ನೆಕ್ಸ್ಟ್ ಜನರೇಷನ್ ನಿಸ್ಸಾನ್ ಮೈಕ್ರಾ ಕಾರು ಬಿಡುಗಡೆ ಯಾವಾಗ?
ಸಣ್ಣ ಕಾರುಗಳಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ನಿಸ್ಸಾನ್ ಮೈಕ್ರಾ ನೆಕ್ಸ್ಟ್ ಜನರೇಷನ್ ಕಾರು ಮಾದರಿಯು ಬಿಡುಗಡೆಗೊಳ್ಳಲು ಸಜ್ಜುಗೊಳ್ಳುತ್ತಿದ್ದು, ಹೊಸ ಬಗೆಯ ಕಾರಿನ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಣ್ಣ ಕಾರುಗಳಲ್ಲೇ ಅತಿ ಹೆಚ್ಚು ಬೇಡಿಕೆ ಹೊಂದಿರುವ ನಿಸ್ಸಾನ್ ಮೈಕ್ರಾ ನೆಕ್ಸ್ಟ್ ಜನರೇಷನ್ ಕಾರು ಮಾದರಿಯು ಬಿಡುಗಡೆಗೊಳ್ಳಲು ಸಜ್ಜುಗೊಳ್ಳುತ್ತಿದ್ದು, ಹೊಸ ಬಗೆಯ ಕಾರಿನ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಜಪಾನ್ ಮೂಲದ ಕಾರು ಉತ್ಪಾದನಾ ಸಂಸ್ಥೆ ನಿಸ್ಸಾನ್ ಸದ್ಯದಲ್ಲೇ ಹೊಸ ವೈಶಿಷ್ಟ್ಯತೆಗಳನ್ನು ಹೊಂದಿರುವ ನೆಕ್ಸ್ಟ್ ಜನರೇಷನ್ ಮೈಕ್ರಾ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿದ್ದು, 2019ರ ಮೊದಲ ತ್ರೈಮಾಸಿಕ ಅವಧಿಗೆ ಗ್ರಾಹಕರ ಕೈ ಸೇರುವ ನೀರಿಕ್ಷೆಯಿದೆ.

ನೆಕ್ಸ್ಟ್ ಜನರೇಷನ್ ನಿಸ್ಸಾನ್ ಮೈಕ್ರಾ ಕಾರು ಸಂಪೂರ್ಣ ಹೊಸತನವನ್ನು ಪಡೆದುಕೊಂಡಿದ್ದು, ಸಿಎಂಎಫ್ ಎ ಪ್ಲಸ್ ಫ್ಯಾಟ್ ಫಾರಂ ತಂತ್ರಜ್ಞಾನ ವಿಭಾಗದಿಂದ ಅಭಿವೃದ್ಧಿ ಹೊಂದಿರುವುದು ಮತ್ತೊಂದು ವಿಶೇಷ.

ಹೀಗಾಗಿ ಸದ್ಯ ಲಭ್ಯವಿರುವ ಮೈಕ್ರಾ ಬೆಲೆಗಳಿಂತಲೂ ನೆಕ್ಸ್ಟ್ ಜನರೇಷನ್ ಮೈಕ್ರಾ ಬೆಲೆಗಳನ್ನು ಕಡಿಮೆಯಾಗಲಿದ್ದು, ಪೆಟ್ರೋಲ್ ಆವೃತ್ತಿಯಲ್ಲಿ ಮಾತ್ರವೇ ಹೊಸ ಕಾರು ಲಭ್ಯವಿರಲಿವೆ.

ಪೆಟ್ರೋಲ್ ಆವೃತ್ತಿಯ ನೆಕ್ಸ್ಟ್ ಜನರೇಷನ್ ನಿಸ್ಸಾನ್ ಮೈಕ್ರಾ ಕಾರು 1.5-ಲೀಟರ್ ಎಂಜಿನ್ ಹೊಂದಿದ್ದು, 106-ಬಿಎಚ್‌ಪಿ ಉತ್ಪಾದನಾ ಶಕ್ತಿ ಹೊಂದಿರುವ ಪ್ರಸ್ತುತ 1.5-ಲೀಟರ್ ಕಾರು ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

5-ಸ್ಪೀಡ್ ಗೇರ್‌ಬಾಕ್ಸ್ ಹಾಗೂ ಎಕ್ಸ್-ಟ್ರಾನಿಕ್ ಸಿವಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರುವ ನೆಕ್ಸ್ಟ್ ಜನರೇಷನ್ ನಿಸ್ಸಾನ್ ಮೈಕ್ರಾ, ಮಾರುತಿ ಸ್ವಿಫ್ಟ್ ಮತ್ತು ಹ್ಯುಂಡೈ ಗ್ರ್ಯಾಂಡ್ ಐ10 ಕಾರುಗಳಿಗೆ ನೇರ ಸ್ಪರ್ಧಿಯಾಗಲಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ನೆಕ್ಸ್ಟ್ ಜನರೇಷನ್ ನಿಸ್ಸಾನ್ ಮೈಕ್ರಾ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಹೊಂದುವುದರಲ್ಲಿ ಯಾವುದೇ ಸಂಶಯವಿಲ್ಲ. ಆದ್ರೆ ಸ್ಪರ್ಧಾತ್ಮಕ ಬೆಲೆಗಳಲ್ಲಿ ಬಿಡುಗಡೆಯಾದರೇ ಮಾತ್ರ ಹೊಸ ಕಾರು ಪ್ರಮುಖ ಕಾರುಗಳನ್ನು ಹಿಂದಿಕ್ಕಲು ಸಾಧ್ಯವಾಗಲಿದೆ ಎನ್ನಬಹುದು.


Click it and Unblock the Notifications