ಅಂತಿಮ ಹಂತದ ಸಿದ್ಧತೆಯಲ್ಲಿವೆ ಮರ್ಸಿಡಿಸ್ ಎಎಂಜಿ ಜಿ63,ಜಿ65 ಎಕ್ಸ್‌ಕ್ಲೂಸಿವ್ ಎಡಿಷನ್

Written By:

ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆಯಲ್ಲಿರುವ ಮರ್ಸಿಡಿಸ್ ನಿರ್ಮಾಣದ ಎಎಂಜಿ ಜಿ63, ಜಿ65 ಎಕ್ಸ್‌ಕ್ಲೂಸಿವ್ಎಡಿಷನ್‌ಗಳು ಮುಂಬರುವ ಫ್ರಾಂಕ್‌ಫರ್ಟ್ ಆಟೋ ಮೇಳದಲ್ಲಿ ಭಾಗಿಯಾಗಲಿದ್ದು, ಹೊಸ ಕಾರುಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

To Follow DriveSpark On Facebook, Click The Like Button
ಅಂತಿಮ ಹಂತದ ಸಿದ್ಧತೆಯಲ್ಲಿವೆ ಮರ್ಸಿಡಿಸ್ ಎಎಂಜಿ ಜಿ63, ಜಿ65

ಐಷಾರಾಮಿ ಎಸ್‌ಯುವಿ ಕಾರುಗಳ ವಿಭಾಗಕ್ಕೆ ಹೊಸ ನಮೂನೆಯ ಕಾರು ಆವೃತ್ತಿಗಳನ್ನು ಪರಿಚಯಿಸುತ್ತಿರುವ ಮರ್ಸಿಡಿಸ್ ಸಂಸ್ಥೆಯು ಸೆಷ್ಟೆಂಬರ್ 12ರಿಂದ ಆರಂಭವಾಗಲಿರುವ ಫ್ರಾಂಕ್‌ಫರ್ಟ್ ಆಟೋದಲ್ಲಿ ಎಎಂಜಿ ಜಿ63, ಜಿ65 ಎಕ್ಸ್‌ಕ್ಲೂಸಿವ್ ಎಡಿಷನ್‌ಗಳನ್ನು ಅನಾವರಣಗೊಳಿಸಲಿದೆ.

ಅಂತಿಮ ಹಂತದ ಸಿದ್ಧತೆಯಲ್ಲಿವೆ ಮರ್ಸಿಡಿಸ್ ಎಎಂಜಿ ಜಿ63, ಜಿ65

ಈ ಮೂಲಕ ಐಷಾರಾಮಿ ಎಸ್‌ಯುವಿಗಳಲ್ಲೇ ಅತ್ಯುತ್ತಮ ಮಾದರಿಯಾಗಿ ಹೊರಹೊಮ್ಮುವ ತವಕದಲ್ಲಿರುವ ಮರ್ಸಿಡಿಸ್ ಎಎಂಜಿ ಜಿ63, ಜಿ65 ಎಕ್ಸ್‌ಕ್ಲೂಸಿವ್ಎಡಿಷನ್‌ಗಳು ಹತ್ತು ಹಲವು ವಿಶೇಷ ವಿನ್ಯಾಸಗಳನ್ನು ಪಡೆದುಕೊಂಡಿದೆ.

Recommended Video - Watch Now!
2017 Mercedes New GLA India Launch Kannada - DriveSpark ಕನ್ನಡ
ಅಂತಿಮ ಹಂತದ ಸಿದ್ಧತೆಯಲ್ಲಿವೆ ಮರ್ಸಿಡಿಸ್ ಎಎಂಜಿ ಜಿ63, ಜಿ65

ಎಎಂಜಿ ಜಿ63 ಮತ್ತು ಜಿ65 ಎಕ್ಸ್‌ಕ್ಲೂಸಿವ್ಎಡಿಷನ್‌ಗಳಲ್ಲಿ ಎಎಂಜಿ ಮೊನ್ಜಾ ಗ್ರೇ ಮ್ಯಾಗ್ನೊ ಪೇಂಟ್ ಫಿನಿಶಿಂಗ್ ಹೊಂದಿದ್ದು, ಬೇಡಿಕೆಗೆ ಅನುಗುಣವಾಗಿ ಗ್ರಾಹಕರು ಸ್ಟೇನ್‌ಲೆನ್ ಸ್ಟೀಲ್ ಸ್ಕೀಡ್ ಫಲಕಗಳನ್ನು ಆಯ್ದುಕೊಳ್ಳಬಹುದಾಗಿದೆ. ಜೊತೆಗೆ 21 ಇಂಚಿನ ಚಕ್ರಗಳನ್ನು ಮ್ಯಾಟ್ಟೆ ಬ್ಲಾಕ್ (ಜಿ63) ಅಥವಾ ಸಿರಾಮಿಕ್ ಪೋಲಿಷ್ (ಜಿ65) ಬಣ್ಣದೊಂದಿದೆ ಪೂರ್ಣಗೊಳಿಸಲಾಗಿದೆ.

