ಭಾರತದಲ್ಲಿ ವೊಲ್ವೊ ಎಕ್ಸ್‌ಸಿ60 ಎಸ್‌ಯುವಿ ಕಾರಿನ ಬಿಡುಗಡೆ ದಿನಾಂಕ ನಿಗದಿ
ವೊಲ್ವೊ ಕಂಪನಿಯ ಎಕ್ಸ್‌ಸಿ 40 ಎಸ್‌ಯುವಿ ಕಾರನ್ನು ಭಾರತದಲ್ಲಿ ಮುಂದಿನ ವರ್ಷದ ಪ್ರಥಮಾರ್ಧದಲ್ಲಿ ಬಿಡುಗಡೆಗೊಳಿಸಲಿದೆ ಎನ್ನಲಾಗಿತ್ತು. ಆದರೆ, ಈ ಮಾಹಿತಿ ಈಗ ಸುಳ್ಳಾಗಿದ್ದು, ಡಿಸೆಂಬರ್ ತಿಂಗಳಿನಲ್ಲಿಯೇ ಈ ಕಾರನ್ನು ಕಂಪನಿ ಹೊರತರಲಿದೆ.
ವೊಲ್ವೊ ಕಂಪನಿಯ ಎಕ್ಸ್‌ಸಿ 40 ಎಸ್‌ಯುವಿ ಕಾರನ್ನು ಭಾರತದಲ್ಲಿ ಮುಂದಿನ ವರ್ಷದ ಪ್ರಥಮಾರ್ಧದಲ್ಲಿ ಬಿಡುಗಡೆಗೊಳಿಸಲಿದೆ ಎನ್ನಲಾಗಿತ್ತು. ಆದರೆ, ಈ ಮಾಹಿತಿ ಈಗ ಸುಳ್ಳಾಗಿದ್ದು, ಡಿಸೆಂಬರ್ ತಿಂಗಳಿನಲ್ಲಿಯೇ ಈ ಕಾರನ್ನು ಕಂಪನಿ ಹೊರತರಲಿದೆ.

ಭಾರತದ ದೇಶದ ಪ್ರಮುಖ ಐಷಾರಾಮಿ ವಾಹನ ತಯಾರಕ ಕಂಪನಿ ವೊಲ್ವೊ, ತನ್ನ ಎಕ್ಸ್‌ಸಿ 40 ಎಸ್‌ಯುವಿ ಕಾರಿನ ಉತ್ಪಾದನೆಯನ್ನು ಈಗಾಗಲೇ ಪ್ರಾರಂಭಿಸಿದೆ. ಈ ಹೊಸ ಎಸ್‌ಯುವಿ ವಾಹನವನ್ನು ಡಿಸೆಂಬರ್ 12, 2017 ರಂದು ದೇಶದಲ್ಲಿ ಬಿಡುಗಡೆಗೊಳಿಸಲಿದೆ ಎಂಬ ಖಚಿತ ಮಾಹಿತಿ ಸಿಕ್ಕಿದೆ.

ಪೂರ್ಣ ಲೋಡೆಡ್ ಅವತಾರ್‌ನಲ್ಲಿ ಈ ವಾಹನ ದೇಶದಲ್ಲಿ ಬಿಡುಗಡೆಯಾಗಲಿದ್ದು, ಈ ಹೊಸ ಎಸ್‌ಯುವಿ ಕಾರು ನವೀನ ತಂತ್ರಜ್ಞಾನ ಮತ್ತು ಸುರಕ್ಷತೆ ವೈಶಿಷ್ಟ್ಯಗಳನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ.

ಭಾರತದಲ್ಲಿ, ಹೊಸ ಎಕ್ಸ್‌ಸಿ60 ಕಾರು ಕೇವಲ 2-ಲೀಟರ್ ಡಿ5 ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಬಿಡುಗಡೆಯಾಗಲಿದ್ದು, ಈ ಎಂಜಿನ್ 231 ಬಿಎಚ್‌ಪಿ ಮತ್ತು 470 ಎನ್ಎಂ ಟಾರ್ಕ್ ಶಕ್ತಿಯನ್ನು ಉತ್ಪಾದಿಸುತ್ತದೆ.

ಹೊಸ ಎಕ್ಸ್‌ಸಿ60 ಕಾರಿನ ಎಂಜಿನ್, ಕಾರ್ಯಕ್ಷಮತೆಯ ವಿಚಾರದಲ್ಲಿ ಹೆಚ್ಚು ವಿಶ್ವಾಸವನ್ನು ನೀಡಲಿದೆ. ಇದೇ ಎಂಜಿನ್ ಆಯ್ಕೆಯನ್ನು ಎಕ್ಸ್‌ಸಿ90 ಕಾರಿನಲ್ಲೂ ಅಳವಡಿಸಲಾಗಿದೆ. ಈ ಎಂಜಿನ್, ಆಲ್ ವೆಲ್ ಡ್ರೈವ್ ಆಯ್ಕೆಯ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆಯುತ್ತದೆ.

ಆರಂಭದಲ್ಲಿ, ವೊಲ್ವೊ ಕೇವಲ 2-ಲೀಟರ್ ಡೀಸಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಲಭ್ಯವಿದೆ. ಮುಂದಿನ ಹಂತದಲ್ಲಿ, 315 ಬಿಎಚ್‌ಪಿ ಉತ್ಪಾದಿಸುವಷ್ಟು ಸಾಮರ್ಥ್ಯ ಹೊಂದಿರುವ ಟಿ6 ಪೆಟ್ರೋಲ್ ಇಂಜಿನ್ ತಯಾರಿಸುವ ಯೋಜನೆಯನ್ನು ಕಂಪನಿ ಹೊಂದಿದೆ.

ಭವಿಷ್ಯದಲ್ಲಿ ಎಸ್‌ಯುವಿ ಪೆಟ್ರೋಲ್ ಮತ್ತು ಹೈಬ್ರಿಡ್ ರೂಪಾಂತರಗಳನ್ನು ತರಲು ವೊಲ್ವೊ ನಿರ್ಧರಿಸಿದೆ ಎನ್ನಲಾಗಿದೆ. ವೊಲ್ವೊ ಕಾರನ್ನು ಬೆಂಗಳೂರಿನ ಘಟಕದಲ್ಲಿ ಸಂಯೋಜಿಸಲಾಗುತ್ತದೆ ಎಂಬ ಮಾಹಿತಿ ಇದ್ದು, ಆದರೆ ಈ ಬಗ್ಗೆ ಇನ್ನೂ ಯಾವುದೇ ದೃಢೀಕರಣ ಹೊಂದಿಲ್ಲ ಎಂಬ ವಿಚಾರ ತಿಳಿದು ಬಂದಿದೆ.


Click it and Unblock the Notifications








