ಬಿಡುಗಡೆಗೂ ಮುನ್ನ ನಿಸ್ಸಾನ್ ಸಂಸ್ಥೆಯ ಲೀಫ್ ಎಲೆಕ್ಟ್ರಿಕ್ ಕಾರಿನ ಸ್ಪೈ ಚಿತ್ರಗಳು ಸೋರಿಕೆ
ಜಪಾನಿನ ತಯಾರಕ ನಿಸ್ಸಾನ್ ಸಂಸ್ಥೆ ಸೆಪ್ಟೆಂಬರ್ ತಿಂಗಳಿನಲ್ಲಿ ತನ್ನ ಹೊಚ್ಚ ಹೊಸ ಲೀಫ್ ವಿದ್ಯುತ್ ಹ್ಯಾಚ್ ಬ್ಯಾಕ್ ಕಾರನ್ನು ಬಿಡುಗಡೆಗೊಳಿಸಿದ್ದು, ಈ ಕಾರಿನ ಸ್ಪೈ ಚಿತ್ರಗಳು ಅಂತರ್ಜಾಲದಲ್ಲಿ ಸೋರಿಕೆಯಾಗಿವೆ.
ಜಪಾನಿನ ತಯಾರಕ ನಿಸ್ಸಾನ್ ಸಂಸ್ಥೆ ಸೆಪ್ಟೆಂಬರ್ ತಿಂಗಳಿನಲ್ಲಿ ತನ್ನ ಹೊಚ್ಚ ಹೊಸ ಲೀಫ್ ವಿದ್ಯುತ್ ಹ್ಯಾಚ್ ಬ್ಯಾಕ್ ಕಾರನ್ನು ಬಿಡುಗಡೆಗೊಳಿಸಿದ್ದು, ಈ ಕಾರಿನ ಸ್ಪೈ ಚಿತ್ರಗಳು ಅಂತರ್ಜಾಲದಲ್ಲಿ ಸೋರಿಕೆಯಾಗಿವೆ.

ಭಾರತದಲ್ಲಿ ಇತ್ತೀಚಿಗೆ ಎಲ್ಲಾ ವಾಹನ ತಯಾರಕ ಕಂಪನಿಗಳು ವಿದ್ಯುತ್ ವಾಹನಗಳ ಉತ್ಪಾದನೆ ಮಾಡುವ ಕಡೆ ಗಮನಹರಿಸುತ್ತಿದ್ದು, ಪ್ರಖ್ಯಾತ ನಿಸ್ಸಾನ್ ಸಂಸ್ಥೆ ಸಹ ವಿದ್ಯುತ್ ಸಹಾಯದಿಂದ ಚಲಿಸುವ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದು, ಈ ಕಾರಿನ ಚಿತ್ರಗಳು ಬಿಡುಗಡೆಗೂ ಮುನ್ನ ಸೋರಿಕೆಯಾಗಿವೆ.

ಬಿಡುಗಡೆಗೊಳ್ಳಲಿರುವ ಲೀಫ್ ಕಾರಿನ ಚಿತ್ರಗಳನ್ನು ಜಪಾನ್‌ನಲ್ಲಿರುವ ನಿಸ್ಸಾನ್ ಸಂಸ್ಥೆಯ ಒಪ್ಪಮಾ ತಯಾರಿಕಾ ಘಟಕದಲ್ಲಿ ಸೆರೆಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆ.

ನಿಸ್ಸಾನ್ ಸಂಸ್ಥೆ ಬಿಡುಗಡೆಗೊಳಿಸಿದ್ದ ಕಾರಿನ ಬಾಹ್ಯ ವಿನ್ಯಾಸದ ಅಧಿಕೃತ ಚಿತ್ರಗಳಿಗೆ ಈ ಸೋರಿಕೆ ಚಿತ್ರಗಳು ಹೋಲಿಕೆಯಾಗುತ್ತಿದ್ದು, ಸೋರಿಕೆಯಾಗಿರುವ ಚಿತ್ರಗಳು ಅಸಲಿ ಎನ್ನಲಾಗಿದೆ.

ನಿಸ್ಸಾನ್ ತಿಳಿಸಿರುವಂತೆ, ಎರಡನೇ ತಲೆಮಾರಿನ ಲೀಫ್ ಹೆಚ್ಚು ಸಾಮರ್ಥ್ಯವನ್ನು ಪಡೆದುಕೊಂಡಿದ್ದು, ಈ ಹಿಂದಿನ ಮಾದರಿಗೆ ಹೋಲಿಸಿದರೆ ಬಹಳಷ್ಟು ಸುಧಾರಿತ ಅಂಶಗಳನ್ನು ಪಡೆದುಕೊಂಡಿದೆ.

ಕೇವಲ ಒಂದು ಬಾರಿ ಚಾರ್ಜ್ ಮಾಡಿದರೆ ಹೆಚ್ಚು ಕಡಿಮೆ 547 ಕಿಲೋಮೀಟರ್‌ನಷ್ಟು ಚಲಿಸುವ ಸಾಮರ್ಥ್ಯವನ್ನು ಈ ಕಾರು ಹೊಂದಿದೆ. ಟೆಸ್ಲಾ ಸಂಸ್ಥೆಯ ಕಾರಿನಲ್ಲಿ ನೀಡಲಾಗುವ ಹೆಚ್ಚು ಆಯ್ಕೆಗಳನ್ನು ಈ ಕಾರು ಸಹ ಹೊಂದಿದ್ದು, ಹೊಸ ತಂತ್ರಜ್ಞಾನದ ಬ್ಯಾಟರಿ ಪ್ಯಾಕ್ ಈ ಕಾರಿನಲ್ಲಿ ಇರಿಸಲಾಗಿದೆ.

ಎರಡನೇ ಜನರೇಷನ್ ನಿಸ್ಸಾನ್ ಲೀಫ್ ಕಾರು ಪ್ರೊ ಪೈಲೆಟ್ ಟೆಕ್ನಾಲಜಿ ಪಾರ್ಕ್ ವಿಶೇಷತೆಯೊಂದಿಗೆ ಬಿಡುಗಡೆಯಾಗಲಿದೆ. ಈ ತಂತ್ರಜ್ಞಾನವು ತ್ರೋಟಲ್ ನಿರ್ವಹಣೆಗೆ ಕ್ಯಾಮರಾ ಮತ್ತು ಸೋನಾರ್‌ಗಳನ್ನು ಬಳಕೆ ಮಾಡಲಿದೆ.

ಹೊಸ ಲೀಫ್ ನಿಸ್ಸಾನ್ ಕಾರು ಹೆಚ್ಚು ಅಭಿವೃದ್ಧಿ ಮಾಡಿರುವಂತಹ ಆಟೋನಮಸ್ ಕಾರು ಎಂಬ ಖ್ಯಾತಿ ಪಡೆದಿದೆ ಮತ್ತು ಈ ಕಾರು ಆಕ್ರಮಣಕಾರಿ ಇಳಿಜಾರು ವಿನ್ಯಾಸ ಪಡೆದುಕೊಂಡಿದೆ.


Click it and Unblock the Notifications