ಅಂತಿಮ ಹಂತದ ಸಿದ್ಧತೆಯಲ್ಲಿವೆ ಮರ್ಸಿಡಿಸ್ ಎಎಂಜಿ ಜಿ63, ಜಿ65

ಎಂದಿನಂತೆ ಒಳಭಾಗದ ವಿನ್ಯಾಸಗಳನ್ನು ಪೂರ್ಣಪ್ರಮಾಣದ ಹೊಸ ಶೈಲಿಯೊಂದಿಗೆ ಸಿದ್ಧಗೊಳಿಸಲಾಗಿದ್ದು, ಕೆಲವು ಡಿಸೈನ್‌ಗಳನ್ನು ವಿಶೇಷ ಪ್ಯಾಕೆಜ್ ಅಡಿ ನೀಡಲಾಗುತ್ತಿದೆ. ಮತ್ತು ಕಾರಿನಲ್ಲಿ ಡ್ಯುಯಲ್ ಟೋನ್ ಲೆದರ್ ಫಿನಿಶಿಂಗ್ ನೀಡಲಾಗಿದ್ದು, ಸೀಟು ಮತ್ತು ಡೋರ್ ಪ್ಯಾನೆಲ್‌ಗಳಲ್ಲಿ ಡೈಮಂಡ್ ಕ್ವಿಲ್ಟೆಡ್ ಬಣ್ಣ ಸಂಯೋಜನೆ ನೀಡಲಾಗಿದೆ.

ಅಂತಿಮ ಹಂತದ ಸಿದ್ಧತೆಯಲ್ಲಿವೆ ಮರ್ಸಿಡಿಸ್ ಎಎಂಜಿ ಜಿ63, ಜಿ65

ಎಂಜಿನ್ ಸಾಮರ್ಥ್ಯ

ಹೀಗಾಗಿಯೇ ಎಎಂಜಿ ಜಿ63 ಎಕ್ಸ್‌ಕ್ಲೂಸಿವ್ಎಡಿಷನ್‌ ಮಾದರಿಯು 536-ಬಿಎಚ್‌ಪಿ ಮತ್ತು 760-ಎನ್ಎಂ ಟಾರ್ಕ್ ಉತ್ಪಾದಿಸುವ 5.5-ಲೀಟರ್ ಟ್ವಿನ್ ಟರ್ಬೋ ವಿ8 ಎಂಜಿನ್ ಪಡೆದುಕೊಂಡಿದ್ದು, ಜಿ65 ಆವೃತ್ತಿಯು 12-ಬಿಎಚ್‌ಪಿ ಮತ್ತು 1000ಟಾರ್ಕ್ ಉತ್ಪಾದನಾ ಶಕ್ತಿಯ 6.0-ಲೀಟರ್ ವಿ12 ಬೆಂಕಿ ಉಗುಳುವ ಎಂಜಿನ್ ಹೊಂದಿದೆ.

ಅಂತಿಮ ಹಂತದ ಸಿದ್ಧತೆಯಲ್ಲಿವೆ ಮರ್ಸಿಡಿಸ್ ಎಎಂಜಿ ಜಿ63, ಜಿ65

ಇನ್ನು ಫ್ರಾಂಕ್‌ಫರ್ಟ್ ಆಟೋದಲ್ಲಿ ಐಷಾರಾಮಿ ವೈಶಿಷ್ಟ್ಯತೆಗಳನ್ನು ಹೊಂದಿರುವ ಮರ್ಸಿಡಿಸ್ ಎಎಂಜಿ ಜಿ63, ಜಿ65 ಎಕ್ಸ್‌ಕ್ಲೂಸಿವ್ಎಡಿಷನ್‌ಗಳ ಮತ್ತಷ್ಟು ತಾಂತ್ರಿಕ ವಿವರಗಳು ಲಭ್ಯವಾಗಲಿದ್ದು, ಹೊಸ ಕಾರುಗಳ ಬೆಲೆಯು 2 ಕೋಟಿ ಇಂದ 2.5 ಕೋಟಿ ಇರಬಹುದೆಂದು ಅಂದಾಜಿಸಲಾಗಿದೆ.

English summary
Read in Kannada about Mercedes-AMG G63 And G65 Exclusive Editions To Be Showcased At Frankfurt.
Story first published: Monday, September 4, 2017, 17:22 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark