ಕಾರು ಪ್ರಿಯರಿಗೆ ಕಿಕ್ ಕೋಡೋ ವಿನೂತನ ನಿಸ್ಸಾನ್ ಕಿಕ್ಸ್..!!

ನಿಸ್ಸಾನ್ ವಿನೂತನ ಮಾದರಿ ಕಿಕ್ಸ್ ಆವೃತ್ತಿಯು ಬಿಡುಗಡೆಗೆ ಸಿದ್ಧಗೊಂಡಿದ್ದು, ಹೊಸ ಬಗೆಯ ವಿನ್ಯಾಸಗಳು ಹೆಚ್ಚು ಆಕರ್ಷಣೆ ಹೊಂದಿವೆ.

By Praveen

ಜಪಾನ್ ಮೂಲದ ಕಾರು ಉತ್ಪಾದನಾ ಸಂಸ್ಥೆ ನಿಸ್ಸಾನ್ ಸದ್ಯದಲ್ಲೇ ತನ್ನ ಹೊಸ ಮಾದರಿಯ ಕಿಕ್ಸ್ ಆವೃತ್ತಿಯನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. 2018ರ ಮೂರನೇ ತ್ರೈಮಾಸಿಕ ಅಂತ್ಯಕ್ಕೆ ಬಿಡುಗಡೆಗೊಳ್ಳಲಿದ್ದು, ಹೊಸ ಮಾದರಿಯ ಕಾರು ಅದ್ಭತ ವಿನ್ಯಾಸ ಹೊಂದಿದೆ.

ಕಾರು ಪ್ರಿಯರಿಗೆ ಕಿಕ್ ಕೋಡೋ ವಿನೂತನ ನಿಸ್ಸಾನ್ ಕಿಕ್ಸ್..!!

2016ರಲ್ಲಿ ಬ್ರೆಜಿಲ್ ಮಾರುಕಟ್ಟೆಗೆ ಇದೇ ಮಾದರಿಯನ್ನು ಬಿಡುಗೆಡೆಗೊಳಿಸಿದ್ದ ನಿಸ್ಸಾನ್, ಈ ಬಾರಿ ಭಾರತೀಯ ಮಾರುಕಟ್ಟೆಗೂ ಬಿಡುಗಡೆಗೊಳಿಸಲಿದೆ. ಹೀಗಾಗಿ ಹೊಸ ಮಾದರಿಯ ಬಗೆಗೆ ಸಾಕಷ್ಟು ನೀರಿಕ್ಷೆಗಳಿವೆ.

ಕಾರು ಪ್ರಿಯರಿಗೆ ಕಿಕ್ ಕೋಡೋ ವಿನೂತನ ನಿಸ್ಸಾನ್ ಕಿಕ್ಸ್..!!

ಮುಂಬರುವ ರೆನಾಲ್ಟ್ ಕಾಪ್ಟರ್ಸ್ ಫ್ಯಾಟ್‌ಫಾರ್ಮ್ ಮೇಲೆ ಸಿದ್ಧಗೊಂಡಿರುವ ನಿಸ್ಸಾನ್ ಕಿಕ್ಸ್ ಮಾದರಿ ಸಿದ್ಧಗೊಂಡಿದೆ. ಹೀಗಾಗಿ ಡಸ್ಟರ್ ಮತ್ತು ಲೊಡ್ಜಿ ಮಾದರಿಗಳಿಂತ ಹೆಚ್ಚು ಆಕರ್ಷಣೆ ಹೊಂದಿದ್ದು, ಭಾರೀ ಪ್ರಮಾಣದ ಮಾರಾಟ ನೀರಿಕ್ಷೆಯಿದೆ.

ಕಾರು ಪ್ರಿಯರಿಗೆ ಕಿಕ್ ಕೋಡೋ ವಿನೂತನ ನಿಸ್ಸಾನ್ ಕಿಕ್ಸ್..!!

ಎಸ್‌ಯುವಿ ಮಾದರಿಯಲ್ಲಿ ಸಿದ್ಧಗೊಂಡಿರುವ ನಿಸ್ಸಾನ್ ಕಿಕ್ಸ್ ಮಾದರಿಯೂ ಸಾಮಾನ್ಯ ಆವೃತ್ತಿಯ ಫ್ಯಾಟ್‌ಫಾರ್ಮ್ ವಿನ್ಯಾಸಗಳನ್ನು ಹೊಂದಿದ್ದು, ಭಾರೀ ಪ್ರಮಾಣದಲ್ಲಿ ಉತ್ಪಾದನೆ ಕೈಗೊಂಡಿದೆ.

ಕಾರು ಪ್ರಿಯರಿಗೆ ಕಿಕ್ ಕೋಡೋ ವಿನೂತನ ನಿಸ್ಸಾನ್ ಕಿಕ್ಸ್..!!

