ಮಹಿಳೆಗೆ ವಂಚಿಸಿದ ಕಾರ್ ಡೀಲರ್‌‌ಗೆ ಬಿತ್ತು ಭಾರೀ ದಂಡ..!!

Written By:

ಹೈದ್ರಾಬಾದ್‌ನ ನಿಸ್ಸಾನ್ ಕಾರು ಡೀಲರ್ ಒಬ್ಬರ ಬಳಿ ವಾಹನ ಖರೀದಿಗೆ ಮುಂದಾಗಿದ್ದ 75 ವರ್ಷದ ಮಹಿಳೆಯೊಬ್ಬರು ಅದಕ್ಕಾಗಿ ಮುಂಗಡ ಹಣ ಪಾವತಿಸಿದ್ದರು. ಆದ್ರೆ ಹೊಸ ಕಾರು ಒದಗಿಬೇಕಿದ್ದ ಡೀಲರ್ ಮಾತ್ರ ಮಹಿಳೆಗೆ ವಂಚಿಸಲು ಯತ್ನಿಸಿ ಭಾರೀ ಪ್ರಮಾಣದ ದಂಡ ತೆತ್ತಿದ್ದಾನೆ.

ಮಹಿಳೆಗೆ ವಂಚಿಸಿದ ಕಾರ್ ಡೀಲರ್‌‌ಗೆ ಬಿತ್ತು ಭಾರೀ ದಂಡ..!!

2013ರಲ್ಲಿ ಹೈದ್ರಾಬಾದ್‌ನ ಧನಲಕ್ಷ್ಮೀ ನಿಸ್ಸಾನ್ ಡೀಲರ್ಸ್ ಬಳಿ ಇವಾಲಿಯಾ XV ಆವೃತ್ತಿಯ ಕಾರಿಗಾಗಿ 75 ವರ್ಷದ ಮಹಿಳೆಯೊಬ್ಬರು ಬುಕ್ಕಿಂಗ್ ಮಾಡಿರುತ್ತಾರೆ. ಆದ್ರೆ ಮುಂಗಡ ಪಡೆದಿದ್ದ ಡೀಲರ್ ಮಾತ್ರ ಕಾರು ಒದಗಿಸದೇ ವಂಚನೆ ಮಾಡಲು ಮುಂದಾಗಿದ್ದ. ಕೊನೆಗೂ ಕಾರಿಗಾಗಿ ಅಲೆದು ಅಲೆದು ಸುಸ್ತಾಗಿದ್ದ ಆ ಮಹಿಳೆ ಗ್ರಾಹಕರ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿದ್ದರು.

ಮಹಿಳೆಗೆ ವಂಚಿಸಿದ ಕಾರ್ ಡೀಲರ್‌‌ಗೆ ಬಿತ್ತು ಭಾರೀ ದಂಡ..!!

ಸುಮಾರು 2 ವರ್ಷಗಳ ನಂತರ ಬುಕ್ಕಿಂಗ್ ಮಾಡಿದ್ದ ಕಾರ್‌ನ್ನು ಪಡೆದಿದ್ದ ಹೈದ್ರಾಬಾದ್ ಮೂಲದ ಮಹಿಳೆ, ಧನಲಕ್ಷ್ಮೀ ನಿಸ್ಸಾನ್ ಡೀಲರ್ ವಿರುದ್ಧ ಕೇಸ್ ದಾಖಲಿಸಿದ್ದರು. ತನಗಾದ ನೋವಿನ ಬಗ್ಗೆ ಕೋರ್ಟ್ ಎದುರು ವಿವರಣೆ ನೀಡಿ, 3 ಲಕ್ಷ ರೂಪಾಯಿ ಪರಿಹಾರಕ್ಕಾಗಿ ಬೇಡಿಕೆಯಿಟ್ಟಿದ್ದರು.

ಮಹಿಳೆಗೆ ವಂಚಿಸಿದ ಕಾರ್ ಡೀಲರ್‌‌ಗೆ ಬಿತ್ತು ಭಾರೀ ದಂಡ..!!

ಗ್ರಾಹಕರ ನ್ಯಾಯಾಲಯದಲ್ಲಿ ಮಹಿಳೆ ನೀಡಿದ ದೂರಿನ ಬಗ್ಗೆ ಮೊದಮೊದಲು ಅಸಡ್ಡೆ ಮಾಡಿದ್ದ ಕಾರ್ ಡೀಲರ್, ಪೋಲಿಸರಿಗೆ ಲಂಚ ನೀಡಿ ಕೇಸ್ ಮುಚ್ಚಿಹಾಕಲು ಯತ್ನಿಸಿದ್ದ. ಈ ಬಗ್ಗೆ ಕೋರ್ಟ್ ಗಮನಕ್ಕೆ ತಂದಿದ್ದ ನೊಂದ ಮಹಿಳೆಯು, ತನಗೆ ಅನ್ಯಾಯವಾಗುತ್ತಿದ್ದು 3 ಲಕ್ಷ ಪರಿಹಾರ ನೀಡಲೇಬೇಕು ಎಂದು ಪಟ್ಟು ಹಿಡಿದ್ದಳು.

ಮಹಿಳೆಗೆ ವಂಚಿಸಿದ ಕಾರ್ ಡೀಲರ್‌‌ಗೆ ಬಿತ್ತು ಭಾರೀ ದಂಡ..!!

ಮಹಿಳೆ ನೀಡಿದ್ದ ದೂರಿನ ಬಗ್ಗೆ ಕುಲಂಕೂಶವಾಗಿ ವಿಚಾರಣೆ ಮಾಡಿದಾಗ ಕಾರ್ ಡೀಲರ್ ನಟೌಂಕಿ ಆಟ ಬಯಲಾಗಿತ್ತು. ಜೊತೆಗೆ ಪೊಲೀಸರಿಗೆ 10 ಸಾವಿರ ಲಂಚ ನೀಡಿದ್ದ ವಿಚಾರವೂ ಕೋರ್ಟ್ ಗಮನಕ್ಕೆ ಬಂದಿದ್ದರಿಂದ ನೊಂದ ಮಹಿಳೆಯ ಬೇಡಿಕೆಗೆ ನ್ಯಾಯಾಲಯ ಕೂಡಾ ಸಮ್ಮತಿಸಿತ್ತು.

ಮಹಿಳೆಗೆ ವಂಚಿಸಿದ ಕಾರ್ ಡೀಲರ್‌‌ಗೆ ಬಿತ್ತು ಭಾರೀ ದಂಡ..!!

ಇಷ್ಟೆಲ್ಲಾ ತಪ್ಪು ಇದ್ದರು ಕೋರ್ಟ್‌ ವಿಚಾರಣೆಗೆ ಮಾತ್ರ ಕಾರ್ ಡೀಲರ್ ಖುದ್ದು ಹಾಜರಾಗಲಿಲ್ಲ. ಡೀಲರ್ ವರ್ತನೆಗೆ ಗದರಿದ ಕೋರ್ಟ್, ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಮತ್ತೊಮ್ಮೆ ನೋಟಿಸ್ ನೀಡಿತ್ತು. ಆಗ ವಿಚಾರಣೆಗೆ ಹಾಜರಾದಾಗ ಡೀಲರ್‌ಗೆ ಚಳಿ ಬೀಡಿಸಿದ ಕೋರ್ಟ್, ನೊಂದ ಮಹಿಳೆಗೆ 3 ಲಕ್ಷ ಪರಿಹಾರ ನೀಡುವಂತೆ ಖಡಕ್ ಆದೇಶ ನೀಡಿದೆ.

ಮಹಿಳೆಗೆ ವಂಚಿಸಿದ ಕಾರ್ ಡೀಲರ್‌‌ಗೆ ಬಿತ್ತು ಭಾರೀ ದಂಡ..!!

ಸದ್ಯ ಹೊಸ ಕಾರ್ ಖರೀದಿಯ ಜೊತೆ 3 ಲಕ್ಷ ರೂಪಾಯಿ ಪರಿಹಾರ ಪಡೆದಿರುವ ನೊಂದ ಮಹಿಳೆಯು, ಕಾರ್ ಡೀಲರ್‌ಗೆ ಸರಿಯಾಗಿಯೇ ಬುದ್ದಿ ಕಲಿಸಿದ್ದಾರೆ. ಜೊತೆಗೆ ವೃದ್ಧ ಮಹಿಳೆಗೆ ವಂಚನೆ ಮಾಡಲು ಮುಂದಾಗಿದ್ದ ಡೀಲರ್‌ ಮಾತ್ರ ಭಾರೀ ಪ್ರಮಾಣದ ದಂಡ ತೆತ್ತು ನಗೆಪಾಟಲಿಗೆ ಈಡಾಗಿದ್ದಾನೆ.

ಮಹಿಳೆಗೆ ವಂಚಿಸಿದ ಕಾರ್ ಡೀಲರ್‌‌ಗೆ ಬಿತ್ತು ಭಾರೀ ದಂಡ..!!

ಒಂದು ವೇಳೆ ನೀವು ನಿಸ್ಸಾನ್ ಕಾರು ಖರೀದಿಯ ಯೋಜನೆಯಲ್ಲಿದ್ದರೆ 2017ರ ಮೈಕ್ರಾ ಕಾರುಗಳ ಚಿತ್ರಗಳಿಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

English summary
Nissan dealer found guilty by the Consumer Forum — ends up paying the customer.
Story first published: Monday, March 6, 2017, 11:33 [IST]
Please Wait while comments are loading...

Latest Photos