ಸ್ಯಾಂಟ್ರೊ ಕಾರಿನ ಬಗ್ಗೆ ಈ ವಿಚಾರ ನಿಮಗೆ ಖುಷಿ ಕೊಡುತ್ತೆ !!

Written By:

ದಕ್ಷಿಣ ಕೊರಿಯಾದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ಸರಿ ಸುಮಾರು 16 ವರ್ಷಗಳ ನಂತರ ಭಾರತದ ಮಾರುಕಟ್ಟೆಗೆ ತನ್ನ ಜನಪ್ರಿಯ ಹ್ಯಾಚ್‌ಬ್ಯಾಕ್ ಸ್ಯಾಂಟ್ರೊ ಕಾರನ್ನು ಬಿಡುಗಡೆಗೊಳಿಸಲು ಯೋಜನೆ ರೂಪಿಸಿದೆ.

ಸ್ಯಾಂಟ್ರೊ ಕಾರಿನ ಬಗ್ಗೆ ಈ ವಿಚಾರ ನಿಮಗೆ ಖುಷಿ ಕೊಡುತ್ತೆ !!

ಈಗಾಗಲೇ ಸಾಕಷ್ಟು ಜನರನ್ನು ಮೋಡಿ ಮಾಡಿ ಹೆಚ್ಚು ಮಾರಾಟಗೊಂಡಿದ್ದ ಸ್ಯಾಂಟ್ರೊ ಕಾರಿನ ಮುಂದಿನ ಪೀಳಿಗೆಯ ಆವೃತಿಯೂ ಭಾರತದಲ್ಲಿ ಮುಂದಿನ ವರ್ಷದ ಜೂನ್ ಅಥವಾ ಜುಲೈ ತಿಂಗಳಿನಲ್ಲಿ ನೆಡೆಯುವ ಆಟೊ ಎಕ್ಸ್‌ಪೂ ಪ್ರದರ್ಶನದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎಂಬ ಖುಷಿಯ ವಿಚಾರ ಹೊರಬಂದಿದೆ.

ಸ್ಯಾಂಟ್ರೊ ಕಾರಿನ ಬಗ್ಗೆ ಈ ವಿಚಾರ ನಿಮಗೆ ಖುಷಿ ಕೊಡುತ್ತೆ !!

"ಮುಂಬರುವ ದಿನಗಳಲ್ಲಿ ಕಂಪೆನಿಯು ಸಣ್ಣ ಕಾರಿನ ಮೇಲೆ ಹೆಚ್ಚು ಕಾರ್ಯ ನಿರ್ವಹಿಸಲು ಮುಂದಾಗಿದೆ" ಎಂಬ ವಿಚಾರವನ್ನು ಹುಂಡೈ ಇಂಡಿಯಾದ ಎಂಡಿ ಮತ್ತು ಸಿಇಒ ವೈ.ಕೆ. ಕೂ ಅವರು ದೃಢಪಡಿಸಿದ್ದಾರೆ.

ಸ್ಯಾಂಟ್ರೊ ಕಾರಿನ ಬಗ್ಗೆ ಈ ವಿಚಾರ ನಿಮಗೆ ಖುಷಿ ಕೊಡುತ್ತೆ !!

"2018ರ ಮಧ್ಯ ಭಾಗದ ಹೊತ್ತಿಗೆ ಹ್ಯುಂಡೈ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಕಾಂಪ್ಯಾಕ್ಟ್ ಫ್ಯಾಮಿಲಿ ಕಾರನ್ನು ಪ್ರಾರಂಭಿಸಲಿದೆ" ಎಂಬ ಮಾಹಿತಿಯನ್ನು ಸಹ ವೈ.ಕೆ. ಕೂ ಅವರು ತಿಳಿಸಿದ್ದಾರೆ.

ಸ್ಯಾಂಟ್ರೊ ಕಾರಿನ ಬಗ್ಗೆ ಈ ವಿಚಾರ ನಿಮಗೆ ಖುಷಿ ಕೊಡುತ್ತೆ !!

ಮುಂದಿನ ಜನರೇಶನ್ ಸ್ಯಾಂಟ್ರೊ ಬಗ್ಗೆ ಯಾವುದೇ ವಿವರಗಳನ್ನು ಸಹ ಕಂಪನಿ ಬಹಿರಂಗಪಡಿಸಲಾಗಿಲ್ಲ ಎನ್ನಬಹುದು. ಆದರೆ ಹಿಂದಿನ ಮಾದರಿಯ 'ಎತ್ತರದ-ಹುಡುಗ' ವಿನ್ಯಾಸವನ್ನು ಈ ಕಾರು ಸಹ ಪಡೆದುಕೊಳ್ಳಲಿದೆ.

ಸ್ಯಾಂಟ್ರೊ ಕಾರಿನ ಬಗ್ಗೆ ಈ ವಿಚಾರ ನಿಮಗೆ ಖುಷಿ ಕೊಡುತ್ತೆ !!

ಆದರೆ ಈ ಹೊಸ ಮಾದರಿಯ ಕಾರು ಹಳೆಯ ಸ್ಯಾಂಟ್ರೊಗೆ ಹೋಲಿಸಿದರೆ ಹೆಚ್ಚು ವಿಶಾಲವಾಗಿ ಇರಲಿದೆ. ಹೊಸ ಸ್ಯಾಂಟ್ರೊ ಕಾರು 0.8 ಲೀಟರ್ ಮತ್ತು 1 ಲೀಟರ್ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದ್ದು, ಈ ಎಂಜಿನ್ ಎಂದಿನಂತೆ 5-ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ವಿಶೇಷತೆ ಪಡೆದುಕೊಳ್ಳಲಿದೆ.

ಸ್ಯಾಂಟ್ರೊ ಕಾರಿನ ಬಗ್ಗೆ ಈ ವಿಚಾರ ನಿಮಗೆ ಖುಷಿ ಕೊಡುತ್ತೆ !!

ಪ್ರೀಮಿಯಂ ಸ್ಪರ್ಶವನ್ನು ಪಡೆದುಕೊಳ್ಳಲಿರುವ ಈ ಹ್ಯಾಚ್‌ಬ್ಯಾಕ್ ಕಾರು, ಕಂಪನಿಯ ಮತ್ತೆರಡು ಯಶಸ್ವಿ ಕಾರುಗಳಾದ ಇಯಾನ್ ಮತ್ತು ಗ್ರ್ಯಾಂಡ್ ಐ10 ನಡುವಿನ ಸ್ಲಾಟ್‌ನಲ್ಲಿ ಮಾರಾಟವಾಗಲಿದೆ.

ಸ್ಯಾಂಟ್ರೊ ಕಾರಿನ ಬಗ್ಗೆ ಈ ವಿಚಾರ ನಿಮಗೆ ಖುಷಿ ಕೊಡುತ್ತೆ !!

ಕಳೆದ 16 ವರ್ಷಗಳ ಅವಧಿಯಲ್ಲಿ ಹ್ಯುಂಡೈ ಕಂಪನಿ 18.95 ಲಕ್ಷ ಸ್ಯಾಂಟ್ರೊ ವಾಹನಗಳನ್ನು ಮಾರಾಟ ಮಾಡಿದ್ದು, ಈಗ ಮತ್ತೆ ಸ್ಯಾಂಟ್ರೊ ಕಾರನ್ನು ಬಿಡುಗಡೆ ಮಾಡುವ ಮೂಲಕ ಎಂಟ್ರಿ ಲೆವೆಲ್ ವಿಭಾಗದಲ್ಲಿ ಮತ್ತೆ ತನ್ನ ಅಧಿಪತ್ಯ ಸಾಧಿಸಲು ಮುಂದಾಗಿದೆ

English summary
South Korean automaker Hyundai pulled the plugs off its popular hatchback, the Santro in 2014 in the Indian market after 16 years of its existence.
Story first published: Saturday, August 26, 2017, 18:06 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark