ದೀಪಾವಳಿ ವಿಶೇಷಾಂಕ- ಕಾರು ಖರೀದಿ ಮೇಲೆ ನಿಸ್ಸಾನ್‌ನಿಂದ ಭರ್ಜರಿ ಆಫರ್
ದೀಪಾವಳಿ ಸಂಭ್ರಮಕ್ಕೆ ಇನ್ನು 15 ದಿನಗಳು ಮಾತ್ರ ಬಾಕಿ ಇವೆ. ಈ ಹಿನ್ನೆಲೆ ಕಾರು ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿರುವ ನಿಸ್ಸಾನ್ ಸಂಸ್ಥೆಯು "ಬಿಗೆಸ್ಟ್ ದಿವಾಲಿ ಕಾರ್ನಿವಾಲಾ" ಎಂಬ ಕಾರ್ಯಕ್ರಮವನ್ನು ಆರಂಭ ಮಾಡಿದೆ.
ಶತಮಾನದ ಪರಂಪರೆಯಾಗಿರುವ ದೀಪಾವಳಿ ಸಂಭ್ರಮಕ್ಕೆ ಇನ್ನು 15 ದಿನಗಳು ಮಾತ್ರ ಬಾಕಿ ಇವೆ. ಈ ಹಿನ್ನೆಲೆ ಕಾರು ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿರುವ ನಿಸ್ಸಾನ್ ಸಂಸ್ಥೆಯು "ಬಿಗೆಸ್ಟ್ ದಿವಾಲಿ ಕಾರ್ನಿವಾಲಾ" ಎಂಬ ಕಾರ್ಯಕ್ರಮವನ್ನು ಆರಂಭ ಮಾಡಿದೆ.

ಉತ್ಸವ ದಿನಗಳ ಸಂದರ್ಭದಲ್ಲಿ ತನ್ನ ಕಾರು ಉತ್ಪನ್ನಗಳ ಭರ್ಜರಿ ಮಾರಾಟಕ್ಕಾಗಿ ಬೃಹತ್ ಯೋಜನೆ ರೂಪಿಸಿರುವ ನಿಸ್ಸಾನ್ ಇಂಡಿಯಾ, ದೀಪಾವಳಿ ವಿಶೇಷ ಹಿನ್ನೆಲೆಯಲ್ಲಿ ವಿಶೇಷ ದರಗಳಲ್ಲಿ ಕಾರು ಮಾರಾಟ ಮತ್ತು ಹತ್ತು ಹಲವು ಸೌಲಭ್ಯಗಳನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯುವ ತಂತ್ರಕ್ಕೆ ಕೈಹಾಕಿದೆ.

ನಿಸ್ಸಾನ್ ದೀಪಾವಳಿ ವಿಶೇಷಾಂಕವಾಗಿ ಅಕ್ಟೋಬರ್ 7 ರಿಂದ ಅಕ್ಟೋಬರ್ 10ರ ವರೆಗೆ ಖರೀದಿಸುವ ಕಾರುಗಳ ಮೇಲೆ ಭಾರೀ ಪ್ರಮಾಣ ಡಿಸ್ಕೌಂಟ್ ಹಾಗೂ ಹಣಕಾಸಿನ ನೆರವು, ಕಡಿಮೆ ಬಡ್ಡಿದರಗಳಲ್ಲಿ ಸಾಲ ಮುಂಜೂರಾತಿ, ಎಕ್ಸ್‌ಚೆಂಜ್ ಬೋನಸ್, ಉಚಿತ ಇನ್ಸುರೆನ್ಸ್ ಆಫರ್‌ಗಳನ್ನು ನೀಡಲು ಮುಂದಾಗಿದೆ.

ಅದರಲ್ಲೂ ವಿಶೇಷವಾಗಿ ನಿಸ್ಸಾನ್ ನಿರ್ಮಾಣದ ಮೈಕ್ರಾ ಹಾಗೂ ಡಟ್ಸನ್ ಕಾರುಗಳ ಮೇಲೆ ಹೆಚ್ಚಿನ ಸೌಲಭ್ಯಗಳನ್ನು ನೀಡಲು ಮುಂದಾಗಿರುವ ನಿಸ್ಸಾನ್, ಒಟ್ಟು 100 ಗಂಟೆಗಳ ಕಾಲ ಆಫರ್‌ಗಳ ಸುರಿಮಳೆ ನಡೆಸಲಿದೆ.

