ಕೇವಲ 2 ನಿಮಿಷ 09 ಸೇಕೆಂಡುಗಳಲ್ಲಿ ಬಿಐಸಿ ಟ್ರ್ಯಾಕ್ ಸುತ್ತಿದ ಮರ್ಸಿಡಿಸ್ ಎಎಂಜಿ ಜಿಟಿ ಆರ್

Written By:

ಬಿಡುಗಡೆಗೆ ಸಜ್ಜುಗೊಂಡಿರುವ ಮರ್ಸಿಡಿಸ್ ಬೆಂಝ್ ನಿರ್ಮಾಣದ ಎಎಂಜಿ ಜಿಟಿ ಆರ್ ಸೂಪರ್ ಕಾರು ವೇಗದ ಚಾಲನೆಯಲ್ಲಿ ಹೊಸ ಸಾಧನೆ ನಿರ್ಮಾಣ ಮಾಡಿದ್ದು, 5 ಕಿಮಿ ಮಾರ್ಗವನ್ನು ಕೇವಲ 2 ನಿಮಿಷ 09 ಸೇಕೆಂಡುಗಳಲ್ಲಿ ಪೂರೈಸಿದೆ.

To Follow DriveSpark On Facebook, Click The Like Button
ವೇಗದಲ್ಲಿ ಮರ್ಸಿಡಿಸ್ ಎಎಂಜಿ ಜಿಟಿ ಆರ್ ಹೊಸ ಸಾಧನೆ

ಅತ್ಯುತ್ತಮ ವೇಗವನ್ನು ದಾಖಲಿಸಬಲ್ಲ ಹೊಸ ಹೊಸ ಕಾರು ಮಾದರಿಗಳನ್ನು ಪರಿಚಿಸುತ್ತಿರುವ ಮರ್ಸಿಡಿಸ್ ಸಂಸ್ಥೆಯು ಇದೀಗ ಎಎಂಜಿ ಜಿಟಿ ಆರ್ ಸೂಪರ್ ಕಾರು ಆವೃತ್ತಿಯ ಮೂಲಕ ಹೊಸ ಸಾಧನೆ ಮಾಡಿದ್ದು, ಅಂತರಾಷ್ಟ್ರೀಯ ಖ್ಯಾತಿಯ ಬುದ್ದಾ ಇಂಟರ್‌ನ್ಯಾಷನಲ್ ಸರ್ಕಿಟ್‌ನಲ್ಲಿ ಹೊಸ ದಾಖಲೆ ನಿರ್ಮಾಣ ಮಾಡಿದೆ.

ವೇಗದಲ್ಲಿ ಮರ್ಸಿಡಿಸ್ ಎಎಂಜಿ ಜಿಟಿ ಆರ್ ಹೊಸ ಸಾಧನೆ

ಬುದ್ದಾ ಇಂಟರ್‌ನ್ಯಾಷನಲ್ ಸರ್ಕಿಟ್ ಟ್ರ್ಯಾಕ್ ಒಟ್ಟು 5,125 ಮೀಟರ್ ಸುತ್ತಳತೆ ಇದ್ದು, ಈ ದೂರವನ್ನು ಮರ್ಸಿಡಿಸ್ ಎಎಂಜಿ ಜಿಟಿ ಆರ್ ಕಾರು ಕೇವಲ 02 ನಿಮಿಷ 09 ಸೇಕೆಂಡುಗಳಲ್ಲಿ ಕ್ರಮಿಸಿದೆ.

ವೇಗದಲ್ಲಿ ಮರ್ಸಿಡಿಸ್ ಎಎಂಜಿ ಜಿಟಿ ಆರ್ ಹೊಸ ಸಾಧನೆ

ಇತ್ತೀಚೆಗೆ ಫೆಡರೇಷನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾ ನಡೆಸಿದ ಕಾರ್ಯಗಾರದಲ್ಲಿ ಮರ್ಸಿಡಿಸ್ ಎಎಂಜಿ ಜಿಟಿ ಆರ್ ಈ ಸಾಧನೆ ತೊರಿದ್ದು, ಮರ್ಸಿಡಿಸ್ ಉತ್ಪಾದನೆಯ ಮತ್ತೊಂದು ಕಾರು ಮಾದರಿ ಎಸ್ಎಲ್ಎಸ್ ಎಎಂಜಿ ಆವೃತ್ತಿಯು 2 ನಿಮಿಷ 14 ಸೇಕೆಂಡುಗಳಲ್ಲಿ ನಿಗದಿತ ಗುರಿ ತಲುಪಿವೆ.

ವೇಗದಲ್ಲಿ ಮರ್ಸಿಡಿಸ್ ಎಎಂಜಿ ಜಿಟಿ ಆರ್ ಹೊಸ ಸಾಧನೆ

ಎಂಜಿನ್ ಸಾಮರ್ಥ್ಯ

ಎಎಂಜಿ ಜಿಟಿ ಆರ್ ಕಾರು ಆವೃತ್ತಿಗಳು 4-ಲೀಟರ್ ಟ್ವಿನ್ ಟರ್ಬೋ ವಿ8 ಎಂಜಿನ್ ಹೊಂದಿದ್ದು, 570-ಬಿಎಚ್‌ಪಿ ಮತ್ತು 700-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿರುವುದು ವಿಶೇಷ.

ವೇಗದಲ್ಲಿ ಮರ್ಸಿಡಿಸ್ ಎಎಂಜಿ ಜಿಟಿ ಆರ್ ಹೊಸ ಸಾಧನೆ

ಹೀಗಾಗಿಯೇ ಕೇವಲ 3.6 ಸೇಕೆಂಡುಗಳಲ್ಲಿ 100ಕಿಮಿ ವೇಗವನ್ನು ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದು, ಗರಿಷ್ಠ ಮಟ್ಟದಲ್ಲಿ ಪ್ರತಿ ಗಂಟೆಗೆ 316 ಕಿಮಿ ವೇಗ ಕ್ರಮಿಸಬಲ್ಲವು.

ವೇಗದಲ್ಲಿ ಮರ್ಸಿಡಿಸ್ ಎಎಂಜಿ ಜಿಟಿ ಆರ್ ಹೊಸ ಸಾಧನೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಇದೇ ತಿಂಗಳು 21 ರಂದು ಭಾರತದಲ್ಲಿ ಮರ್ಸಿಡಿಸ್ ಎಎಂಜಿ ಜಿಟಿ ಆರ್ ಬಿಡುಗಡೆಯಾಗುತ್ತಿದ್ದು, ವೇಗದ ವಿಚಾರಕ್ಕೆ ನಡೆಸಿದ ಕಾರ್ಯಾಗಾರದಲ್ಲಿ ಉತ್ತಮ ಸಾಧನೆ ತೊರಿದ್ದು ಮತ್ತಷ್ಟು ಮಹತ್ವ ಹೆಚ್ಚಿಸಿದೆ.

English summary
Read in Kannada about Mercedes-AMG GT R Sets Fastest Production Car Lap Record At Buddh International.
Story first published: Saturday, August 12, 2017, 17:59 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark