ನಿಸ್ಸಾನ್ ಮೈಕ್ರಾ 2017 ಕಾರು ಭಾರತದಲ್ಲಿ ಬಿಡುಗಡೆ : ಬೆಲೆ, ವಿವರ ಇಲ್ಲಿದೆ

Written By:

ಬಹು ನಿರೀಕ್ಷಿತ ನಿಸ್ಸಾನ್ ಮೈಕ್ರಾ ಭಾರತದಲ್ಲಿ ಬಿಡುಗಡೆಯಾಗಿದ್ದು, ಹೊಸ ನಿಸ್ಸಾನ್ ಮೈಕ್ರಾ ರೂ. 5.99 ಲಕ್ಷ ರೂ. (ಎಕ್ಸ್ ಷೋ ರೂಂ ದೆಹಲಿ) ಬೆಲೆ ನಿಗದಿಪಡಿಸಲಾಗಿದೆ.

To Follow DriveSpark On Facebook, Click The Like Button
ನಿಸ್ಸಾನ್ ಮೈಕ್ರಾ 2017 ಕಾರು ಭಾರತದಲ್ಲಿ ಬಿಡುಗಡೆ : ಬೆಲೆ, ವಿವರ ಇಲ್ಲಿದೆ

ಇಂದು ಬಿಡುಗಡೆಗೊಂಡ ನವೀಕರಿಸಿದ ಮೈಕ್ರಾ 2017 ಕಾರಿನ ಬಗ್ಗೆ ಈ ಮೊದಲೇ ತನ್ನ ಅಧಿಕೃತ ಸಾಮಾಜಿಕ ತಾಣದಲ್ಲಿ ಟೀಸರ್ ಬಿಡುಗಡೆಗೊಳಿಸಿದ್ದ ನಿಸ್ಸಾನ್, ಭಾರತದಲ್ಲಿ ಬಿಡುಗಡೆಗೊಳಿಸಿದೆ.

ನಿಸ್ಸಾನ್ ಮೈಕ್ರಾ 2017 ಕಾರು ಭಾರತದಲ್ಲಿ ಬಿಡುಗಡೆ : ಬೆಲೆ, ವಿವರ ಇಲ್ಲಿದೆ

ತನ್ನ ಎಲ್ಲಾ ಪೆಟ್ರೋಲ್ ಕಾರಿನ ಮಾದರಿಯಲ್ಲಿ ಸಿವಿಟಿ ಗೇರ್ ಬಾಕ್ಸ್ ಪಡೆದಿರುವ ಈ ನಿಸ್ಸಾನ್ ಮೈಕ್ರಾ ಕಾರು ಪ್ರಮುಖ ವೈಶಿಷ್ಟ್ಯಗಳನ್ನು ಪಡೆದು ಭಾರತಕ್ಕೆ ಮತ್ತೆ ಎಂಟ್ರಿ ಕೊಟ್ಟಿದೆ.

ನಿಸ್ಸಾನ್ ಮೈಕ್ರಾ 2017 ಕಾರು ಭಾರತದಲ್ಲಿ ಬಿಡುಗಡೆ : ಬೆಲೆ, ವಿವರ ಇಲ್ಲಿದೆ

ಭಾರತದಲ್ಲಿ ಬಿಡುಗಡೆಗೊಳ್ಳಲಿರುವ ಈ ಕಾರು ಪ್ರಪಂಚದಾದ್ಯಂತ ಕಣ್ಮರೆಯಾಗುತ್ತಿರುವುದು ವಿಪರ್ಯಾಸವೇ ಸರಿ. ಹೌದು, ಭಾರತದಲ್ಲಿ ಹಳೆಯ ಆವೃತಿಯ ಮೈಕ್ರಾ ಬಿಡುಗಡೆಗೊಳ್ಳುತ್ತಿದೆ.

