ಮರ್ಸಿಡಿಸ್ ಬೆಂಝ್ ಜಿಎಲ್‌ಸಿ 43 ಎಎಂಜಿ ಕೂಪೆ ಭಾರತದಲ್ಲಿ ಬಿಡುಗಡೆ ; ಬೆಲೆ ರೂ. 74,80,000

ದುಬಾರಿ ಕಾರುಗಳ ಉತ್ಪಾದನೆಗೆ ಹೆಸರುವಾಸಿಯಾಗಿರುವ ಮರ್ಸಿಡಿಸ್ ಬೆಂಝ್ ತನ್ನ ಜಿಎಲ್‌ಸಿ 43 ಎ.ಎಂ.ಜಿ ಕೂಪೆ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿದಿದ್ದು, ಈ ಕಾರು ರೂ. 74,80,000 ಲಕ್ಷ ಮೂಲ ಬೆಲೆ ಪಡೆದುಕೊಂಡಿದೆ.

By Girish

ದುಬಾರಿ ಕಾರುಗಳ ಉತ್ಪಾದನೆಗೆ ಹೆಸರುವಾಸಿಯಾಗಿರುವ ಮರ್ಸಿಡಿಸ್ ಬೆಂಝ್ ತನ್ನ ಜಿಎಲ್‌ಸಿ 43 ಎ.ಎಂ.ಜಿ ಕೂಪೆ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿದಿದ್ದು, ಈ ಕಾರು ರೂ. 74,80,000 ಲಕ್ಷ ಮೂಲ ಬೆಲೆ ಪಡೆದುಕೊಂಡಿದೆ.

ಜಿಎಲ್‌ಸಿ 43 ಎ.ಎಂ.ಜಿ ಕೂಪೆ ಭಾರತದಲ್ಲಿ ಬಿಡುಗಡೆ

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಂಡ ಈ ಮರ್ಸಿಡಿಸ್ ಬೆಂಝ್ ಕಾರಿನ ಜಿಎಲ್‌ಸಿ 43 ಕ್ರಾಸ್ಒವರ್ ಕಾರು ಎ.ಎಂ.ಜಿ ವಿಭಾಗದ ಅತಿನೂತನ ಮುಂದುವರೆದ ಮಾದರಿಯಾಗಿದೆ ಎಂದು ಸಂಸ್ಥೆ ಬಿಡುಗಡೆಯ ವೇಳೆ ತಿಳಿಸಿದೆ.

ಜಿಎಲ್‌ಸಿ 43 ಎ.ಎಂ.ಜಿ ಕೂಪೆ ಭಾರತದಲ್ಲಿ ಬಿಡುಗಡೆ

ಜಿಎಲ್‌ಸಿ ಎಸ್‌ಯುವಿ ಕಾರಿನ ಆಧಾರವಾಗಿಟ್ಟುಕೊಂಡು ನಿರ್ಮಿಸಲಾಗಿರುವ ಹೆಚ್ಚು ಸಾಮರ್ಥ್ಯದ ಈ ಕಾರು, ಜಿಎಲ್‌ಸಿ ವರ್ಗದ ಉನ್ನತ ಮಾದರಿಯ ಕಾರು ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.

ಜಿಎಲ್‌ಸಿ 43 ಎ.ಎಂ.ಜಿ ಕೂಪೆ ಭಾರತದಲ್ಲಿ ಬಿಡುಗಡೆ

ಜಿಎಲ್‌ಸಿ 43 ಕೂಪೆ ಕಾರು 3.0-ಲೀಟರ್ ವಿ6 ಬೈ-ಟರ್ಬೊ ಎಂಜಿನ್ ಹೊಂದಿದ್ದು, ಈ ಎಂಜಿನ್ 520 ಏನ್‌ಎಂ ತಿರುಗುಬಲದಲ್ಲಿ ಬಲಿಷ್ಠ 367ರಷ್ಟು ಅಶ್ವಶಕ್ತಿ ಉತ್ಪಾದನೆ ಮಾಡಲಿದೆ.

