ಆ.10ಕ್ಕೆ ಬಿಡುಗಡೆಯಾಗಲಿದೆ ಫೋಕ್ಸ್‌ವ್ಯಾಗನ್ ಐಷಾರಾಮಿ ಸೆಡಾನ್ 'ಪಸ್ಸಾಟ್'

ಫೋಕ್ಸ್‌ವ್ಯಾಗನ್ ತನ್ನ ಐಷಾರಾಮಿ ಪ್ರೀಮಿಯಂ ಸೆಡಾನ್ ಕಾರು ಪಸ್ಸಾಟ್ ಬಿಡುಗಡೆಗೊಳಿಸಲು ಸಜ್ಜುಗೊಳ್ಳುತ್ತಿದ್ದು, ಆಕ್ಟೋಬರ್ 10ಕ್ಕೆ ಭಾರತೀಯ ಮಾರುಕಟ್ಟೆಗೆ ಪರಿಚಯಿಸುವ ಬಗ್ಗೆ ಅಧಿಕೃತ ಮಾಹಿತಿಯನ್ನು ಹೊರಹಾಕಿದೆ.

By Praveen

ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಯಾದ ಫೋಕ್ಸ್‌ವ್ಯಾಗನ್ ತನ್ನ ಐಷಾರಾಮಿ ಪ್ರೀಮಿಯಂ ಸೆಡಾನ್ ಪಸ್ಸಾಟ್ ಕಾರನ್ನು ಬಿಡುಗಡೆಗೊಳಿಸಲು ಸಜ್ಜುಗೊಳ್ಳುತ್ತಿದ್ದು, ಆಕ್ಟೋಬರ್ 10ಕ್ಕೆ ಭಾರತೀಯ ಮಾರುಕಟ್ಟೆಗೆ ಪರಿಚಯಿಸುವ ಬಗ್ಗೆ ಅಧಿಕೃತ ಮಾಹಿತಿಯನ್ನು ಹೊರಹಾಕಿದೆ.

ಆ.10ಕ್ಕೆ ಬಿಡುಗಡೆಯಾಗಲಿದೆ ಫೋಕ್ಸವ್ಯಾಗನ್ ಐಷಾರಾಮಿ ಸೆಡಾನ್ 'ಪಸ್ಸಾಟ್'

ಕೆಲ ದಿನಗಳ ಹಿಂದಷ್ಟೇ ಐಷಾರಾಮಿ ಪ್ರೀಮಿಯಂ ಸೆಡಾನ್ ಪಸ್ಸಾಟ್ ಕಾರಿನ ಉತ್ಪಾದನೆಯನ್ನು ಆರಂಭಗೊಳಿಸಿರುವುದಾಗಿ ಹೇಳಿಕೊಂಡಿದ್ದ ಫೋಕ್ಸ್‌ವ್ಯಾಗನ್ ಸಂಸ್ಥೆಯು ಮಹಾರಾಷ್ಟ್ರದ ಔರಂಗಾಬಾದ್ ಘಟಕದಲ್ಲಿ ಪಸ್ಸಾಟ್‌ ಕಾರಿನ ಅಂತಿಮ ಹಂತದ ವಿನ್ಯಾಸಗಳನ್ನು ಕೈಗೊಳ್ಳುವ ಮೂಲಕ ಇದೀಗ ಬಿಡುಗಡೆಗೆ ಸಿದ್ಧಗೊಂಡಿದೆ.

ಆ.10ಕ್ಕೆ ಬಿಡುಗಡೆಯಾಗಲಿದೆ ಫೋಕ್ಸವ್ಯಾಗನ್ ಐಷಾರಾಮಿ ಸೆಡಾನ್ 'ಪಸ್ಸಾಟ್'

ಜಾಗತಿಕ ಮಟ್ಟದ ಕಾರುಗಳನ್ನು ಭಾರತದಲ್ಲಿ ಪರಿಚಯಿಸುವ ಆವೇಗವನ್ನು ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು ಈ ವರ್ಷ ತನ್ನ ಹೊಚ್ಚ ಹೊಸ ಪಸ್ಸಾಟ್ ಕಾರನ್ನು ಅನಾವರಣಗೊಳಿಸುತ್ತಿದ್ದು, ಎಂಕ್ಯೂಬಿ ಪ್ಲಾಟ್‌ಫಾರಂ ಆಧಾರಿತ ಮೊದಲ ಸೆಡಾನ್ ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ.

Recommended Video

2018 Renault Duster Revealed - DriveSpark
ಆ.10ಕ್ಕೆ ಬಿಡುಗಡೆಯಾಗಲಿದೆ ಫೋಕ್ಸವ್ಯಾಗನ್ ಐಷಾರಾಮಿ ಸೆಡಾನ್ 'ಪಸ್ಸಾಟ್'

ಸೆಡಾನ್ ವಿಭಾಗದಲ್ಲಿ ಪ್ರೀಮಿಯಂ ಡ್ರೈವಿಂಗ್ ಅನುಭವವನ್ನು ನೀಡುವ ಮೂಲಕ ಐಷಾರಾಮಿ ವೈಶಿಷ್ಟ್ಯತೆಗಳಿಗೆ ಮರುಜೀವಕೊಡಲು ಪಸ್ಸಾಟ್ ಭಾರತದಲ್ಲಿ ಬಿಡುಗಡೆಗೊಳ್ಳುತ್ತಿದ್ದು, ಬ್ರ್ಯಾಂಡ್ ಪರಂಪರೆಯನ್ನು ಎತ್ತಿ ಹಿಡಿಯಲಿದೆ ಎನ್ನಲಾಗಿದೆ.

