.

ಹೊಚ್ಚ ಹೊಸ ಕಾರು ಮಾದರಿಯಲ್ಲಿ ಫೇಸ್‌ಲಿಫ್ಟ್ ಅಂಶಗಳಿದ್ದು, ನವೀನ ಮಾದರಿಯ ವಿನ್ಯಾಸವನ್ನು ಹೊಂದಿವೆ. ಜೊತೆಗೆ ವಿನೂತನ ವಿನ್ಯಾಸದ ಗ್ರಿಲ್ ಪಡೆದುಕೊಂಡಿದ್ದು, ಹೊರ ಭಾಗದ ಹೊಸ ವಿನ್ಯಾಸವು ಗಮನಸೆಳೆಯುತ್ತಿವೆ.

ಹೊಸ ಮಾದರಿಯ ಸ್ವಿಫ್ಟ್ ಡಿಸೈರ್ ಕಾರು ಸಾಕಷ್ಟು ಬದಲಾವಣೆಗೊಂಡಿದ್ದು, ಹಳೆಯ ಮಾದರಿಗಿಂತ ಹೆಚ್ಚು ತೂಕ ಪಡೆಯುವ ಮೂಲಕ ಬಲಿಷ್ಠತೆ ಕಾಯ್ದುಕೊಂಡಿದೆ.

ಕಾರಿನ ಹಿಂದಿನ ದೀಪಗಳು ಬೂಟ್ ಲಿಪ್ ಸ್ಪಾಯ್‌ಲರ್‌ನೊಂದಿಗೆ ಮರುವಿನ್ಯಾಸಗೊಂಡಿದ್ದು, ಮೇ 16ರಂದು ಖರೀದಿಗೆ ಲಭ್ಯವಾಗಲಿದೆ.

ಹೊಚ್ಚ ಹೊಸ ಸ್ವಿಫ್ಟ್ ಡಿಸೈರ್ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಆವೃತಿಯಲ್ಲಿ ಬಿಡುಗಡೆಗೊಳ್ಳಲಿದ್ದು, ಪೆಟ್ರೋಲ್ ಕಾರು 83 ಅಶ್ವಶಕ್ತಿ ಮತ್ತು ಡೀಸೆಲ್ 74 ಅಶ್ವಶಕ್ತಿ ಪಡೆದುಕೊಂಡಿವೆ.

1.2-ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.3-ಲೀಟರ್ ಡಿಸೇಲ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿದೆ.

ಇಷ್ಟೆಲ್ಲಾ ಬದಲಾವಣೆಗಳನ್ನು ಒಳಗೊಂಡಿರುವ ಈ ಕಾರು ಕಾಂಪ್ಯಾಕ್ಟ್ ಸೆಡಾನ್ ಕಾರುಗಳನ್ನು ಹಿಂದಿಕ್ಕಿ ತನ್ನ ಪ್ರಾಬಲ್ಯ ಸಾಧಿಸುವುದಂತೂ ಖಚಿತ.

ಈ ಫೇಸ್‌ಲಿಫ್ಟ್ ಕಾರು ಮಾನ್ಯುಯಲ್ ಗೇರ್ ಬಾಕ್ಸ್ ಮತ್ತು ಸ್ವಯಂಚಾಲಿತ ಗೇರ್ ಬಾಕ್ಸ್ ಎರಡು ಮಾದರಿಗಳಲ್ಲಿ ಬಿಡುಗಡೆಗೊಳ್ಳಲಿದ್ದು, ನಿಮಗೆ ಬೇಕೆನ್ನಿಸಿದ ಕಾರನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಮತ್ತೊಂದು ಹೊಸ ವಿಷಯವೇನೆಂದರೆ ಈ ಕಾರು ಎರಡು ರೀತಿಯ ಡ್ಯಾಶ್‌ಬೋರ್ಡ್ ಪಡೆದುಕೊಳ್ಳಲಿದ್ದು, ಫ್ಲಾಟ್ ಬಾಟಮ್ ಸ್ಟಿಯರಿಂಗ್ ವೀಲ್ ಪಡೆದುಕೊಂಡಿದೆ.

ಸ್ವಿಫ್ಟ್ ಕಾರಿನ ಹ್ಯಾಚ್ ಬ್ಯಾಕ್ ಮಾದರಿಯ ಕಾರು ಬಿಡುಗಡೆಗೊಳ್ಳುವ ಮುಂಚಿತವಾಗಿಯೇ ಈ ಹೊಸ ಡಿಜೈರ್ ಕಾರು ಅನಾವರಣಗೊಳಿಸಲು ತೀರ್ಮಾನಿಸಿರುವ ಮಾರುತಿ ಸುಜುಕಿ ಸಂಸ್ಥೆಯು, ಮೇ 16ರಂದು ಬಿಡುಗಡೆ ಮಾಡುತ್ತಿದೆ.

ಜೊತೆಗೆ ಗ್ರಾಹಕರ ಬೇಡಿಕೆಗಳಿಗೆ ತಕ್ಕಂತೆ ಕಾರು ಪೂರೈಕೆ ಮಾಡಲು ಈಗಾಗಲೇ ಬುಕ್ಕಿಂಗ್ ಕೂಡಾ ಆರಂಭ ಮಾಡಿದ್ದು, ದೇಶದ ಪ್ರಮುಖ ನಗರಗಳಲ್ಲಿ ಈಗಾಗಲೇ ಸಾವಿರಾರು ಗ್ರಾಹಕರು ಸ್ವಿಫ್ಟ್ ಖರೀದಿ ಮಾಡಲು 11 ಸಾವಿರ ರೂಪಾಯಿ ರೂಪಾಯಿ ಮುಂಗಡ ಪಾವತಿಸಿ ಹೆಸರು ನೋಂದಾಯಿಸುತ್ತಿದ್ದಾರೆ.


Click it and Unblock the Notifications








