ಹ್ಯುಂಡೈ ಕ್ರೇಟಾ ಹಿಂದಿಕ್ಕುತ್ತಾ ಎಂಜಿ ಮೋಟಾರ್ಸ್ ನಿರ್ಮಾಣದ ಝೆಡ್ಎಸ್ ಎಸ್‌ಯುವಿ?

ಬ್ರಿಟನ್ ಮೂಲದ ಎಂಜಿ ಮೋಟಾರ್ ಸಂಸ್ಥೆಯು ಮೊದಲ ಬಾರಿಗೆ ದೇಶಿಯ ಮಾರುಕಟ್ಟೆಯ ಪ್ರವೇಶ ಪಡೆಯುತ್ತಿದ್ದು, ಮೊದಲ ಹಂತದಲ್ಲೇ ಜನಪ್ರಿಯ ಹ್ಯುಂಡೈ ಕ್ರೇಟಾ ಹಿಂದಿಕ್ಕಬಲ್ಲ ಎಸ್‌ಯುವಿ ಮಾದರಿಯೊಂದನ್ನು ಬಿಡುಗಡೆಗಾಗಿ ಸಿದ್ಧಗೊಂಡಿದೆ.

By Praveen

ಬ್ರಿಟನ್ ಮೂಲದ ಎಂಜಿ ಮೋಟಾರ್ ಸಂಸ್ಥೆಯು ಮೊದಲ ಬಾರಿಗೆ ದೇಶಿಯ ಮಾರುಕಟ್ಟೆಯ ಪ್ರವೇಶ ಪಡೆಯುತ್ತಿದ್ದು, ಮೊದಲ ಹಂತದಲ್ಲೇ ಜನಪ್ರಿಯ ಹ್ಯುಂಡೈ ಕ್ರೇಟಾ ಹಿಂದಿಕ್ಕಬಲ್ಲ ಎಸ್‌ಯುವಿ ಮಾದರಿಯೊಂದನ್ನು ಬಿಡುಗಡೆಗಾಗಿ ಸಿದ್ಧಗೊಳಿಸಿದೆ.

ಹ್ಯುಂಡೈ ಕ್ರೇಟಾ ಹಿಂದಿಕ್ಕುತ್ತಾ ಎಂಜಿ ಮೋಟಾರ್ಸ್ ನಿರ್ಮಾಣದ ಝೆಡ್ಎಸ್ ಎಸ್‌ಯುವಿ

ಕಳೆದ 2 ತಿಂಗಳ ಹಿಂದಷ್ಟೇ ಎಂಜಿ ಮೋಟಾರ್ಸ್ ಸಂಸ್ಥೆಯು ಗುಜರಾತ್‌ನಲ್ಲಿ 2 ಸಾವಿರ ಕೋಟಿ ಬಂಡವಾಳದೊಂದಿಗೆ ಮೊದಲ ಉತ್ಪಾದನಾ ಘಟಕವನ್ನು ಆರಂಭಗೊಳಿಸಿದ್ದು, ಇದೀಗ ಹೊಸ ಕಾರು ಉತ್ಪನ್ನಗಳ ನಿರ್ಮಾಣ ಕಾರ್ಯವನ್ನು ತೀವ್ರಗೊಳಿಸಿದೆ.

ಹ್ಯುಂಡೈ ಕ್ರೇಟಾ ಹಿಂದಿಕ್ಕುತ್ತಾ ಎಂಜಿ ಮೋಟಾರ್ಸ್ ನಿರ್ಮಾಣದ ಝೆಡ್ಎಸ್ ಎಸ್‌ಯುವಿ

ಈ ಮೂಲಕ ಮೊದಲ ಹಂತದಲ್ಲೇ ವಿನೂತನ ಶೈಲಿಯ ಎಸ್‌ಯುವಿಯೊಂದನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಉತ್ಸುಕವಾಗಿರುವ ಎಂಜಿ ಮೋಟಾರ್ಸ್, ಜನಪ್ರಿಯ ಹ್ಯುಂಡೈ ಕ್ರೇಟಾ ಎಸ್‌ಯುವಿ ಪ್ರಬಲ ಪ್ರತಿ ಸ್ಪರ್ಧಿಯಾಗುವ ನೀರಿಕ್ಷೆಯಿದೆ.

ಹ್ಯುಂಡೈ ಕ್ರೇಟಾ ಹಿಂದಿಕ್ಕುತ್ತಾ ಎಂಜಿ ಮೋಟಾರ್ಸ್ ನಿರ್ಮಾಣದ ಝೆಡ್ಎಸ್ ಎಸ್‌ಯುವಿ

ಇನ್ನು ಎಂಜಿ ಮೋಟಾರ್ಸ್ ನಿರ್ಮಾಣ ಮಾಡಿರುವ ಝೆಡ್‌ಎಸ್ ಎಸ್‌ಯುವಿ ಹಲವು ವಿಶೇಷತೆಗಳನ್ನು ಹೊಂದಿದ್ದು, ಕ್ಲಾಸ್ ಲೀಡಿಂಗ್ ಸೌಲಭ್ಯಗಳನ್ನು ಹೊಂದಿರಲಿದೆ. ಹೀಗಾಗಿ ಮಧ್ಯಮ ಗಾತ್ರದ ಎಸ್‌ಯುವಿಯನ್ನು ಇಷ್ಟಪಡುವ ಗ್ರಾಹಕರಿಗೆ ಇದೊಂದು ಅತ್ಯುತ್ತಮ ಆಯ್ಕೆಯಾಗಲಿದೆ ಎನ್ನಬಹುದು.

Recommended Video

Honda CR-V Crashes Into A Wall
ಹ್ಯುಂಡೈ ಕ್ರೇಟಾ ಹಿಂದಿಕ್ಕುತ್ತಾ ಎಂಜಿ ಮೋಟಾರ್ಸ್ ನಿರ್ಮಾಣದ ಝೆಡ್ಎಸ್ ಎಸ್‌ಯುವಿ

ಎಂಜಿನ್ ಸಾಮರ್ಥ್ಯ

ಸದ್ಯ ಯುಕೆನಲ್ಲಿ ಮಾರಾಟವಾಗುತ್ತಿರುವ ಝೆಡ್ಎಸ್ ಆವೃತ್ತಿಗಳು ಪೆಟ್ರೋಲ್ ಎಂಜಿನ್‌ನಲ್ಲೇ ಎರಡು ಆಯ್ಕೆಗಳನ್ನು ಹೊಂದಿದ್ದು, 1.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ನ್ಯಾಚುರಲ್ ಆಸ್ಪರೆಟೆಡ್ ಪೆಟ್ರೋಲ್ ಎಂಜಿನ್ ಅಳವಡಿಕೆ ಇದೆ.

ಹ್ಯುಂಡೈ ಕ್ರೇಟಾ ಹಿಂದಿಕ್ಕುತ್ತಾ ಎಂಜಿ ಮೋಟಾರ್ಸ್ ನಿರ್ಮಾಣದ ಝೆಡ್ಎಸ್ ಎಸ್‌ಯುವಿ

ಹೀಗಾಗಿ ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಝೆಡ್ಎಸ್ ಮಾದರಿಯಲ್ಲೂ ಮೇಲಿನ ರೀತಿಯ ಎಂಜಿನ್ ಒದಗಿಸಲಾಗಿದ್ದು, 1.0 -ಲೀಟರ್ ಮಾದರಿಯಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹಾಗೂ 1.5-ಲೀಟರ್ ಆವೃತ್ತಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿರಲಿವೆ.

ಹ್ಯುಂಡೈ ಕ್ರೇಟಾ ಹಿಂದಿಕ್ಕುತ್ತಾ ಎಂಜಿ ಮೋಟಾರ್ಸ್ ನಿರ್ಮಾಣದ ಝೆಡ್ಎಸ್ ಎಸ್‌ಯುವಿ

ಇದರೊಂದಿಗೆ ಸ್ಪೋರ್ಟ್ ಮಾದರಿಯ ಲಾರ್ಜ್ ಗ್ರೀಲ್, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಎಲ್‌ಇಡಿ ಆ್ಯಂಡ್ ಡಿಆರ್‌ಎಲ್ಎಸ್ ಸ್ಕಿಡ್ ಪ್ಲೆಟ್, ರೂಫ್ ಮೌಂಟೆಂಡ್ ಸ್ಪ್ಲಾಲರ್, ಡ್ಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್ ಮತ್ತು 17-ಇಂಚಿನ ಡೈಮೆಂಡ್ ಕಟ್ ಅಲಾಯ್ ವೀಲ್ಹ್‌ಗಳನ್ನು ಪಡೆದುಕೊಂಡಿದೆ.

ಹ್ಯುಂಡೈ ಕ್ರೇಟಾ ಹಿಂದಿಕ್ಕುತ್ತಾ ಎಂಜಿ ಮೋಟಾರ್ಸ್ ನಿರ್ಮಾಣದ ಝೆಡ್ಎಸ್ ಎಸ್‌ಯುವಿ

ಬೆಲೆ(ಅಂದಾಜು)

ಕಾರುಗಳ ನಿರ್ಮಾಣದಲ್ಲಿ ಗುಣಮಟ್ಟ ಕಾಯ್ದುಕೊಂಡಿರುವ ಎಂಜಿ ಮೋಟಾರ್ಸ್ ಹ್ಯುಂಡೈ ಕ್ರೇಟಾ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆ ಪ್ರವೇಶಿಸುತ್ತಿದೆ. ಹೀಗಾಗಿ ಹೊಸ ಕಾರಿನ ಬೆಲೆಯನ್ನು ರೂ.12 ಲಕ್ಷ ದಿಂದ ರೂ.16 ಲಕ್ಷದವರೆಗೆ ನಿಗದಿ ಮಾಡಬಹುದಾದ ನೀರಿಕ್ಷೆಯಿದೆ.

Trending DriveSpark YouTube Videos

Subscribe To DriveSpark Kannada YouTube Channel - Click Here

More from DriveSpark

Article Published On: Thursday, December 21, 2017, 16:57 [IST]
English summary
Read in Kannada about MG Motors’ Creta Rival Is Coming To India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+