ನಿಸ್ಸಾನ್ ಮೈಕ್ರಾ 2017 ಕಾರು ಭಾರತದಲ್ಲಿ ಬಿಡುಗಡೆ : ಬೆಲೆ, ವಿವರ ಇಲ್ಲಿದೆ

ಭಾರತೀಯ ಮಾರುಕಟ್ಟೆಗೆ ಹೆಚ್ಚು ನವೀಕರಣಗಳೊಂದಿಗೆ ಬಿಡುಗಡೆಗೊಂಡಿರುವ ಮೈಕ್ರಾ ಕಾರು, ಎರಡು ಪೆಟ್ರೋಲ್ ಮತ್ತು ಎರಡು ಡೀಸೆಲ್ ಮಾದರಿಗಳಲ್ಲಿ ಈ ಕಾರು ಬಿಡುಗಡೆಗೊಳ್ಳುತ್ತಿದ್ದು, ಪೆಟ್ರೋಲ್ ರೂಪಾಂತರಗಳಲ್ಲಿ ಸಿವಿಟಿ ಗೇರ್ ಬಾಕ್ಸ್ ಅಳವಡಿಸಲಾಗಿದೆ.

ನಿಸ್ಸಾನ್ ಮೈಕ್ರಾ 2017 ಕಾರು ಭಾರತದಲ್ಲಿ ಬಿಡುಗಡೆ : ಬೆಲೆ, ವಿವರ ಇಲ್ಲಿದೆ

ಆವೃತಿ ಬೆಲೆ (ಎಕ್ಸ್ ಷೋ ರೂಂ ದೆಹಲಿ)

ಎಕ್ಸ್ ಎಲ್ ಪೆಟ್ರೋಲ್ (ಸಿವಿಟಿ) - 5.99 ಲಕ್ಷ

ಎಕ್ಸ್ಎಲ್ ಡೀಸೆಲ್ - 6.62 ಲಕ್ಷ

ಎಕ್ಸ್ ವಿ ಪೆಟ್ರೋಲ್ (ಸಿವಿಟಿ) ರೂ - 6.95 ಲಕ್ಷ

ಎಕ್ಸ್ಎಲ್ ಕಂಫರ್ಟ್ ಡೀಸೆಲ್ ರೂ - 7.23 ಲಕ್ಷ

ನಿಸ್ಸಾನ್ ಮೈಕ್ರಾ 2017 ಕಾರು ಭಾರತದಲ್ಲಿ ಬಿಡುಗಡೆ : ಬೆಲೆ, ವಿವರ ಇಲ್ಲಿದೆ

ಭಾರತದಲ್ಲಿ ನಿಸ್ಸಾನ್ ಮೈಕ್ರಾ ಕಾರು 1.2-ಲೀಟರ್ ಪೆಟ್ರೋಲ್ ಇಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ ಆಯ್ಕೆಯೊಂದಿಗೆ ಲಭ್ಯವಿದೆ.

ನಿಸ್ಸಾನ್ ಮೈಕ್ರಾ 2017 ಕಾರು ಭಾರತದಲ್ಲಿ ಬಿಡುಗಡೆ : ಬೆಲೆ, ವಿವರ ಇಲ್ಲಿದೆ

ಪೆಟ್ರೋಲ್ ಚಾಲಿತ ಮೈಕ್ರಾ 19.34 ಕಿ.ಮೀ ಲೀಟರ್ ಮೈಲೇಜ್ ನೀಡಲಿದ್ದು, ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ 140 ಏನ್ ಎಂ ತಿರುಗುಬಲದಲ್ಲಿ 76 ರಷ್ಟು ಅಶ್ವಶಕ್ತಿ ಉತ್ಪಾದಿಸಲಿದೆ.

ನಿಸ್ಸಾನ್ ಮೈಕ್ರಾ 2017 ಕಾರು ಭಾರತದಲ್ಲಿ ಬಿಡುಗಡೆ : ಬೆಲೆ, ವಿವರ ಇಲ್ಲಿದೆ

ಇನ್ನೂ ಡೀಸೆಲ್ ಚಾಲಿತ ಮೈಕ್ರಾ 23.08 ಕಿ.ಮೀ ಲೀಟರ್ ಮೈಲೇಜ್ ನೀಡಲಿದ್ದು, 160 ಏನ್ ಎಂ ತಿರುಗುಬಲದಲ್ಲಿ 63 ರಷ್ಟು ಅಶ್ವಶಕ್ತಿ ಉತ್ಪಾದಿಸಲಿದೆ.

English summary
Read in Kannada about Nissan Micra launched in India. Prices for the new Nissan Micra start at Rs 5.99 lakh ex-showroom (Delhi).
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark