ಮೈಸೂರಿನಲ್ಲಿ ಆರಂಭಗೊಂಡ ಮರ್ಸಿಡಿಸ್ ಬೆಂಝ್ 3ಎಸ್ ಶೋರಂ

Written By:

ದೇಶಿಯವಾಗಿ ಐಷಾರಾಮಿ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮರ್ಸಿಡಿಸ್ ಬೆಂಝ್ ಸಂಸ್ಥೆಯು ಇದೀಗ ಪ್ರವಾಸಿ ತಾಣವಾದ ಮೈಸೂರಿನಲ್ಲೂ 3ಎಸ್ ಮಾದರಿಯ ಕಾರು ಶೋರಂ ತೆರದಿದೆ.

ಮೈಸೂರಿನಲ್ಲಿ ಆರಂಭಗೊಂಡ ಮರ್ಸಿಡಿಸ್ ಬೆಂಝ್ 3ಎಸ್ ಶೋರಂ

ದೇಶದ 42 ನಗರಗಳಲ್ಲಿ 87 ಕಾರು ಶೋರಂಗಳನ್ನು ಹೊಂದಿರುವ ಮರ್ಸಿಡಿಸ್ ಬೆಂಝ್ ಸಂಸ್ಥೆಯು ಮತ್ತಷ್ಟು ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಹೊಸ ಯೋಜನೆ ರೂಪಿಸಿದ್ದು, ಮೈಸೂರಿನಲ್ಲೂ ತನ್ನ ಹೊಸ 3ಎಸ್ ಮಾದರಿಯ ಶೋರಂ ಒಂದನ್ನು ಆರಂಭಗೊಳಿಸಿದೆ.

ಮೈಸೂರಿನಲ್ಲಿ ಆರಂಭಗೊಂಡ ಮರ್ಸಿಡಿಸ್ ಬೆಂಝ್ 3ಎಸ್ ಶೋರಂ

6 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಕಾರು ಶೋರಂ ಆರಂಭಗೊಂಡಿದ್ದು, 33, 9660 ಚದರ ಅಡಿ ವಿಸ್ತಾರದಲ್ಲಿ ಹೈಟೆಕ್ ಮಾದರಿಯ ಶೋರಂ ಆರಂಭ ಮಾಡಲಾಗಿದೆ.

ಮೈಸೂರಿನಲ್ಲಿ ಆರಂಭಗೊಂಡ ಮರ್ಸಿಡಿಸ್ ಬೆಂಝ್ 3ಎಸ್ ಶೋರಂ

ಒಂದೇ ಬಾರಿಗೆ 5 ಕಾರುಗಳನ್ನು ಪ್ರದರ್ಶನ ಮಾಡುವಷ್ಟು ಸ್ಥಳಾವಕಾಶ ಇದ್ದು, ಬೀಡಿ ಭಾಗಗಳ ಸೇವೆಗಳು ಇಲ್ಲಿಯೇ ದೊರೆಯಲಿವೆ. ಹೀಗಾಗಿ 45 ಮಂದಿ ವೃತ್ತಿಪರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ.

ಮೈಸೂರಿನಲ್ಲಿ ಆರಂಭಗೊಂಡ ಮರ್ಸಿಡಿಸ್ ಬೆಂಝ್ 3ಎಸ್ ಶೋರಂ

ಕರ್ನಾಟಕದಲ್ಲಿ ಬೆಂಗಳೂರು ನಂತರ ಇದೇ ಮೊದಲ ಬಾರಿಗೆ ಜಿಲ್ಲಾ ಕೇಂದ್ರ ಒಂದರಲ್ಲಿ ಮರ್ಸಿಡಿಸ್ ಬೆಂಝ್ 3ಎಸ್ ಶೋರಂ ಆರಂಭವಾಗಿದ್ದು, ಈ ಮೂಲಕ ಮತ್ತಷ್ಟು ಐಷಾರಾಮಿ ಕಾರು ಪ್ರಿಯರನ್ನು ಸೆಳೆಯಲು ಪ್ರಯತ್ನಿಸುತ್ತಿದೆ.

ಮೈಸೂರಿನಲ್ಲಿ ಆರಂಭಗೊಂಡ ಮರ್ಸಿಡಿಸ್ ಬೆಂಝ್ 3ಎಸ್ ಶೋರಂ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಮಾರಾಟ ಜಾಲ ವಿಸ್ತರಣೆಗಾಗಿ ಹೊಸ ಯೋಜನೆ ಕೈಗೊಂಡಿರುವ ಮರ್ಸಿಡಿಸ್ ಬೆಂಝ್ ಸಂಸ್ಥೆಯು ಮುಂದಿನ 5 ವರ್ಷಗಳಲ್ಲಿ ದೇಶಾದ್ಯಂತ 30 ಹೊಸ ಶೋರಂಗಳನ್ನು ತೆರೆಯುವ ಯೋಜನೆ ಹೊಂದಿದ್ದು, ಪ್ರವಾಸಿ ಮೈಸೂರಿನಲ್ಲಿ ಹೊಸ ಶೋರಂ ಆರಂಭ ಮಾಡಿರುವುದು ಗಮನಾರ್ಹ.

English summary
Read in Kannada about Mercedes-Benz Opens 3S Dealership In The Royal City Of Mysore.
Story first published: Thursday, August 3, 2017, 20:33 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark