ಮುಂಬೈಯಲ್ಲಿ ದೇಶದ ಅತಿದೊಡ್ಡ ಕಾರ್ ಶೋರಂ ಪ್ರಾರಂಭಿಸಿದ ಮರ್ಸಿಡಿಸ್ ಬೆಂಝ್..!!
ಐಷಾರಾಮಿ ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ಮುಂಚೂಣಿಯಲ್ಲಿ ಮರ್ಸಿಡಿಸಿ ಬೆಂಝ್, ಮುಂಬೈಯಲ್ಲಿ ದೇಶದ ಅತಿದೊಡ್ಡ ಕಾರು ಶೋರಂ ಪ್ರಾರಂಭ ಮಾಡಿದೆ.
ಐಷಾರಾಮಿ ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ಮುಂಚೂಣಿಯಲ್ಲಿ ಮರ್ಸಿಡಿಸಿ ಬೆಂಝ್, ಮುಂಬೈಯಲ್ಲಿ ದೇಶದ ಅತಿದೊಡ್ಡ ಕಾರು ಶೋರಂ ಪ್ರಾರಂಭ ಮಾಡಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಭಾವನಾತ್ಮಕ ಸಂಬಂಧ ಹೊಂದಿರುವ ಮರ್ಸಿಡಿಸ್ ಬೆಂಝ್, ಕಳೆದ 2 ದಶಕಗಳಲ್ಲಿ ಹಲವು ಏಳು ಬೀಳುಗಳನ್ನು ಕಾಣುವ ಮೂಲಕ ಇಂದು ನಂ.1 ಐಷಾರಾಮಿ ಕಾರ್ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ.

ಇದರಿಂದ ಸಹಜವಾಗಿಯೇ ತನ್ನ ವ್ಯಾಪರಕ್ಕೆ ಅನುಕೂಲವಾಗುವಂತೆ ಹತ್ತಾರು ಶೋರಂ ಆರಂಭ ಮಾಡಿರುವ ಬೆಂಝ್, ಇದೀಗ ಮುಂಬೈ ಹೃದಯಭಾಗದಲ್ಲಿ ದೇಶದ ಅತಿದೊಡ್ಡ ಕಾರು ಶೋರಂ ತೆರೆದಿದೆ.

ಮುಂಬೈನ ಸಾಂತ್ರಾಕ್ರೂಜ್ ಕಾಲಿನಾದಲ್ಲಿ ಮರ್ಸಿಡಿಸ್ ಬೆಂಝ್ ಶೋರಂ ಆರಂಭಗೊಂಡಿದ್ದು, ಸುಮಾರು 6 ಕೋಟಿ ವೆಚ್ಚದಲ್ಲಿ ವಿಶೇಷ ಒಳ ವಿನ್ಯಾಸ ಕೈಗೊಳ್ಳಲಾಗಿದೆ.

ಸುಮಾರು 200 ಸಿಬ್ಬಂದಿ ಕಾರ್ಯನಿರ್ವಹಣೆ ಮಾಡಬಹುದಾಗಿದ್ದು, ವ್ಯವಹಾರಕ್ಕೆ ಅನುಕೂಲಕರವಾಗುವಂತೆ ಮಾರಾಟ ಮಳಿಗೆ ಹತ್ತಾರು ಸೌಲಭ್ಯಗಳನ್ನು ನಿರ್ಮಾಣ ಮಾಡಲಾಗಿದೆ.

ಸಲ್ಮಾನ್ ವೀಲ್ಹ್ ಒಡೆತನದ ಕಟ್ಟಡದಲ್ಲಿ ಬೆಂಝ್ ಕಾರು ಶೋರಂ ಆರಂಭವಾಗಿದ್ದು, ಮರ್ಸಿಡಿಸ್ ಬೆಂಝ್ ಇಂಡಿಯಾ ಅಧ್ಯಕ್ಷ ರೋನಾಲ್ಡ್ ಫೋಲ್ಗರ್ ಹಾಗೂ ಬೆಂಝ್ ಇಂಡಿಯಾ ಸಿಇಓ ಅಮೇರ್ ಸೇಠ್ ಹೊಸ ಶೋರಂಗೆ ಚಾಲನೆ ಚಾಲನೆ ನೀಡಿದ್ದಾರೆ.

ಈ ಶೋರಂ ಮತ್ತೊಂದು ವಿಶೇಷವೆನೆಂದರೇ ಪ್ರತಿ ಕಾರು ಮಾದರಿಗೂ ಪ್ರತ್ಯೇಕ್ ಮಾರಾಟ ವಿಭಾಗವಿದ್ದು, ಕಾರು ಖರೀದಿಗೆ ಮತ್ತು ವ್ಯವಹಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ವಿಶೇಷವಾಗಿ ಅಭಿವೃದ್ದಿಗೊಳಿಸಲಾಗಿದೆ.


Click it and Unblock the Notifications