ಹೊಸ ಮಾದರಿಯ ಮರ್ಸಿಡಿಸ್ ಬೆಂಝ್ ಇ220ಡಿ ಬಿಡುಗಡೆ

ಐಷಾರಾಮಿ ಕಾರು ಆವೃತ್ತಿ ಮರ್ಸಿಡಿಸ್ ಬೆಂಝ್ ಹೊಚ್ಚ ಹೊಸ ಇ220ಡಿ ಬಿಡುಗಡೆಯಾಗಿದ್ದು, ಬೆಲೆ ಮತ್ತು ವೈಶಿಷ್ಟ್ಯಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

By Praveen

ಜರ್ಮನ್ ಮೂಲದ ಐಷಾರಾಮಿ ಕಾರು ಮಾದರಿ ಮರ್ಸಿಡಿಸ್ ಬೆಂಝ್ ತನ್ನ ಹೊಸ ಕಾರು ಆವೃತ್ತಿ ಇ220ಡಿ ಬಿಡುಗಡೆಗೊಳಿಸಿದ್ದು, ಆಕರ್ಷಕ ಬೆಲೆ ಮತ್ತು ವೈಶಿಷ್ಟ್ಯಗಳಿಂದಾಗಿ ಭಾರತೀಯ ಮಾರುಕಟ್ಟೆ ಹೊಸ ನೀರಿಕ್ಷೆ ಹುಟ್ಟುಹಾಕಿದೆ.

ಹೊಸ ಮಾದರಿಯ ಮರ್ಸಿಡಿಸ್ ಬೆಂಝ್ ಇ220ಡಿ ಬಿಡುಗಡೆ

ಮರ್ಸಿಡಿಸ್ ಬೆಂಝ್ ಇ220ಡಿ ಮಾದರಿಯೂ ಈ ಹಿಂದೆ ಬಿಡುಗೊಂಡಿದ್ದ ಇ350ಡಿ ಮಾದರಿಗಿಂತ ಕೆಳದರ್ಜೆಯ ಆವೃತ್ತಿಯಾಗಿದ್ದು, ಮಧ್ಯಮ ವರ್ಗಗಳ ಐಷಾರಾಮಿ ಕಾರು ಖರೀದಿಯ ಯೋಜನೆಗಾಗಿ ಈ ಆವೃತ್ತಿಯನ್ನು ಸಿದ್ಧಗೊಳಿಸಲಾಗಿದೆ.

ಹೊಸ ಮಾದರಿಯ ಮರ್ಸಿಡಿಸ್ ಬೆಂಝ್ ಇ220ಡಿ ಬಿಡುಗಡೆ

ಬೆಲೆ (ಪುಣೆ ಎಕ್ಸ್‌ಶೋರಂ ಪ್ರಕಾರ)

ಇ220ಡಿ- ರೂ.57.14 ಲಕ್ಷ

ಹೊಸ ಮಾದರಿಯ ಮರ್ಸಿಡಿಸ್ ಬೆಂಝ್ ಇ220ಡಿ ಬಿಡುಗಡೆ

ಇ220ಡಿ ಬಿಡುಗಡೆಗೂ ಮುನ್ನ ಇ250ಡಿ ಮಾದರಿಯನ್ನು ಬಿಡುಗೊಳಿಸಿದ್ದ ಮರ್ಸಿಡಿಸ್ ಬೆಂಝ್ ಸಂಸ್ಥೆಯು, ಕಾರಣಾಂತರಗಳಿಂದ ಇ250ಡಿ ಹಿಂದಕ್ಕೆ ಪಡೆದಿದೆ. ಹೀಗಾಗಿ ಇ250ಡಿ ಬದಲಾಗಿ ಇನ್ಮುಂದೆ ಇ220ಡಿ ಮಾದರಿ ಮಾರಾಟಮಾಡಲಿದೆ.

ಹೊಸ ಮಾದರಿಯ ಮರ್ಸಿಡಿಸ್ ಬೆಂಝ್ ಇ220ಡಿ ಬಿಡುಗಡೆ

ಎಂಜಿನ್ ಸಾಮರ್ಥ್ಯ

2.0-ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಇ220ಡಿ ಮಾದರಿಯೂ, 191 ಬಿಎಚ್‌ಪಿ ಹಾಗೂ 400ಎನ್ಎಂ ಟಾರ್ಕ್ ಉತ್ಪಾದಿಸುವ ಶಕ್ತಿ ಹೊಂದಿದೆ.

ಹೊಸ ಮಾದರಿಯ ಮರ್ಸಿಡಿಸ್ ಬೆಂಝ್ ಇ220ಡಿ ಬಿಡುಗಡೆ

ಇ250ಡಿ ಮಾದರಿಗಿಂತ ಉನ್ನತ ದರ್ಜೆಯ ಸೌಲಭ್ಯ ಹೊಂದಿರುವ ಇ220ಡಿ ಕಾರು ಮಾದರಿಯೂ, 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ವ್ಯವಸ್ಥೆ ಪಡೆದುಕೊಂಡಿದೆ.

ಹೊಸ ಮಾದರಿಯ ಮರ್ಸಿಡಿಸ್ ಬೆಂಝ್ ಇ220ಡಿ ಬಿಡುಗಡೆ

ಹೊಸ ಮಾದರಿಯ ಇ220ಡಿ ಮಾದರಿಯಲ್ಲಿ ಸುರಕ್ಷತೆ ಹೆಚ್ಚಿನ ಒತ್ತು ನೀಡಲಾಗಿದ್ದು, ಪಾರ್ಕಿಂಗ್ ಯಾರ್ಡ್‌ನಲ್ಲಿ 360 ಡಿಗ್ರಿ ಮಾದರಿಯ ಹಿನ್ನೋಟದ ಕ್ಯಾಮೆರಾ ಪರಿಚಯಿಸಲಾಗಿದೆ.

ಹೊಸ ಮಾದರಿಯ ಮರ್ಸಿಡಿಸ್ ಬೆಂಝ್ ಇ220ಡಿ ಬಿಡುಗಡೆ

ಇ250ಡಿ ಕಾರ್‌ಗಿಂತ ಇ220ಡಿ ಮಾದರಿಯ ಒಳ ವಿನ್ಯಾಸದಲ್ಲಿ ಸಂಪೂರ್ಣ ಬದಲಾವಣೆ ತರಲಾಗಿದ್ದು, 12.3 ಇಂಚಿನ್ ಮೇಡಿಯಾ ಡಿಸ್‌ಫೈ ಪರಿಚಯಸಲಾಗಿದೆ.

ಹೊಸ ಮಾದರಿಯ ಮರ್ಸಿಡಿಸ್ ಬೆಂಝ್ ಇ220ಡಿ ಬಿಡುಗಡೆ

ಒಟ್ಟಿನಲ್ಲಿ ಹೊಸ ವೈಶಿಷ್ಟ್ಯತೆಗಳೊಂದಿಗೆ ಸಿದ್ದಗೊಂಡಿರುವ ಇ220ಡಿ ಮಾದರಿಯು, ಪ್ರಸ್ತುತ ಭಾರತೀಯ ಮಾರುಕಟ್ಟೆಗೆ ಅನುಗುಣವಾಗಿ ಸಿದ್ಧಗೊಳ್ಳುವ ಮೂಲಕ ಹೊಸ ನೀರಿಕ್ಷೆ ಹುಟ್ಟುಹಾಕಿದೆ.

ಹೊಸ ಮಾದರಿಯ ಮರ್ಸಿಡಿಸ್ ಬೆಂಝ್ ಇ220ಡಿ ಬಿಡುಗಡೆ

ಹೀಗಾಗಿ ಪ್ರಸ್ತುತ ಮಾದರಿಗಳಾದ ಬಿಎಂಡಬ್ಲ್ಯು 5 ಸೀರಿಸ್, ವೊಲ್ವೋ ಎಸ್90, ಆಡಿ ಎ6 ಮತ್ತು ಜಾಗ್ವಾರ್ ಎಕ್ಸ್‌ಎಫ್ ಮಾದರಿಗಳಿಗೆ ತೀವ್ರ ಸ್ಪರ್ಧೆ ಒಡ್ಡಲಿದೆ.

Most Read Articles

Kannada
English summary
Read in Kannada about Mercedes-Benz E220d Launched In India.
Story first published: Friday, June 2, 2017, 16:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X