ಗುಜರಾತಿನಲ್ಲಿ ಆರಂಭಗೊಂಡ ಎಂಜಿ ಮೋಟಾರ್ ಮೊದಲ ಕಾರು ಉತ್ಪಾದನಾ ಘಟಕ

ಬ್ರಿಟನ್ ಮೂಲದ ಎಂಜಿ ಮೋಟಾರ್ ಸಂಸ್ಥೆಯು ಮೊದಲ ಬಾರಿಗೆ ದೇಶಿಯ ಮಾರುಕಟ್ಟೆಯ ಪ್ರವೇಶ ಪಡೆಯುತ್ತಿದ್ದು, ಈ ನಿಟ್ಟಿನಲ್ಲಿ ಬೃಹತ್ ಬಂಡವಾಳದೊಂದಿಗೆ ತನ್ನ ಮೊದಲ ಉತ್ಪಾದನಾ ಘಟಕವನ್ನು ಆರಂಭಗೊಳಿಸಿದೆ.

By Praveen

ಎಂಜಿ ಮೋಟಾರ್ ಸಂಸ್ಥೆಯು 2 ಸಾವಿರ ಕೋಟಿ ವೆಚ್ಚದಲ್ಲಿ ಮೊದಲ ಉತ್ಪಾದನಾ ಘಟಕವನ್ನು ಆರಂಭಗೊಳಿಸಿದ್ದು, ಇಂಡಸ್ಟ್ರಿಯಲ್ ಹಬ್ ಎಂದೇ ಖ್ಯಾತಿಗೊಂಡಿರುವ ಗುಜರಾತಿನಲ್ಲಿ ಮೊದಲ ಘಟಕಕ್ಕೆ ಚಾಲನೆ ನೀಡುವ ಮೂಲಕ ದೇಶಿಯ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡುತ್ತಿದೆ.

ಗುಜರಾತಿನಲ್ಲಿ ಆರಂಭಗೊಂಡ ಎಂಜಿ ಮೋಟಾರ್ ಮೊದಲ ಕಾರು ಉತ್ಪಾದನಾ ಘಟಕ

ಇನ್ನೊಂದು ವಿಶೇಷ ಅಂದ್ರೆ ಪ್ರಧಾನಿ ನರೇಂದ್ರ ಮೋದಿ ಕನಸಿನ 'ಮೇಕ್ ಇನ್ ಇಂಡಿಯಾ' ಮತ್ತು 'ಸ್ಕಿಲ್ ಇಂಡಿಯಾ' ಯೋಜನೆ ಅಡಿ ಎಂಜಿ ಮೋಟಾರ್ ಸಂಸ್ಥೆಯು ಇಷ್ಟೊಂದು ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆ ಮಾಡುತ್ತಿದ್ದು, ಮೊದಲ ಹಂತದಲ್ಲಿ 200ಕ್ಕೂ ಹೆಚ್ಚು ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ.

Recommended Video

2018 Suzuki Swift Sport Unveiled - DriveSpark
ಗುಜರಾತಿನಲ್ಲಿ ಆರಂಭಗೊಂಡ ಎಂಜಿ ಮೋಟಾರ್ ಮೊದಲ ಕಾರು ಉತ್ಪಾದನಾ ಘಟಕ

ಇದಲ್ಲದೇ ಹೊಸ ಉತ್ಪಾದನಾ ಘಟಕವು ಬರೋಬ್ಬರಿ 170 ಎಕರೆ ಪ್ರದೇಶದಲ್ಲಿ ತಲೆಎತ್ತಿದ್ದು, ನಿನ್ನೆಯಷ್ಟೇ ನಡೆದ ಆಯುಧ ಪೂಜಾ ವಿಶೇಷ ಹಿನ್ನೆಲೆ ಹೊಸ ಉತ್ಪಾದನಾ ಘಟಕಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ.

ಗುಜರಾತಿನಲ್ಲಿ ಆರಂಭಗೊಂಡ ಎಂಜಿ ಮೋಟಾರ್ ಮೊದಲ ಕಾರು ಉತ್ಪಾದನಾ ಘಟಕ

ಈ ಮೂಲಕ ಹೊಸ ಉತ್ಪಾದನಾ ಘಟಕದಲ್ಲಿ ಪ್ರತಿ ವರ್ಷ 80 ಸಾವಿರ ಕಾರುಗಳ ಉತ್ಪಾದನೆಯ ಗುರಿ ಹೊಂದಿರುವ ಎಂಜಿ ಮೋಟಾರ್ ಸಂಸ್ಥೆಯು, 2019ರ ಮೊದಲ ತ್ರೈಮಾಸಿಕ ವೇಳೆಗೆ ತನ್ನ ಹೊಸ ಉತ್ಪನ್ನಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುವ ನೀರಿಕ್ಷೆಯಲ್ಲಿದೆ.

ಗುಜರಾತಿನಲ್ಲಿ ಆರಂಭಗೊಂಡ ಎಂಜಿ ಮೋಟಾರ್ ಮೊದಲ ಕಾರು ಉತ್ಪಾದನಾ ಘಟಕ

ಇನ್ನು 1924ರಿಂದಲೇ ಎಂಜಿ ಮೋಟಾರ್ ಸಂಸ್ಥೆಯು ಆಟೋ ಉದ್ಯಮದಲ್ಲಿ ಕಾರ್ಯಚರಣೆ ನಡೆಸುತ್ತಿದ್ದು, ಇತ್ತೀಚೆಗೆ ಹಣಕಾಸಿನ ಸಮಸ್ಯೆಯನ್ನು ಎದುರಿಸಿತ್ತು. ಈ ಹಿನ್ನೆಲೆ ನಷ್ಟದ ಸುಳಿಯಲ್ಲಿದ್ದ ಸಂಸ್ಥೆಯನ್ನು ಚೀನಾ ಮೂಲದ ಎಸ್‌ಎಐಸಿ ಸಂಸ್ಧೆಯು ಸ್ಪಾಧೀನಪಡಿಸಿಕೊಂಡು ಭಾರತದಲ್ಲಿ ಹೊಸ ಕಾರು ಉತ್ಪನ್ನಗಳನ್ನು ಪರಿಚಯಿಸುತ್ತಿದೆ.

ಗುಜರಾತಿನಲ್ಲಿ ಆರಂಭಗೊಂಡ ಎಂಜಿ ಮೋಟಾರ್ ಮೊದಲ ಕಾರು ಉತ್ಪಾದನಾ ಘಟಕ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಕಳೆದ 6 ದಶಕಗಳ ಅವಧಿಯಲ್ಲಿ ಹಲವು ಏರುಪೇರುಗಳು ಕಂಡಿರುವ ಎಂಜಿ ಮೋಟಾರ್ ಸಂಸ್ಥೆಯು ಸದ್ಯ ಭಾರತದಲ್ಲಿ ತನ್ನ ಹೊಸ ಅಧ್ಯಾಯವನ್ನು ತೆರೆಯುತ್ತಿದ್ದು, ಮೊದಲ ಹಂತದಲ್ಲೇ ಹ್ಯಾಚ್‌ಬ್ಯಾಕ್, ಸೆಡಾನ್, ಎಸ್‌ಯುವಿ ಮಾದರಿಗಳನ್ನು ಬಿಡುಗಡೆಗೊಳಿಸುವ ತವಕದಲ್ಲಿದೆ.

Article Published On: Saturday, September 30, 2017, 12:29 [IST]
English summary
Read in Kannada about MG Motor Inaugurates Its First Manufacturing Plant In India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+