ಜೊತೆಗೆ ನಿಸ್ಸಾನ್ ನಿರ್ಮಾಣದ ಟೆರಾನೋ ಮತ್ತು ನಿಸ್ಸಾನ್ ಸನ್ನಿ, ಡಟ್ಸನ್ ರೆಡಿ ಗೊ ಪ್ಲಸ್ ಸೇರಿದಂತೆ ಪ್ರಮುಖ ಕಾರು ಮಾದರಿಗಳ ಖರೀದಿ ಮೇಲೂ ಆಕರ್ಷಕ ಆಫರ್ ನೀಡಲಾಗುತ್ತಿದ್ದು, ರೂ.50 ಸಾವಿರ ಮೌಲ್ಯದ ಉಚಿತ ಇನ್ಸುರೆನ್ಸ್ ಕೂಡಾ ನೀಡುವ ಭರವಸೆ ವ್ಯಕ್ತಪಡಿಸಿದೆ.

ಈ ಬಗ್ಗೆ ಮಾತನಾಡಿರುವ ನಿಸ್ಸಾನ್ ಮೋಟಾರ್ ಇಂಡಿಯಾ ಪ್ರೈ. ಲಿಮಿಟೆಡ್‌ನ ಹೆಡ್ ಆಫ್ ಸೇಲ್ಸ್ ಆ್ಯಂಡ್ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ಜೆರೋಮ್ ಸೈಗೋಟ್, "ದೀಪಾವಳಿ ಹಿನ್ನೆಲೆ ಗ್ರಾಹಕರಿಗೆ ವಿಶೇಷ ಆಫರ್‌ಗಳನ್ನು ನೀಡುವ ಬಗ್ಗೆ ನಿಸ್ಸಾನ್ ಮಹತ್ವದ ನಿರ್ಧಾರವನ್ನು ಪ್ರಕಟಿಸುತ್ತಿದ್ದು, ಇಂತಹ ಆಫರ್‌ಗಳನ್ನು ಬೇರೊಂದು ವಾಹನ ಉತ್ಪಾದನಾ ಸಂಸ್ಥೆಗಳು ನೀಡಲು ಸಾಧ್ಯವಿಲ್ಲ" ಎಂದಿದ್ದಾರೆ.

ಈ ಹಿನ್ನೆಲೆ ಆಸಕ್ತ ಗ್ರಾಹಕರು ನಿಮ್ಮ ಹತ್ತಿರದ ನಿಸ್ಸಾನ್ ಕಾರುಗಳ ಮಾರಾಟ ಮಳಿಗೆಗಳನ್ನು ಭೇಟಿಯಾಗಿ ಡಿಸ್ಕೌಂಟ್‌ಗಳ ಬಗೆಗೆ ಮಾಹಿತಿ ಪಡೆಯಬಹುದಾಗಿದ್ದು, ಅತ್ಯುತ್ತಮ ಆಫರ್‌ಗಳ ಹಿನ್ನೆಲೆ ಕಾರು ಖರೀದಿಗೆ ಇದೊಂದು ಉತ್ತಮ ಅವಕಾಶ ಎನ್ನಬಹುದು.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ದೀಪಾವಳಿ ವಿಶೇಷತೆಗಾಗಿ ಇದೆ ಮೊದಲ ಬಾರಿಗೆ ಭರ್ಜರಿ ಆಫರ್‌ಗಳನ್ನು ಘೋಷಣೆ ಮಾಡಿರುವ ನಿಸ್ಸಾನ್ ಸಂಸ್ಥೆಯು ಗ್ರಾಹಕರನ್ನು ಸೆಳೆಯುವ ಉದ್ದೇಶಗಳೊಂದಿಗೆ ಇಂತದೊಂದು ಮಹತ್ಪದ ಪ್ರಕಟಣೆ ಹೊರಡಿಸಿರುವುದು ಗಮನಾರ್ಹ.


Click it and Unblock the Notifications








