ಹ್ಯುಂಡೈ ವೆರ್ನಾ ಕಾರಿನ ಈ ಹೊಸ ವಿಶೇಷತೆಗಳ ನಿಮಗೆ ಖುಷಿ ನೀಡಲಿವೆ

Written By:

ಹ್ಯುಂಡೈ ಮೋಟಾರ್ ಇಂಡಿಯಾ ದೇಶದಲ್ಲಿ ಹೊಚ್ಚ ಹೊಸ ವೆರ್ನಾ ಸೆಡಾನ್ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ಈ ಕಾರಿನ ವಿಶಿಷ್ಟ ಫೀಚರ್ಸ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. ತಿಳಿದುಕೊಳ್ಳಿ.

To Follow DriveSpark On Facebook, Click The Like Button
ಹ್ಯುಂಡೈ ವೆರ್ನಾ ಕಾರಿನ ಈ ಹೊಸ ವಿಶೇಷತೆಗಳ ನಿಮಗೆ ಖುಷಿ ನೀಡಲಿವೆ

ನವೀನ ಮಾದರಿಯ, ವಿಶಿಷ್ಟ ಕೆ2 ಪ್ಲಾಟ್ ಫಾರಂ ಅಡಿಯಲ್ಲಿ ಅಭಿವೃದಿಗೊಂಡಿರುವ ಹೊಸ ಆವೃತ್ತಿಯ ವೆರ್ನಾ ಕಾರನ್ನು ಇದೇ ಆಗಸ್ಟ್ 22 ರಂದು ಅನಾವರಣಗೊಳಿಸಲಿರುವ ಹ್ಯುಂಡೈ, ತನ್ನ ಪ್ರತಿಸ್ಪರ್ಧಿ ಸಂಸ್ಥೆಯ ಕಾರುಗಳಾದ ಹೋಂಡಾ ಸಿಟಿ, ಮಾರುತಿ ಸಿಯಾಜ್, ಸ್ಕೊಡಾ ರಾಪಿಡ್ ಮತ್ತು ಫೋಕ್ಸ್‌ವ್ಯಾಗೆನ್ ವೆಂಟೊ ಕಾರುಗಳಿಗಿಂತ ಹೇಗೆ ಬಿನ್ನವಾಗಿ ರೂಪಿಸಿದೆ ?

ಹ್ಯುಂಡೈ ವೆರ್ನಾ ಕಾರಿನ ಈ ಹೊಸ ವಿಶೇಷತೆಗಳ ನಿಮಗೆ ಖುಷಿ ನೀಡಲಿವೆ

ಈ ಪ್ರೆಶ್ನೆಗೆ ಉತ್ತರ ಈ ಲೇಖನದಲ್ಲಿ ತಿಳಿಸಲಾಗಿದೆ, ಮುಂದೆ ಓದಿ. ಈ ಹೊಚ್ಚ ಹೊಸ ಕಾರಿನಲ್ಲಿ ಇರುವಂತಹ ಪ್ರೀಮಿಯಂ ಲಕ್ಷಣಗಳನ್ನು ಈಗಾಗಲೇ ಸಾಕಷ್ಟು ಅಭಿವೃದ್ಧಿ ಮಾಡಿ ಈ ಕಾರಿನಲ್ಲಿ ಅಳವಡಿಸಲಾಗಿದೆ.

ಹ್ಯುಂಡೈ ವೆರ್ನಾ ಕಾರಿನ ಈ ಹೊಸ ವಿಶೇಷತೆಗಳ ನಿಮಗೆ ಖುಷಿ ನೀಡಲಿವೆ

ಹ್ಯಾಂಡ್ಸ್ ಫ್ರೀ ಬೂಟ್ ಬಿಡುಗಡೆ

ಮಧ್ಯಮ ಗಾತ್ರದ ಸೆಡಾನ್ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಹ್ಯಾಂಡ್ಸ್ ಫ್ರೀ ಬೂಟ್ ಸೌಲಭ್ಯವನ್ನು ನೀಡಲಾಗಿದ್ದು, ಕಾರಿನ ಹಿಂಬದಿಯ ಬೂಟ್ ಕೆಳಗೆ ನಿಮ್ಮ ಕಾಲುಗಳನ್ನು ಅಲೆಗಳ ರೀತಿಯಲ್ಲಿ ಚಾಲನೆ ಮಾಡುವ ಮೂಲಕ ಕಾರಿನ ಡಿಕ್ಕಿ ಸ್ವಯಂಚಾಲಿತವಾಗಿ ತೆರೆಯಬಹುದಾಗಿದೆ.

ಹ್ಯುಂಡೈ ವೆರ್ನಾ ಕಾರಿನ ಈ ಹೊಸ ವಿಶೇಷತೆಗಳ ನಿಮಗೆ ಖುಷಿ ನೀಡಲಿವೆ

ಪ್ರೊಜೆಕ್ಟರ್ ಫಾಗ್ ಲ್ಯಾಂಪ್ಸ್

ನಮಗೆಲ್ಲರಿಗೂ ತಿಳಿದಿರುವಂತೆ ಈ ಮಾದರಿಯ ಕಾರುಗಳಲ್ಲಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಅಳವಡಿಗೆ ಸಾಮಾನ್ಯ ಆಯ್ಕೆಯಾಗಿ ನಮಗೆ ದೊರಕುತ್ತದೆ. ಆದರೆ, ಒಂದು ಹೆಜ್ಜೆ ಮುಂದೆ ಹೋಗಿರುವ ಹ್ಯುಂಡೈ ತನ್ನ ಹೊಸ ವೆರ್ನಾ ಕಾರಿನಲ್ಲಿ ಇರುವಂತಹ ಫಾಗ್ ಲ್ಯಾಂಪ್‌ಗಳಿಗೂ ಸಹ ಪ್ರೊಜೆಕ್ಟರ್ ಲೆನ್ಸ್ ಸೌಲಭ್ಯ ನೀಡಿದೆ.

ಹ್ಯುಂಡೈ ವೆರ್ನಾ ಕಾರಿನ ಈ ಹೊಸ ವಿಶೇಷತೆಗಳ ನಿಮಗೆ ಖುಷಿ ನೀಡಲಿವೆ

ತಂಪಾಗುವ ಆಸನಗಳು

ಹ್ಯುಂಡೈ ತನ್ನ ಎಲಾಂತ್ರ ಕಾರಿನಲ್ಲಿರುವಂತಹ ತಂಪಾಗುವ ಆಸನಗಳ ಸೌಲಭ್ಯವನ್ನು ಹೊಸ ವೆರ್ನಾ ಕಾರಿನಲ್ಲಿ ನೀಡಲಿದೆ. ಈ ತಂಪಾಗುವ ಆಸನಗಳು ಎಸಿ ಇಂದ ಗಾಳಿಯನ್ನು ಹೀರಿಕೊಂಡು ಆಸನದ ಒಳಗೆ ಗಾಳಿ ಊದುತ್ತವೆ. ಇದರಿಂದಾಗಿ ಹೆಚ್ಚು ಶಾಖ ಉತ್ಪತ್ತಿಯಾಗುವುದನ್ನು ಕಡಿಮೆ ಮಾಡಬಹುದಾಗಿದೆ.

ಹ್ಯುಂಡೈ ವೆರ್ನಾ ಕಾರಿನ ಈ ಹೊಸ ವಿಶೇಷತೆಗಳ ನಿಮಗೆ ಖುಷಿ ನೀಡಲಿವೆ

ಇಕೊ ಕೋಟಿಂಗ್

ಹ್ಯುಂಡೈ ಇಕೊ ಕೋಟಿಂಗ್ ತಂತ್ರಜ್ಞಾನ ಸಹ ಹೊಂದಿದ್ದು, ಈ ತಂತ್ರಜ್ಞಾನದ ಸಹಾಯದಿಂದ ಎಸಿಯಲ್ಲಿರುವ ವಾಸನೆಯನ್ನು ತೆಗೆದುಹಾಕಬಹುದಾಗಿದೆ. ಇದರ ಮೂಲಕ ಕ್ಯಾಬಿನ್ ಒಳಗೆ ಶ್ರೇಷ್ಠ ಅನುಭವ ನಿಮ್ಮದಾಗಲಿದೆ ಎಂದು ಕಂಪನಿ ತಿಳಿಸಿದೆ.

ಹ್ಯುಂಡೈ ವೆರ್ನಾ ಕಾರಿನ ಈ ಹೊಸ ವಿಶೇಷತೆಗಳ ನಿಮಗೆ ಖುಷಿ ನೀಡಲಿವೆ

ಹೊಸ ತಲೆಮಾರಿನ ಹ್ಯುಂಡೈ ವೆರ್ನಾ ಕಾರಿನಲ್ಲಿ ಐಷಾರಾಮಿ ವೈಶಿಷ್ಟ್ಯತೆಗಳು ಇಲ್ಲದೆ ಇದ್ದರೂ ಸಹ ಕಂಫರ್ಟ್ ಮತ್ತು ಅನುಕೂಲಕರ ವಾತಾವರಣ ನಿರ್ಮಿಸಲಾಗಿದೆ ಎಂಬುದನ್ನು ನಾವು ಗಮನಿಸಬಹುದಾಗಿದೆ.

ಹ್ಯುಂಡೈ ವೆರ್ನಾ ಕಾರಿನ ಈ ಹೊಸ ವಿಶೇಷತೆಗಳ ನಿಮಗೆ ಖುಷಿ ನೀಡಲಿವೆ

ತನ್ನ ಹಿಂದಿನ ಮಾದರಿಗಳಲ್ಲಿ ಈಗಾಗಲೇ ಕಮಲ್ ಮಾಡಿರುವ ವೆರ್ನಾ ಕಾರಿನ ಹೊಸ ಆವೃತಿಯನ್ನು ಜನತೆ ಹೇಗೆ ಸ್ವೀಕರಿಸಲಿದ್ದಾರೆ ಕಾದು ನೋಡಬೇಕಾಗಿದೆ.

English summary
Hyundai Motor India is gearing up to launch the refreshed Verna sedan in the country. The Verna has been upgraded in dimensions and features as well, which it lacked to compete with rivals.
Story first published: Tuesday, August 8, 2017, 13:16 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark