ಮುಂದಿನ ತಿಂಗಳು ಬಿಡುಗಡೆಯಾಗಲಿರುವ ನ್ಯೂ ಜನರೇಷನ್ ಹ್ಯುಂಡೈ ವೆರ್ನಾ ಬುಕ್ಕಿಂಗ್ ಶುರು

ದಕ್ಷಿಣ ಕೊರಿಯಾದ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಯಾದ ಹ್ಯುಂಡೈ ಇಂಡಿಯಾ ನ್ಯೂ ಜನರೇಷನ್ ವೆರ್ನಾ ಕಾರನ್ನು ಬಿಡುಗಡೆ ಮಾಡುತ್ತಿದ್ದು, ಈ ಹಿನ್ನೆಲೆ ಹೊಸ ಕಾರು ಖರೀದಿಗಾಗಿ ಬುಕ್ಕಿಂಗ್ ಕೂಡಾ ಆರಂಭಿಸಿದೆ.

By Praveen

ದಕ್ಷಿಣ ಕೊರಿಯಾದ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಯಾದ ಹ್ಯುಂಡೈ ಇಂಡಿಯಾ ನ್ಯೂ ಜನರೇಷನ್ ವೆರ್ನಾ ಕಾರನ್ನು ಬಿಡುಗಡೆ ಮಾಡುತ್ತಿದ್ದು, ಈ ಹಿನ್ನೆಲೆ ಹೊಸ ಕಾರು ಖರೀದಿಗಾಗಿ ಬುಕ್ಕಿಂಗ್ ಕೂಡಾ ಆರಂಭಿಸಿದೆ.

ಮುಂದಿನ ತಿಂಗಳು ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಹ್ಯುಂಡೈ ವೆರ್ನಾ

ಮುಂಬರುವ ಅಗಸ್ಟ್ ಅಂತ್ಯಕ್ಕೆ ನ್ಯೂ ಜನರೇಷನ್ ಹ್ಯಂಡೈ ವೆರ್ನಾ ಬಿಡುಗಡೆ ಖಚಿತವಾಗಿದ್ದು, ಈ ಹಿನ್ನೆಲೆ ಭಾರೀ ಬೇಡಿಕೆಗೆ ಕಾರಣವಾಗಿರುವ ಹ್ಯುಂಡೈ ವೆರ್ನಾ ಮಾದರಿಗಳ ಖರೀದಿಗಾಗಿ 25 ಸಾವಿರ ರೂಪಾಯಿ ಮುಂಗಡದೊಂದಿಗೆ ಬುಕ್ಕಿಂಗ್ ಆರಂಭಗೊಂಡಿದೆ.

ಮುಂದಿನ ತಿಂಗಳು ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಹ್ಯುಂಡೈ ವೆರ್ನಾ

ಈಗಾಗಲೇ ಬಿಡುಗಡೆಗೊಳ್ಳಲು ಸಿದ್ದವಾಗಿರುವ ನ್ಯೂ ಜನರೇಷನ್ ವೆರ್ನಾ ಕಾರಿನ ಹೊಸ ವಿನ್ಯಾಸಗಳು ಮತ್ತು ವೈಶಿಷ್ಟ್ಯತೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಟೀಸರ್‌ ಬಿಡುಗಡೆಗೊಳಿಸಿರುವ ಹ್ಯುಂಡೈ ಭಾರೀ ನೀರಿಕ್ಷೆ ಹುಟ್ಟುಹಾಕಿದೆ.

ಮುಂದಿನ ತಿಂಗಳು ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಹ್ಯುಂಡೈ ವೆರ್ನಾ

ಹ್ಯುಂಡೈ ಬಿಡುಗಡೆ ಮಾಡಿರುವ ಟೀಸರ್‌ ಪ್ರಕಾರ ಹೊಚ್ಚ ಹೊಸ ವೆರ್ನಾ ಮಾದರಿಯೂ ಅದ್ಭುತ ಹೊರ ವಿನ್ಯಾಸಗಳನ್ನು ಹೊಂದಿದ್ದು, ಈ ಹಿಂದಿನ ಮಾದರಿಗಿಂತಲೂ ಹೆಚ್ಚಿನ ಬದಲಾವಣೆ ತರಲಾಗಿದೆ.

ಮುಂದಿನ ತಿಂಗಳು ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಹ್ಯುಂಡೈ ವೆರ್ನಾ

ಹೊಸ ಕಾರಿನ ಬಾರ್ಡರ್‌ಗಳಲ್ಲಿ ಎಲ್‌ಇಡಿ ವ್ಯವಸ್ಥೆಯಿದ್ದು, ಹೆಡ್‌ಲ್ಯಾಂಪ್ ಮತ್ತು ಟೈಲ್‌ಲ್ಯಾಂಪ್ ವಿಭಾಗದಲ್ಲಿ ಹೊಸ ತಲೆಮಾರಿನ ವಿನ್ಯಾಸಗಳನ್ನು ಅಭಿವೃದ್ದಿಗೊಳಿಸಲಾಗಿದೆ.

ಮುಂದಿನ ತಿಂಗಳು ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಹ್ಯುಂಡೈ ವೆರ್ನಾ

ಮುಂಭಾಗ ಮತ್ತು ಹಿಂಭಾಗದ ನೋಟದಲ್ಲಿ ವೆರ್ನಾ ಮಾದರಿಗೆ ಸ್ಪೋರ್ಟ್ ಲುಕ್ ನೀಡಲಾಗಿದ್ದು, 7-ಇಂಚಿನ ಇನ್ಫೋಮೆಟಿಕ್ ಡಿಸ್‌ಫೈ, ಡ್ಯುಯಲ್ ನೆವಿಗೆಷನ್ ಸಿಸ್ಟಮ್ ಮತ್ತು ಕಾರ್ ಪಾರ್ಕಿಂಗ್‌ಗೆ ನೆರವಾಗಬಲ್ಲ ರಿರ್ ಕ್ಯಾಮೆರಾ ಸೌಲಭ್ಯ ನೀಡಲಾಗಿದೆ.

ಮುಂದಿನ ತಿಂಗಳು ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಹ್ಯುಂಡೈ ವೆರ್ನಾ

ಇನ್ನು ವೆರ್ನಾ ಕಾರು ಮಾದರಿಯೂ 1.4-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.6-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಲಭ್ಯವಾಗಲಿದ್ದು, 4-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮತ್ತು 122 ಬಿಎಚ್‌ಪಿ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಲಿವೆ.

ಮುಂದಿನ ತಿಂಗಳು ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಹ್ಯುಂಡೈ ವೆರ್ನಾ

ಪ್ರಸ್ತತ ಮಾರುಕಟ್ಟೆಯಲ್ಲಿ ಅತಿಹೆಚ್ಚು ಬೇಡಿಕೆ ಹೊಂದಿರುವ ಮಾರುತಿ ಸುಜುಕಿ ಸಿಯಾಜ್ ಮತ್ತು ಹೋಂಡಾ ಸಿಟಿಗೆ ಪ್ರತಿಸ್ಪರ್ಧಿಯಾಗುವ ನಿಟ್ಟಿನಲ್ಲಿ ವೆರ್ನಾ ಕಾರನ್ನು ಅಭಿವೃದ್ಧಿಗೊಳ್ಳುತ್ತಿದ್ದು, ಬೆಲೆಗಳು ರೂ.8.50 ಲಕ್ಷದಿಂದ ರೂ.10.50ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Article Published On: Wednesday, July 19, 2017, 14:12 [IST]
English summary
Read in Kannada about New-Generation Hyundai Verna To Be Launched Next Month.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+