ಆ.10ಕ್ಕೆ ಬಿಡುಗಡೆಯಾಗಲಿದೆ ಫೋಕ್ಸವ್ಯಾಗನ್ ಐಷಾರಾಮಿ ಸೆಡಾನ್ 'ಪಸ್ಸಾಟ್'

ಪಸ್ಸಾಟ್ ಸೆಡಾನ್ ಕಾರು 2-ಲೀಟರ್ ಡೀಸೆಲ್ ಎಂಜಿನ್ ಬಲದೊಂದಿಗೆ 174 ಬಿಎಚ್‌ಪಿ ಶಕ್ತಿ ಉತ್ಪಾದಿಸಲಿದ್ದು, ಈ ಕಾರಿನ ಎಂಜಿನ್ 6-ಸ್ಪೀಡ್ ಡಿಎಸ್‌ಜಿ ಸ್ವಯಂಚಾಲಿತ ಗೇರ್ ಬಾಕ್ಸ್ ಅಳವಡಿಕೆಯೊಂದಿಗೆ ಬಿಡುಗಡೆಯಾಗಲಿದೆ.

ಆ.10ಕ್ಕೆ ಬಿಡುಗಡೆಯಾಗಲಿದೆ ಫೋಕ್ಸವ್ಯಾಗನ್ ಐಷಾರಾಮಿ ಸೆಡಾನ್ 'ಪಸ್ಸಾಟ್'

ಹೊಸ ಪಸ್ಸಾಟ್ ಕಾರು ಉತ್ತಮ ಕಾರ್ಯಕ್ಷಮತೆ, ದಕ್ಷತೆ, ಐಷಾರಾಮಿ ಮತ್ತು ಅತ್ಯಂತ ಮುಖ್ಯವಾಗಿ ಸುರಕ್ಷತೆಯ ಒಂದು ಪರಿಪೂರ್ಣ ಮಿಶ್ರಣದ ಅನುಭವ ನೀಡಲಿದೆ ಎನ್ನುವುದು ಕಂಪನಿಯ ವಿವರಣೆಯಾಗಿದೆ.

ಆ.10ಕ್ಕೆ ಬಿಡುಗಡೆಯಾಗಲಿದೆ ಫೋಕ್ಸವ್ಯಾಗನ್ ಐಷಾರಾಮಿ ಸೆಡಾನ್ 'ಪಸ್ಸಾಟ್'

ಈ ಬಗ್ಗೆ ಮಾತನಾಡಿರುವ ಫೋಕ್ಸ್‌ವ್ಯಾಗನ್ ಇಂಡಿಯಾದ ಪ್ಯಾಸೆಂಜರ್ ಕಾರುಗಳ ನಿರ್ದೇಶಕ, ಸ್ಟೆಫೆನ್ ನ್ಯಾಪ್ "ಅತ್ಯಂತ ಯಶಸ್ವಿ ಪ್ರೀಮಿಯಂ ಐಷಾರಾಮಿ ಉತ್ಪನ್ನಗಳಲ್ಲಿ ಒಂದಾಗಿರುವ ಪಸ್ಸಾಟ್ ಕಾರನ್ನು ಭಾರತೀಯ ಮಾರುಕಟ್ಟೆಗೆ ಮರಳಿ ಪರಿಚಯಿಸಲು ಹೆಚ್ಚು ಉತ್ಸುಕರಾಗಿದ್ದು, ಈ ಕಾರಿನ ಪರಿಚಯದೊಂದಿಗೆ ನಾವು ನಮ್ಮ ಪೋರ್ಟ್‌ಫೋಲಿಯೋವನ್ನು ವಿಸ್ತರಿಸಲು ಇಚ್ಛಿಸುತ್ತೇವೆ" ಎಂದಿದ್ದಾರೆ.

ಆ.10ಕ್ಕೆ ಬಿಡುಗಡೆಯಾಗಲಿದೆ ಫೋಕ್ಸವ್ಯಾಗನ್ ಐಷಾರಾಮಿ ಸೆಡಾನ್ 'ಪಸ್ಸಾಟ್'

ಅಂತಿಮವಾಗಿ ಹೊಸ ಪಸ್ಸಾಟ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸುವುದಾಗಿ ಫೋಕ್ಸ್‌ವ್ಯಾಗನ್ ಇಂಡಿಯಾ ಬಹಿರಂಗಪಡಿಸಿದ್ದು, ಎಂಕ್ಯೂಬಿ ಪ್ಲಾಟ್‌ಫಾರಂ ಉತ್ಪಾದನಾ ವೈಶಿಷ್ಟ್ಯತೆಯೊಂದಿಗೆ ಹೋಂಡಾ ಅಕಾರ್ಡ್, ಸ್ಕೋಡಾ ಸುಪರ್ಬ್ ಮತ್ತು ಟೊಯೋಟಾ ಕ್ಯಾಮ್ರಿ ಕಾರುಗಳಿಗೆ ತೀವ್ರ ಸ್ಪರ್ಧೆ ನೀಡಲಿದೆ.

More from DriveSpark

Article Published On: Wednesday, September 27, 2017, 11:06 [IST]
English summary
Read in Kannada about New Volkswagen Passat India Launch Date Revealed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+