ಚೆನ್ನೈನಲ್ಲಿ ಸ್ಯಾಂಟ್ರೊ ಕಾರಿನ ಇಂಜಿನ್ ಉತ್ಪಾದನೆಯನ್ನು ಪ್ರಾರಂಭಿಸಿದ ಹ್ಯುಂಡೈ

Written By:

ಹ್ಯುಂಡೈ ಕಂಪನಿಯ ಜನಪ್ರಿಯ ಹ್ಯಾಚ್‌ಬ್ಯಾಕ್ ಸ್ಯಾಂಟ್ರೊ ಕಾರು ಹೊಸ ಅವತಾರದಲ್ಲಿ ಮತ್ತೆ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂಬ ಮಾಹಿತಿಯನ್ನು ನಾವೀಗಾಗಲೇ ನೀಡಿದ್ದೇವೆ. ಈ ವಿಷಯವನ್ನು ಖಾತರಿಪಡಿಸಲು ಈ ಹೊಸ ವಿಚಾರ.

ಚೆನ್ನೈನಲ್ಲಿ ಸ್ಯಾಂಟ್ರೊ ಕಾರಿನ ಇಂಜಿನ್ ಉತ್ಪಾದನೆಯನ್ನು ಪ್ರಾರಂಭಿಸಿದ ಹ್ಯುಂಡೈ

ಪ್ರಸಿದ್ಧ ವಾಹನ ತಯಾರಕ ಕಂಪೆನಿಯಾದ ಹ್ಯುಂಡೈ ತನ್ನ ಹಳೆ ಹುಲಿ ಸ್ಯಾಂಟ್ರೊ ಕಾರನ್ನು ಮತ್ತೆ ರಸ್ತೆಗಿಳಿಸಲಿದೆ. ಈ ಹೊಸ ಕಾರಿನ ಸ್ಪೈ ಚಿತ್ರಗಳೂ ಸಹ ಇತ್ತೀಚಿಗೆ ಬೆಡುಗಡೆಗೊಂಡಿತ್ತು ಹಾಗು ಆಂತರಿಕವಾಗಿ AH2 ಸಂಕೇತನಾಮ ಪಡೆದ ಹೊಸ ಸಾಂಟ್ರೊ ಕಾರು ಮುಂದಿನ ವರ್ಷದ ದ್ವಿತೀಯಾರ್ಧದಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಚೆನ್ನೈನಲ್ಲಿ ಸ್ಯಾಂಟ್ರೊ ಕಾರಿನ ಇಂಜಿನ್ ಉತ್ಪಾದನೆಯನ್ನು ಪ್ರಾರಂಭಿಸಿದ ಹ್ಯುಂಡೈ

ಇದೆಲ್ಲಾ ಹೊರತಾಗಿ ಈ ಹೊಸ ಕಾರಿನ ಎಂಜಿನ್ ತಯಾರಿಕೆಯನ್ನು ಹ್ಯುಂಡೈ ಕಂಪನಿಯ ಚೆನ್ನೈ ಘಟಕದಲ್ಲಿ ಈಗಾಗಲೇ ಪ್ರಾರಂಭಿಸಿದೆ. ಫೆಬ್ರವರಿಯಲ್ಲಿ ನೆಡೆಯುವ 2018ರ ಆಟೋ ಎಕ್ಸ್‌ಪೋದಲ್ಲಿ ಪರಿಚಯಿಸುವ ನಿರೀಕ್ಷೆ ಇದೆ.

ಚೆನ್ನೈನಲ್ಲಿ ಸ್ಯಾಂಟ್ರೊ ಕಾರಿನ ಇಂಜಿನ್ ಉತ್ಪಾದನೆಯನ್ನು ಪ್ರಾರಂಭಿಸಿದ ಹ್ಯುಂಡೈ

ಮಾರುಕಟ್ಟೆಯಲ್ಲಿ ಇಯಾನ್ ಮತ್ತು ಗ್ರ್ಯಾಂಡ್ ಐ10 ಕಾರುಗಳ ನಡುವೆ ನೂತನ ಹ್ಯುಂಡೈ ಸಾಂಟ್ರೊ ಕಾರು ಸ್ಥಾನ ಪಡೆಯಲಿದೆ. ದಕ್ಷಿಣ ಕೊರಿಯಾದ ವಾಹನ ತಯಾರಕ ಸಂಸ್ಥೆ ಸ್ಯಾಂಟ್ರೊ ಮೋನಿಕರ್ ಕಾರನ್ನು ಉಳಿಸಿಕೊಳ್ಳಲಿದೆ ಎಂದು ವರದಿ ಇದ್ದು, ಭಾರತದಲ್ಲಿ ಈ ಕಾರು ಹ್ಯುಂಡೈ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿಸುತ್ತದೆ ಎನ್ನಬಹುದು.

ಚೆನ್ನೈನಲ್ಲಿ ಸ್ಯಾಂಟ್ರೊ ಕಾರಿನ ಇಂಜಿನ್ ಉತ್ಪಾದನೆಯನ್ನು ಪ್ರಾರಂಭಿಸಿದ ಹ್ಯುಂಡೈ

ಭಾರತದ ಮಾರುಕಟ್ಟೆಯಲ್ಲಿ, 1999ರಲ್ಲಿ ಬಿಡುಗಡೆಯಾದಾಗಿನಿಂದ ಉತ್ತಮವಾಗಿ ಮಾರಾಟವಾಗಿರುವ ಸ್ಯಾಂಟ್ರೊ ಮತ್ತು ಸ್ಯಾಂಟ್ರೊ ಕ್ಸಿಂಗ್ ಕಾರುಗಳ ಹೊಸ ಪೀಳಿಗೆಯ ಕಾರಿನ ಬಿಡುಗಡೆ ಖಚಿತವಾಗಿದ್ದರೂ ಸಹ, ಅಧಿಕೃತವಾಗಿ ಹ್ಯುಂಡೈ ಅಧಿಕಾರಿಗಳು ಹೆಚ್ಚಿನ ಮಾಹಿತಿಯನ್ನು ದೃಢೀಕರಿಸಬೇಕಾಗಿದೆ.

ಚೆನ್ನೈನಲ್ಲಿ ಸ್ಯಾಂಟ್ರೊ ಕಾರಿನ ಇಂಜಿನ್ ಉತ್ಪಾದನೆಯನ್ನು ಪ್ರಾರಂಭಿಸಿದ ಹ್ಯುಂಡೈ

ಹೊಸ ಹ್ಯುಂಡೈ ಸ್ಯಾಂಟ್ರೊ ಕಾರು, ಭಾರತದಲ್ಲಿ 2018ರಿಂದ ಜಾರಿಗೆ ತರಲಾಗುವ ಮುಂಭಾಗದಲ್ಲಿ ಏರ್ ಬ್ಯಾಗ್‌ಗಳು ಮತ್ತು ಎಬಿಎಸ್‌ಗಳಂತಹ ಮೂಲಭೂತ ಸುರಕ್ಷತಾ ಸಲಕರಣೆಗಳನ್ನು ಪಡೆಯಲಿದೆ.

ಚೆನ್ನೈನಲ್ಲಿ ಸ್ಯಾಂಟ್ರೊ ಕಾರಿನ ಇಂಜಿನ್ ಉತ್ಪಾದನೆಯನ್ನು ಪ್ರಾರಂಭಿಸಿದ ಹ್ಯುಂಡೈ

ಹಿಂದೆ, ಮಾರುತಿ ಸುಜುಕಿಯಂತಹ ಕಂಪನಿಯ ಕಾರುಗಳಿಗೂ ಸಹ ಟಕ್ಕರ್ ಕೊಡುವಷ್ಟರ ಮಟ್ಟಿಗೆ ಯಶಸ್ವಿಯಾಗಿದ್ದ ಸ್ಯಾಂಟ್ರೊ ರಿಫ್ರೆಶ್ ಆಗಿರುವ ವಿನ್ಯಾಸ ಮತ್ತು ಎಎಂಟಿ ಗೇರ್ ಬಾಕ್ಸ್‌ನೊಂದಿಗೆ ಪುನರಾವರ್ತಿಸಲಿದೆ ಕಾದು ನೋಡಬೇಕಾಗಿದೆ.

ಚೆನ್ನೈನಲ್ಲಿ ಸ್ಯಾಂಟ್ರೊ ಕಾರಿನ ಇಂಜಿನ್ ಉತ್ಪಾದನೆಯನ್ನು ಪ್ರಾರಂಭಿಸಿದ ಹ್ಯುಂಡೈ

ರೆನಾಲ್ಟ್ ಕ್ವಿಡ್ 1.0 ಮತ್ತು ಟಾಟಾ ಟಿಯಾಗೊನಂತಹ ಪ್ರತಿಸ್ಪರ್ಧಿಗಳೊಂದಿಗೆ ಪೈಪೋಟಿ ನೆಡೆಸಲು ಈ ಕಾರಿನ ಬೆಲೆಯೂ ಸಹ ಪ್ರಮುಖ ಪಾತ್ರ ವಹಿಸಲಿದೆ ಎನ್ನಬಹುದು.

English summary
The manufacturing of the engine for the new Santro has commenced at Hyundai's Chennai plant.
Story first published: Wednesday, November 22, 2017, 20:14 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark