ಮರ್ಸಿಡಿಸ್ ಬೆಂಝ್‌ನಿಂದ ಹೊಸ ದಾಖಲೆ- ಒಂದೇ ದಿನಕ್ಕೆ ಕೋಲ್ಕತ್ತಾದಲ್ಲಿ 51 ಕಾರುಗಳು ಮಾರಾಟ

Written By:

ಇದೀಗ ದೇಶಾದ್ಯಂತ ದಸರಾ ಸಂಭ್ರಮ ಮನೆ ಮಾಡಿದ್ದು, ವಾಹನಗಳ ಖರೀದಿ ಪ್ರಕ್ರಿಯೆ ಜೋರಾಗಿದೆ. ಜೊತೆಗೆ ಗ್ರಾಹಕರನ್ನು ಸೆಳೆಯುವಲ್ಲಿ ಹೊಸ ಹೊಸ ಯೋಜನೆ ರೂಪಿಸುತ್ತಿರುವ ಕಾರು ಉತ್ಪಾದನಾ ಸಂಸ್ಥೆಗಳ ಸಾಲಿನಲ್ಲಿ ಮರ್ಸಿಡಿಸ್ ಬೆಂಝ್ ಯಶಸ್ವಿಯಾಗಿದೆ.

ಮರ್ಸಿಡಿಸ್ ಬೆಂಝ್‌ನಿಂದ ಕೋಲ್ಕತ್ತಾದಲ್ಲಿ ಒಂದೇ ದಿನ 51ಕಾರುಗಳು ಮಾರಾಟ

ಕಳೆದ ಒಂದು ವಾರದಿಂದ ಕಾರು ಮಾರಾಟದಲ್ಲಿ ಭಾರೀ ಏರಿಕೆಯಿದ್ದು, ಸೆಪ್ಟೆಂಬರ್ 20ರಂದು ಮರ್ಸಿಡಿಸ್ ಸಂಸ್ಥೆಯು ಕೋಲ್ಕತ್ತಾ ಸೌಥ್ ಡಿಲರ್‌ಶಿಪ್‌ನಲ್ಲಿ 51 ಐಷಾರಾಮಿ ಕಾರುಗಳನ್ನು ಮಾರಾಟ ಮಾಡಿರುವುದು ಹೊಸ ದಾಖಲೆ ಎನ್ನಬಹುದು.

ಮರ್ಸಿಡಿಸ್ ಬೆಂಝ್‌ನಿಂದ ಕೋಲ್ಕತ್ತಾದಲ್ಲಿ ಒಂದೇ ದಿನ 51ಕಾರುಗಳು ಮಾರಾಟ

ಇನ್ನು ದೇಶಾದ್ಯಂತ ಇದೇ ಅವಧಿಯಲ್ಲಿ 1 ಸಾವಿರಕ್ಕೂ ಅಧಿಕ ಕಾರುಗಳು ಖರೀದಿ ಪ್ರಕ್ರಿಯೆ ನಡೆದಿದ್ದು, ಐಷಾರಾಮಿ ಕಾರುಗಳ ಮಾರಾಟದಲ್ಲಿ ಮರ್ಸಿಡಿಸ್ ಬೆಂಝ್ ಮತ್ತೆ ಮುಂಚೂಣಿ ಕಾಯ್ದುಕೊಂಡಿರುವುದು ವಿಶೇಷ ಎನ್ನಬಹುದು.

ಮರ್ಸಿಡಿಸ್ ಬೆಂಝ್‌ನಿಂದ ಕೋಲ್ಕತ್ತಾದಲ್ಲಿ ಒಂದೇ ದಿನ 51ಕಾರುಗಳು ಮಾರಾಟ

ಇನ್ನೊಂದು ವಿಶೇಷ ಅಂದ್ರೆ ಈ ಹಿಂದೆ ಟ್ರೆಂಡಿಂಗ್‌ನಲ್ಲಿದ್ದ ಸೆಡಾನ್ ಮತ್ತು ಹ್ಯಾಚ್‌ಬ್ಯಾಕ್‌ಗಳಿಂತ ಎಸ್‌ಯುವಿ ಆವೃತ್ತಿಗಳಿಗೆ ಹೆಚ್ಚಿನ ಬೇಡಿಕೆ ಬಂದಿದ್ದು, ಕ್ರಿಡಾ ಆವೃತ್ತಿಯ ಕಾರುಗಳ ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದಾರೆ.

