2017ರ ಮರ್ಸಿಡಿಸ್ ಬೆಂಝ್ ಜಿಎಲ್‌ಎ ಬಿಡುಗಡೆ- ಆರಂಭಿಕ ಬೆಲೆ 30.65 ಲಕ್ಷ...!

Written By:

ಮರ್ಸಿಡಿಸ್ ಬೆಂಝ್ ಬಹುನೀರಿಕ್ಷಿತ ಜಿಎಲ್‌ಎ ಭಾರತದಲ್ಲಿ ಬಿಡುಗಡೆಗೊಂಡಿದ್ದು, ಹೊಸ ಕಾರು ಮಾದರಿಯ ಆರಂಭಿಕ ಬೆಲೆಗಳು ಎಕ್ಸ್‌ಶೋರಂ ಪ್ರಕಾರ ರೂ.30.65 ಲಕ್ಷಕ್ಕೆ ಲಭ್ಯವಿವೆ.

To Follow DriveSpark On Facebook, Click The Like Button
2017ರ ಮರ್ಸಿಡಿಸ್ ಬೆಂಝ್ ಜಿಎಲ್‌ಎ ಬಿಡುಗಡೆ

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಗಳಲ್ಲಿ ಅಭಿವೃದ್ಧಿಗೊಂಡಿರುವ ಜಿಎಲ್‌ಎ ಕಾರು, ಜಿಎಲ್‌ಎ 200 ಸ್ಪೋರ್ಟ್, ಜಿಎಲ್‌ಎ 200 ಡಿ ಸ್ಟೈಲ್, ಜಿಎಲ್ಎ 200 ಡಿ ಸ್ಪೋರ್ಟ್ ಮತ್ತು ಜಿಎಲ್ಎ 220 ಡಿ 4ಮ್ಯಾಟಿಕ್ ಆವೃತ್ತಿಗಳು ಖರೀದಿ ಲಭ್ಯವಿವೆ.

2017ರ ಮರ್ಸಿಡಿಸ್ ಬೆಂಝ್ ಜಿಎಲ್‌ಎ ಬಿಡುಗಡೆ

ಜಿಎಲ್‌ಎ 200 ಸ್ಪೋರ್ಟ್ ಹೊರತು ಪಡಿಸಿ ಉಳಿದೆಲ್ಲಾ ಮಾದರಿಗಳು ಡೀಸೆಲ್ ಎಂಜಿನ್ ಹೊಂದಿದ್ದು, ಜಿಎಸ್‌ಟಿ ಜಾರಿ ಹಿನ್ನೆಲೆ ಎಲ್ಲಾ ಮಾದರಿಗಳ ಮೇಲೂ ಸರಾಸರಿಯಾಗಿ 4 ಲಕ್ಷ ರೂಪಾಯಿ ರಿಯಾಯ್ತಿ ಘೋಷಣೆ ಮಾಡಲಾಗಿದೆ.

2017ರ ಮರ್ಸಿಡಿಸ್ ಬೆಂಝ್ ಜಿಎಲ್‌ಎ ಬಿಡುಗಡೆ

ಜಿಎಲ್‌ಎ ವಿವಿಧ ಮಾದರಿಗಳ ದರಗಳು

ಕಾರು ಮಾದರಿಗಳು ಬೆಲೆಗಳು(ಎಕ್ಸ್‌ಶೋಂ)
ಜಿಎಲ್ಎ 200 ಸ್ಪೋರ್ಟ್ ರೂ. 32.20 ಲಕ್ಷ
ಜಿಎಲ್ಎ 200 ಡಿ ಸ್ಟೈಲ್ ರೂ. 30.65 ಲಕ್ಷ
ಜಿಎಲ್ಎ 200 ಡಿ ಸ್ಪೋರ್ಟ್ ರೂ. 33.85 ಲಕ್ಷ
ಜಿಎಲ್ಎ 220 ಡಿ 4ಮ್ಯಾಟಿಕ್ ರೂ. 36.75 ಲಕ್ಷ
2017ರ ಮರ್ಸಿಡಿಸ್ ಬೆಂಝ್ ಜಿಎಲ್‌ಎ ಬಿಡುಗಡೆ

ಎಂಜಿನ್ ಸಾಮರ್ಥ್ಯ

ಜಿಎಲ್ಎ ಕಾರು ಮಾದರಿಯೂ 2.1-ಲೀಟರ್ ಟರ್ಬೋ ಡೀಸೆಲ್ ಎಂಜಿನ್ ಮತ್ತು 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಡೀಸೆಲ್ ಎಂಜಿನ್ 134 ಬಿಎಚ್‌ಪಿ ಮತ್ತು 300ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಪಡೆದುಕೊಂಡಿವೆ.

2017ರ ಮರ್ಸಿಡಿಸ್ ಬೆಂಝ್ ಜಿಎಲ್‌ಎ ಬಿಡುಗಡೆ

ಇದಲ್ಲದೇ ಜಿಎಲ್ಎ 200 ಕಾರು ಮಾದರಿಗಳು 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅಳವಡಿಕೆಯಿದ್ದು, 9.9 ಸೇಕೆಂಡುಗಳಲ್ಲಿ 100 ಕಿ.ಮಿ ವೇಗ ಪಡೆದುಕೊಳ್ಳುವ ಶಕ್ತಿ ಹೊಂದಿವೆ.

2017ರ ಮರ್ಸಿಡಿಸ್ ಬೆಂಝ್ ಜಿಎಲ್‌ಎ ಬಿಡುಗಡೆ

ಅದೇ ರೀತಿ ಜಿಎಲ್‌ಎ 220 ಡಿ 4ಮ್ಯಾಟಿಕ್ ಮಾದರಿಯೂ ಕೂಡ 7-ಸ್ಪೀಡ್ ಡ್ಯುಯಲ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮತ್ತು 168ಬಿಎಚ್‌ಪಿ , 350ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದೆ. ಹೀಗಾಗಿ ವೇಗದಲ್ಲಿ ಹೆಚ್ಚಿನ ಅವಕಾಶ ಪಡೆದಿದ್ದು, 7.7 ಸೇಕೆಂಡುಗಳಲ್ಲಿ 100ಕಿ.ಮಿ ವೇಗ ಪಡೆಯಲಿವೆ.

2017ರ ಮರ್ಸಿಡಿಸ್ ಬೆಂಝ್ ಜಿಎಲ್‌ಎ ಬಿಡುಗಡೆ

ಇನ್ನು ಪೆಟ್ರೋಲ್ ಆವೃತ್ತಿಯಾದ ಜಿಎಲ್ಎ 200 ಸ್ಪೋರ್ಟ್ ಆವೃತ್ತಿಯು 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ ಪಡೆದುಕೊಂಡಿದ್ದು, 180ಬಿಎಚ್‌ಪಿ ಮತ್ತು 250ಎನ್ಎಂ ಉತ್ಪಾದನಾ ಶಕ್ತಿ ಹೊಂದಿವೆ.

2017ರ ಮರ್ಸಿಡಿಸ್ ಬೆಂಝ್ ಜಿಎಲ್‌ಎ ಬಿಡುಗಡೆ

ಹೊಸ ಕಾರಿನ ವಿನ್ಯಾಸಗಳು

ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗಳಿಗೆ ಹೆಚ್ಚಿನ ಒತ್ತು ನೀಡಿರುವ ಮರ್ಸಿಡಿಸ್ ಬೆಂಝ್, ಜಿಎಲ್‌ಎ ಆವೃತ್ತಿಗಳಲ್ಲಿ ವಿಶೇಷ ಒಳ ಮತ್ತು ಹೊರ ವಿನ್ಯಾಸಗಳನ್ನು ಪರಿಚಯಿಸಿದೆ.

2017ರ ಮರ್ಸಿಡಿಸ್ ಬೆಂಝ್ ಜಿಎಲ್‌ಎ ಬಿಡುಗಡೆ

ಪೂರ್ಣ ಪ್ರಮಾಣದಲ್ಲಿ ಎಲ್ಇಡಿ ಲೈಟ್‌ಗಳ ವ್ಯವಸ್ಥೆ ಹಾಗೂ ಸುಧಾರಿತ ತಂತ್ರಜ್ಞಾನಗಳ ಮಾಹಿತಿ ವ್ಯವಸ್ಥೆ ಜೊತೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ.

2017ರ ಮರ್ಸಿಡಿಸ್ ಬೆಂಝ್ ಜಿಎಲ್‌ಎ ಬಿಡುಗಡೆ

ಇನ್ನೊಂದು ವಿಶೇಷ ಅಂದ್ರೆ ಜಿಎಲ್ಎ ಮಾದರಿಗಳು ಒಟ್ಟು 12 ವಿವಿಧ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಪ್ರತಿ ಮಾದರಿಯಲ್ಲೂ ಎಬಿಎಸ್, 6 ಏರ್‌ಬ್ಯಾಗ್, ಎಲೆಕ್ಟ್ರಿಕ್ ಸ್ಟ್ಯಾಬಿಲಿಟಿ ಕಂಟ್ರೋಲರ್ ಸೇರಿದಂತೆ ಪ್ರಮುಖ ವೈಶಿಷ್ಟ್ಯತೆಗಳನ್ನು ಪರಿಚಯಿಸಿದೆ.

English summary
Read in Kannada about 2017 Mercedes-Benz GLA Launched In India.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark