ಎಸ್-ಕ್ಲಾಸ್ ಕೂಪೆ ಮತ್ತು ಕ್ಯಾಬ್ರಿಯೊಲೆಟ್ ಕಾರುಗಳನ್ನು ಅನಾವರಣಗೊಳಿಸಿದ ಮರ್ಸಿಡಿಸ್
2017ರ ಫ್ರಾಂಕ್‌ಫ಼ರ್ಟ್ ಮೋಟಾರ್ ಪ್ರದರ್ಶನದಲ್ಲಿ ಮರ್ಸಿಡಿಸ್ ಬೆಂಝ್ ಸಂಸ್ಥೆಯು ಸಾರ್ವಜನಿಕವಾಗಿ ತನ್ನ ಚೊಚ್ಚಲ ಎಸ್-ಕ್ಲಾಸ್ ಕೂಪೆ ಮತ್ತು ಕ್ಯಾಬ್ರಿಯೊಲೆಟ್ ಕಾರುಗಳನ್ನು ಅನಾವರಣಗೊಳಿಸಿದ್ದು, ಈ ಕಾರುಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
2017ರ ಫ್ರಾಂಕ್‌ಫ಼ರ್ಟ್ ಮೋಟಾರ್ ಪ್ರದರ್ಶನದಲ್ಲಿ ಮರ್ಸಿಡಿಸ್ ಬೆಂಝ್ ಸಂಸ್ಥೆಯು ಸಾರ್ವಜನಿಕವಾಗಿ ತನ್ನ ಚೊಚ್ಚಲ ಎಸ್-ಕ್ಲಾಸ್ ಕೂಪೆ ಮತ್ತು ಕ್ಯಾಬ್ರಿಯೊಲೆಟ್ ಕಾರುಗಳನ್ನು ಅನಾವರಣಗೊಳಿಸಿದ್ದು, ಈ ಕಾರುಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ನವೀಕರಿಸಿದ ವಿನ್ಯಾಸ ಮತ್ತು ಹೆಚ್ಚಿನ ಕಾರ್ಯಕ್ಷಮತೆ ಪಡೆದ ಎಸ್-ಕ್ಲಾಸ್ ಕೂಪೆ ಮತ್ತು ಕ್ಯಾಬ್ರಿಯೊಲೆಟ್ ಕಾರುಗಳನ್ನು ಮರ್ಸಿಡಿಸ್ ಬೆಂಝ್ ಸಂಸ್ಥೆಯು 2017ರ ಫ್ರಾಂಕ್‌ಫ಼ರ್ಟ್ ಮೋಟಾರ್ ಪ್ರದರ್ಶನದಲ್ಲಿ ಪ್ರದರ್ಶನ ಮಾಡಿದ್ದು, ಕಾರಿನ ಅಂಕಿ ಅಂಶಗಳು ನಿಮಗೆ ಹೆಚ್ಚು ಖುಷಿ ಕೊಡಲಿರುವುದಂತೂ ಖಂಡಿತ.

ಉನ್ನತ ಮಾದರಿಯ ಎಎಂಜಿ ಎಸ್65 ಕಾರು, 6-ಲೀಟರ್ ವಿ6 ಟ್ವಿನ್-ಟರ್ಬೊ ಎಂಜಿನ್ ಹೊಂದಿದ್ದು, ಈ ಎಂಜಿನ್ 1000 ಏನ್‌ಎಂ ತಿರುಗುಬಲದಲ್ಲಿ ಬಲಿಷ್ಠ 621ರಷ್ಟು ಅಶ್ವಶಕ್ತಿ ಉತ್ಪಾದನೆ ಮಾಡಲಿದೆ.

