ಮೋದಿ ಕನಸಿನ ಸ್ವಚ್ಛ ಭಾರತ ಅಭಿಯಾನಕ್ಕೆ ಕೈಜೋಡಿಸಿದ ಭಾರತ್ ಬೆಂಝ್..!!

Written By:

ವಿಶ್ವಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿರುವ ಸ್ವಚ್ಛ ಭಾರತ ಅಭಿಯಾನಕ್ಕೆ ಕೈಜೋಡಿರುವ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆ ಭಾರತ್ ಬೆಂಝ್, ದೆಹಲಿ ಮಹಾನಗರ ಪಾಲಿಕೆಗೆ ಉಚಿತವಾಗಿ ಧೂಳು ನಿರ್ವಹಣಾ ಯಂತ್ರವನ್ನು ಕೊಡುಗೆಯಾಗಿ ನೀಡಿದೆ.

ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರಿಗೆ ವ್ಯಾಕೂಲಮ್ ಕ್ಲಿನರ್ ಟ್ರಕ್ ಕೀ ಹಸ್ತಾಂತರ ಮಾಡಿದ ಭಾರತ್ ಬೆಂಝ್ ಅಧಿಕಾರಿಗಳು, ಸ್ವಚ್ಛ ಅಭಿಯಾನಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ವಿಶೇಷ ತಂತ್ರಜ್ಞಾನ ಹೊಂದಿರುವ ವ್ಯಾಕೂಲಮ್ ಕ್ಲಿನರ್ ಟ್ರಕ್, ನಗರ ಪ್ರದೇಶಗಳಲ್ಲಿ ಉತ್ಪಾದನೆಯಾಗುವ ಕಸ ನಿರ್ವಹಣಾ ಸಾಮರ್ಥ್ಯ ಹೊಂದಿದೆ.

ಇದಲ್ಲದೇ ರಸ್ತೆ ಮೇಲೆ ತುಂಬಿಕೊಳ್ಳುವ ಕೇಸರನ್ನು ಸ್ವಚ್ಛಗೊಳಿಸುವ ಮೂಲಕ ನಗರದಲ್ಲಿ ಉತ್ವಾದನೆಯಾಗುವ ಮಾಲಿನ್ಯವನ್ನು ನಿಯಂತ್ರಣ ಮಾಡುವ ಶಕ್ತಿ ಹೊಂದಿದೆ.

ಒಟ್ಟಿನಲ್ಲಿ ವಿದೇಶಿ ಕಾರು ಉತ್ಪಾದನಾ ಸಂಸ್ಥೆಯೊಂದು ಮೊಟ್ಟ ಮೊದಲ ಬಾರಿಗೆ ಸ್ವಚ್ಛ ಭಾರತ ಅಭಿಯಾನಕ್ಕೆ ಕೈಜೋಡಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನಡೆಗೆ ಅಭಿನಂದನೆ ಸಲ್ಲಿಸಿದೆ.

English summary
Read in Kannada about India's leading luxury car manufacturer Mercedes-Benz donated a state-of-the-art vacuum cleaning truck to the New Delhi Municipal Council.
Story first published: Wednesday, June 7, 2017, 18:52 [IST]
Please Wait while comments are loading...

Latest Photos