ಮಿನಿ ಜೆಸಿಡಬ್ಲ್ಯು ಪ್ರೊ ಆವೃತ್ತಿ ಬಿಡುಗಡೆ ಮಾಡಿದ ಬಿಎಂಡಬ್ಲ್ಯು
ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾದ ಬಿಎಂಡಬ್ಲ್ಯು ಸಂಸ್ಥೆಯು ನೂತನ ಮಾದರಿಯ ಮಿನಿ ಜೆಸಿಡಬ್ಲ್ಯು ಪ್ರೊ ಆವೃತ್ತಿಯನ್ನು ದೇಶದಲ್ಲಿ ಬಿಡುಗಡೆಗೊಳಿಸಿದ್ದು, ಹೊಸ ಕಾರಿನ ತಾಂತ್ರಿಕ ಅಂಶಗಳ ಕುರಿತಾದ ಮಾಹಿತಿ ಇಲ್ಲಿದೆ.
ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾದ ಬಿಎಂಡಬ್ಲ್ಯು ಸಂಸ್ಥೆಯು ನೂತನ ಮಾದರಿಯ ಮಿನಿ ಜೆಸಿಡಬ್ಲ್ಯು ಪ್ರೊ ಆವೃತ್ತಿಯನ್ನು ದೇಶದಲ್ಲಿ ಬಿಡುಗಡೆಗೊಳಿಸಿದ್ದು, ಹೊಸ ಕಾರಿನ ತಾಂತ್ರಿಕ ಅಂಶಗಳ ಕುರಿತಾದ ಮಾಹಿತಿ ಇಲ್ಲಿದೆ.

ಐಷಾರಾಮಿ ವೈಶಿಷ್ಟ್ಯತೆಗಳ ಹೊಂದಿರುವ ಹ್ಯಾಚ್‌ಬ್ಯಾಕ್ ಬಿಎಂಡಬ್ಲ್ಯು ಮಿನಿ ಜೆಸಿಡಬ್ಲ್ಯು ಪ್ರೊ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದ್ದು, ಹೊಸ ಕಾರಿನ ಬೆಲೆಯನ್ನು ರೂ. 43.9 ಲಕ್ಷಕ್ಕೆ (ಎಕ್ಸ್ ಶೋ ರೂಂ) ನಿಗದಿಗೊಳಿಸಲಾಗಿದೆ.

ಜೊತೆಗೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಬಣ್ಣಗಳಲ್ಲಿ ಹೊಸ ಕಾರನ್ನು ಅಭಿವೃದ್ಧಿಗೊಳಿಸಲಾಗಿದ್ದು, ಮಿಡ್ ನೈಟ್ ಬ್ಲ್ಯಾಕ್ ಮತ್ತು ಬ್ರಿಟಿಷ್ ರೇಸಿಂಗ್ ಗ್ರೀನ್ ವಿನ್ಯಾಸದಲ್ಲಿ ಮಿನಿ ಜೆಸಿಡಬ್ಲ್ಯು ಪ್ರೊ ಆವೃತ್ತಿ ಲಭ್ಯವಿರಲಿದೆ.
Recommended Video


ಕಂಪ್ಲೀಟ್ ಬಿಲ್ಟ್ ಅಪ್ (ಸಿಬಿಯು) ಸಿದ್ಧಾಂತದ ಮುಖಾಂತರ ಬಿಎಂಡಬ್ಲ್ಯು ಮಿನಿ ಜೆಸಿಡಬ್ಲ್ಯು ಪ್ರೊ ಆವೃತ್ತಿಯು ದೇಶವನ್ನು ತಲುಪಲಿದ್ದು, ಇದು ಮೂರು ಡೋರ್‌ಗಳ ಮಿನಿ ಕೂಪರ್ ಎಸ್ ಜೊತೆಗೆ ಜಾನ್ ಕೂಪರ್ ವರ್ಕ್ಸ್ ಟ್ಯೂನಿಂಗ್ ಕಿಟ್‌ನ ಸಂಯೋಜನೆಯಾಗಲಿದೆ.

ಅಂದರೆ ಜಾನ್ ಕೂಪರ್ ವರ್ಕ್ಸ್‌ನ ನೈಜ ಆಕ್ಸೆಸರಿಗಳ ಜೋಡಣೆಯಾಗಲಿದ್ದು, ಜಾನ್ ಕೂಪರ್ ವರ್ಕ್ಸ್ ಟ್ಯೂನಿಂಗ್ ಕಿಟ್ ಕಾರಿನ ನಿರ್ವಹಣೆಯನ್ನು ಉತ್ತೇಜಿಸಲು ನೇರವಾಗಲಿರುವುದು ಮಿನಿ ಜೆಸಿಡಬ್ಲ್ಯು ಪ್ರೊ ಆವೃತ್ತಿಯ ವಿಶೇಷತೆ ಎನ್ನಬಹುದು.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಐಷಾರಾಮಿ ಸಣ್ಣ ಕಾರು ಮಾದರಿಗಳಲ್ಲಿ ಮಿನಿ ಕೂಪರ್ ಈಗಾಗಲೇ ಸಾಕಷ್ಟು ಜನಪ್ರಿಯತೆ ಪಡೆದಿದ್ದು, ಜೆಸಿಡಬ್ಲ್ಯು ಪ್ರೊ ಆವೃತ್ತಿಯ ಮೂಲಕ ಮತ್ತಷ್ಟು ಜನಪ್ರಿಯತೆ ಸಾಧಿಸುವ ತವಕದಲ್ಲಿದೆ.


Click it and Unblock the Notifications