ವಿ6 ಎಂಜಿನ್ ಜೊತೆ ಅಭಿವದ್ಧಿಯಾಗಿದೆ 2018ರ ಆಡಿ ಎ8 ಕಾರು..!

Written By:

ಐಷಾರಾಮಿ ಸೆಡಾನ್ ಮಾದರಿಗಳಲ್ಲಿ ಅತಿಹೆಚ್ಚು ಬೇಡಿಕೆ ಹೊಂದಿರುವ ಆಡಿ ಸಂಸ್ಥೆಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಎ8 ಕಾರನ್ನು ಬಿಡುಗಡೆಗೊಳಿಸುತ್ತಿದ್ದು, ಹೊಸ ಮಾದರಿಯ ವಿ8 ಕಾರಿನ ವೈಶಿಷ್ಟ್ಯತೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಜರ್ಮನ್ ಮೂಲದ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಯಾದ ಆಡಿ ಪ್ರಸ್ತುತ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಎ8 ಕಾರನ್ನು ಬಿಡುಗಡೆ ಮಾಡುತ್ತಿದ್ದು, ನಾಲ್ಕನೇ ತಲೆಮಾರಿನ ಸುಧಾರಿತ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿಗೊಂಡಿರುವುದೇ ಇದರ ವಿಶೇಷತೆಯಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಮುಂಬರುವ ಅಕ್ಟೋಬರ್ ಅಂತ್ಯಕ್ಕೆ ಎ8 ಕಾರು ಬಿಡುಗಡೆಯಾಗಲಿದ್ದು, ತದನಂತರವಷ್ಟೇ 2018ಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಬಗ್ಗೆ ಸುಳಿವು ನೀಡಲಾಗಿದೆ.

ಐಷಾರಾಮಿ ಒಳ ಹಾಗೂ ಹೊರ ವಿನ್ಯಾಸಗಳನ್ನು ಹೊಂದಿರುವ ಎ8 ಕಾರು ಮಾದರಿಯೂ ವಿ6 ಎಂಜಿನ್‌ನೊಂದಿಗೆ ಅಭಿವೃದ್ದಿ ಹೊಂದಿದ್ದು, ಪೆಟ್ರೋಲ್ ಮತ್ತು ಡಿಸೇಲ್ ಎರಡು ಆವೃತ್ತಿಯಲ್ಲೂ ಖರೀದಿಗೆ ಲಭ್ಯವಿರಲಿದೆ.

ಪೆಟ್ರೋಲ್ ಆವೃತ್ತಿಯು 3.0-ಲೀಟರ್ ಎಂಜಿನ್ ಹೊಂದಿದ್ದರೇ ಡೀಸೆಲ್ ಆವೃತ್ತಿ ಕೂಡಾ 3.0-ಲೀಟರ್ ಎಂಜಿನ್ ಪಡೆದುಕೊಂಡಿದ್ದು, ಇದರ ಜೊತೆಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ವ್ಯವಸ್ಥೆಯನ್ನು ಇರಿಸಲಾಗಿದೆ.

ಮೊದಲ ತಲೆಮಾರಿನ ಆಡಿ ಕಾರಿಗೂ ಸದ್ಯದ ಎ8 ಸೆಡಾನ್ ಮಾದರಿಯ ಕಾರು ಆವೃತ್ತಿಗೂ 50 ಪಟ್ಟು ಹೆಚ್ಚು ಸುಧಾರಿತ ತಂತ್ರಜ್ಞಾನ ವ್ಯವಸ್ಥೆಯೊಂದಿಗೆ ಸಿದ್ಧಗೊಂಡಿದ್ದು, ಪೆಟ್ರೋಲ್ ಆವೃತ್ತಿಯು 335ಬಿಚ್‌ಪಿ ಹಾಗೂ ಡಿಸೇಲ್ ಆವೃತ್ತಿ 264 ಬಿಎಚ್‌ಪಿ ಉತ್ಪಾದಿಸುವ ಶಕ್ತಿ ಹೊಂದಿವೆ.

ಹೀಗಾಗಿಯೇ ಹಿಂದಿನ ಮಾದರಿಗಳಿಂತಲೂ ಹೆಚ್ಚಿನ ದರಕ್ಕೆ ಮಾರಾಟ ನೀರಿಕ್ಷೆಯಿದ್ದು, ಎ8 ಕಾರಿನ ಬೆಲೆ ಕೆಲವು ಮಾಹಿತಿ ಪ್ರಕಾರ 1.20 ಕೋಟಿಗೂ ಅಧಿಕ ಇರಬಹುದೆಂದು ಅಂದಾಜಿಸಲಾಗಿದೆ.

Read more on ಆಡಿ audi
English summary
Read in Kannada about New Audi A8 Revealed.
Story first published: Wednesday, July 12, 2017, 12:48 [IST]
Please Wait while comments are loading...

Latest Photos