ಇನ್ನು ಹೊರ ವಿನ್ಯಾಸಗಳು ಹೊಸ ಮಾರದಿಯ ಕಿಕ್ಸ್‌ಗೆ ಮೆರಗು ತಂದಿದ್ದು, ಮಲ್ಟಿ ಲೇಯರ್ ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್ ವ್ಯವಸ್ಥೆ ಹೊಂದಿದೆ. ಜೊತೆಗೆ ಲೆದರ್ ಕೊಟಿಂಗ್ ಸೀಟುಗಳ ವ್ಯವಸ್ಥೆಯಿದ್ದು, ಪುಶ್ ಡೋರ್ ಟ್ರಿಮ್ ಅನುಕೂಲತೆಯಿದೆ.

ಕಾರು ಪ್ರಿಯರಿಗೆ ಕಿಕ್ ಕೋಡೋ ವಿನೂತನ ನಿಸ್ಸಾನ್ ಕಿಕ್ಸ್..!!

ವಿನೂತನ ಕಾರಿನಲ್ಲಿ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋ‌ಟೈನ್‌ಮೆಂಟ್ ಹಾಗೂ ಕಾರಿನ ಸುತ್ತ ನೋಡಬಹುದಾದ ವಿವ್ಯು ಮಾನಿಟರ್ ವ್ಯವಸ್ಥೆಯಿದೆ. ಅಲ್ಲದೇ ಪ್ರಸ್ತುತ ಮಾದರಿಯ ಹಲವು ವಿಶೇಷತೆಗಳು ಕಾರಿನಲ್ಲಿವೆ.

ಕಾರು ಪ್ರಿಯರಿಗೆ ಕಿಕ್ ಕೋಡೋ ವಿನೂತನ ನಿಸ್ಸಾನ್ ಕಿಕ್ಸ್..!!

ಎಸ್‌ಯುವಿ ಮಾದರಿಯ ಕಿಕ್ಸ್ ಮಾದರಿಯು 4,295ಎಂಎಂ ಉದ್ದವಿದ್ದು, 1,760ಎಂಎಂ ಅಗಲವಾಗಿದೆ. ಜೊತೆಗೆ 2,610 ಎಂಎಂ ಎತ್ತರವಾಗಿದ್ದು, ಐದು ಜನ ಅರಾಮಾವಾಗಿ ಪ್ರಯಾಣ ಮಾಡಬಹುದಾಗಿದೆ.

ಕಾರು ಪ್ರಿಯರಿಗೆ ಕಿಕ್ ಕೋಡೋ ವಿನೂತನ ನಿಸ್ಸಾನ್ ಕಿಕ್ಸ್..!!

ಹೊಸ ಮಾದರಿಯ ಕಿಕ್ಸ್ ಮಾದರಿಯು 1.5-ಲೀಟರ್ ಕೆ9ಕೆ ಡೀಸೆಲ್ ಎಂಜಿನ್ ಹೊಂದಿದ್ದು, 83ಎಂಎನ್ ಮತ್ತು 107 ಬಿಎಚ್‌ಪಿ ಉತ್ಪಾದಿಸುತ್ತದೆ. ಸದ್ಯ ಡೀಸೆಲ್ ಮಾದರಿ ಮಾತ್ರ ಲಭ್ಯವಿದ್ದು, ಮುಂಬರುವ ದಿನಗಳಲ್ಲಿ ಪೆಟ್ರೋಲ್ ಮಾದರಿಯಲ್ಲೂ ಕೂಡಾ ಲಭ್ಯವಾಗುವ ಸಾಧ್ಯತೆಗಳಿವೆ.

ಕಾರು ಪ್ರಿಯರಿಗೆ ಕಿಕ್ ಕೋಡೋ ವಿನೂತನ ನಿಸ್ಸಾನ್ ಕಿಕ್ಸ್..!!

ಒಂದು ವೇಳೆ ನಿಗದಿತ ಅವಧಿಯಲ್ಲಿ ಭಾರತೀಯ ಮಾರುಕಟ್ಟೆಗೆ ಕಿಕ್ಸ್ ಲಗ್ಗೆಯಿಟ್ಟರೆ ಪ್ರಮುಖ ಮಾದರಿಗಳಿಗೆ ತೀವ್ರ ಸ್ಪರ್ಧೆ ಒಡ್ಡಲಿದೆ. ಹುಂಡೈ ಕ್ರೇಟಾ, ರೆನಾಲ್ಟ್ ಡಸ್ಟರ್ ಮತ್ತು ಹೋಂಡಾ ಬಿಆರ್-ವಿ ಮಾದರಿಗಳಿಗೆ ಹೆಚ್ಚು ಪೈಪೋಟಿ ನೀಡಲಿದೆ.

ಕಾರು ಪ್ರಿಯರಿಗೆ ಕಿಕ್ ಕೋಡೋ ವಿನೂತನ ನಿಸ್ಸಾನ್ ಕಿಕ್ಸ್..!!

ಒಂದು ವೇಳೆ ನಿಸ್ಸಾನ್ ಮಾದರಿಗಳ ಇತರೆ ಕಾರು ಆವೃತ್ತಿಗಳನ್ನು ವೀಕ್ಷಿಸಲು ಕೆಳಗಿನ ಮಿಕ್ರಾ ಕಾರುಗಳ ಫೋಟೋ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Most Read Articles

Kannada
English summary
Nissan is set to launch the Kicks SUV by the end of 2018. The car will be based on the upcoming Renault Kaptur’s platform.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X