ಮಾರುತಿ ಸುಜುಕಿ ಎಸ್-ಕ್ರಾಸ್ ಫೇಸ್‌ಲಿಫ್ಟ್ ಭಾರತದ ಲಾಂಚ್ ವಿವರಗಳು ಬಿಡುಗಡೆ
ಭಾರತದ ಪ್ರಮುಖ ಪ್ರಯಾಣಿಕರ ವಾಹನ ತಯಾರಕ ಕಂಪನಿಯಾದ ಮಾರುತಿ ಸುಜುಕಿಯು ಸುಧಾರಿಸಲ್ಪಟ್ಟ ಎಸ್ ಕ್ರಾಸ್ ಕಾರನ್ನು ಪರಿಚಯಿಸಲು ಮುಂದಾಗಿದ್ದು, ಈ ಕಾರಿನ ಮಾಹಿತಿಯನ್ನು ಸಂಸ್ಥೆ ಬಿಡುಗಡೆಗೊಳಿಸಿದೆ.
ಭಾರತದ ಪ್ರಮುಖ ಪ್ರಯಾಣಿಕರ ವಾಹನ ತಯಾರಕ ಕಂಪನಿಯಾದ ಮಾರುತಿ ಸುಜುಕಿಯು ಸುಧಾರಿಸಲ್ಪಟ್ಟ ಎಸ್ ಕ್ರಾಸ್ ಕಾರನ್ನು ಪರಿಚಯಿಸಲು ಮುಂದಾಗಿದ್ದು, ಈ ಕಾರಿನ ಮಾಹಿತಿಯನ್ನು ಸಂಸ್ಥೆ ಬಿಡುಗಡೆಗೊಳಿಸಿದೆ.

ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಮಾರುತಿ ಸುಜುಕಿ ಸಂಸ್ಥೆಯು ತನ್ನ ಎಸ್ ಕ್ರಾಸ್ ಕಾರನ್ನು ಬಿಡುಗಡೆಗೊಳಿಸಲು ಎಲ್ಲಾ ರೀತಿಯ ತಯಾರಿ ನೆಡೆಸಿದ್ದು, ವರದಿಯ ಪ್ರಕಾರ ಮಾರುತಿ ಸುಜುಕಿ ಕಂಪನಿ ಸೆಪ್ಟೆಂಬರ್ 1, 2017 ರಿಂದ ಎಸ್-ಕ್ರಾಸ್ ಕಾರಿನ ಬುಕಿಂಗ್ ಆರಂಭ ಮಾಡಲಿದೆ ಎನ್ನಲಾಗಿದೆ.

ನೆಕ್ಸಾ ಅಧಿಕೃತ ಮಾರಾಟ ಮಳಿಗೆಗಳಲ್ಲಿ ಈ ಕಾರಿನ ಮಾರಾಟ ಮಾಡಲು ಸಂಸ್ಥೆಯು ನಿರ್ಧರಿಸಿದೆ. ನವೀನ ಮಾದರಿಯ ಎಸ್-ಕ್ರಾಸ್ ಹೊಸ ರೀತಿಯ ತಂತುಕೋಶ, ಪ್ರೊಜೆಕ್ಟರ್ ಹೆಡ್‌ಲೈಟ್, ಪರಿಷ್ಕರಿಸಿದ ಬಂಪರ್ ಪಡೆದುಕೊಂಡಿದೆ.

ಅಪ್ಡೇಟ್‌ಗೊಳಿಸಲಾದ ಎಸ್ ಕ್ರಾಸ್ ಹಿಂಭಾಗದಲ್ಲಿ ಟೈಲ್ ಲ್ಯಾಂಪ್ ಕ್ಲಸ್ಟರ್ ಟ್ವಿಕಡ್ ಮತ್ತು ಮರುವಿನ್ಯಾಸಗೊಳಿಸಲಾದ ಸ್ಪೋರ್ಟ್ಸ್ ಬಂಪರ್ ಕಾಣಬಹುದಾಗಿದೆ.

ಕ್ರಾಸ್ಒವರ್ ಕಾರಿನ ಒಟ್ಟಾರೆ ವಿನ್ಯಾಸವು ಈ ಹಿಂದಿನ ಮಾದರಿಗಿಂತ ಹೆಚ್ಚು ವಿಶೇಷತೆಗಳನ್ನು ಪಡೆದುಕೊಂಡಿದ್ದು, ಈ ಹೊಸ ಮಾರುತಿ ಸುಜುಕಿ ಸಂಸ್ಥೆಯ ಕಾರು ಹೊಸ ಮಿಶ್ರಲೋಹದ ಚಕ್ರಗಳು ಒಳಗೊಂಡಿರಲಿದೆ.

ಹೊಸ ಎಸ್-ಕ್ರಾಸ್ ಕಾರಿನ ಒಳಭಾಗದಲ್ಲಿ ಡ್ಯಾಶ್‌ಬೋರ್ಡ್, ಸೀಟ್‌ಗಳು ಮತ್ತು ಉಪಕರಣಗಳು ಯಾವುದೇ ರೀತಿಯ ಬದಲಾವಣೆಗಳನ್ನು ಪಡೆದುಕೊಳ್ಳುವುದಿಲ್ಲ ಎಂಬ ಮಾಹಿತಿ ಇದೆ. ಆದರೆ, ಹೊಸದಾಗಿ ಆಂಡ್ರಾಯ್ಡ್ ಆಟೊ ಮತ್ತು ಆಪಲ್ ಕಾರ್‌ಪ್ಲೇ ಸಂಪರ್ಕ ಇರುವಂತಹ ಇನ್ಫೋಟೈನ್ಮೆಂಟ್ ಪರದೆ ವ್ಯವಸ್ಥೆ ನೋಡಬಹುದು.

ಎಸ್-ಕ್ರಾಸ್ ಫೇಸ್‌ಲಿಫ್ಟ್ ಕಾರು 1.3-ಲೀಟರ್ ಮತ್ತು 1.6-ಲೀಟರ್ ಡೀಸೆಲ್ ಎಂಜಿನ್ ಪಡೆಯುವ ಸಾಧ್ಯತೆಯಿದೆ. 1.3-ಲೀಟರ್ ಎಂಜಿನ್ 5-ಸ್ಪೀಡ್ ಮ್ಯಾನ್ಯುವಲ್ ಹಾಗು 1.6-ಲೀಟರ್ ಎಂಜಿನ್ 6 ಸ್ಪೀಡ್ ಗೇರ್ ಬಾಕ್ಸ್ ಪಡೆದುಕೊಳ್ಳಲಿದೆ.

ಇನ್ನು ಅಪ್ಡೇಟ್‌ಗೊಳಿಸಲಾದ ಪ್ರೀಮಿಯಂ ಕ್ರಾಸ್ಒವರ್ ಸಹ ಹೊಸ 1.5-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಸಹ ಪಡೆದುಕೊಳ್ಳಬಹುದು ಎಂಬ ಮಾಹಿತಿ ಇದೆ. ಈ ಕಾರು ಸುಧಾರಿಸಲ್ಪಟ್ಟ ಸ್ವಯಂಚಾಲಿತ ಗೇರ್‌ಬಾಕ್ಸ್ ಆಯ್ಕೆ ಹೊಂದಬಹುದು ಎನ್ನಲಾಗಿದೆ.


Click it and Unblock the Notifications