ಹ್ಯುಂಡೈ ವೆರ್ನಾ ಕಾರಿನ ಕೈಪಿಡಿ ಸೋರಿಕೆ

Written By:

ದಕ್ಷಿಣ ಕೊರಿಯಾದ ತಯಾರಕ ಹ್ಯುಂಡೈ ಸಂಸ್ಥೆ ತನ್ನ ಬಹುನಿರೀಕ್ಷಿತ ವೆರ್ನಾ ಸೆಡಾನ್ ಕಾರನ್ನು ಆಗಸ್ಟ್ 22 ರಂದು ಭಾರತದಲ್ಲಿ ಆರಂಭಿಸಲು ಮುಂದಾಗಿದ್ದು, ಕಾರಿನ ಮಾಹಿತಿಯ ಕೈಪಿಡಿ ಸೋರಿಕೆಯಾಗಿದೆ.

To Follow DriveSpark On Facebook, Click The Like Button
ಆಗಸ್ಟ್ 22ಕ್ಕೆ ಬಿಡುಗಡೆಯಾಗಲಿರುವ ಹ್ಯುಂಡೈ ವೆರ್ನಾ ಕಾರಿನ ಕೈಪಿಡಿ ಸೋರಿಕೆ

ಕಾರಿನ ತಾಂತ್ರಿಕ ವಿಶೇಷಣಗಳು, ಸುರಕ್ಷತಾ ಲಕ್ಷಣಗಳನ್ನು ಹೊಂದಿರುವ ಹೊಚ್ಚ ಹೊಸ ಮಾದರಿಯ ವೆರ್ನಾ ಕಾರನ್ನು ಅನಾವರಣಗೊಳಿಸಲು ಹ್ಯುಂಡೈ ಸಂಸ್ಥೆ ಮುಂದಾಗಿದ್ದು, ಸೋರಿಕೆಯಾಗಿರುವ ಕೈಪಿಡಿಯಲ್ಲಿ ಕಾರಿನ ವಿಶಿಷ್ಟ ಫೀಚರ್ಸ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಆಗಸ್ಟ್ 22ಕ್ಕೆ ಬಿಡುಗಡೆಯಾಗಲಿರುವ ಹ್ಯುಂಡೈ ವೆರ್ನಾ ಕಾರಿನ ಕೈಪಿಡಿ ಸೋರಿಕೆ

ಕೈಪಿಡಿ ಪ್ರಕಾರ ಪ್ರೀಮಿಯಂ ಲಕ್ಷಣಗಳನ್ನು ಹೊಂದಿರುವ ಈ ಕಾರು ಇ, ಇಎಕ್ಸ್, ಮತ್ತು ಎಸ್ಎಕ್ಸ್ ಎಸ್ಎಕ್ಸ್(ಒ) ಎಂಬ ಐದು ವಿವಿಧ ಆವೃತಿಗಳಲ್ಲಿ ಈ ಹೊಸ ಜನರೇಶನ್ ಕಾರು ಬಿಡುಗಡೆಗೊಳ್ಳಲಿದೆ.

ಆಗಸ್ಟ್ 22ಕ್ಕೆ ಬಿಡುಗಡೆಯಾಗಲಿರುವ ಹ್ಯುಂಡೈ ವೆರ್ನಾ ಕಾರಿನ ಕೈಪಿಡಿ ಸೋರಿಕೆ

ಮುಂಭಾಗದಲ್ಲಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ವಿಶೇಷ ಹ್ಯುಂಡೈ ವೆರ್ನಾ ಕಾರು ಕ್ರೋಮ್ ವೈಶಿಷ್ಟ್ಯ ಪಡೆದುಕೊಂಡ ಗ್ರಿಲ್, ಪ್ರೊಜೆಕ್ಟರ್ ಫಾಗ್ ಲ್ಯಾಂಪ್ ಮತ್ತು ಹಗಲು ಹೊತ್ತು ಬೆಳಗುವ ದೀಪಗಳು ಮತ್ತು ಸ್ಥಾನಿಕ ದೀಪಗಳನ್ನು ಈ ಕಾರು ಹೊಂದಿರಲಿದೆ.

