ಫ್ರಾಂಕ್‌ಫರ್ಟ್ ಆಟೋ ಮೇಳದಲ್ಲಿ ಪ್ರದರ್ಶನಗೊಂಡ ಸುಜುಕಿ ಸ್ವಿಫ್ಟ್ ಸ್ಪೋರ್ಟ್

ಭಾರೀ ಸಂಚಲನ ಮೂಡಿಸಿರುವ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಆವೃತ್ತಿಯು ಭಾರತದಲ್ಲಿ ಬಿಡುಗಡೆಗೆ ಸಜ್ಜುಗೊಳ್ಳುತ್ತಿದ್ದು, ಇದಕ್ಕೂ ಮುನ್ನ ಪ್ರತಿಷ್ಠಿತ ಫ್ರಾಂಕ್‌ಫರ್ಟ್ ಆಟೋ ಮೇಳದಲ್ಲಿ ಭಾಗಿಯಾಗುವ ಮೂಲಕ ಭಾರೀ ಚರ್ಚೆಗೆ ಕಾರಣವಾಗಿದೆ.

By Praveen

ಸ್ಪೋರ್ಟ್ ಕಾರು ಆವೃತ್ತಿಗಳಲ್ಲಿ ಭಾರೀ ಸಂಚಲನ ಮೂಡಿಸಿರುವ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಆವೃತ್ತಿಯು ಭಾರತದಲ್ಲಿ ಬಿಡುಗಡೆಗೆ ಸಜ್ಜುಗೊಳ್ಳುತ್ತಿದ್ದು, ಇದಕ್ಕೂ ಮುನ್ನ ಪ್ರತಿಷ್ಠಿತ ಫ್ರಾಂಕ್‌ಫರ್ಟ್ ಆಟೋ ಮೇಳದಲ್ಲಿ ಭಾಗಿಯಾಗುವ ಮೂಲಕ ಭಾರೀ ಚರ್ಚೆಗೆ ಕಾರಣವಾಗಿದೆ.

ಫ್ರಾಂಕ್‌ಫರ್ಟ್ ಆಟೋ ಮೇಳದಲ್ಲಿ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಪ್ರದರ್ಶನ

ಈಗಾಗಲೇ ಮುಂದುವರಿದ ಕೆಲವು ರಾಷ್ಟ್ರಗಳಲ್ಲಿ ಬಿಡುಗಡೆಯಾಗಿ ಭರ್ಜರಿಯಾಗಿ ಮಾರಾಟಗೊಳ್ಳುತ್ತಿರುವ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಆವೃತ್ತಿಯು 2018ಕ್ಕೆ ಭಾರತದಲ್ಲೂ ಬಿಡುಗಡೆಯಾಗುತ್ತಿದ್ದು, ಬಿಡುಗಡೆಯಾಗಲಿರುವ ಹ್ಯುಂಡೈ ಐ30 ಆವೃತ್ತಿಗೆ ತೀವ್ರ ಪೈಪೋಟಿ ನೀಡುವ ತವಕದಲ್ಲಿದೆ.

ಫ್ರಾಂಕ್‌ಫರ್ಟ್ ಆಟೋ ಮೇಳದಲ್ಲಿ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಪ್ರದರ್ಶನ

ಹ್ಯಾಚ್‌ಬ್ಯಾಕ್ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿ ಹೊಂದಿರುವ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಕಾರು ಸ್ಪೈಡರ್ ಇಂಟಿರಿಯರ್ ಹಾಗೂ ಎಕ್ಸ್‌ಟಿರಿಯರ್‌ನೊಂದಿಗೆ ವಿಭಿನ್ನತೆಯನ್ನು ಪಡೆದುಕೊಂಡಿದೆ.

Recommended Video

Tata Tiago XTA AMT Launched In India | In Kannada - DriveSpark ಕನ್ನಡ
ಫ್ರಾಂಕ್‌ಫರ್ಟ್ ಆಟೋ ಮೇಳದಲ್ಲಿ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಪ್ರದರ್ಶನ

ಗ್ರಾಹಕರ ಬೇಡಿಕೆ ತಕ್ಕಂತೆ ವಿವಿಧ ಬಣ್ಣಗಳಲ್ಲಿ ಕೂಡಾ ಖರೀದಿಗೆ ಲಭ್ಯವಿರಲಿದ್ದು, ಡ್ಯುಯಲ್ ಏರ್‌ಬ್ಯಾಗ್ ಕಿಟ್, ಸ್ಪೆಷಲ್ ಅಲಾಯ್ ವೀಲ್ಹ್ ಮತ್ತು ಸ್ಪೋರ್ಟ್ ಸ್ಟೈನ್‌ಲೆಸ್ ಸ್ಟಿಲ್ ಪೆಡಲ್ ಅಳವಡಿಕೆ ಮಾಡಲಾಗಿದೆ.

