ಮುಂದಿನ ತಿಂಗಳು ಬಿಡುಗಡೆಗೊಳ್ಳುವ ಮರ್ಸಿಡಿಸ್ ಬೆಂಝ್ ಜಿಎಲ್ಎ ಬಗ್ಗೆ ಇಲ್ಲಿದೆ ಮಾಹಿತಿ

Written By:

ಮರ್ಸಿಡಿಸ್ ಬೆಂಝ್ ಸಂಸ್ಥೆ ನವೀಕೃತ ಜಿಎಲ್‌ಎ ಕಾರಿನ ಆವುತಿಯನ್ನು ಭಾರತದಲ್ಲಿ ಇದೆ ವರ್ಷದ ಜುಲೈ 4 ರಂದು ಭಾರತದಲ್ಲಿ ಪ್ರಾರಂಭಿಸಲು ಸಿದ್ಧತೆ ನೆಡೆಸಿದೆ.

ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಬೆಂಝ್ ತನ್ನ ಜಿಎಲ್ಎ ಸುಧಾರಿತ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ತಯಾರಿ ನೆಡೆಸಿದ್ದು, ಈ ಕಾರು ಅಂತರರಾಷ್ಟ್ರೀಯ ಡೆಟ್ರಾಯಿಟ್ ಮೋಟಾರ್ ಶೋನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದೆ.

ಈ ಧುಬಾರಿ ಬೆಲೆಯ ಕಾರು, ಆಡಿ ಕ್ಯೂ3 ಮತ್ತು ಬಿಎಂಡಬ್ಲ್ಯೂ ಎಕ್ಸ್1 ಕಾರುಗಳೊಂದಿಗೆ ಸ್ಪರ್ಧೆ ನೆಡೆಸಲಿದ್ದು, ಎಸ್‌ಯುವಿ ಪ್ರಿಯರಿಗೆ ಸುಗ್ಗಿ ಕಾಲ ಎನ್ನಬಹುದು.

ಈ ಹಿಂದಿನ ಮಾದರಿಯ ಐಚ್ಛಿಕ bi-xenon ದೀಪಗಳ ಬದಲಾಗಿ ಎಲ್ಇಡಿ ಹೆಡ್‌ಲೈಟ್ ಹೊಂದಿದೆ ಮತ್ತು ಹೆಚ್ಚು ಸ್ಟೈಲಿಶ್ ಆಗಿದೆ.

ಹೊಸ ಜಿಎಲ್ಎ ಅಪ್ಡೇಟೆಡ್ ಆವೃತಿಯು ಹಿಂದಿನ ಮಾದರಿಗೆ ಹೋಲಿಸಿದರೆ ಮರುವಿನ್ಯಾಸಗೊಳಿಸಿದ ಬಂಪರ್, ಹೊಸ ಗ್ರಿಲ್, ಮತ್ತು ವಿಭಿನ್ನ ಮಿಶ್ರಲೋಹದ ಚಕ್ರಗಳನ್ನು ಹಾಗು ಹಲವು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಒಳಾಂಗಣವು 8 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಹೊಂದಿದ್ದು, ಆಸನ ನಿಯಂತ್ರಣಗಳಿಗಾಗಿ ಹೊಸ ಕವಚಗಳು ಮತ್ತು ಕ್ರೋಮ್ ಅಕ್ಸೆಂಟ್ ಮತ್ತು ಕೇಂದ್ರ ಕನ್ಸೋಲ್ ಒಳಗೊಂಡಿದೆ.

ನವೀಕರಿಸಿದ ಮರ್ಸಿಡಿಸ್ ಬೆಂಝ್ ಜಿಎಲ್ಎ ಕಾರಿನ ಹಳೆಯ ಮಾದರಿಯ ಎಂಜಿನ್ ಈ ಕಾರುಗಳಲ್ಲಿ ಪಡೆದುಕೊಂಡಿದ್ದು, 2.1 ಲೀಟರ್ ಡೀಸೆಲ್ ಎಂಜಿನ್ 136 ಬಿಎಚ್‌ಪಿ ಮತ್ತು 2.0 ಲೀಟರ್ ಟರ್ಬೊ‌ಚಾರ್ಜ್ಡ್ ಪೆಟ್ರೋಲ್ ಇಂಜಿನ್ ಪಡೆದುಕೊಂಡಿದೆ.

English summary
Mercedes-Benz is set to launch the updated version of the GLA SUV in India on July 5, 2017.
Story first published: Tuesday, June 20, 2017, 17:18 [IST]
Please Wait while comments are loading...

Latest Photos