ಆಗಸ್ಟ್ 22ಕ್ಕೆ ಬಿಡುಗಡೆಯಾಗಲಿರುವ ಹ್ಯುಂಡೈ ವೆರ್ನಾ ಕಾರಿನ ಕೈಪಿಡಿ ಸೋರಿಕೆ

ಸೆಡಾನ್ ಕಾರಿನ ಹಿಂಭಾಗದಲ್ಲಿ ಎಲ್ಇಡಿ ಟೇಲ್ ದೀಪಗಳು, ಶಾರ್ಕ್ ಫಿನ್ ಆಂಟೆನಾ, ಕ್ರೋಮ್ ಬೆಲ್ಟ್‌ಲೈನ್ ಮತ್ತು ಡಿಕ್ಕಿಯ ಮುಚ್ಚಳದ ಮೇಲಿನ ಕ್ರೋಮ್ ವಿವರಣೆ ನೋಡಬಹುದಾಗಿದೆ.

ಆಗಸ್ಟ್ 22ಕ್ಕೆ ಬಿಡುಗಡೆಯಾಗಲಿರುವ ಹ್ಯುಂಡೈ ವೆರ್ನಾ ಕಾರಿನ ಕೈಪಿಡಿ ಸೋರಿಕೆ

ಉನ್ನತ ಮಾದರಿಯ ಎಸ್ಎಕ್ಸ್(ಒ) ಟ್ರಿಮ್ ಕಾರು ವೆಂಟಿಲೈಸ್ಡ್ ಮುಂಭಾಗದ ಆಸನಗಳು, ವೇಗ ನಿಯಂತ್ರಕ, ಕೈಚಾಚಬಹುದಾದ ಆರ್ಮ್‌ರೆಸ್ಟ್ ಮತ್ತು, ಮುಂಭಾಗದಲ್ಲಿ ಮತ್ತು ಹಿಂಬದಿಯಲ್ಲಿ ಯುಎಸ್‌ಬಿ ಚಾರ್ಜರ್, ಸನ್ರೂಫ್ ಮತ್ತು ಹಿಂಬದಿಯಲ್ಲಿ ಹವಾನಿಯಂತ್ರಿತ ದ್ವಾರಗಳನ್ನು ಪಡೆದುಕೊಳ್ಳಲಿದೆ.

ಆಗಸ್ಟ್ 22ಕ್ಕೆ ಬಿಡುಗಡೆಯಾಗಲಿರುವ ಹ್ಯುಂಡೈ ವೆರ್ನಾ ಕಾರಿನ ಕೈಪಿಡಿ ಸೋರಿಕೆ

ಎಸ್ಎಕ್ಸ್(ಒ) ಮತ್ತು ಎಸ್ಎಕ್ಸ್ ಆವೃತಿಗಳ ಒಳಭಾಗದಲ್ಲಿ, 7 ಇಂಚಿನ ಟಚ್ ಸ್ಕ್ರೀನ್ ಟಿವಿ ವ್ಯವಸ್ಥೆ ಹೊಂದಿರುತ್ತದೆ. ಈ 7 ಇಂಚಿನ ಟಚ್ ಸ್ಕ್ರೀನ್ ಪರದೆಯು ಆಂಡ್ರಾಯ್ಡ್ ಆಟೊ, ಆಪಲ್ ಕಾರ್‌ಪ್ಲೇ ಮತ್ತು ಮಿರರ್ ಲಿಂಕ್ ಕನೆಕ್ಟಿವಿಟಿ ವ್ಯವಸ್ಥೆ ಹೊಂದಿದೆ.

ಆಗಸ್ಟ್ 22ಕ್ಕೆ ಬಿಡುಗಡೆಯಾಗಲಿರುವ ಹ್ಯುಂಡೈ ವೆರ್ನಾ ಕಾರಿನ ಕೈಪಿಡಿ ಸೋರಿಕೆ

ಹೊಸ ವೆರ್ನಾ ಕಾರಿನ ಎಲ್ಲಾ ರೂಪಾಂತರಗಳಲ್ಲಿ ಎರಡು ಗಾಳಿಚೀಲಗಳು, ಎಬಿಎಸ್ ಮತ್ತು ಇಬಿಡಿ ಸುರಕ್ಷಾ ವೈಶಿಷ್ಟ್ಯಗಳನ್ನು ಸೌಲಭ್ಯ ಪಡೆದುಕೊಳ್ಳಲಿವೆ. ಆದರೆ ಉನ್ನತ ಮಾದರಿಯ ಎಸ್ಎಕ್ಸ್(ಒ) ಟ್ರಿಮ್ ಕಾರು ಆರು ಗಾಳಿಚೀಲಗಳು ಪಡೆಯುತ್ತದೆ.

ಆಗಸ್ಟ್ 22ಕ್ಕೆ ಬಿಡುಗಡೆಯಾಗಲಿರುವ ಹ್ಯುಂಡೈ ವೆರ್ನಾ ಕಾರಿನ ಕೈಪಿಡಿ ಸೋರಿಕೆ

ಕೆ 2 ಫ್ಲ್ಯಾಟ್ ಫಾರ್ಮ್ ಆಧಾರ ಮೇಲೆ ಅಭಿವೃದ್ದಿಗೊಂಡಿರುವ 5ನೇ ಜನರೇಷನ್ ಹ್ಯುಂಡೈ ವೆರ್ನಾ ಕಾರು, 1.6-ಲೀಟರ್ ಪೆಟ್ರೋಲ್ ಮತ್ತು 1.6-ಲೀಟರ್ ಡೀಸೆಲ್ ಎಂಬ ಎರಡು ಎಂಜಿನ್ ಆಯ್ಕೆಯನ್ನು ಹೊಂದಿದೆ.

ಆಗಸ್ಟ್ 22ಕ್ಕೆ ಬಿಡುಗಡೆಯಾಗಲಿರುವ ಹ್ಯುಂಡೈ ವೆರ್ನಾ ಕಾರಿನ ಕೈಪಿಡಿ ಸೋರಿಕೆ

ಪೆಟ್ರೋಲ್ ಎಂಜಿನ್ 151 ಏನ್‌ಎಂ ತಿರುಗುಬಲದಲ್ಲಿ 121ರಷ್ಟು ಟಾರ್ಕ್ ಉತ್ಪಾದಿಸುತ್ತದೆ ಮತ್ತು ಡೀಸೆಲ್ ಎಂಜಿನ್ 260 ಏನ್‌ಎಂ ತಿರುಗುಬಲದಲ್ಲಿ 126ರಷ್ಟು ಟಾರ್ಕ್ ಉತ್ಪಾದಿಸುತ್ತದೆ.

ಆಗಸ್ಟ್ 22ಕ್ಕೆ ಬಿಡುಗಡೆಯಾಗಲಿರುವ ಹ್ಯುಂಡೈ ವೆರ್ನಾ ಕಾರಿನ ಕೈಪಿಡಿ ಸೋರಿಕೆ

ಮಾರುತಿ ಸುಜುಕಿ ಸಿಯಾಜ್ ಮತ್ತು ಹೋಂಡಾ ಸಿಟಿ ಕಾರುಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಈ ಹ್ಯುಂಡೈ ಇಂಡಿಯಾ ಸಂಸ್ಥೆಯ ನ್ಯೂ ಜನರೇಷನ್ ವೆರ್ನಾ ಕಾರು ಆಗಸ್ಟ್ 22ಕ್ಕೆ ಬಿಡುಗಡೆಯಾಗುತ್ತಿದ್ದು, ಜನರು ಹೇಗೆ ಸ್ವೀಕರಿಸಲಿದ್ದಾರೆ ಎನ್ನವುದನ್ನು ಕಾದು ನೋಡಬೇಕಾಗಿದೆ.

English summary
South Korean automaker Hyundai is all set to launch the next-gen Verna in India on August 22, 2017. Ahead of that Next-Gen Hyundai Verna Brochure Leaked Ahead Of Launch
Story first published: Wednesday, August 16, 2017, 17:36 [IST]
Please Wait while comments are loading...

Latest Photos