ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ 'ಎಡಿಷನ್ ಸಿ' ಕಾರು ಭಾರತದಲ್ಲಿ ಬಿಡುಗಡೆ

Written By:

ಬಾಹ್ಯ ಮತ್ತು ಆಂತರಿಕ ವಿನ್ಯಾಸ ಮತ್ತು ಹೊಸ ಬಣ್ಣದ ಯೋಜನೆಯ ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆದ ಹೊಚ್ಚ ಹೊಸ ಐಷಾರಾಮಿ ಸಿ-ಕ್ಲಾಸ್ 'ಎಡಿಷನ್ ಸಿ' ಮಾದರಿಯನ್ನು ಮರ್ಸಿಡಿಸ್ ಬೆಂಝ್ ಭಾರತದಲ್ಲಿ ಬಿಡುಗಡೆಗೊಳಿಸಿದೆ.

ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ 'ಎಡಿಷನ್ ಸಿ' ಕಾರು ಭಾರತದಲ್ಲಿ ಬಿಡುಗಡೆ

ಭಾರತದ ಅತಿದೊಡ್ಡ ಐಷಾರಾಮಿ ಕಾರು ತಯಾರಕ ಕಂಪೆನಿಯಾದ ಮರ್ಸಿಡಿಸ್ ಬೆಂಝ್ ಭಾರತದ ಸಿ-ಕ್ಲಾಸ್ 'ಎಡಿಷನ್ ಸಿ' ಮಾದರಿಯನ್ನು ಪರಿಚಯಿಸಿದೆ. ಈ ಸಿ ಆವೃತಿಯ ಕಾರಿನ ಬೆಲೆ ರೂ. 42.54 ಲಕ್ಷದಿಂದ ಪ್ರಾರಂಭವಾಗಲಿದ್ದು, 46.87 ಲಕ್ಷ (ಎಕ್ಸ್ ಶೋರೂಂ ಭಾರತ) ರೂ.ವರೆಗೆ ಇರಲಿದೆ.

ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ 'ಎಡಿಷನ್ ಸಿ' ಕಾರು ಭಾರತದಲ್ಲಿ ಬಿಡುಗಡೆ

ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಓ ಆದಂತಹ ರೋಲ್ಯಾಂಡ್ ಫೋಲ್ಜರ್ ಅನಾವರಣಗೊಳಿಸಿರುವ ಈ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ 'ಎಡಿಷನ್ ಸಿ' ಕಾರು, ಸಿ 200, ಸಿ 220 ಡಿ ಮತ್ತು ಸಿ 250 ಡಿ ಎಂಬ ರೂಪಾಂತರಗಳೊಂದಿಗೆ ಲಭ್ಯವಿದೆ.

ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ 'ಎಡಿಷನ್ ಸಿ' ಕಾರು ಭಾರತದಲ್ಲಿ ಬಿಡುಗಡೆ

ಸ್ಪೋರ್ಟ್ಸ್ ಸಮೃದ್ಧಿಯೊಂದಿಗೆ ಬಿಡುಗಡೆಯಾಗಿರುವ ಈ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ 'ಎಡಿಷನ್ ಸಿ' ಕಾರು ದೇಶದ ಎಲ್ಲ ವಿತರಕರಲ್ಲಿ ಲಭ್ಯವಿದ್ದು, ಡೆಸೈನೋ ಹಯಸಿಂತ್ ರೆಡ್ ಎಂಬ ಬಣ್ಣದ ಆಯ್ಕೆಯಲ್ಲಿ ಅನಾವರಣಗೊಂಡಿದೆ.

ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ 'ಎಡಿಷನ್ ಸಿ' ಕಾರು ಭಾರತದಲ್ಲಿ ಬಿಡುಗಡೆ

ಸಿ-ಕ್ಲಾಸ್ 'ಎಡಿಷನ್ ಸಿ' ಕಾರಿನ ಮುಂಭಾಗವು ಸ್ಪೋರ್ಟ್ಸ್ ಏಪ್ರಾನ್ ಸ್ಪಾಲೈರ್, ಕಪ್ಪು ಬಣ್ಣದಲ್ಲಿ ಚಿತ್ರಿಸಲಾದ ಹಿಂಭಾಗದ ಸ್ಪಾಯ್ಲರ್, ಗ್ಲಾಸ್ ಕಪ್ಪು ಬಣ್ಣದ ಮಿಶ್ರಣದೊಂದಿಗೆ 5 ಟ್ವಿನ್-ಸ್ಪೋಕ್ ಲೈಟ್ ಮಿಶ್ರಲೋಹದ ಚಕ್ರಗಳು ಮತ್ತು ಎಡಿಶನ್ ಸಿ ಬ್ಯಾಡ್ಜಿಂಗ್ ಸಹ ಒಳಗೊಂಡಿದೆ.

ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ 'ಎಡಿಷನ್ ಸಿ' ಕಾರು ಭಾರತದಲ್ಲಿ ಬಿಡುಗಡೆ

"ಸಿ-ಕ್ಲಾಸ್ ವಿಭಾಗದ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಅದ್ಭುತ ಯಶಸ್ಸನ್ನು ಕಂಡಿವೆ ಮತ್ತು ಭಾರತದಲ್ಲಿ ತನ್ನ ಚೊಚ್ಚಲ ಪ್ರಾರಂಭದಿಂದ ಇಲ್ಲಿಯವರೆಗೆ 27,500 ಕ್ಕಿಂತ ಹೆಚ್ಚಿನ ಕಾರುಗಳು ಮಾರಾಟವಾಗಿವೆ. 'ಎಡಿಷನ್ ಸಿ' ತನ್ನ ಉನ್ನತ ರೀತಿಯ ಬಿಲ್ಲಿಂಗ್ ಮತ್ತು ಬುದ್ಧಿವಂತ ಗ್ರಾಹಕರನ್ನು ಉಳಿಸಿಕೊಳ್ಳುತ್ತದೆ ಮತ್ತು ನಾವು ಈ ವಿಭಾಗದಲ್ಲಿ ಸಾಕಷ್ಟು ಮೌಲ್ಯವನ್ನು ಕಂಡುಕೊಳ್ಳುತ್ತೇವೆ ಎಂದು ನಾವು ನಂಬುತ್ತೇವೆ" ಎಂದು ಬಿಡುಗಡೆಯ ಸಂದರ್ಭದಲ್ಲಿ ಫೋಲ್ಗರ್ ಹೇಳಿದರು.

ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ 'ಎಡಿಷನ್ ಸಿ' ಕಾರು ಭಾರತದಲ್ಲಿ ಬಿಡುಗಡೆ

ಮರ್ಸಿಡಿಸ್ ಬೆಂಝ್ ಕಂಪನಿಯು ಪ್ರಸ್ತುತ ಸಿ-ಕ್ಲಾಸ್ ಮಾದರಿಯಲ್ಲಿ ಸ್ಪೋರ್ಟ್ ಮಾದರಿಯನ್ನು ಪರಿಚಯಿಸಲು ಮುಂದಾಗಿದ್ದು, ಮೊದಲ ಭಾಗವಾಗಿ ಈ ಹೊಸ ಸಿ-ಕ್ಲಾಸ್ 'ಎಡಿಷನ್ ಸಿ' ಮಾದರಿಯನ್ನು ಭಾರತದಲ್ಲಿ ಪರಿಚಯಿಸಿದೆ.

ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ 'ಎಡಿಷನ್ ಸಿ' ಕಾರು ಭಾರತದಲ್ಲಿ ಬಿಡುಗಡೆ

Mercedes-Benz C-Class 'Edition C' Prices

(Ex-showroom India)

Mercedes C-Class 'Edition C' Variants Price
C 200Avantgarde Rs 42.54 Lakh
c 220 d Avantgarde Rs 43.54 Lakh
C 250 dAvantgarde Rs 46.87 Lakh
English summary
India's largest luxury car manufacturer Mercedes-Benz has launched the C-Class 'Edition C' models in India. The prices for the Edition C models start from Rs 42.54 lakh and goes all the way up to Rs 46.87 lakh.
Story first published: Tuesday, October 3, 2017, 19:04 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark