ಸ್ಕೋಡಾ ಹೊಚ್ಚ ಹೊಸ ಒಕ್ಟಾವಿಯಾ ಕಾರು ಬಿಡುಗಡೆಗೆ ಕ್ಷಣಗಣನೆ

Written By:

ಜೆಕ್ ಗಣರಾಜ್ಯದ ಪ್ರತಿಷ್ಠಿತ ಕಾರು ಉತ್ಪಾದಾನಾ ಸಂಸ್ಥೆಯಾದ ಸ್ಕೋಡಾ ಇದೇ ತಿಂಗಳು 13ರಂದು ಹೊಚ್ಚ ಹೊಸ ಒಕ್ಟಾವಿಯಾ ಕಾರು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರಿನ ಮಾಹಿತಿ ಇಲ್ಲಿದೆ.

ಐಷಾರಾಮಿ ಪ್ರಿಮಿಯಂ ಸೆಡಾನ್ ಕಾರು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಸ್ಕೋಡಾ, ಸದ್ಯ 2017ರ ಒಕ್ಟಾವಿಯಾ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜುಗೊಳ್ಳುತ್ತಿದೆ.

ಈ ಹಿಂದೆ ಒಕ್ಟಾವಿಯಾ ಕಾರು ಮಾರಾಟದಲ್ಲಿ ಬೃಹತ್ ಪ್ರಮಾಣದ ಮಾರಾಟ ದಾಖಲಿಸಿದ್ದ ಸ್ಕೋಡಾ, ಅದೇ ಮಾದರಿಯನ್ನು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗಳಿಗೆ ಅನುಗುಣವಾಗಿ ಹೊಸ ರೀತಿಯಲ್ಲಿ ಬಿಡುಗಡೆ ಮಾಡುತ್ತಿದೆ.

ಒಕ್ಟಿವಿಯಾ ಕಾರನ್ನು ಜುಲೈ 13ರಂದು ಬಿಡುಗಡೆಗೊಳಿಸುವ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿರುವ ಸ್ಕೋಡಾ, ಹೊಸ ಕಾರಿನ ಟೀಸರ್ ಕೂಡಾ ಬಿಡುಗಡೆ ಮಾಡಿದೆ.

ಇನ್ನು ಒಕ್ಟಿವಿಯಾ ಕಾರು 1.4-ಲೀಟರ್ ಮತ್ತು 1.8-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 2.0-ಲೀಟರ್ ಆಯಿಲ್ ಬರ್ನರ್ ಡೀಸೆಲ್ ಎಂಜಿನ್ ಪಡೆದುಕೊಂಡಿದೆ ಎನ್ನಲಾಗಿದೆ.

ಇದರ ಜೊತೆಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹಾಗೂ 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರುವ ಒಕ್ಟಿವಿಯಾ, 20ರಿಂದ 25 ಲಕ್ಷದ ವರೆಗೆ ಬೆಲೆ ನಿಗದಿಯಾಗಬಹುದೆಂದು ಅಂದಾಜಿಸಲಾಗಿದೆ.

ಸ್ಕೋಡಾ ಬಿಡುಗಡೆ ಮಾಡಿರುವ 2017ರ ಒಕ್ಟಿವಿಯಾ ಕಾರಿನ ವಿಡಿಯೋ ವೀಕ್ಷಿಸಿ.  

Read more on ಸ್ಕೋಡಾ skoda
English summary
Read in Kannada about New Skoda Octavia India Launch Date Revealed.
Please Wait while comments are loading...

Latest Photos