ಜಿಎಲ್‌ಸಿ 43 ಎ.ಎಂ.ಜಿ ಕೂಪೆ ಭಾರತದಲ್ಲಿ ಬಿಡುಗಡೆ

ಐಷಾರಾಮಿ ಮರ್ಸಿಡಿಸ್ ಬೆಂಝ್ ಕಾರು, ಮುಂಭಾಗ ಹಾಗು ಹಿಂಭಾಗ ಕ್ರಮವಾಗಿ 31 ಮತ್ತು 69 ಅನುಪಾತದ 4-ಮ್ಯಾಟಿಕ್ ಆಲ್ ವೀಲ್ ಡ್ರೈವ್(AWD) ವ್ಯವಸ್ಥೆ ಪಡೆದುಕೊಡಿದ್ದು, 9G-ಟ್ರಾನಿಕ್ 9 ಸ್ಪೀಡ್ ಸ್ವಯಂಚಾಲಿತ ಗೇರ್ ಬಾಕ್ಸ್ ಮೂಲಕ ಎಲ್ಲಾ ನಾಲ್ಕು ಚಕ್ರಗಳು ಡ್ರೈವ್ ನಿಯಂತ್ರಿಸಲಿದೆ.

ಜಿಎಲ್‌ಸಿ 43 ಎ.ಎಂ.ಜಿ ಕೂಪೆ ಭಾರತದಲ್ಲಿ ಬಿಡುಗಡೆ

ಜಿಎಲ್‌ಸಿ 43 ಕೂಪೆ ಕಾರು ಕೇವಲ ಕೇವಲ 4.9 ಸೆಕೆಂಡುಗಳಲ್ಲಿ ನೂರು ಕಿಲೋಮೀಟರು ವೇಗವನ್ನು ತಲುಪಬಹುದಾದ ಸಾಮರ್ಥ್ಯ ಹೊಂದಿದ್ದು, ಗಂಟೆಗೆ ಗರಿಷ್ಠ 250 ಕಿಲೋಮೀಟರ್ ಚಲಿಸುವಷ್ಟು ಶಕ್ತಿ ಪಡೆದುಕೊಂಡಿದೆ.

ಜಿಎಲ್‌ಸಿ 43 ಎ.ಎಂ.ಜಿ ಕೂಪೆ ಭಾರತದಲ್ಲಿ ಬಿಡುಗಡೆ

ಇಕೊ, ಕಂಫರ್ಟ್, ಸ್ಪೋರ್ಟ್, ಸ್ಪೋರ್ಟ್ ಪ್ಲಸ್ ಮತ್ತು ಇಂಡಿವಿಜುಯಲ್ ಎಂಬ ಆಯ್ಕೆಗಳನ್ನು ಪಡೆದುಕೊಂಡಿರುವ AMG DYNAMIC SELECT system ಈ ಕಾರು ಹೊಂದಿದ್ದು, ಇದರ ಮೂಲಕ ಚಾಲಕ ತನ್ನ ಆದ್ಯತೆಗಾಳಿಗನುಸಾರ ಕಾರಿನ ಸೆಟ್ಟಿಂಗ್ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.

ಜಿಎಲ್‌ಸಿ 43 ಎ.ಎಂ.ಜಿ ಕೂಪೆ ಭಾರತದಲ್ಲಿ ಬಿಡುಗಡೆ

ಜಿಎಲ್‌ಸಿ 43 ಕೂಪೆ ಎಎಂಜಿ ಕಾರು ಲೀಟರ್‌ಗೆ 12 ಕಿಲೋಮೀಟರ್‌ನಷ್ಟು ಇಂಧನ ಕ್ಷಮತೆ ನೀಡಲಿದೆ ಎಂಬ ಮಾಹಿತಿಯನ್ನು ಕಂಪನಿ ತಿಳಿಸಿದ್ದು, ಉನ್ನತ ಶ್ರೇಣಿಯ ಮಾದರಿಯಲ್ಲಿ ಈ ರೀತಿಯ ಇಂಧನ ಕ್ಷಮತೆ ನಿರೀಕ್ಷೆ ಮಾಡದೇ ಇರುವುದೇ ಉತ್ತಮ ಎನ್ನಬಹುದು.

ಜಿಎಲ್‌ಸಿ 43 ಎ.ಎಂ.ಜಿ ಕೂಪೆ ಭಾರತದಲ್ಲಿ ಬಿಡುಗಡೆ

ಕ್ರಾಸ್ಒವರ್ ಕೂಪೆ ತಿರುಚಿರುವಂತಹ ಚಾರ್ಸಿ, AMG ರೈಡ್ ಕಂಟ್ರೋಲ್ ಸ್ಪೋರ್ಟ್ಸ್ ಸಸ್ಪೆನ್‌ಷನ್ ಸಿಸ್ಟಮ್ ಜೊತೆ ಏರ್ ಬಾಡಿ ಕಂಟ್ರೋಲ್ ಮತ್ತು ಅಡಾಪ್ಟಿವ್ ಡಂಪಿಂಗ್ ಆನ್ ಥ್ರೀ ಲೆವೆಲ್ಸ್, ಸ್ಪೀಡ್ ಸೆನ್ಸಿಟಿವ್ ವೇರಿಯೇಬಲ್ ರೇಷಿಯೋ ಸ್ಟಿಯರಿಂಗ್ ಸಿಸ್ಟಮ್ ಹಾಗು ಮುಂತಾದ ಸೌಲಭ್ಯ ಒಳಗೊಂಡಿದೆ.

ಜಿಎಲ್‌ಸಿ 43 ಎ.ಎಂ.ಜಿ ಕೂಪೆ ಭಾರತದಲ್ಲಿ ಬಿಡುಗಡೆ

ಸ್ಟ್ಯಾಂಡರ್ಡ್ ಜಿಎಲ್‌ಸಿ ಕಾರಿಗೆ ಹೋಲಿಸಿದರೆ ಅತಿ ಹೆಚ್ಚು ಭಿನ್ನವಾಗಿರುವ ಈ ಜಿಎಲ್‌ಸಿ 43 ಎಎಮ್‌ಜಿ ಕೂಪೆ ಕಾರಿನ ಹೊರಭಾಗದಲ್ಲಿ ಹೆಚ್ಚು ವಿಶೇಷತೆಗಳನ್ನು ಹೊಂದಿದೆ. ಈ ಕಾರು ಕ್ರೋಮ್ ಪಿನ್‌ಗಳ ಜೊತೆ ಕಪ್ಪು ಬಣ್ಣದ ಗ್ರಿಲ್ ಹೊಂದಿದ್ದು, ಗಾತ್ರದ ಏರ್ ಇನ್‌ಟೇಕ್ ಮತ್ತು ಬೀಫೈರ್ ವಿನ್ಯಾಸದ ಮುಂಭಾಗದ ಬಂಪರ್ ಪಡೆದುಕೊಂಡಿದೆ.

ಜಿಎಲ್‌ಸಿ 43 ಎ.ಎಂ.ಜಿ ಕೂಪೆ ಭಾರತದಲ್ಲಿ ಬಿಡುಗಡೆ

ಹೊರಭಾಗದ ಮತ್ತೊಂದು ದೊಡ್ಡ ಬದಲಾವಣೆ ಎಂದರೆ, ಸಣ್ಣದಾದ ಇಳಿಜಾರು ರೂಫ್‌ಲೈನ್ ಈ ಕಾರು ಹೊಂದಿದ್ದು, ತೀವ್ರವಾಗಿ ನಯಗೊಳಿಸಲಾಗಿದೆ. ಆದರೂ ಸಹ ಹೆಚ್ಚು ಆಕ್ರಮಣಶೀಲ ವಿನ್ಯಾಸ ಪಡೆದುಕೊಂಡಿದೆ.

Most Read Articles

Kannada
English summary
Read in kannada about Mercedes-Benz has launched the GLC 43 AMG Coupe in India at a price of 74.80 lakh. Know more about this car prices, images, mileage,pecifications and more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X