ಮರ್ಸಿಡಿಸ್ ಬೆಂಝ್‌ನಿಂದ ಕೋಲ್ಕತ್ತಾದಲ್ಲಿ ಒಂದೇ ದಿನ 51ಕಾರುಗಳು ಮಾರಾಟ

ಈ ಕುರಿತು ಮಾತನಾಡಿರುವ ಮರ್ಸಿಡಿಸ್ ಬೆಂಝ್ ಇಂಡಿಯಾ ಅಧ್ಯಕ್ಷ ರೋಲ್ಯಾಂಡ್ ಫೋಲ್ಗರ್, "ಮರ್ಸಿಡಿಸ್ ಬೆಂಝ್ ಉತ್ಪನ್ನಗಳ ಮೇಲೆ ಭಾರತೀಯ ಗ್ರಾಹಕರು ವಿಶೇಷ ಪ್ರೀತಿ ಹೊಂದಿದ್ದು, ಮುಂಬರುವ ದಿನಗಳಲ್ಲಿ ಭಾರತೀಯ ಗ್ರಾಹಕರಿಗಾಗಿ ಹೊಸ ಕೊಡುಗೆಗಳನ್ನು ನೀಡಲು ನಾವು ಉತ್ಸಕರಾಗಿದ್ದೇವೆ" ಎಂದಿದ್ದಾರೆ.

ಮರ್ಸಿಡಿಸ್ ಬೆಂಝ್‌ನಿಂದ ಕೋಲ್ಕತ್ತಾದಲ್ಲಿ ಒಂದೇ ದಿನ 51ಕಾರುಗಳು ಮಾರಾಟ

ಇದಲ್ಲದೇ ಈ ಹಿಂದಿನಿಂದಲೂ ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಉತ್ಪನ್ನಗಳಿಗೆ ಸಾಕಷ್ಟು ಬೇಡಿಕೆಯಿದ್ದು, ಉತ್ತಮ ಕಾರ್ಯಕ್ಷಮತೆ, ಗ್ರಾಹಕರ ದೂರುಗಳಿಗೆ ತ್ವರಿತ ಪರಿಹಾರ ಸೇರಿದಂತೆ ಹಲವು ಗ್ರಾಹಕರ ಪರ ಯೋಜನೆಗಳು ಕಾರು ಮಾರಾಟ ಹೆಚ್ಚಳಕ್ಕೆ ಕಾರಣವಾಗಿವೆ ಎನ್ನಬಹುದು.

ಮರ್ಸಿಡಿಸ್ ಬೆಂಝ್‌ನಿಂದ ಕೋಲ್ಕತ್ತಾದಲ್ಲಿ ಒಂದೇ ದಿನ 51ಕಾರುಗಳು ಮಾರಾಟ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹತ್ತು ಹಲವು ವಿಶೇಷತೆಗಳೊಂದಿಗೆ ಗ್ರಾಹಕರ ಮನಗೆದ್ದಿರುವ ಮರ್ಸಿಡಿಸ್ ಬೆಂಝ್ ಸಂಸ್ಥೆಯು ಒಂದೇ ದಿನದಲ್ಲಿ ಒಂದೇ ಡಿಲರ್‌ಶಿಪ್ ಮೂಲಕ 51 ಕಾರುಗಳನ್ನು ಮಾರಾಟ ಮಾಡಿರುವುದು ವಿಶೇಷ. ಇದಕ್ಕೆ ಮರ್ಸಿಡಿಸ್ ಬೆಂಝ್ ಜನಪ್ರಿಯತೆ ಮತ್ತು ಉತ್ಪನ್ನಗಳ ಮೇಲಿನ ವಿಶ್ವಾಸ ಎನ್ನಬಹುದು.

English summary
Read in Kannada about Mercedes Benz India Kicks Off Festive Season With Record Deliveries In A Single Day.
Story first published: Friday, September 22, 2017, 19:58 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark