ಹೊಸ ಬಗೆಯ ಎಕ್ಸ್ ಕ್ಲಾಸ್ ಪಿಕ್ ಅಪ್ ಟ್ರಕ್ ಪರಿಚಯಿಸಲಿದೆ ಮರ್ಸಿಡಿಸ್ ಬೆಂಝ್..!

Written By:

ನಗರ ಪ್ರದೇಶಗಳಲ್ಲಿ ಪಿಕ್ ಅಪ್ ವಾಹನಗಳಿಗೆ ಭಾರೀ ಬೇಡಿಕೆಯಿದ್ದು, ಈ ಹಿನ್ನೆಲೆ ಹೊಸ ಬಗೆಯ ಎಕ್ಸ್ ಕ್ಲಾಸ್ ಪಿಕ್ ಅಪ್ ಟ್ರಕ್ ಬಹಿರಂಗಗೊಳಿಸಿರುವ ಮರ್ಸಿಡಿಸ್ ಬೆಂಝ್ ಸಂಸ್ಥೆಯು ಸದ್ಯದಲ್ಲೇ ಭಾರತಕ್ಕೂ ವಿನೂತನ ವಾಹನವನ್ನು ಪರಿಚಯಿಸುವ ಸುಳಿವು ನೀಡಿದೆ.

To Follow DriveSpark On Facebook, Click The Like Button
ಎಕ್ಸ್ ಕ್ಲಾಸ್ ಪಿಕ್ ಅಪ್ ಟ್ರಕ್ ಪರಿಚಯಿಸಲಿದೆ ಮರ್ಸಿಡಿಸ್ ಬೆಂಝ್

ಜಾಗತಿಕ ಆಟೋ ವಲಯದಲ್ಲಿ ಈಗಾಗಲೇ ಹತ್ತಾರ ಬಗೆಯ ಪಿಕ್ ಅಪ್ ಟ್ರಕ್‌ಗಳು ಚಾಲ್ತಿಯಲ್ಲಿದ್ದು, ಜರ್ಮನ್ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆ ಮರ್ಸಿಡಿಸ್ ಬೆಂಝ್ ನಿರ್ಮಾಣ ಮಾಡಿರುವ ಪ್ರಿಮಿಯಂ ಪಿಕ್ ಅಪ್ ಎಕ್ಸ್-ಕ್ಲಾಸ್ ವಾಹನವು ಇತರೆ ಮಾದರಿಗಳಿಂತ ಭಿನ್ನತೆ ಹೊಂದಿದೆ.

ಎಕ್ಸ್ ಕ್ಲಾಸ್ ಪಿಕ್ ಅಪ್ ಟ್ರಕ್ ಪರಿಚಯಿಸಲಿದೆ ಮರ್ಸಿಡಿಸ್ ಬೆಂಝ್

ಸುಧಾರಿತ ತಂತ್ರಜ್ಞಾನ ಮತ್ತು ವಿಶೇಷ ವಿನ್ಯಾಸಗಳನ್ನು ಹೊಂದಿರುವ ಎಕ್ಸ್-ಕ್ಲಾಸ್ ಪಿಕ್ ಅಪ್ ಟ್ರಕ್‌ನಲ್ಲಿ ಚಾಲಕ ಸೇರಿದಂತೆ ಐದು ಜನ ಆರಾಮದಾಯಕವಾಗಿ ಪ್ರಯಾಣ ಮಾಡಬಹುದಾಗಿದ್ದು, ಫೋರ್ ವೀಲ್ಹ್ ಡ್ರೈವಿಂಗ್ ಸೌಲಭ್ಯವನ್ನು ಪಡೆದುಕೊಂಡಿದೆ.

ಎಕ್ಸ್ ಕ್ಲಾಸ್ ಪಿಕ್ ಅಪ್ ಟ್ರಕ್ ಪರಿಚಯಿಸಲಿದೆ ಮರ್ಸಿಡಿಸ್ ಬೆಂಝ್

ಡೀಸೆಲ್ ಮತ್ತು ಪೆಟ್ರೋಲ್ ಎರಡು ಆವೃತ್ತಿಯಲ್ಲೂ ಲಭ್ಯವಿರುವ ಎಕ್ಸ್-ಕ್ಲಾಸ್ ಪಿಕ್ ಅಪ್ ವಾಹನವು 2.3-ಲೀಟರ್ ಟರ್ಬೋಚಾರ್ಜ್ಡ್ ಡಿಸೇಲ್ ಎಂಜಿನ್ ಮತ್ತು 2.0-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಅಭಿವೃದ್ಧಿಗೊಂಡಿವೆ.

ಎಕ್ಸ್ ಕ್ಲಾಸ್ ಪಿಕ್ ಅಪ್ ಟ್ರಕ್ ಪರಿಚಯಿಸಲಿದೆ ಮರ್ಸಿಡಿಸ್ ಬೆಂಝ್

ಎಸ್-ಕ್ಲಾಸ್ ಮಾದರಿಗಳಲ್ಲಿ ಪ್ರಮುಖ ನಾಲ್ಕು ಆವೃತ್ತಿಗಳನ್ನು ಪರಿಚಯಿಸುತ್ತಿರುವ ಮರ್ಸಿಡಿಸ್ ಬೆಂಝ್, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಎಕ್ಸ್ ಪ್ಲಸ್ ಫೋರ್ ಸಿಲಿಂಡರ್, ಎಕ್ಸ್ 200, ಎಕ್ಸ್220ಡಿ ಮತ್ತು ಎಕ್ಸ್250ಡಿ ಟ್ರಕ್ ಆವೃತ್ತಿಗಳನ್ನು ಅಭಿವೃದ್ಧಿಗೊಳಿಸಿದೆ.

ಎಕ್ಸ್ ಕ್ಲಾಸ್ ಪಿಕ್ ಅಪ್ ಟ್ರಕ್ ಪರಿಚಯಿಸಲಿದೆ ಮರ್ಸಿಡಿಸ್ ಬೆಂಝ್

ಉನ್ನತ ಮಟ್ಟದ ಪಿಕ್ ಅಪ್ ಟ್ರಕ್‌ ಮಾದರಿಯೂ ವಿ6 ಎಂಜಿನ್ ಪಡೆದುಕೊಂಡಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 7 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ವ್ಯವಸ್ಥೆಯನ್ನು ನೀಡಲಾಗಿದೆ.

ಎಕ್ಸ್ ಕ್ಲಾಸ್ ಪಿಕ್ ಅಪ್ ಟ್ರಕ್ ಪರಿಚಯಿಸಲಿದೆ ಮರ್ಸಿಡಿಸ್ ಬೆಂಝ್

ಇದರೊಂದಿಗೆ ಸರಕು ಸಾಗಾಟಕ್ಕೆ ಪಿಕ್ ಅಪ್ ಟ್ರಕ್ ಹಿಂಬದಿಯಲ್ಲಿ ಸಾಕಷ್ಟು ಅವಕಾಶವಿದ್ದು, 1042 ಕೆ.ಜಿ ತೂಕ ಹೊಂದಿರುವ ಎಕ್ಸ್-ಕ್ಲಾಸ್‌ನಲ್ಲಿ 3.5 ಟನ್ ಸರಕು ಸಾಗಿಸಬಹುದಾಗಿದೆ.

ಎಕ್ಸ್ ಕ್ಲಾಸ್ ಪಿಕ್ ಅಪ್ ಟ್ರಕ್ ಪರಿಚಯಿಸಲಿದೆ ಮರ್ಸಿಡಿಸ್ ಬೆಂಝ್

ಸದ್ಯ ಮರ್ಸಿಡಿಸ್ ಉತ್ಪಾದನೆ ಮಾಡಿರುವ ಎಕ್ಸ್-ಕ್ಲಾಸ್ ಪಿಕ್ ಅಪ್ ಟ್ರಕ್ ಮಾದರಿಯೂ ಬ್ರೇಜಿಲ್, ಮೆಕ್ಸಿಕೊ, ಪಶ್ಚಿಮ ಆಫ್ರಿಕಾ ದೇಶಗಳಲ್ಲಿ ಬಿಡುಗಡೆಯಾಗುತ್ತಿದ್ದು, ತದನಂತರವಷ್ಟೇ ಭಾರತದಲ್ಲಿ ಬಿಡುಗಡೆಯಾಗಿದೆ.

English summary
Read in Kannada about Mercedes-Benz X-Class Pickup Truck Revealed.
Story first published: Wednesday, July 19, 2017, 17:48 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark