ಬಿಡುಗಡೆಗೆ ಸಜ್ಜುಗೊಂಡ ಮಾರುತಿ ಸುಜುಕಿ ಎಸ್ ಕ್ರಾಸ್ ಫೇಸ್‌ಲಿಫ್ಟ್ ವಿಶೇಷತೆ ಏನು?

ಮಾರುತಿ ಸುಜುಕಿ ಸಂಸ್ಥೆಯು ಈಗಾಗಲೇ ಬುಕ್ಕಿಂಗ್ ಪ್ರಕ್ರಿಯೆ ಆರಂಭಿಸಿದ್ದು, ಈ ಹಿನ್ನೆಲೆ ಭಾರೀ ಕುತೂಹಲ ಹುಟ್ಟುಹಾಕಿರುವ ಎಸ್ ಕ್ರಾಸ್ ಫೇಸ್‌ಲಿಫ್ಟ್ ವಿಶೇಷತೆಗಳನ್ನು ಇಲ್ಲಿ ಚರ್ಚಿಸಲಾಗಿದೆ.

By Praveen

ಎಸ್ ಕ್ರಾಸ್ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಸಜ್ಜುಗೊಳ್ಳುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಈಗಾಗಲೇ ಬುಕ್ಕಿಂಗ್ ಪ್ರಕ್ರಿಯೆ ಆರಂಭಿಸಿದ್ದು, ಈ ಹಿನ್ನೆಲೆ ಭಾರೀ ಕುತೂಹಲ ಹುಟ್ಟುಹಾಕಿರುವ ಎಸ್ ಕ್ರಾಸ್ ಫೇಸ್‌ಲಿಫ್ಟ್ ವಿಶೇಷತೆಗಳನ್ನು ಇಲ್ಲಿ ಚರ್ಚಿಸಲಾಗಿದೆ.

ಮಾರುತಿ ಸುಜುಕಿ ಎಸ್ ಕ್ರಾಸ್ ಫೇಸ್‌ಲಿಫ್ಟ್ ವಿಶೇಷತೆ ಏನು?

ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಎಸ್ ಕ್ರಾಸ್ ಆವೃತ್ತಿಗಳು ಭಾರೀ ಜನಪ್ರಿಯತೆ ಹೊಂದಿದ್ದು, ಇದೀಗ ಫೇಸ್‌ಲಿಫ್ಟ್ ಕಾರು ಆವೃತ್ತಿಯನ್ನು ಮಾರುಕಟ್ಟೆಗೆ ಪರಿಚಯಿಸುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಅಧಿಕೃತ ಕಾರಿನ ಚಿತ್ರಗಳನ್ನು ಬಿಡುಗಡೆ ಮಾಡುವ ಮೂಲಕ ಹೊಸ ಕಾರಿನ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಗೊಳಿಸಿದೆ.

ಮಾರುತಿ ಸುಜುಕಿ ಎಸ್ ಕ್ರಾಸ್ ಫೇಸ್‌ಲಿಫ್ಟ್ ವಿಶೇಷತೆ ಏನು?

ಸದ್ಯದ ಮಾಹಿತಿಗಳ ಪ್ರಕಾರ ಮಾರುತಿ ಸುಜುಕಿ ಸಂಸ್ಥೆಯು ಅಕ್ಟೋಬರ್ ಮೊದಲ ವಾರದಲ್ಲೇ ಎಸ್-ಕ್ರಾಸ್ ಫೇಸ್‌ಲಿಫ್ಟ್ ಕ್ರಾಸ್ ಓವರ್ ಕಾರನ್ನು ಬಿಡುಗಡೆಗೊಳಿಸಿದೆ ಎಂಬ ಮಾಹಿತಿ ಸಿಕ್ಕಿದ್ದು, ಹೊರಭಾಗದ ವಿನ್ಯಾಸದಲ್ಲಿ ಸೂಕ್ಷ್ಮ ಬದಲಾವಣೆಗಳನ್ನು ಹೊಂದಿರುವುದು ಹೊಸ ಕಾರಿನ ಐಷಾರಾಮಿ ಲುಕ್ ನೀಡಿದೆ.

Recommended Video

Datsun rediGO Gold 1.0-Litre Launched In India - DriveSpark
ಮಾರುತಿ ಸುಜುಕಿ ಎಸ್ ಕ್ರಾಸ್ ಫೇಸ್‌ಲಿಫ್ಟ್ ವಿಶೇಷತೆ ಏನು?

ತೈವಾನ್ ಸೇರಿದಂತೆ ಯುರೋಪ್‌ನಪ್ರಮುಖ ರಾಷ್ಟ್ರಗಳಲ್ಲಿ ಎಸ್ ಕ್ರಾಸ್ ಫೇಸ್‌ಲಿಫ್ಟ್ ಆವೃತ್ತಿಯು ಈಗಾಗಲೇ ಬಿಡುಗಡೆಯಾಗಿದ್ದು, ಸ್ನಾಯುವಿನ ನೋಟವನ್ನು ಪಡೆದ ಪರಿಷ್ಕರಿಸಿದ ಬಂಪರ್, ಪ್ರೊಜೆಕ್ಟರ್ ಹೆಡ್‌ಲೈಟ್,ಹೊಸ ರೀತಿಯ ತಂತುಕೋಶ ಪಡೆದುಕೊಂಡಿದೆ.

ಮಾರುತಿ ಸುಜುಕಿ ಎಸ್ ಕ್ರಾಸ್ ಫೇಸ್‌ಲಿಫ್ಟ್ ವಿಶೇಷತೆ ಏನು?

ಎಸ್ ಕ್ರಾಸ್ ಕಾರಿನ ಹಿಂಭಾಗದಲ್ಲಿ ಸಾಕಷ್ಟು ಅಪ್ಡೇಟ್‌ಗಳನ್ನು ಪಡೆದುಕೊಂಡಿದ್ದು, ಟೈಲ್ ಲ್ಯಾಂಪ್ ಕ್ಲಸ್ಟರ್ ಟ್ವಿಕಡ್ ಮತ್ತು ಮರುವಿನ್ಯಾಸಗೊಳಿಸಲಾದ ಸ್ಪೋರ್ಟ್ಸ್ ಬಂಪರ್ ಅಳವಡಿಸಲಾಗಿದೆ.

ಮಾರುತಿ ಸುಜುಕಿ ಎಸ್ ಕ್ರಾಸ್ ಫೇಸ್‌ಲಿಫ್ಟ್ ವಿಶೇಷತೆ ಏನು?

ಸದ್ಯದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿರುವ ಈ ಎಸ್ ಕ್ರಾಸ್ ಫೇಸ್‌ಲಿಫ್ಟ್ ಕಾರನ್ನು ನೆಕ್ಸಾ ಅಧಿಕೃತ ಮಾರಾಟ ಮಳಿಗೆಗಳಲ್ಲಿ ಮಾತ್ರ ಮಾರಾಟ ಮಾಡಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ರೂ.11 ಸಾವಿರ ಮುಂಗಡ ನಿಗದಿ ಮಾಡಿದೆ.

ಮಾರುತಿ ಸುಜುಕಿ ಎಸ್ ಕ್ರಾಸ್ ಫೇಸ್‌ಲಿಫ್ಟ್ ವಿಶೇಷತೆ ಏನು?

ಐಷಾರಾಮಿ ಕಾರುಗಳಲ್ಲಿ ಇರುವಂತಹ ಎಲ್ಲಾ ಸೌಲಭ್ಯಗಳನ್ನು ಎಸ್ ಕ್ರಾಸ್ ಫೇಸ್‌ಲಿಫ್ಟ್ ಕಾರು ಕೂಡಾ ಪಡೆದುಕೊಂಡಿದ್ದು, ಇದರ ಜೊತೆಗೆ ಎಸ್‌ಯುವಿ ವೈಶಿಷ್ಟ್ಯತೆಗಳನ್ನು ಪಡೆದಿರುವ ಈ ಕಾರು ಅಧಿಕ ಸಂಖ್ಯೆಯ ಗ್ರಾಹಕರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು.

ಮಾರುತಿ ಸುಜುಕಿ ಎಸ್ ಕ್ರಾಸ್ ಫೇಸ್‌ಲಿಫ್ಟ್ ವಿಶೇಷತೆ ಏನು?

ಒಟ್ಟಾರೆಯಾಗಿ ರೆಡ್ಒನ್ ಫ್ರಂಟ್ ಫ್ಯಾಸಿಯಾವನ್ನು ಹೊರತುಪಡಿಸಿ ಸದ್ಯ ಮಾರಾಟವಾಗುತ್ತಿರುವ ಮಾದರಿಯಲ್ಲಿನ ಎಲ್ಲಾ ವೈಶಿಷ್ಟ್ಯತೆಗಳನ್ನು ಫೇಸ್‌ಲಿಫ್ಟ್ ಆವೃತ್ತಿ ಕೂಡಾ ಹೊಂದಿರಲಿದ್ದು, ಕಡಿಮೆ ಬಜೆಟ್‌ಗೆ ಇದೊಂದು ಉತ್ತಮ ಆಯ್ಕೆ ಎನ್ನಬಹುದು. ಆದ್ರೆ ಫೇಸ್‌ಲಿಫ್ಟ್ ಮಾದರಿಯು ಕೇವಲ ಡೀಸೆಲ್ ಎಂಜಿನ್ ಆಯ್ಕೆದೊಂದಿಗೆ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

Article Published On: Friday, September 29, 2017, 10:59 [IST]
English summary
Read in Kannada: Key Changes You Should Know about Maruti Suzuki S-Cross New Version.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+