ಬಿಡುಗಡೆಯಾಗಲಿರುವ ಫೋರ್ಡ್ ಇಕೊಸ್ಪೋರ್ಟ್ ಕಾರಿನ ಮಾಹಿತಿ ಇಲ್ಲಿದೆ

ಫೋರ್ಡ್ ಇಂಡಿಯಾ ಸಂಸ್ಥೆಯು 2013ರಲ್ಲಿ ಮೊದಲ ಬಾರಿಗೆ ಇಕೊಸ್ಪೋರ್ಟ್ ಕಾರನ್ನು ಪ್ರಾರಂಭಿಸಿದ್ದು, ಒಂದು ವರ್ಗದ ಜನಕ್ಕೆ ಅಚ್ಚು ಮೆಚ್ಚಿನ ಕಾರಾಗಿರುವ ಈ ಇಕೊಸ್ಪೋರ್ಟ್‌ನ ಫೇಸ್ ಲಿಫ್ಟ್ ಆವೃತಿಯನ್ನು ಭಾರತದಲ್ಲಿ ಅನಾವರಣಗೊಳಿಸಲಿದೆ.

By Girish

ಫೋರ್ಡ್ ಇಂಡಿಯಾ ಸಂಸ್ಥೆಯು 2013ರಲ್ಲಿ ಮೊದಲ ಬಾರಿಗೆ ಇಕೊಸ್ಪೋರ್ಟ್ ಕಾರನ್ನು ಪ್ರಾರಂಭಿಸಿದ್ದು, ಒಂದು ವರ್ಗದ ಜನಕ್ಕೆ ಅಚ್ಚು ಮೆಚ್ಚಿನ ಕಾರಾಗಿರುವ ಈ ಇಕೊಸ್ಪೋರ್ಟ್‌ನ ಫೇಸ್ ಲಿಫ್ಟ್ ಆವೃತಿಯನ್ನು ಭಾರತದಲ್ಲಿ ಅನಾವರಣಗೊಳಿಸಲಿದೆ.

ಬಿಡುಗಡೆಯಾಗಲಿರುವ ಫೋರ್ಡ್ ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಕಾರಿನ ಮಾಹಿತಿ ಇಲ್ಲಿದೆ

ಅಮೆರಿಕಾದ ಕಾರು ತಯಾರಕ ಕಂಪನಿಯು ಸುಮಾರು ನಾಲ್ಕು ವರ್ಷಗಳ ನಂತರ ಭಾರತದಲ್ಲಿ ಇಕೋಸ್ಪೋರ್ಟ್ ಕಾರಿನ ಅಪ್ಡೇಟ್ ಫೇಸ್ ಲಿಫ್ಟ್ ಆವೃತಿಯನ್ನು ಪರಿಚಯಿಸುತ್ತಿದ್ದು, ಈ ಫೇಸ್ ಲಿಫ್ಟ್ ಕಾರು ಸಾಮಾನ್ಯವಾಗಿ ಬಾಹ್ಯ ಮತ್ತು ಒಳಭಾಗದಲ್ಲಿ ಕಾಸ್ಮೆಟಿಕ್ ನವೀಕರಣಗಳನ್ನು ಪಡೆದುಕೊಳ್ಳಲಿದೆ.

ಬಿಡುಗಡೆಯಾಗಲಿರುವ ಫೋರ್ಡ್ ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಕಾರಿನ ಮಾಹಿತಿ ಇಲ್ಲಿದೆ

ಆದಾಗ್ಯೂ, ನಿರೀಕ್ಷಿತ ಕಾಸ್ಮೆಟಿಕ್ ಬದಲಾವಣೆಗಳ ಹೊರತಾಗಿ ಹೊಸ ಫೋರ್ಡ್ ಇಕೊಸ್ಪೋರ್ಟ್ ಕಾರು ಯಾವೆಲ್ಲ ಅಂಶಗಳನ್ನು ಪಡೆದುಕೊಳ್ಳಲಿದೆ ಎಂಬುದರ ಕಂಪ್ಲೀಟ್ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ. ಮುಂದೆ ಓದಿ.

ಬಿಡುಗಡೆಯಾಗಲಿರುವ ಫೋರ್ಡ್ ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಕಾರಿನ ಮಾಹಿತಿ ಇಲ್ಲಿದೆ

ಮಾರುತಿ ಸಂಸ್ಥೆಯ ಬ್ರೆಝ ಮತ್ತು ಟಾಟಾ ನೆಕ್ಸನ್ ಕಾರುಗಳು ಭಾರತದಲ್ಲಿ ಈಗಾಗಲೇ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದು, ಫೋರ್ಡ್ ತನ್ನ ಪ್ರತಿಸ್ಪರ್ಧಿಗಳನ್ನು ಎದುರಿಸಲು ಇಕೊಸ್ಪೋರ್ಟ್ ಕಾರನ್ನು ಅಪ್ಡೇಟ್ ಮಾಡುವ ಕೆಲಸಕ್ಕೆ ಮುಂದಾಗಿದೆ.

ಬಿಡುಗಡೆಯಾಗಲಿರುವ ಫೋರ್ಡ್ ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಕಾರಿನ ಮಾಹಿತಿ ಇಲ್ಲಿದೆ

ಹೊಸ ಫೋರ್ಡ್ ಇಕೊಸ್ಪೋರ್ಟ್ ಕಾರು ಹಿಂದಿನ ಮಾದರಿಯು ಮೂರು ವಿಭಿನ್ನ ಎಂಜಿನ್‌ಗಳೊಂದಿಗೆ ನವೀಕರಿಸಿದ ಹೊಸ ಪೆಟ್ರೋಲ್ ಇಂಜಿನ್ ಆಯ್ಕೆಯನ್ನು ಪಡೆಯಲಿದೆ. ಈ ಹೊಸ ಕಾರು 1.0-ಲೀಟರ್ ಇಕೊಬೂಸ್ಟ್ ಪೆಟ್ರೋಲ್, 1.5 ಲೀಟರ್ ಸ್ವಾಭಾವಿಕವಾಗಿ ಆಸ್ಪಿರಿಟೆಡ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸಲ್ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ.

ಬಿಡುಗಡೆಯಾಗಲಿರುವ ಫೋರ್ಡ್ ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಕಾರಿನ ಮಾಹಿತಿ ಇಲ್ಲಿದೆ

ಹಳೆಯ 1.5-ಲೀಟರ್ ಪೆಟ್ರೋಲ್ ಇಂಜಿನ್‌ಗಳಾದ 110 ಬಿಎಚ್‌ಪಿ ಮತ್ತು 140 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ ಹಾಗು ಹೊಸ 1.5-ಲೀಟರ್ ಯುನಿಟ್ 123 ಬಿಎಚ್‌ಪಿ ಮತ್ತು 150 ಎನ್ಎಂ ಟಾರ್ಕ್ ಶಕ್ತಿ ಉತ್ಪಾದನೆ ಮಾಡುತ್ತವೆ.

ಬಿಡುಗಡೆಯಾಗಲಿರುವ ಫೋರ್ಡ್ ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಕಾರಿನ ಮಾಹಿತಿ ಇಲ್ಲಿದೆ

ಹೊಸ ಇಕೊಸ್ಪೋರ್ಟ್ ಎಂಜಿನ್ ಹಳೆಯ ಆವೃತಿಗಳಿಗೆ ಹೋಲಿಸಿದರೆ, 13 ಬಿಎಚ್‌ಪಿ ಮತ್ತು 10 ಎನ್ಎಮ್ ಟಾರ್ಕ್ ಹೆಚ್ಚಿಗೆ ಶಕ್ತಿಯನ್ನು ಉತ್ಪಾದಿಸುತ್ತದೆ. ಆದರೆ ಹಳೆಯ ಇಂಜಿನ್‌ಗೆ ಹೋಲಿಸಿದರೆ ಶೇಕಡಾ 7% ಹೆಚ್ಚು ಇಂಧನ ದಕ್ಷತೆಯನ್ನು ನೀಡುತ್ತದೆ.

ಬಿಡುಗಡೆಯಾಗಲಿರುವ ಫೋರ್ಡ್ ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಕಾರಿನ ಮಾಹಿತಿ ಇಲ್ಲಿದೆ

ಹೊಸ ಫೋರ್ಡ್ ಇಕೊಸ್ಪೋರ್ಟ್ ಪೆಟ್ರೋಲ್ ಇಂಜಿನ್, ಹಿಂದಿನ ಮಾದರಿಯಂತೆ ಮಾನ್ಯುಯಲ್ ಮತ್ತು ಸ್ವಯಂಚಾಲಿತ ಗೇರ್‌ಬಾಕ್ಸ್ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ. ಹಿಂದಿನ ಇಕೊಸ್ಪೋರ್ಟ್ 16 ಇಂಚಿನ ಮಿಶ್ರಲೋಹದ ಚಕ್ರಗಳು ಪಡೆದುಕೊಂಡಿತ್ತು. ಆದರೆ, ಹೊಸ ಮಾದರಿಯು 17 ಇಂಚಿನ ಮಿಶ್ರಲೋಹದ ಚಕ್ರಗಳೊಂದಿಗೆ ಬರುತ್ತಿದೆ.

ಬಿಡುಗಡೆಯಾಗಲಿರುವ ಫೋರ್ಡ್ ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಕಾರಿನ ಮಾಹಿತಿ ಇಲ್ಲಿದೆ

ಫೋರ್ಡ್ ಹೊಸ ಇಕೊಸ್ಪೋರ್ಟ್ ಕಾರಿನಲ್ಲಿ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್(ಟಿಪಿಎಂಎಸ್) ಅಳವಡಿಸಿದೆ. ಇದು ಟೈರ್ ಒತ್ತಡವನ್ನು ಎಲ್ಲಾ ಸಮಯದಲ್ಲೂ ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತದೆ. ಟಿಪಿಎಂಎಸ್ ಆಯ್ಕೆಯು ಕೇವಲ ಟಾಪ್-ವೆರಿಯಂಟ್ ಟೈಟಾನಿಯಂ+ ಮಾದರಿಯಲ್ಲಿ ಮಾತ್ರ ಲಭ್ಯವಿರುತ್ತದೆ.

Most Read Articles

Kannada
Read more on ford ಫೋರ್ಡ್
English summary
Ford launched the EcoSport in India in 2013, and now the American carmaker will introduce the facelifted EcoSport in India after nearly four years.
Story first published: Monday, October 30, 2017, 19:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X