ಫ್ರಾಂಕ್‌ಫರ್ಟ್ ಆಟೋ ಮೇಳದಲ್ಲಿ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಪ್ರದರ್ಶನ

ಇದಲ್ಲದೇ ಸ್ಪೋರ್ಟ್ ಆವೃತ್ತಿಯ ಚಿಹ್ನೆ ಕೂಡಾ ಹೊಸ ಕಾರಿನ ಲುಕ್‌ನ್ನು ಮತ್ತಷ್ಟು ಹೆಚ್ಚಳ ಮಾಡಿದ್ದು, 1.4-ಲೀಟರ್ ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಬೂಸ್ಟರ್ ಜೆಟ್ ಕೆ14ಸಿ ಪೆಟ್ರೋಲ್ ಎಂಜಿನ್‌ನೊಂದಿಗೆ ಲಭ್ಯವಿರಲಿದೆ.

ಫ್ರಾಂಕ್‌ಫರ್ಟ್ ಆಟೋ ಮೇಳದಲ್ಲಿ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಪ್ರದರ್ಶನ

ಆದ್ರೆ ಕೆಲವು ವರದಿಗಳ ಪ್ರಕಾರ ಹೊಸ ಸುಜುಕಿ ಸ್ವಿಫ್ಟ್ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಗಾಗಿ 1.0-ಲೀಟರ್ ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಬೂಸ್ಟರ್ ಜೆಟ್‌ನೊಂದಿಗೆ ಅಭಿವೃದ್ಧಿಗೊಳಿಸಲಾಗುತ್ತಿದೆ ಎನ್ನಲಾಗಿದೆ.

ಫ್ರಾಂಕ್‌ಫರ್ಟ್ ಆಟೋ ಮೇಳದಲ್ಲಿ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಪ್ರದರ್ಶನ

ಇನ್ನು ಸ್ಪಿಫ್ಟ್ ಆವೃತ್ತಿ ವೈಶಿಷ್ಟ್ಯತೆಗಳು ಸದ್ಯ ಮಾರುಕಟ್ಟೆಯಲ್ಲಿರುವ ಬಲೆನೊ ಆರ್‌ಎಸ್, ಫೋಕ್ಸ್‌ವ್ಯಾಗನ್ ಪೊಲೊ ಜಿಟಿ ಮತ್ತು ಫಿಯೆಟ್ ಅಬಾರ್ತ್ ಕಾರಿನಲ್ಲಿ ಲಭ್ಯವಿದ್ದು, ಇವುಗಳಿಂತ ಹೇಗೆ ಭಿನ್ನತೆ ಹೊಂದಲಿದೆ ಎಂಬುವುದೇ ಚರ್ಚೆಗೆ ಕಾರಣವಾಗಿದೆ.

ಫ್ರಾಂಕ್‌ಫರ್ಟ್ ಆಟೋ ಮೇಳದಲ್ಲಿ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಪ್ರದರ್ಶನ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಭಾರತೀಯ ಮಾರುಕಟ್ಟೆಯಲ್ಲಿ ಸ್ಪೋರ್ಟ್ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಸ್ವಿಫ್ಟ್ ಸ್ಪೋರ್ಟ್ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿರುವ ಸುಜುಕಿ ಸಂಸ್ಥೆಯು ಬಹುನೀರಿಕ್ಷಿತ ಹ್ಯುಂಡೈ ಐ30 ಕಾರಿಗೆ ಪ್ರತಿ ಸ್ಪರ್ಧಿಯಾಗುವ ತವಕದಲ್ಲಿದೆ.

More from DriveSpark

Article Published On: Wednesday, September 13, 2017, 11:23 [IST]
English summary
Read in Kannada about Suzuki Swift Sport Unveiled in 2017 Frankfurt Motor Show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+