ಎಸ್-ಕ್ಲಾಸ್ ಕೂಪೆ ಮತ್ತು ಕ್ಯಾಬ್ರಿಯೊಲೆಟ್ ಮಾದರಿಯಲ್ಲಿ, 9-ಸ್ಪೀಡ್ ಗೇರ್‌ಬಾಕ್ಸ್ ಬದಲಾಗಿ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೊಮ್ಯಾಟಿಕ್ ಟ್ರಾನ್ಸ್ಮಿಷನ್ ಗೇರ್‌ಬಾಕ್ಸ್ ಪಡೆದ ಏಕೈಕ ಕಾರು ಎಂಬ ಖ್ಯಾತಿಗೆ ಎಸ್65 ಕಾರು ಪಾತ್ರವಾಗಿದೆ.

ಎಸ್-ಕ್ಲಾಸ್ ಕೂಪೆ ಮತ್ತು ಕ್ಯಾಬ್ರಿಯೊಲೆಟ್ ಕಾರುಗಳು ಕೇವಲ 4.1 ಸೆಕೆಂಡುಗಳಲ್ಲಿ ನೂರು ಕಿಲೋಮೀಟರು ವೇಗವನ್ನು ತಲುಪಬಹುದಾದ ಸಾಮರ್ಥ್ಯ ಹೊಂದಿದ್ದು, ಗಂಟೆಗೆ ಗರಿಷ್ಠ 250 ಕಿಲೋಮೀಟರ್ ಚಲಿಸುವಷ್ಟು ಶಕ್ತಿ ಪಡೆದುಕೊಂಡಿದೆ.

ವಿನ್ಯಾಸದ ಬಗ್ಗೆ ಹೇಳುವುದಾದರೆ, ಎಸ್-ಗ್ರೂಪ್ ಕೂಪೆ ಮತ್ತು ಕ್ಯಾಬ್ರಿಯೊಲೆಟ್ ಶ್ರೇಣಿಯ ಎಎಂಜಿ ರೂಪಾಂತರಗಳು ಶೀಘ್ರವಾಗಿ ಎಂಜಿನ್ ತಣ್ಣಗಾಗಿಸುವ ಲಂಬ ಆಕೃತಿಯ 'ಪನಾಮೇರಿಕಾ' ಗ್ರಿಲ್ ಅನ್ನು ಒಳಗೊಂಡಿವೆ ಹಾಗು ಎಲ್ಲಾ ರೂಪಾಂತರಗಳೂ ಸಹ ದೊಡ್ಡದಾದ ಏರ್ ಇನ್‌ಟೇಕ್, ಹೊಚ್ಚ ಹೊಸ ಹಿಂಬದಿಯ OLED ದೀಪಗಳು(ವಿಭಿನ್ನ 66 OLED ದೀಪಗಳ ಬಳಕೆ) ಮತ್ತು ಎರಡು ಹೊಸ ಅಲಾಯ್ ಚಕ್ರ ವಿನ್ಯಾಸಗಳ ಸೌಲಭ್ಯವನ್ನು ಪಡೆದುಕೊಂಡಿದೆ.

ಒಳಭಾಗದಲ್ಲಿ ,12.3-ಇಂಚಿನ ಪರದೆ, ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಒಳಗೊಂಡಿರುವ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಚಾಲಕ ನೆರವು ವ್ಯವಸ್ಥೆ ಆಯ್ಕೆಗಳನ್ನು ಪಡೆದುಕೊಂಡಿದೆ.

ಈ ವರ್ಷದ ಫ್ರಾಂಕ್‌ಫ಼ರ್ಟ್ ಮೋಟಾರ್ ಪ್ರದರ್ಶನದಲ್ಲಿ ಮರ್ಸಿಡಿಸ್ ಬೆಂಝ್ ಸಂಸ್ಥೆಯು ತನ್ನ ಹೊಚ್ಚ ಹೊಸ ಎಸ್-ಕ್ಲಾಸ್ ಕೂಪೆ ಮತ್ತು ಕ್ಯಾಬ್ರಿಯೊಲೆಟ್ ಕಾರುಗಳನ್ನು ಅನಾವರಣಗೊಳಿಸಿದ್ದು, ಈ ಕಾರುಗಳ ಬಗ್ಗೆ ಜನ ಹೇಗೆ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications